ಬೇಸಿಗೆಯಲ್ಲಿ ಆರೋಗ್ಯ

ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ ವಾತಾವರಣ ಎಲ್ಲ ಪ್ರಾಂತ್ಯಗಳಲ್ಲೂ ಕಂಡು ಬರುವುದಿಲ್ಲ.

ಬೇಸಿಗೆಯಲ್ಲಿ ಆರೋಗ್ಯ

ಮುಖ್ಯವಾಗಿ ಚರ್ಮ, ಕೂದಲು ಮತ್ತು ಕಣ್ಣು ಬೇಸಿಗೆಯಲ್ಲಿ ಸುಲಭವಾಗಿ ಹಾನಿಗೆ ಸಿಲಕುವ ಸಾಧ್ಯತೆಗಳಿರುವುದರಿಂದ ಇವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಬೇಸಿಗೆಯಲ್ಲಿ  ದೇಹಕ್ಕೆ ನೀರಿನ ಅವಶ್ಯಕತೆ ಅಧಿಕವಾಗಿರುವುದರಿಂದ ಯೆಥೇಚ್ಚವಾಗಿ ನೀರು ಸೇವಿಸಬೇಕು. ಹೆಚ್ಚು ಕೊಬ್ಬು ಮತ್ತು ಪ್ರೊಟೀನ್‍ಗಳನ್ನು ತಪ್ಪಿಸಲು  ಆಹಾರದಲ್ಲಿ ಅಗತ್ಯ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ. ಸಿಟ್ರಸ್ ಹಣ್ಣು ಮತ್ತು ಹಣ್ಣಿನ ರಸಗಳ ರೂಪದಲ್ಲಿ ವಿಟಮಿನ್ ಸಿ ಸಾಕಷ್ಟು ಸೇವಿಸಿ. ಬೇಸಿಗೆಯಲ್ಲಿ ಚೆನ್ನಾಗಿ ಕಾಣಲು ಮತ್ತು ತಾಜಾತನದಿಂದ ಕೂಡಿರಲು ದಿನಕ್ಕೆ 8 ಗಂಟೆಗಳ ನಿದ್ದೆ ಸಹಕಾರಿ.ಬೆಳಿಗ್ಗೆ 5-7ರ ಅವಧಿಯಂತ ತಣ್ಣಗಿನ ಸಮಯದಲ್ಲಿ ಪರಿಶ್ರಮದ ವ್ಯಾಯಾಮ ಮಾಡಿ.

ಬೇಸಿಗೆ ಮತ್ತು ಚರ್ಮ ರಕ್ಷಣೆ :

ಬೇಸಿಗೆ ಒಂದು ರೀತಿ ಶತೃವು ಹೌದು ಮಿತ್ರನೂ ಹೌದು. ಸೂರ್ಯ ನಮ್ಮ ಬದುಕಿಗೆ ಏನೆಲ್ಲಾ ಕೊಡುಗೆಯನ್ನು ನೀಡಿದ್ದಾನೆ. ಸೂರ್ಯನಿಲ್ಲದೇ ನಮ್ಮ ಜೀವನ ಸಾಗದು. ಇನ್ನೊಂದೆಡೆ ಸೂರ್ಯನ ನೇರಳಾತೀತ (ಆಲ್ಟ್ರಾವೈಲೆಟ್) ವಿಕಿರಣಕ್ಕೆ ನಮ್ಮ ದೇಹ ತೆರೆದುಕೊಳ್ಳುವುದರಿಂದ ಬಹುತೇಕ ಎಲ್ಲ ರೀತಿಯ ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತದೆ. ಅಲ್ಲದೆ, ನೀವು ಯೋಚಿಸುವುದಕ್ಕಿಂತ ತಂಬಾ ಸುಲಭವಾಗಿ `ಸನ್‍ಬರ್ನ್’ ದಾಳಿ ಮಾಡುತ್ತದೆ. ಅದೃಷ್ಟವಶಾತ್, ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸಿಕೊಳ್ಳಲು ಅನೇಕ ಸುಲಭ ಮಾರ್ಗಗಳಿವೆ. ಸೂರ್ಯ ಪ್ರಖರವಾಗಿ ಉರಿಯುತ್ತಿರುವಾಗ ಮತ್ತು ಬಿಸಿಲಿನ ಝಳ ಅಧಿಕವಿದ್ದಾಗ ಅದರಿಂದ ರಕ್ಷಿಸಿಕೊಳ್ಳುವ ವಿಧಾನವೇ ಸನ್ ಪ್ರೊಟೆಕ್ಷನ್.

1.ಹೊರಗೆ ಹೋಗುವುದಕ್ಕೆ ಮೊದಲು ಸನ್ ಸ್ಕ್ರೀನ್ ಹಾಕಿಕೊಳ್ಳುವುದನ್ನು ಮರೆಯದಿರಿ.

2. ಬಿಸಿಲಿನಲ್ಲಿ ಹೊರಗೆ ದೀರ್ಘ ಕಾಲ ಇರಬೇಕಾದ ಸಂದರ್ಭ ಬಂದರೆ ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿ.

3.ಟ್ಯಾನಿಂಗ್ ಸೆಲೂನ್‍ಗಳು ತುಂಬಾ ಅಪಾಯಕಾರಿ.

4.ಸೂರ್ಯನ ತಾಪ ಪ್ರಖರವಾಗಿರುವ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೊರಗೆ ಇರುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

5. ಮುಖಕ್ಕೆ ಹೆಚ್ಚುವರಿ ರಕ್ಷಣೆ ನೀಡಲು ದೊಡ್ಡ ಅಂಚಿನ ಟೋಪಿ ಬಳಸಿ.

6.ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳನ್ನು ಸೂರ್ಯನಿಂದ ದೂರ ಇಡಬೇಕು.

ಬೇಸಿಗೆ ಮತ್ತು ಕೂದಲಿನ ರಕ್ಷಣೆ :

ಬೇಸಿಗೆಯಲ್ಲಿ ಧಗಧಗಿಸುವ ಸೂರ್ಯ, ಬಿಸಿಲಿನ ಝಳ, ಅಧಿಕ ತಾಪಮಾನ ಮತ್ತು ವಾತಾವರಣದ ಆದ್ರ್ರತೆಯಿಂದ  ಕೂದಲಿಗೆ ಹಾನಿಯಾಗುತ್ತದೆ. ಪರಿಣಾಮವಾಗಿ ಕೂದಲು ಒಣಗುವಿಕೆ, ಒರಟಾಗುವಿಕೆ, ಇಬ್ಭಾಗವಾಗುವಿಕೆಯಂಥ ಸಮಸ್ಯೆಗಳು ಕಂಡುಬರುತ್ತದೆ.
1.ಕೂದಲಿಗೆ ವಿಶೇಷ ಆಲ್ಟ್ರಾ ವಯಲೆಟ್ ಪ್ರೊಟೇಕ್ಷನ್ ಬಳಸಿ.

2.ಸಾಧ್ಯವಾದರೆ ಅಗಲ ಅಂಚು ಇರುವ ಉತ್ತಮ ಟೋಪಿ ಬಳಸಿ ಅಥವಾ  ಕೂದಲನ್ನು ಮರೆಮಾಚುವ ಸ್ಕಾರ್ಪ್ ಬಳಸಿ.

3.ರಜೆಯಲ್ಲಿದ್ದಾಗ  ಕೂದಲಿನ ಬಣ್ಣ ಬದಲಿಸಬೇಡಿ.

4.ಕೂದಲಿಗೆ ಒಳ್ಳೆಯ ಕಂಡಿಷನರ್ ಹಾಕಿ.

ಬೇಸಿಗೆ ಮತ್ತು ಆಹಾರ :

ಬೇಸಿಗೆ ಕಾಲದಲ್ಲಿ ಆಹಾರದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಉಷ್ಣಾಂಶ ಅಧಿಕವಾಗಿರುವ ಕಾರಣ ಅನೇಕರು ಹೊರಗೆ ಅಡುಗೆ ಮಾಡುವ ಸಾಧ್ಯತೆಗಳಿರುತ್ತವೆ.
1.ತೀರಾ ತಣ್ಣಗಿರುವ ದ್ರವರೂಪದ ಅಹಾರ ಸೇವಿಸಬೇಡಿ.

2.ಕೆಫೆನ್ ಮತ್ತು ಕಾರ್ಬೊನೇಟೆಡ್ ಪಾನೀಯ-ಪೇಯಗಳು, ಅಲ್ಕೋಹಾಲ್  ಸೇವಿಸಬಾರದು.

3.ಬಾಯಾರಿಕೆ ನೀಗಿಸಿಕೊಳ್ಳಲು ನೀರು ಅತ್ಯುತ್ತಮ ಆಯ್ಕೆ.

4.ತೀರಾ ಪರಿಶ್ರಮದಾಯಕ ಕೆಲಸವನ್ನು ಮಿತಿಗೊಳಿಸಿ.

5.ಶುಷ್ಕ ಫಲಗಳ ಸೇವನೆ ಕಡಿಮೆ ಮಾಡಿ.

6.ಸಕ್ಕರೆ ಅಧಿಕವಾಗಿರುವ ಆಹಾರವನ್ನು ಅದಷ್ಟೂ ತಪ್ಪಿಸಿ.

7.ಹುರಿದ ಆಹಾರ ಸೇವನೆಯನ್ನು ಕಡಿತಗೊಳಿಸಿ.

8.ಉತ್ತಮ ಶುಚಿತ್ವ ಮಟ್ಟವನ್ನು ಕಾಪಾಡಿ.

9. ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳು ಹೆಚ್ಚಾಗಿರಲಿ.

10.ರಸ್ತೆ ಬದಿಯ ಆಹಾರ, ತಂಪು ಪಾನೀಯಗಳ ಸೇವನೆ ಬೇಡ.

ಬೇಸಿಗೆ ಮತ್ತು ವಸ್ತ್ರ :

ಬೇಸಿಗೆಯಲ್ಲಿ ಸೂಕ್ತವಾದ ವಸ್ತ್ರ ಧರಿಸುವುದು ಮುಖ್ಯ.  ಎಲ್ಲೇ ಇರಲಿ ಅದಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಬೇಕಾಗುತ್ತದೆ. ಹೂ ಮುಡಿದರೆ ಅದು ತಾಜಾತನ ಮತ್ತು ಸ್ಪೂರ್ತಿಯ ಅನುಭವ ನೀಡುತ್ತದೆ.
1.ಬೇಸಿಗೆಯಲ್ಲಿ ಒಂದೇ ಬಣ್ಣದ ಸಾದಾ ವಸ್ತ್ರ ಧರಿಸಿ.

2.ಬೇಸಿಗೆಯಲ್ಲಿ ಬಿಗಿಯಾದ ಉಡುಪಿಗಿಂತ ಸ್ವಲ್ಪ ಸಡಿಲವಾದ ವಸ್ತ್ರ ಒಳ್ಳೆಯದು.

3.ಗಾಢ ಮತ್ತು ಕಡು ವರ್ಣದ ಬಟ್ಟೆಗಳು ಬೇಡ

4.ಧರಿಸುವ ವಸ್ತ್ರ ತೆಳುವಾಗಿದ್ದರೆ ಒಳ್ಳೆಯದು.

5.ಬೇಸಿಗೆಯಲ್ಲಿ ಕಾಟನ್ ವಸ್ತ್ರ ಉತ್ತಮ.

6.ಡೆಕ್ ಶೂಗಳೊಂದಿಗೆ ಸಾಕ್ಸ್ ಬೇಡ.

ಬೇಸಿಗೆ ಮತ್ತು ನೇತ್ರ ಆರೈಕೆ :

ಬೇಸಿಗೆಯಲ್ಲಿ ಕಣ್ಣುಗಳಿಗೆ ಸೋಂಕು ತಗಲುವ ಸಾಧ್ಯತೆ ಇದೆ. ತಾಪಮಾನ ಅಧಿಕವಾಗಿರುವ ಕಾರಣ ಕಣ್ಣುರಿ, ಕಣ್ಣು ಒಣಗುವಿಕೆ. ಕೆಂಗಣ್ಣಿನ ತೊಂದರೆ ಕಂಡುಬರುತ್ತದೆ. ಈ ಋತುವಿನಲ್ಲಿ ಕಣ್ಣುಗಳ ಆರೈಕೆ ಮುಖ್ಯ.
1.ಅಲ್ಟ್ರಾವಯಲೆಟ್ ರಕ್ಷಣೆ ಇರುವ ಸನ್‍ಗ್ಲಾಸ್ ಬಳಸಿ.

2.ಮೋಡ ಮುಸುಕಿದ ವಾತಾವರಣವಿದ್ದಾಗಲೂ ಸನ್‍ಗ್ಲಾಸ್ ಧರಿಸಿ.

3.ಪೋಲರೈಸ್ಡ್ ಲೆನ್ಸ್‍ಗಳಿರುವ ಸನ್‍ಗ್ಲಾಸ್ ಆಯ್ಕೆ ಮಾಡಿಕೊಳ್ಳಿ.

4.ನಿಮ್ಮ ಕನ್ನಡಕವನ್ನು ಸರಿಯಾದ ಸ್ಥಿತಿಯಲ್ಲಿಟ್ಟುಕೊಳ್ಳಿ.

5.ವಿಪರೀತ ಬಿಸಿಲಿನಲ್ಲಿ ಸಂಚರಿಸುವುದನ್ನು ನಿಯಂತ್ರಿಸಿ.

Also Read: summer season drawing : Easy tips to protect your eyes

ಬೇಸಿಗೆ ಮತ್ತು ಪ್ರವಾಸ ಟಿಪ್ಸ್ :

1.ಪ್ಯಾಕ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

2.ಸ್ಕಿನ್ ಕ್ರೀಮ್, ಹೇರ್ ಸ್ಪ್ರೆ, ಬಾಡಿ ಲೋಷನ್ – ಈ ಎಲ್ಲ ಉತ್ಪನ್ನಗಳು  ಜತೆ ಇರಲಿ.

3.ಟೂರ್ ವೇಳೆ ಸಾಕಷ್ಟು ನೀರು ಕುಡಿಯಿರಿ.

4.ಆರೋಗ್ಯಕರ ಸ್ನ್ಯಾಕ್ಸ್‍ಗಳನ್ನು ಪ್ಯಾಕ್ ಮಾಡಿಕೊಳ್ಳಿ

5.ನಿಮ್ಮ ಬಟ್ಟೆಗಳನ್ನು ಸ್ವಚ್ಚವಾಗಿಡಿ.

6.ಸದಾ ತಾಜಾತನದಿಂದ ಇರಬೇಕು

ಬೇಸಿಗೆಯಲ್ಲಿ ಸೌಂದರ್ಯ ಟಿಪ್ಸ್:

1. ಕಣ್ಣಿಗೆ ಬಣ್ಣ ಹಚ್ಚುವವರಾಗಿದ್ದರೆ, ವಾಟರ್‍ಪ್ರೂಫ್ ಪ್ರಯತ್ನಿಸಿ.

2. ಗಾಢವಾದ ಫೌಂಡೇಷನ್ ಲೋಷನ್ ಮತ್ತು ಕ್ರೀಮ್‍ಗಳಿಂತ ಮ್ಯಾಟಿ ಪೌಡರ್‍ನನ್ನು ಫೌಂಡೇಶನ್ ಆಗಿ ಬಳಸುವುದು ಉತ್ತಮ. ಏಕೆಂದರೆ  ಸ್ವಲ್ಪ ಬೆವರಿದರೂ ಫೌಂಡೇಷನ್ ಲೋಷನ್ ಮತ್ತು ಕ್ರೀಮ್‍ಗಳು ಮುಖವನ್ನು ತೇಪೆ ಹಾಕಿದಂತೆ ಕಾಣುವಂತೆ ಮಾಡುತ್ತದೆ.

3. ಬೇಸಿಗೆಯಲ್ಲಿ ತುಟಿಗಳ ರಕ್ಷಣೆಯೂ ಮುಖ್ಯ. ಹಾಗಾಗಿ ಲಿಪ್ ಗ್ಲೋಸ್ ಅಥವಾ ಲಿಪ್ ಬಾಮ್ ಲೇಪಿಸುವುದು ಉತ್ತಮ.

4. ಐ ಮೇಕಪ್ ರಿಮೂವರ್‍ನನ್ನು ಕೊಂಡ್ಯೊಯಲು ಮರೆಯದಿರಿ. ಇದರಿಂದ ವಾಟರ್ ಪ್ರೂಫ್ ಮೇಕಪ್‍ನ ನೈಸರ್ಗಿಕ ಸನ್ನಿವೇಶದ ಪರಿಣಾಮವಾಗಿ ಕಪ್ಪು ಕಲೆಗಳು ಆಗುವುದನ್ನು ತಪ್ಪಿಸಬಹುದಾಗಿದೆ.

5. ಬೇಸಿಗೆಯಲ್ಲಿ ಗುಲಾಬಿ ಬಣ್ಣ ಲಿಪ್‍ಸ್ಟಿಕ್ ಉತ್ತಮ. ಏಕೆಂದರೆ ಇದು ತುಂಬಾ ನೈಸರ್ಗಿಕವಾಗಿ ಕಾಣುತ್ತದೆ. ಮ್ಯಾಟಿ ಲಿಪ್‍ಸ್ಟಿಕ್‍ಗಿಂತ ಕ್ರೀಮಿ ಲಿಪ್‍ಸ್ಟಿಕ್‍ಗಳು ಉತ್ತಮ ಮತ್ತು ಇದು ದೀರ್ಘಕಾಲವೂ ಇರುತ್ತದೆ.

6.ಬೇಸಿಗೆಯಲ್ಲಿ ಉಗುರುಗಳು ಚಿಕ್ಕದಾಗಿ ಚೊಕ್ಕವಾಗಿರಬೇಕು. ಗಾಢ ವರ್ಣಕ್ಕಿಂತ ತಿಳಿಬಣ್ಣದ ಉಗುರು ಬಣ್ಣ ಉತ್ತಮ. ಇದರಿಂದ ಪದೇ ಪದೇ ಉಗುರು ಬಣ್ಣ ಲೇಪಿಸುವುದು ಸುಲಭವಾಗುತ್ತದೆ.

7. ಬಳಸುವ ಫೌಂಡೇಷನ್‍ನನ್ನು ರೆಫ್ರಿಜರೇಟರ್‍ನಲ್ಲಿಡಿ. ಅದು ಮೃದುವಾದಾಗ, ಮುಖದ ಉಷ್ಣತೆ ಕರಗಿ  ಚರ್ಮವನ್ನು ಸೇರುತ್ತದೆ. ಇದರಿಂದ  ನಿಸರ್ಗದತ್ತವಾಗಿ ಉತ್ತಮ ಚರ್ಮ ಹೊಂದಿರುವಂತೆ ಕಾಣುತ್ತದೆ.

8.ಬೇಸಿಗೆಯ ಸಂಜೆಗಳಲ್ಲಿ ಐ ಲೈನರ್ ಅಥವಾ ಕಾಜಲ್ ತುಂಬಾ ಚೆನ್ನಾಗಿ ಕಾಣುತ್ತದೆ.  ಐ ಲೈನರ್‍ನನ್ನು ಕಣ್ಣುಗಳಿಗೆ ಲೇಪಿಸುವುದಕ್ಕೂ ಮುನ್ನ ಬೆಂಕಿ ಕಡ್ಡಿಯಿಂದ  ಐ ಪೆನ್ಸಿಲ್‍ನ ತುದಿಯನ್ನು ಬಿಸಿ ಮಾಡಿದರೆ ಈ ಎಫೆಕ್ಟ್ ಪಡೆಯಬಹುದು.

9.ಬೇಸಿಗೆಯಲ್ಲಿ ಬರಿಗಾಲಿನಲ್ಲಿ ಅಥವಾ ಮುಕ್ತ ಸ್ಯಾಂಡಲ್‍ನಲ್ಲಿ ನಡೆದಾಡುವುದಿದ್ದರೆ  ಪಾದದ ಉಗುರುಗಳಿಗೆ ಗಾಢವಾದ ಮತ್ತು ಕಡು ವರ್ಣದ ನೈಲ್ ಪಾಲಿಶ್ ಉತ್ತಮ.

10. ಕೆಲವು ಮೂಲ ನಿಯಮಗಳೊಂದಿಗೆ ಸೂಕ್ತ ರೀತಿಯಲ್ಲಿ ಚರ್ಮದ ಆರೈಕೆ ಮಾಡಿದರೆ  ಬೇಸಿಗೆ ಉತ್ತಮ ಕಾಲವಾಗುತ್ತದೆ.

ಡಾ.ವಸುಂಧರಾ ಭೂಪತಿ ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್

ಡಾ.ವಸುಂಧರಾ ಭೂಪತಿ
ಸಿದ್ಧಾರ್ಥ ಆಯುರ್ವೇದ ಕ್ಲಿನಿಕ್
ನಂ.222, 2ನ `ಇ’ ಕ್ರಾಸ್, 3ನೇ ಬ್ಲಾಕ್, 3ನೇ ಸ್ಟೇಜ್, ಬಸವೇಶ್ವರನಗರ,
ಬೆಂಗಳೂರು – 560 079, ಮೊ: 9480334750

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!