ಶ್ವಾನ ಚಿಕಿತ್ಸೆ (ಡಾಗ್ ಥೆರಪಿ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಗಮನಸೆಳೆಯುತ್ತಿದೆ. ಸ್ವಾಮಿ ನಿಷ್ಠೆಯ ಶ್ವಾನಗಳನ್ನು ವಯೋವೃದ್ಧರು ಮತ್ತು ಮಾನಸಿಕ ಚೇತನ ವ್ಯಕ್ತಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದ ರೋಗಿಯು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ದೀರ್ಘಕಾಲ ಬದುಕುತ್ತಾರೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ. ಒಡನಾಡಿಗಳಾಗಿ
ರೇಬಿಸ್ ಎನ್ನುವ ನಾಯಿಯ ಕಡಿತದ ಮಾರಣಾಂತಿಕ ರೋಗಕ್ಕೆ ಚಿಕಿತ್ಸೆ ಇಲ್ಲ. ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದು. ಆದರೆ ರೇಬಿಸ್ ತಡೆಯಲು ಲಸಿಕೆಯಂತೂ ಲಭ್ಯವಿದೆ. ನೀರನ್ನು ಕಂಡರೆ ಭಯಪಡುವ ವಿಚಿತ್ರ ಸ್ಥಿತಿಯು ರೇಬಿಸ್ ರೋಗದ ಪ್ರಾಥಮಿಕ ಲಕ್ಷಣ.
ಕರಿಬೇವಿನ ಎಲೆಗಳು ಇಲ್ಲದ ಭಾರತೀಯ ಆಡುಗೆ ಊಹಿಸಿಕೊಳ್ಳುವುದು ಕಷ್ಟ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ. ಕರಿಬೇವಿನ ಮರ ಒಂದು ಪುಟ್ಟ ವೃಕ್ಷವಾಗಿದ್ದು, ಭಾರತದ ಬಹುತೇಕ ಅರಣ್ಯಗಳಲ್ಲಿ ಬೆಳೆಯುತ್ತದೆ.
ಪ್ರಪಂಚದ ಎಲ್ಲ ಭೂಖಂಡಗಳಲಿ ಭಯಾನಕವಾಗಿರುವ ಈ ನಾಯಿ ನಂಜು ರೋಗ ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ನಾಮಾವಶೇಷವಾಗಿದೆ. ನ್ಯೂಜಿಲ್ಯಾಂಡ್, ಸೈಪ್ರಸ್, ಹವಾಯಿ, ಯು.ಕೆ.ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಈ ರೋಗದಿಂದ ಮುಕ್ತವಾಗಿವೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಈ ರೋಗದ ಹಾವಳಿ ಇಂದಿಗೂ ತಪ್ಪಿಲ್ಲ. ಈ