ಆಯುರ್ವೇದ ಮತ್ತು ಆರೋಗ್ಯ ಸಂರಕ್ಷಣೆ

ಆಯುರ್ವೇದ ಭಾರತೀಯ ವೈದ್ಯಶಾಸ್ತ್ರ. ಜಗತ್ತಿಗೆ ಆವರಿಸಿದ ಪ್ರಸಕ್ತ ಮಾರಕ ಕಾಯಿಲೆಯನ್ನು ಚಿಕಿತ್ಸಿಸುವಲ್ಲಿ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ.

ಆಯುರ್ವೇದ ಮತ್ತು ಆರೋಗ್ಯ ಸಂರಕ್ಷಣೆ

ಮೊನ್ನೆಯ ಮಾರಕ ಕಾಯಿಲೆ ಜಗತ್ತನ್ನೆ ತಲ್ಲಣಗೊಳಿಸಿದ ನಂತರ ಸಮಾಜವು ಅಂದರೆ ಜನರು ವಾಸ್ತವಿಕತೆಯ ಕಡೆ ಹೆಚ್ಚು ಗಮನ ಹರಿಸುತ್ತಿರುವುದನ್ನು ನಾವು ಕಂಡು ಕೇಳಿದ್ದೇವೆ. ಅಂದರೆ ಮಾರಕ ಕಾಯಿಲೆಗೆ ಚಿಕಿತ್ಸೆಯ ವಿಚಾರ ಬಂದಾಗ ಆಯುರ್ವೇದ ಹೆಚ್ಚು ಪ್ರಚಾರಕ್ಕೆ ಬಂತೆಂಬ ಮಾತು ಅಲ್ಲಲ್ಲಿ ಕೇಳತೊಡಗಿದೆ. ಆದರೆ ಪುಣ್ಯಪ್ರದವಾದ ಆಯುರ್ವೇದ ವಿಜ್ಞಾನದ ವಾಸ್ತವಿಕ ಅಂಶಗಳು ತನ್ನೊಳು ತಾನು ಕಾಯ್ದುಕೊಂಡಿದೆ. ಈ ವಿಷಯ ಹಾಗೂ ಆಯುರ್ವೇದ ಮತ್ತು ಆರೋಗ್ಯ ಸಂರಕ್ಷಣೆ ಕುರಿತಾದ ಅತ್ಯಲ್ಪ ವಿಷಯಗಳ ಬಗ್ಗೆ ಬರೆಯುವ ಪ್ರಯತ್ನವಿದು.

ಆರೋಗ್ಯವೆಂದರೆ..ಆಯುರ್ವೇದ ಶಾಸ್ತ್ರದಲ್ಲಿ 

** “ಸಮದೋಷ ಸಮಾಗ್ನಿಶ್ಚ ಸಮಧಾತುಮಲಕ್ರಿಯಾಃ|
** ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೆ ||”
ಸಮದೋಷ, ಧಾತು, ಅಗ್ನಿ, ಸರಳವಾದಮಲಕ್ರಿಯೆ, ಸಂತೋಷ ಸ್ಥಿತಿಯುಳ್ಳ ಆತ್ಮ , ಪಂಚೇಂದ್ರಿಯಗಳು  ಮತ್ತು ಮನಸ್ಸು ಇವೆಲ್ಲವು ಸಮತೋಲನ ಸ್ಥಿತಿಯಲ್ಲಿದ್ದರೆ ಮಾತ್ರ ಆರೋಗ್ಯವೆಂದು ಆಚಾರ್ಯ ಸುಶ್ರುತರು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಯುರ್ವೇದ ಐದು ಸಾವಿರ ವರ್ಷದ ಇತಿಹಾಸ ಹೊಂದಿರುವ ವೈದ್ಯಕೀಯವಿಜ್ಞಾನಶಾಸ್ತ್ರ. ಆಯುರ್ವೇದವು ಪಂಚ ಜ್ನಾನೇಂದ್ರೀಯ, ಕರ್ಮೇಂದ್ರೀಯ, ತನ್ಮಾತ್ರಯ ಬುದ್ಧಿ, ಮನಃ, ಇಂದ್ರಿಯ,ವನ್ನಾಶ್ರಯಿಸಿದ ಜೀವಂತ ಅನಾದಿ, ಅನಂತ, ಶಾಸ್ತ್ರವಿದಾಗಿದೆ.

ಆಯುರ್ವೇದವು ಭಾರತೀಯ ವೈದ್ಯಶಾಸ್ತ್ರ. ನಮ್ಮಸುತ್ತಲೂ ಗೋಚರವಾಗುವ ಎಲ್ಲ ದ್ರವ – ದ್ರವ್ಯಗಳು ಪಂಚಮಹಾಭೂತ, ಆತ್ಮ ಮನಃ ದ ಸಂಯೋಗದಿಂದ ಜೀವರಾಶಿಗಳಿಂದಲೇ ಮಾರ್ಪಟ್ಟಿರುವಂತಹದ್ದಾಗಿದೆ. ಈ ತತ್ವಕ್ಕನುಸಾರವಾಗಿ ಮನುಷ್ಯ, ಪಂಚಭೂತ ಮತ್ತು ಆತ್ಮ ಸೇರಿ ಆಗಿರುವ ಜೀವಿ. ಪ್ರಾಣಿ, ಸಸ್ಯ, ಖನಿಜ, ಗಾಳಿ, ನೀರು ಇವುಗಳನ್ನು ಉಪಯೋಗಿಸಿಕೊಳ್ಳುತ್ತ ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ಜೀವನವನ್ನು ಸಾಗಿಸುತ್ತಾ ಬದುಕುತ್ತಿದ್ದಾನೆ.

ಶರೀರ ಮತ್ತು ಮನಸ್ಸುಗಳ ಸ್ಥಿತಿಗೆ ಪಂಚಭೂತಗಳೇ ಕಾರಣ

ಚತುಷ್ಟಯದಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಲ್ಲವುಗಳ ಸಿದ್ಧಿಯೇ ಸಾರ್ಥಕ ಬದುಕಿನ ಹಾಗೂ ಆರೋಗ್ಯದ ಗುಟ್ಟು ಎನ್ನುತ್ತಾ ಸ್ವಾಸ್ಥ್ಯ ಕಾಪಾಡಿಕೊಳ್ಳುತ್ತ ಬದುಕುತ್ತಿರುವುದನ್ನು ಕಾಣಬಹುದು. ಅಂದರೆ ಯಾವ ಬಾಧೆಯೂ ಬರದಂತೆ ಬಹುಕಾಲ ಬದುಕಿ ಬಾಳಲು ಈ ಎಲ್ಲ ಸಿದ್ಧಿಯು ಅತೀ ಅವಶ್ಯವೂ ಆಗಿರುತ್ತದೆ. ಅಂದರೆ ಆರೋಗ್ಯ ಸಂರಕ್ಷಣೆ, ಆಹಾರ, ದೇಶ, ಕಾಲ, ನಿದ್ರೆ, ಬ್ರಹ್ಮಚರ್ಯೆ, ನಡವಳಿಕೆ ಮುಂತಾದವುಗಳನ್ನವಲಂಬಿಸಿದೆ. ಇವುಗಳ ಏರುಪೇರಿನಿಂದಲೇ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವುದು. ಈ ಅವ್ಯವಸ್ಥೆಯನ್ನೇ ರೋಗವೆಂದು ಕರೆಯಲಾಗಿದೆ. ಆರೋಗ್ಯದಲ್ಲೂ ಶರೀರ ಮತ್ತು ಮನಸ್ಸುಗಳ ಸ್ಥಿತಿಗೆ ಪಂಚಭೂತಗಳೇ ಕಾರಣ.

ಪಂಚೀಕೃತವಾದ ಭೌತಿಕ ದ್ರವ್ಯಗಳಲ್ಲಿ ಪ್ರಧಾನವಾದುವು ವಾಯು, ಅಗ್ನಿ ಮತ್ತು ಜಲ. ಇವು ಶರೀರದಲ್ಲಿ ವಾತ, ಪಿತ್ತ ಮತ್ತು ಕಫ  ರೂಪದಲ್ಲಿವೆ. ಇವುಗಳ ಗುಣಕರ್ಮಗಳು ಶರೀರಾವಯವಗಳಿಗೆ (ಸಪ್ತಾಧಾತು) ಸಮಾನವಾಗಿದ್ದರೆ ದೇಹ ಪೋಷಣೆಯು ವಿಷಮವಾಗಿದ್ದರೆ ರೋಗ ಮತ್ತು ಮರಣವನ್ನೂ ಉಂಟು ಮಾಡುವುವು. ನಿತ್ಯಜೀವನದಲ್ಲಿ ಆಹಾರಾದಿಗಳ ವ್ಯತ್ಯಾಸವಾಗುತ್ತಿದ್ದು ವಾತ, ಪಿತ್ತ ಮತ್ತು ಕಫಗಳು ಹೆಚ್ಚು ಕಡಿಮೆಯಾಗಿ ಧಾತುಗಳನ್ನು ದೂಷಿಸುವುದರಿಂದ ಇವುಗಳಿಗೆ ದೋಷಗಳೆಂದು ಹೆಸರು ಬಂದಿದೆ.

ಧಾತುಗಳು ಬಲಿಷ್ಠವಾಗುವವರೆಗೂ ಆಹಾರಾದಿಗಳ ಹೆಚ್ಚು ಕಡಿಮೆಯಿಂದ ಯಾವ ಬಾಧೆಯೂ ತೋರುವುದಿಲ್ಲ. ಆಗ ದೋಷಗಳ ಬಲ ಕಡಿಮೆಯಾಗಿರುವುದು. ಇದಕ್ಕೆ ವಿರುದ್ಧವಾಗಿದ್ದರೆ ದುಷ್ಟ ದೋಷಗಳು ರೋಗಕ್ಕೆ ಕಾರಣವಾಗುತ್ತವೆ. ಸರಿಯಾದ ವ್ಯಾಯಾಮ, ಸ್ನಿಗ್ಧಾಹಾರ ಮತ್ತು ಹಸಿವು ಇರುವ ಮನುಷ್ಯನಿಗೆ ವಿರುದ್ಧವಾದುವು ಪೀಡಿಸುವುದಿಲ್ಲ. ಆದರೂ ಅಭ್ಯಾಸವಿರುವ ಆಹಾರವನ್ನು ಮಿತವಾಗಿಯೇ ಸೇವಿಸಬೇಕು. ರೋಗಕ್ಕೆ ಕಾರಣವಾದುದನ್ನು ವರ್ಜಿಸುವುದು, ರೋಗ ಲಕ್ಷಣಗಳಿಂದ ವಿಷಮ ದೋಷಗಳ ವೃದ್ಧಿಕ್ಷಯಗಳನ್ನು ಕಂಡುಹಿಡಿದು, ಅವುಗಳನ್ನು ಸಮಸ್ಥಿತಿಯಲ್ಲಿರಿಸಿ ಧಾತುಗಳ ಬಲವನ್ನು ಹೆಚ್ಚಿಸುವುದು,ಈ ವೈದ್ಯಪದ್ಧತಿಯ ತತ್ತ್ವಗಳು.

ಹೇತುಲಿಂಗೌಷಧ ಜ್ಞಾನವನ್ನನುಸರಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಎಲ್ಲ ಕಾಲಕ್ಕೂ ವಿಹಿತವಾಗಿದೆ. ಶರೀರದಲ್ಲಿ ಉತ್ಪತ್ತಿಯಾಗುವ ವಾತವಿಣ್ಮೂತ್ರಾದಿಗಳ ವೇಗಗಳನ್ನು ತಡೆಯುವುದು. ವೇಗವಿಲ್ಲದಿರುವಾಗ ಅದನ್ನು ಉಂಟು ಮಾಡುವುದಕ್ಕೆ ಪ್ರಯತ್ನಿಸುವುದು ರೋಗಕ್ಕೆ ಸಾಮಾನ್ಯ ಕಾರಣ. ಶಾರೀರಿಕ ಕ್ರಿಯೆಯಲ್ಲಿ ವ್ಯತ್ಯಾಸವಾಗಿ ಉಂಟಾಗುವ ರೋಗಕ್ಕೆ ನಿಜ ರೋಗವೆಂದೂ ಅಪಫಾತ, ಅಗ್ನಿ, ವಿಷ ಮುಂತಾದ ಹೊರಗಿನ ಕಾರಣಗಳಿಂದ ಸಂಭವಿಸುವ ರೋಗಕ್ಕೆ ಆಗಂತುಕವೆಂದೂ ಹೆಸರು. ಆಗಂತುಕದಲ್ಲಿ ಬಾಧೆಯಾದ ಅನಂತರ ದೋಷ ವೈಷಮ್ಯ ಕಂಡುಬರುವುದು. ಚಿಕಿತ್ಸೆಯನ್ನು ದೋಷಕ್ಕೆ ತಕ್ಕಂತೆಯೂ ವ್ಯಾಧಿಗೆ ತಕ್ಕಂತೆಯೂ ಎಂದರೆ ದೋಷಪ್ರತ್ಯನೀಕ ಮತ್ತು ವ್ಯಾಧಿಪ್ರತ್ಯನೀಕವೆಂದು ಎರಡು ಭಾಗ ಮಾಡುವುದುಂಟು.

ರೋಗ ತನ್ನ ಸ್ಪಷ್ಟ ರೂಪವನ್ನು ಹೊಂದುವುದಕ್ಕೆ ಮೊದಲು ಶೋಧನ ಅಥವಾ ಶಮನಕ್ರಿಯೆಗಳಿಂದ ದೋಷಗಳನ್ನು ಸರಿಪಡಿಸುವುದು ದೋಷಪ್ರತ್ಯನೀಕ. ರೋಗ ಸ್ಪಷ್ಟವಾಗಿ ಮುಂದುವರಿಯುತ್ತಿದ್ದರೆ ರೋಗ ಹರಣಮಾಡುವ ಸಿದ್ಧೌಷಧ ಪ್ರಯೋಗ ವ್ಯಾಧಿಕ್ರುತ್ಸನೀಕವೆನಿಸುವುದು. ಚಿಕಿತ್ಸೆಗೆ ಕೇವಲ ಔಷಧಗಳೇ ಅಲ್ಲದೆ ಕ್ಷಾರ, ಕರ್ಮ, ಶಸ್ತ್ರಕರ್ಮ ಮತ್ತು ಅಗ್ನಿಕರ್ಮಗಳೆಂಬ ಬೇರೆ ಬೇರೆ ಉಪಾಯಗಳಿವೆ. ಕ್ಷಾರ ಮತ್ತು ಅಗ್ನಿಕರ್ಮಗಳು ದುರ್ಮಾಂಸ, ವಿಷದಂಶ ಮುಂತಾದುವನ್ನು ಸುಡುವುದರಲ್ಲೂ ಶಸ್ತ್ರಕರ್ಮ ಶಲ್ಯಾಹರಣ, ವಿದ್ರಧಿ, ಅಧಿಕಮಾಂಸ, ಅಸ್ಥಿಭಗ್ನ ಮುಂತಾದುವುಗಳಲ್ಲೂ ಉಪಯೋಗವಾಗಿವೆ.

ಆಯುರ್ವೇದದ ವೈಶಿಷ್ಟ್ಯಗಳು.

ಪಂಚಕರ್ಮ, ನಾಡೀಪರೀಕ್ಷೆ , ಲೋಹಗಳ ಭಸ್ಮ ಪ್ರಯೋಗಗಳು ಚಿಕಿತ್ಸೆಯಲ್ಲಿ ಬಹಳ ಉಪಯುಕ್ತವಾಗಿವೆ. ವೈದ್ಯರು ತಮಗೆ ಬೇಕಾದ ಔಷಧಗಳನ್ನು ತಾವೇ ಮಾಡಿಕೊಳ್ಳುವುದು, ಏಕಮೂಲಿಕಾ ಪ್ರಯೋಗ, ಪಥ್ಯಕ್ರಮ, ಋತುಗಳಿಗೆ ತಕ್ಕ ಆಹಾರ ವಿಹಾರ ನಿಯಮಗಳು-ಇವು ಆಯುರ್ವೇದದ ವೈಶಿಷ್ಟ್ಯಗಳು. ದೀರ್ಘಾಯುಸ್ಸು, ಸ್ಮೃತಿ, ಮೇಧಾಶಕ್ತಿ ಮುಂತಾದುವನ್ನು ಪಡೆಯುವುದಕ್ಕೆ ರಸಾಯನ ಪ್ರಯೋಗಗಳುಂಟು. ಮನುಷ್ಯ ನೆಮ್ಮದಿಯಾಗಿದ್ದುಕೊಂಡು ತನ್ನ ವಂಶಾಭಿವೃದ್ಧಿ ಹಾಗೂ ಸುಖಸಂತೋಷಕ್ಕಾಗಿ ಸತ್ಸಂತಾನವನ್ನು ಪಡೆಯುವುದಕ್ಕೋಸ್ಕರ ವಾಜೀಕರಣವೆಂಬ ವಿಧಿಯುಂಟು. ಇವೆಲ್ಲವುಗಳನ್ನೊಳಗೊಂಡಿರುವ ಆಯುರ್ವೇದವನ್ನು ಕಾಯ ಚಿಕಿತ್ಸಾ, ಬಾಲ ಚಿಕಿತ್ಸೆ, ಗ್ರಹ ಚಿಕಿತ್ಸೆ, ಉರ್ದ್ವಾಂಗ, ಶಲ್ಯ, ದಂಷ್ಟ್ರಾ, ಜರಾ ಚಿಕಿತ್ಸೆ, ರಸಾಯನ ತಂತ್ರ ಮತ್ತು ವಾಜೀಕರಣ ತಂತ್ರಗಳೆಂದು ಎಂಟು ವಿಧದಲ್ಲಿ ವಿಂಗಡಿಸಲಾಗಿದೆ.

ಆಯುರ್ವೇದದಲ್ಲೂ ವಿವಿಧ ವಿಷಯಗಳ ವಿಭಾಗಗಳನ್ನು ವಿಂಗಡಿಸಲಾಗಿದೆ ಮತ್ತು ವಿಂಗಡಿಸಲಾಗಿತ್ತು. ಇಂತಹ ಪವಿತ್ರ ಆಯುರ್ವೇದ ವಿಜ್ಞಾನವು ಅತ್ಯಂತ ವಿಶಿಷ್ಟ, ಶ್ರೇಷ್ಠ ವೈದ್ಯಕೀಯ ಆರೋಗ್ಯ ಶಾಸ್ತ್ರವಾಗಿದೆ. ದಿನೆ ದಿನೇ ಸಮಗ್ರ ವಾಗಿ ಬೆಳೆಯುತ್ತಲೇ ಇದೆ. ಎಲ್ಲ ಆಯುರ್ವೇದ ಶಿಕ್ಷಣ ಸಂಸ್ಥೆಗಳು ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು  ಕಾಣಬಹುದು. ಅದಲ್ಲದೆ ಅನೇಕ ಸಂಶೋಧನೆಗಳು, ಹಲವಾರು ಮಾರಕ ಕಾಯಿಲೆಗಳಿಗೆ ಅವಿಷ್ಕಾರಗಳು ಮತ್ತು ಚಿಕಿತ್ಸೆಗಳು ಕೂಡಾ ಅಷ್ಟೇ ಉತ್ತಮ ರೀತಿಯಲ್ಲಿ ಭರದಿ ಸಾಗುತ್ತಿವೆ. ಜಗತ್ತಿಗೆ ಆವರಿಸಿದ ಪ್ರಸಕ್ತ ಮಾರಕ ಕಾಯಿಲೆಯನ್ನು ಚಿಕಿತ್ಸಿಸುವಲ್ಲಿ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆಯುರ್ವೇದದ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ.

ಹಾವೇರಿಯಲ್ಲಿ ಶ್ರೀ ಸಿಂದಗಿ ಶಾಂತವೀರೇಶ್ವರ ಆಯುರ್ವೇದ  ಮಹಾವಿದ್ಯಾಲಯ 

ಜನರು ಕೂಡಾ ಆಯುರ್ವೇದ ಚಿಕಿತ್ಸೆಗೆ ಆಕರ್ಷಿತರಾಗುತ್ತಿದ್ದುದು ಗಮನಾರ್ಹ ಸಂಗತಿ. ಅದಲ್ಲದೆ ಶ್ರೀಸಾಮಾನ್ಯರಿಗೂ ಉತ್ತಮ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಇಲ್ಲದೆ ಆರಾಮವಾಗಿ ಚಿಕಿತ್ಸೆ ತೆಗೆದು ಕೊಂಡು ಸ್ವಾಸ್ಥ್ಯ ಕಾಪಾಡಿಕೊಳ್ಳುವಂತಹದನ್ನು ಸದೃಶವಾಗಿ ಕಾಣತ್ತಿದ್ದೇವೆ. ದಿನ ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಆಯುರ್ವೇದ ಚಿಕಿತ್ಸೆಯೊಂದಿಗೆ ಅರೋಗ್ಯ ಹೊಂದುವುದಲ್ಲದೇ ಆಯುರ್ವೇದದ ಅರಿವು ಕೂಡಾ ಗಣನೀಯವಾಗಿ ಹೆಚ್ಚುತ್ತಲೇ ಇದೆ.ಇದಕ್ಕೆ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸಿಸಿ ಕೊಳ್ಳುವವರೇ ನಿದರ್ಶನ.

ಅದೇ ರೀತಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಶ್ರೀ ಸಿಂದಗಿ ಶಾಂತವೀರ ಮಹಾಸ್ವಾಮಿಗಳ ಕೃಪಾಶಿರ್ವಾದದಿಂದ ಸುಸಜ್ಜಿತವಾದ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಒಂಭತ್ತು ಆಯುರ್ವೇದ ಚಿಕಿತ್ಸಾ ವಿಭಾಗಗಳೊಂದಿಗೆ ಹೊರ ಮತ್ತು ಒಳರೋಗಿ ವಿಭಾಗ ಸುಸಜ್ಜಿತ ಪಂಚಕರ್ಮ ಚಿಕಿತ್ಸೆ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ಎಲ್ಲ ಪರಿಕರಗಳೊಂದಿಗಿನ ಪಿಸಿಯೊಥೆರಪಿ ಚಿಕಿತ್ಸೆ , ಜೊತೆಗೆ ವಿಶೇಷ ತಜ್ಞ ವೈದ್ಯರಿಂದ ಚಿಕಿತ್ಸೆ ಹಾಗೂ ಸಮಾಲೋಚನೆಯೊಂದಿಗೆ ಆಯುರ್ವೇದ ವೈದ್ಯಕೀಯ ಸೇವೆಯನ್ನು ನೀಡುತ್ತಲಿದ್ದು ಇಪ್ಪತ್ತೈದು ವಸಂತಗಳು ಕಳೆದಿವೆ.

dr-sangamesh

ಡಾ. ಸಂಗಮೇಶ.ನಾ.ದೊಡ್ಡಗೌಡ್ರ
ಸಹ ಪ್ರಾಧ್ಯಾಪಕರು – ಪಂಚಕರ್ಮ ವಿಭಾಗ
ಸಿಂದಗಿ ಶಾಂತವೀರೇಶ್ವರ ಆಯುರ್ವೇದ
ಮಹಾವಿದ್ಯಾಲಯ ಹಾವೇರಿ.
ಮೊಬೈಲ್ : 9980084800
ಮೇಲ್ : sndgoudatml@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!