ವಿಚ್ಛೇದನಗಳು ಏಕೆ ಹೆಚ್ಚುತ್ತಿವೆ? ಅವಿಭಜಿತ ಕುಟುಂಬಗಳನ್ನು ಪ್ರೋತ್ಸಾಹಿಸಿ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂಸ್ಕೃತಿಯನ್ನು ಪೋಷಿಸಿ. ಹೆಚ್ಚುತ್ತಿರುವ ವಿಚ್ಛೇದನದ ಅಲೆಯನ್ನು ಕಡಿಮೆಮಾಡಿ ಕುಟುಂಬಗಳನ್ನು ಬೆಳೆಸಿ.
ಆಧುನಿಕ ಸಮಾಜದಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವನಶೈಲಿಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ರೂಪಾಂತರ ಗೊಳ್ಳುತ್ತಿರುವುದರಿಂದ ಅನೇಕ ಸವಾಲುಗಳು ಎದುರಾಗುತ್ತಿವೆ. ಅಂತಹದೇ ಒಂದು ಗಮನಾರ್ಹವಾದ ಬದಲಾವಣೆ ಅವಿಭಜಿತ ಕುಟುಂಬದ ಮೇಲೂ ಪರಿಣಾಮ ಬೀರುತ್ತಿದೆ.
ಭಾರತದ ಕುಟುಂಬಗಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳು ಆಳವಾಗಿ ಬೇರೂರಿದೆ. ಆದರೆ, ಈಗ ಅವಿಭಜಿತ ಕುಟುಂಬಗಳ ವಿಭಜನೆ ಹೆಚ್ಚುತ್ತಿದೆ. ಅದೇ ಸಮಯದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ.
ಅವಿಭಜಿತ ಕುಟುಂಬಗಳು (ಇದನ್ನು ಅವಿಭಕ್ತ ಕುಟುಂಬಗಳು ಎಂದೂ ಕರೆಯುತ್ತಾರೆ) ಬಹಳ ಹಿಂದಿನಿಂದಲೂ ಭಾರತೀಯ ಸಂಸ್ಕೃತಿಯ ಮುಖ್ಯ ಪರಿಕಲ್ಪನೆಯಾಗಿದೆ. ಅನೇಕ ತಲೆಮಾರುಗಳು ಒಂದೇ ಸೂರಿನಡಿ ವಾಸಿಸುತ್ತಿದ್ದವು. ಸಂಪನ್ಮೂಲಗಳು, ಜವಾಬ್ದಾರಿಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಹಂಚಿಕೊಳ್ಳುವುದು ರೂಡಿ.
ಅವಿಭಜಿತ ಕುಟುಂಬದಲ್ಲಿ ಬೆಂಬಲ ಮತ್ತು ಪರಸ್ಪರ ಅವಲಂಬನೆ ಇರುತ್ತದೆ. ನಿರ್ಧಾರಗಳನ್ನು ಒಗ್ಗೂಡಿ ತೆಗೆದುಕೊಳ್ಳಲಾಗುತ್ತದೆ. ಇದು, ಮನೆ ಮತ್ತು ಸಮಾಜದಲ್ಲಿ ಸ್ಥಿರತೆ ಹಾಗೂ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಆಧುನೀಕರಣ ಮತ್ತು ನಗರೀಕರಣಕ್ಕೆ ನಾವು ಒಳಗಾಗುತ್ತಿದ್ದಂತೆ, ಅವಿಭಜಿತ ಕುಟುಂಬಗಳ ಸಾಂಪ್ರದಾಯಿಕ ವ್ಯವಸ್ಥೆಯು ಕ್ರಮೇಣ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ವೈಯಕ್ತಿಕ ಆಕಾಂಕ್ಷೆಗಳು ಮತ್ತು ಜೀವನಶೈಲಿಗೆ ಅನುಗುಣವಾಗಿ, ಚಿಕ್ಕ ಕುಟುಂಬ ಒಂದರಲ್ಲಿ (ಪೋಷಕರು ಮತ್ತು ಮಕ್ಕಳನ್ನು ಒಳಗೊಂಡಿರುವ) ಸ್ವತಂತ್ರವಾಗಿ ವಾಸಿಸಲು ಬಯಸುತ್ತಿದ್ದೇವೆ. ಈ ಬದಲಾವಣೆಯು ಅದರ ಸದಸ್ಯರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಖಾಸಗಿತನ ನೀಡಬಹುದಾದರೂ, ಇದರಿಂದಾಗುವ ದುಷ್ಪರಿಣಾಮವೆಂದರೆ ನಾವು ನಮ್ಮ ಕುಟುಂಬದ ಬೆಂಬಲ, ಬಾಂಧವ್ಯ ಹಾಗೂ ಸಂಬಂಧಗಳನ್ನು ಕಳೆದುಕೊಳ್ಳುತ್ತಿದೇವೆ.
ವಿಭಜಿತ ಕುಟುಂಬಗಳ ಮುಖ್ಯ ಪರಿಣಾಮವೆಂದರೆ ಹೆಚ್ಚುತ್ತಿರುವ ವಿಚ್ಛೇದನಗಳು. ಕುಟುಂಬದವರ ದೃಢವಾದ ಬೆಂಬಲ ವಿಲ್ಲದೆ, ಆಧುನಿಕ ಜೀವನದ ಸಂಕೀರ್ಣತೆಗಳನ್ನು ನಿರ್ವಹಿಸಲು ಹೆಣಗಾಡಬೇಕಾಗುತ್ತಿದೆ. ಕೆಲಸ, ಹಣಕಾಸು ಮತ್ತು ನಿರೀಕ್ಷೆಗಳ ಒತ್ತಡಗಳು ವೈವಾಹಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಾಂಘರ್ಷಗಳು ಹೆಚ್ಚಾದಂತೆ ವೈವಾಹಿಕ ಘರ್ಷಣೆ ಹೆಚ್ಚುತ್ತದೆ, ಕೊನೆಗೆ ಇದುವೇ ವಿಚ್ಛೇದನಕ್ಕೆ ಕಾರಣವಾಗಬಹುದು.
ಇದಲ್ಲದೆ, ಬಲವಾದ ಸಾಂಸ್ಕೃತಿಕ ಶಿಕ್ಷಣ (ಸಹಕಾರ, ಪರಸ್ಪರ ಗೌರವ ಮತ್ತು ಕುಟುಂಬ ಸದಸ್ಯರ ಕರ್ತವ್ಯದ ಅರಿವು) ಕಡಿಮೆಯಾಗುತ್ತಿರುವುದರಿಂದ ಆಧುನಿಕ ಕುಟುಂಬಗಳಲ್ಲಿನ ಸಂಬಂಧಗಳು ಇನ್ನಷ್ಟು ಹದಗೆಡುತ್ತಿವೆ. ಸಾಂಪ್ರದಾಯಿಕ ಮೌಲ್ಯಗಳಲ್ಲಿ ಬಲವಾದ ಅಡಿಪಾಯವಿಲ್ಲದೆ, ವ್ಯಕ್ತಿಗಳು ಕೌಟುಂಬಿಕ ಕಟ್ಟುಪಾಡುಗಳಿಗಿಂತ ವೈಯಕ್ತಿಕ ಆಸೆಗಳಿಗೆ ಆದ್ಯತೆ ನೀಡುವ ಕಾರಣ, ಒಗ್ಗಟ್ಟಿಲ್ಲದೆ ಮತ್ತಷ್ಟು ಸಂಬಂಧಗಳು ಕೆಡುತ್ತಿವೆ.
ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿರುವ ವಿಚ್ಛೇದನಗಳನ್ನು ಕಡಿಮೆಮಾಡಲು, ಅವಿಭಜಿತ ಕುಟುಂಬಗಳ ಪ್ರಯೋಜನಗಳು ಹಾಗು ಐಕ್ಯತೆಯ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯ.
ಇದನ್ನು ಸಾಧಿಸ ಬಹುದಾದ ವಿಧಾನಗಳು:
• ಸಾಂಸ್ಕೃತಿಕ ಶಿಕ್ಷಣ: ಚಿಕ್ಕ ವಯಸ್ಸಿನಿಂದಲೇ ಅವಿಭಜಿತ ಕುಟುಂಬಗಳು, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಕೌಟುಂಬಿಕ ಸಂಬಂಧಗಳ ಮಹತ್ವವನ್ನು ಒತ್ತಿಹೇಳುವ ಕಾರ್ಯಕ್ರಮಗಳನ್ನು ಪರಿಚಯಿಸುವ ಮೂಲಕ ಸಂಬಂಧಗಳನ್ನು ಉಳಿಸಬಹುದು.
• ಸಮುದಾಯ ಬೆಂಬಲ: ವೈವಾಹಿಕ ಸವಾಲುಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ನೆರವು, ಮಾರ್ಗದರ್ಶನ ಮತ್ತು ಸಮಾಲೋಚನೆಯನ್ನು ಒದಗಿಸಿ ಬೆಂಬಲ ನೀಡುವ ಸಮುದಾಯದ ಅಗತ್ಯವಿದೆ.
• ನೀತಿಯನ್ನು ರೂಪಿಸುವುದು: ಅವಿಭಜಿತ ಕುಟುಂಬಗಳ ಸಂರಕ್ಷಣೆಗೆ ಉತ್ತೇಜನ ನೀಡುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು (ಉದಾಹರಣೆ: ತೆರಿಗೆ ಪ್ರಯೋಜನಗಳು ಅಥವಾ ಸಮಾಜ ಕಲ್ಯಾಣ ಯೋಜನೆಗಳು) ಅನುಷ್ಠಾನಗೊಳಿಸುವುದು ಅಗತ್ಯ. ಈ ಕಾಳಜಿಯಲ್ಲಿ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಅನೇಕ ವಿಚ್ಛೇದನ ಪ್ರಕರಣಗಳಲ್ಲಿ ಅರ್ಜಿದಾರರು ಅವರನ್ನು ರಕ್ಷಿಸಲು ಪರಿಚಯಿಸಲಾದ ನಿಯಮಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ವಿಚ್ಛೇದನಗಳು ವ್ಯಕ್ತಿ ಮತ್ತು ಕುಟುಂಬಗಳ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ವೈವಾಹಿಕ ಸ್ಥಿರತೆಯ ಮಹತ್ವ ಮತ್ತು ವಿಚ್ಛೇದನದ ಪ್ರತಿಕೂಲ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಕಟ್ಟುನಿಟ್ಟಾದ ಪರಿಶೀಲನಾ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವುದು ಬಹಳ ಅಗತ್ಯ.
• ಸಂಘರ್ಷ ಪರಿಹಾರಕ್ಕಾಗಿ ಸಂವಹನ: ಕುಟುಂಬಗಳಲ್ಲಿನ ಸಂಘರ್ಷವನ್ನು ಪರಿಹರಿಸಲು – ಸಂವಾದ, ಮಧ್ಯಸ್ಥಿಕೆ ಮತ್ತು ಉಚಿತ ಸಲಹೆ ಸೇವೆಗಳ ಮೂಲಕ ಮುಕ್ತ ಸಂವಹನವನ್ನು ಪ್ರೋತ್ಸಾಹಿಸಿ.
• ಮಾಧ್ಯಮ ಮತ್ತು ಮನರಂಜನೆಯ ಪಾತ್ರ: ಅವಿಭಜಿತ ಕುಟುಂಬಗಳ ಸಕಾರಾತ್ಮಕ ಚಿತ್ರಣಗಳನ್ನು ಉತ್ತೇಜಿಸಲು ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಬಲಪಡಿಸಲು ಮಾಧ್ಯಮ ವೇದಿಕೆಗಳು ಮತ್ತು ಜನಪ್ರಿಯ ಸಂಸ್ಕೃತಿಯನ್ನು ನಿಯಂತ್ರಿಸಿ.
ಅಜಿತ್ ಕುಮಾರ್
ನಿರ್ದೇಶಕರು
ಆವಿಶ್ಜಿಯಾ ಪ್ರೈವೆಟ್ ಲಿಮಿಟೆಡ್
ನಂ. 28, 2ನೇ ಮುಖ್ಯರಸ್ತೆ, ಮುನಿಸ್ವಾಮಿ ಲೇಔಟ್,
ವಿದ್ಯಾರಣ್ಯಪುರ, ಬೆಂಗಳೂರು 560097
Ph: 98451 83494
ಮೇಲ್ ಐಡಿ: marketing@aavishjia.com
https://www.aavishjia.com
3-1 ಜಿನ್ಸೆಂಗ್ ಕಾಫಿ ಭಾರತದಲ್ಲಿ ಆವಿಶ್ಜಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಮತ್ತು ಎಲ್ಲಾ ಪ್ರಮುಖ ಇ-ಕಾಮರ್ಸ್ ವೆಬ್ ಪೋರ್ಟಲ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಜೊತೆಗೆ www.aavishjia.com ನಲ್ಲಿ ಲಭ್ಯವಿದೆ.
ಸಂಪರ್ಕ/WhatsApp – 63614 12347 / 89719 11440
ವಿತರಣೆ, ಸ್ಟಾಕ್ ಪಾಯಿಂಟ್ಗಳು, ಚಿಲ್ಲರೆ ವ್ಯಾಪಾರ ಇತ್ಯಾದಿಗಳಿಗಾಗಿ ಕೂಡ ಸಂಪರ್ಕಿಸಬಹುದು.