ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳು

ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ. ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ  ಹೃದಯ ಆರೋಗ್ಯವಾಗಿರುತ್ತದೆ .

heart. ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳುಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 20 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದ್ರೋಗ ಪ್ರಕರಣಗಳ ಸಂಖ್ಯೆ ಇಮ್ಮಡಿಯಾಗಿದೆ. ಈ ಮಾರಕ ರೋಗಗಳನ್ನು ತಡೆಗಟ್ಟಲು ಕೆಲವು ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಅಮೂಲ್ಯ ಮತ್ತು ಅದ್ಭುತ ಅಂಗವಾದ ಹೃದಯ ಆರೋಗ್ಯವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.
1.ಅರೋಗ್ಯಕರ ಆಹಾರ : ಸಮತೋಲನ ಆಹಾರ ಸೇವಿಸಿ.  ಹೃದಯ ಆರೋಗ್ಯಕರವಾಗಿ ಮತ್ತು ಸ್ವಾಸ್ಥ್ಯದಿಂದ ಇರಲು ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಧಾನ್ಯಗಳು, ಗೋಧಿ ಮತ್ತು ಅಕ್ಕಿಯಂಥ ಶರ್ಕರ ಪಿಷ್ಟ ಸಮೃದ್ದ ಆಹಾರವನ್ನು ಸೇವಿಸಿ.
2.ಐಷಾರಾಮಿ ಜೀವನಶೈಲಿ : ಐಷಾರಾಮಿ ಜೀವನಶೈಲಿಯಿಂದ ವಿಶ್ವಾದ್ಯಂತ ಶೇ.3ರಷ್ಟು ಕೊರೊನರಿ ಹೃದ್ರೋಗ ಹಾಗೂ ಶೇ.11ರಷ್ಟು ಪಾಶ್ರ್ವವಾಯು ಸಾವುಗಳು ಸಂಭವಿಸುತ್ತಿವೆ.
3.ಒತ್ತಡ ನಿರ್ವಹಣೆ : ಒತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯಾಘಾತದ ಗಂಡಾಂತರವನ್ನು ಕಡಿಮೆ ಮಾಡಲು ಆಳವಾದ ಉಸಿರಾಟ, ಯೋಗ ಹಾಗೂ ಧ್ಯಾನ ಮೂಲ ಮಂತ್ರಗಳಾಗಿವೆ.
4.ಸಾಕಷ್ಟು ನಿದ್ರೆ : ನಿದ್ರಾಹೀನತೆಯಿಂದ ರಕ್ತದೊತ್ತಡ ಹಾಗೂ ಕೊಲೆಸ್ಟರಾಲ್ ಪ್ರಮಾಣ ಹೆಚ್ಚಾಗುತ್ತದೆ. ಇದು ಕೂಡ ಹೃದಯಕ್ಕೆ ಸಂಬಂಧಿಸಿದ ಗಂಡಾಂತರ ಮಟ್ಟಗಳನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯ ಅರೋಗ್ಯಕರವಾಗಿರಲು ರಾತ್ರಿ ವೇಳೆ 7-9 ಗಂಟೆಗಳ ನಿದ್ರೆ ಅಗತ್ಯ.
5.ಕೋಪ ನಿಯಂತ್ರಣ : ಕೆಲವು ಆರೋಗ್ಯ ನಿಯತಕಾಲಿಕಗಳ ಪ್ರಕಾರ ಕೋಪ ಮತ್ತು ಒತ್ತಡವು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಹಾಗೂ ಕಾಲಕ್ರಮೇಣ ಇದು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ.
6.ಯಥೇಚ್ಚ ನೀರು ಸೇವನೆ : ಪ್ರತಿ ದಿನ ಯಾರು 4-5 ಲೀಟರ್‍ಗಳಷ್ಟು ನೀರು ಕುಡಿಯುತ್ತಾರೋ ಅವರಿಗೆ ಹೃದಯಾಘಾತಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ ಇರುತ್ತವೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ.
7.ಆಗಾಗ ಆರೋಗ್ಯ ತಪಾಸಣೆ : ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ನಿಮ್ಮ ರಕ್ತದೊತ್ತಡ, ಕೊಲೆಸ್ಟರಾಲ್ ಹಾಗೂ ಟಿಜಿ ಮಟ್ಟಗಳನ್ನು ಸಾಮಾನ್ಯ ಪ್ರಮಾಣದಲ್ಲಿ ನಿಯಂತ್ರಣದಲ್ಲಿಡಬೇಕು. ಇದು ನಿಮ್ಮ ಆರೋಗ್ಯಕರ ಹೃದಯಕ್ಕೆ ಮುಖ್ಯ.
8.ವ್ಯಾಯಾಮ : ನಿಯಮಿತ ವ್ಯಾಯಾಮಗಳನ್ನು ಮಾಡುವುದರಿಂದ ಹೃದಯ ಮಾಂಸಖಂಡಗಳು ಬಲಗೊಂಡು ಹೃದಯಾಘಾತಗಳನ್ನು ಕಡಿಮೆ ಮಾಡುತ್ತದೆ.
9.ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ : ಧೂಮಪಾನವು ಜೀವಿತಾವಧಿಯನ್ನು 15-25 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಹಾಗೂ ಆಲ್ಕೋಹಾಲ್ ಸೇವನೆಯು ಹೃದಯದ ಮಾಂಸಖಂಡಗಳಿಗೆ ಹಾನಿಯುಂಟು ಮಾಡಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
10.ನಗು ಚಿಕಿತ್ಸೆ : ನಗು ಚಿಕಿತ್ಸೆ ಹೃದಯಕ್ಕೆ ಅತ್ಯುತ್ತಮವಾದ ಔಷಧ. ಪ್ರತಿದಿನ ಕೇವಲ 15 ನಿಮಿಷಗಳ ಕಾಲ ನಗುವುದರಿಂದ ನಿಮ್ಮ ರಕ್ತ ಸಂಚಾರ ಶೇ.22ರಷ್ಟು ಹೆಚ್ಚಾಗುತ್ತದೆ ಹಾಗೂ ರಕ್ತನಾಳಗಳು ದಪ್ಪವಾಗುವುದನ್ನು ತಡೆಗಟ್ಟುತ್ತದೆ.
11.ಕಾರ್ಯ ವೇಳಾಪಟ್ಟಿ ನಿರ್ವಹಣೆ : ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಿದ ಹಾಗೂ ಸಂಘಟಿತ ವೇಳಾಪಟ್ಟಿಗಳು ನಿಮ್ಮ ಒತ್ತಡದ ಮಟ್ಟಗಳನ್ನು ಇಳಿಸಲು ಸಹಕಾರಿ ಹಾಗೂ ನಿಮ್ಮ ಜೀವನ ಮಟ್ಟವನ್ನು ಸುಧಾರಿಸುತ್ತದೆ.
12.ಔಷಧಗಳು : ಸಕಾಲಿಕ ಮತ್ತು ನಿಯಮಿತ ಔಷಧಿಗಳಿಂದ ಹೃದ್ರೋಗಗಳನ್ನು ತಡೆಗಟ್ಟಬಹುದು.
(ಲೇಖಕರು ಖ್ಯಾತ ಆಯುರ್ವೇದ ಹೃದಯ ರೋಗ ತಜ್ಞರು. ಶಸ್ತ್ರ ಚಿಕಿತ್ಸೆಯಿಲ್ಲದೆ ಹೃದಯದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಲೇಖಕರನ್ನು ಸಂಪರ್ಕಿಸಬಹುದು.)

ಡಾ. ಅಶೋಕ್ ಕುಮಾರ್ ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರಿಸರ್ಚ್ ಸೆಂಟರ್ 466/1, 13ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-27 ದೂ.: 080-22126994, 22220563, ಮೊ.: 9845071610, 9480291404 Email : nisarga@nisargaayurvedic.in websit : nisargaayurvedic.in

ಡಾ. ಅಶೋಕ್ ಕುಮಾರ್

ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರಿಸರ್ಚ್ ಸೆಂಟರ್
466/1, 13ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-27
ದೂ.: 080-22126994, 22220563,
ಮೊ.: 9845071610, 9480291404
Email : nisarga@nisargaayurvedic.in
website : nisargaayurvedic.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!