ಆರೋಗ್ಯಕರ ಹೃದಯಕ್ಕಾಗಿ ಆಹಾರ ಸೂತ್ರಗಳು ಬಹಳ ಮುಖ್ಯ.ಆರೋಗ್ಯಕರ ಜೀವನ ಹೊಂದಬೇಕಾದರೆ ಬಾಯಿ ಚಪಲಕ್ಕೆ ಬ್ರೇಕ್ ಹಾಕಿ. ಉಪ್ಪಿನ ಬಳಕೆ ನಿಯಂತ್ರಿಸಿ.
1. ಬೀಟಾ-ಕ್ಯಾರೋಟಿನ್ಸ್ ಸಮೃದ್ದವಿರುವ ಅಹಾರ ಸೇವಿಸಿ. ಇದು ನೀವು ಪಾಶ್ರ್ವವಾಯುವಿಗೆ ಒಳಗಾಗುವ ಗಂಡಾಂತರವನ್ನು ಶೇ.40ರಷ್ಟು ತಗ್ಗಿಸುತ್ತದೆ. ಬೀಟಾ-ಕ್ಯಾರೋಟಿನ್ಸ್ ನಿಂದ ಸಮೃದ್ಧವಾಗಿರುವ ಆಹಾರಗಳೆಂದರೆ: ಕ್ಯಾರೇಟ್, ಎಲೆಕೋಸು, ವಿಂಟರ್ ಸ್ಕ್ವಾಶ್, ಗೆಣಸು, ಸೊಪ್ಪುಗಳು, ಜರದಾರು ಹಣ್ಣು ಮತ್ತು ಸಮುದ್ರಪಾಚಿ.
2.ಬೆಳ್ಳುಳ್ಳಿ ತಿನ್ನಿ : ಬೆಳ್ಳುಳ್ಳಿ ದಿವ್ಯ ಔಷಧಿ. ಅಧಿಕ ರಕ್ತದೊತ್ತಡವನ್ನು ತಗ್ಗಿಸುವ, ಫಾಸ್ಫೋಲಿಪಿಡ್‍ಗಳು ಮತ್ತು ಕೊಲೆಸ್ಟರಾಲ್‍ನನ್ನು ಕಡಿಮೆ ಮಾಡುವ, ಹೃದಯ ಕ್ರಿಯೆಯನ್ನು ಬಲಗೊಳಿಸುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ರಕ್ತ ಹೆಪ್ಪಗಟ್ಟುವುದನ್ನು ತಡೆಯುವ (ಇದು ಪಾಶ್ರ್ವವಾಯು ಸಾಧ್ಯತೆಯನ್ನು ತಗ್ಗಿಸುತ್ತದೆ) ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವ ಸಾಮಥ್ರ್ಯ ಹೊಂದಿರುವುದು ಮತ್ತೆ ಮತ್ತೆ ನಡೆಸಲಾದ ಅಧ್ಯಯನ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ. ಪ್ರತಿ ದಿನ ಹಲವಾರು ಹಸಿಯಾದ ಅಥವಾ ಸ್ವಲ್ಪವೇ ಬೇಯಿಸಿದ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳುಂಟು.
3. ಅಗತ್ಯ ಫ್ಯಾಟಿ ಆ್ಯಸಿಡ್‍ಗಳಿಂದ ಸಮೃದ್ಧವಾಗಿರುವ ಆಹಾರ ಸೇವಿಸಿ : ಗೋಧಿ ಮೊಳಕೆ ಅಥವಾ ಅಗಸೆಯ ನಾರು ಸಸ್ಯ ಬೀಜದ ಎಣ್ಣೆಯು ವಿಶೇಷ ಪೋಷಕಾಂಶ ಗುಣಗಳನ್ನು ಹೊಂದಿರುತ್ತದೆ.
4.ಲೆಮೆನ್ ಟೀ ಕುಡಿಯಿರಿ : ಪ್ರತಿ ದಿನ ಲೆಮೆನ್ ಟೀ (ನಿಂಬೆ ಚಹಾ) ಕುಡಿಯುವುದರಿಂದ ಹೃದಯ ಬಲಗೊಳ್ಳುತ್ತದೆ. ಇದಕ್ಕೆಂದೇ ಹಳೇ ಗಾದೆ ಮಾತೊಂದಿದೆ. ವಿದಿನಂಪ್ರತಿ ಯಾರು ನಿಂಬೆ ಬಾಮ್ ಚಹಾ ಕುಡಿಯುತ್ತಾರೆ ಅವರು ದೀರ್ಘಕಾಲ ಬದುಕುತ್ತಾರೆಹಿ. ನಿಮ್ಮ ಸಲಾಡ್‍ನಲ್ಲಿ ಬಳಸಲು ಲೆಮೆನ್ ಬಾಮ್ ವಿನೆಗರ್ ತಯಾರಿಸಿ ಇಟ್ಟುಕೊಳ್ಳಿ.
5. ನಿರ್ಬಂಧಿತ ಪಥ್ಯಾಹಾರಗಳನ್ನು ತಪ್ಪಿಸಿ : ಅಸಮರ್ಪಕ ಪಥ್ಯಾಹಾರ, ಪದೇ ಪದೇ ಉಪವಾಸ, ವಿಪರೀತ ತಿನ್ನುವುದರಿಂದ ಮತ್ತು ಸ್ವಯಂ ಅತಿಸಾರ ಮಾಡಿಕೊಳ್ಳುವುದರಿಂದ ನಿಮ್ಮ ಶರೀರದಲ್ಲಿನ ಎಲೆಕ್ಟ್ರೋಲೈಟ್ ಮಟ್ಠಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಹೃದಯದ ಮಾಂಸಖಂಡಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಹೃದಯಕ್ಕೆ ಹಾನಿ ಮಾಡುತ್ತದೆ.
6.ನೀವು ಹೆಚ್ಚಾಗಿ ಸೇವಿಸಬೇಕಾದುದು : ಎಲ್ಲಾ ರೀತಿಯ ಕಾಳು, ಧಾನ್ಯಗಳು, ತರಕಾರಿಗಳು, ಸೊಪ್ಪುಗಳು, ಹುರುಳಿ, ಹಣ್ಣುಗಳು, ಮೀನು, ಬೀಜಗಳು ಮತ್ತು ಯೋಗರ್ಟ್.
7.ಮಿತವಾಗಿ ಸೇವಿಸಬೇಕಾದುದು : ಕಾಯಿಗಳು, ಗಿಣ್ಣು ಮತ್ತು ಹಾಲು.
8.ಹಸಿ ತರಕಾರಿಗಳನ್ನು ತಿನ್ನಿ : ವಿಶೇಷವಾಗಿ ಕೋಸುಗಡ್ಡೆ ಮತ್ತು ಹೂಕೋಸು. ಏಕೆಂದರೆ ಇವುಗಳಲ್ಲಿ ಅಧಿಕ ನಾರಿನಂಶ (ಫೈಬರ್) ಇರುತ್ತದೆ.
9.ಕೆಂಪು ಮಾಂಸದ ಬದಲು ಮೀನು ಬಳಸಿ : ಅಧಿಕ ಕೊಬ್ಬನಾಂಶವಿರುವ ಕೆಂಪು ಮಾಂಸದ ಬದಲು ಮೀನು ಉಪಯೋಗಿಸಿ. ತಣ್ಣೀರಿನ ಮೀನಿನಲ್ಲಿ ರಕ್ಷಣೆ ನೀಡುವ ಓಮೆಗಾ -3 ಇರುತ್ತದೆ. ಇದು ದಿಢೀರ್ ಹೃದಯಾಘಾತದ ಗಂಡಾಂತರವನ್ನು ಕಡಿಮೆ ಮಾಡುತ್ತದೆ. ಯಾವುದೇ ಮಾಂಸವನ್ನು ಆಯ್ಕೆ ಮಾಡಿಕೊಳ್ಳಿ. ಗೊಜ್ಜು ಅಥವಾ ಸಾಸ್ ಪಕ್ಕದಲ್ಲಿರಲಿ. ಆದರೆ ಉಪ್ಪನ್ನು ಮಿತವಾಗಿ ಬಳಸಿ.
10.ತರಕಾರಿ ಬಣ್ಣ ಕೂಡ ಮುಖ್ಯ. ತರಕಾರಿ ಹೆಚ್ಚು ಬಣ್ಣ ಹೊಂದಿದಷ್ಟೂ ಅದು ಹೃದಯಕ್ಕೆ ಹೆಚ್ಚು ರಕ್ಷಣೆ ನೀಡುವ ಆಂಟಿ ಒಕ್ಸಿಡೆಂಟ್‍ಗಳನ್ನು ಒಳಗೊಂಡಿರುತ್ತದೆ. ಪೌಷ್ಟಿಕಾಂಶವನ್ನು ಸಂರಕ್ಷಿಸುವಲ್ಲಿ ಮೈಕ್ರೋವೇವ್ ಒವನ್‍ಗಿಂತ ಬೇಯಿಸುವುದು ಉತ್ತಮ. ಅದಾಗ್ಯೂ ಅತಿಯಾಗಿ ಬೇಯಿಸುವುದರಿಂದ ಇದರಲ್ಲಿನ ಹೃದಯ ಆರೋಗ್ಯ ಅಂಶಗಳು ನಶಿಸಿ ಹೋಗುತ್ತವೆ.
11.ಉಪ್ಪಿನ ಬಳಕೆ ನಿಯಂತ್ರಿಸಿ : ಹೆಚ್ಚು ಉಪ್ಪು ಬಳಕೆಯಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಇದು ಹೃದ್ರೋಗಗಳ ಸಾಧ್ಯತೆಯನ್ನು ಹೆಚ್ಚಾಗಿಸುತ್ತದೆ. ಚಿಪ್ಸ್‍ಗಳು, ಅಧಿಕ ಉಪ್ಪು ಇರುವ ಪ್ಯಾಕ್ ಮಾಡಿದ ಕರಿದ ಆಹಾರ ಪದಾರ್ಥಗಳು, ಹುರಿದ ಮಾಂಸಗಳು, ಪಿಜ್ಜಾ, ರೆಡಿ ಮೀಲ್ಸ್‍ಗಳು, ಕ್ರಿಸ್ಪ್ಸ್, ಬರ್ಗರ್ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿ. ಬೆಳಿಗ್ಗೆ ನೀವು ಸೇವಿಸುವ ಬ್ರೆಡ್ ಮತ್ತು ಸಿರೀಲ್‍ಗಳು ಅರೋಗ್ಯಕರವಾಗಿ ಕಂಡುಬಂದರೂ ಅದರಲ್ಲಿ ಅಧಿಕ ಉಪ್ಪಿನಾಂಶ ಇರುತ್ತದೆ. ಅದ್ದರಿಂದ ಆ ಬಗ್ಗೆ ನಿಗಾ ವಹಿಸಿ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೀವು ಸೇವಿಸುವ ಉಪ್ಪಿನ ಪ್ರಮಾಣವನ್ನು ಗಮನಿಸಿ. ಆಹಾರದ ಲೆಬಲ್‍ಗಳಲ್ಲಿ ಉಪ್ಪಿನ ಅಂಶವು ಸೋಡಿಯಂ ಅಲ್ಗಿನೇಟ್, ಸೋಡಿಯಂ ಸಲ್ಪೇಟ್, ಸೋಡಿಯಂ ಕ್ಯಾಸಿನೇಟ್, ಡೈಸೋಡಿಯಂ ಫಾಸ್ಪೇಟ್, ಸೋಡಿಯಂ ಬೆಂಜೋಯೇಟ್, ಸೋಡಿಯಂ ಹೈಡ್ರೋಕ್ಸೈಡ್, ಸೋಡಿಯಂ, ಮೊನೆಸೋಡಿಯಂ ಗ್ಲುಟಮೇಟ್ (ಎಂಎಸ್‍ಜಿ) ಮತ್ತು ಸೋಡಿಯಂ ಸಿಟ್ರೇಟ್ ಹೆಸರಿನಲ್ಲಿ ಅಡಗಿರುತ್ತವೆ. ಇವೆಲ್ಲವೂ ಉಪ್ಪಿನ ಅಂಶಗಳಾಗಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು.
12. ಸೇವಿಸುವ ಆಹಾರದ ಬಗ್ಗೆ ಗಮನವಿರಲಿ : ಆರೋಗ್ಯಕರ ಪಥ್ಯಾಹಾರವು ಹೃದ್ರೋಗ ಬರುವ ಸಂಭವವನ್ನು ತಪ್ಪಿಸುವ ಜೊತೆಗೆ ಹೃದಯಾಘಾತ ನಂತರ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಸಾಕಷ್ಟು ತರಕಾರಿ ಮತ್ತು ಹಣ್ಣುಗಳನ್ನು ಒಳಗೊಂಡ ಸಮತೋಲನ ಆಹಾರ ಸೇವಿಸಿ. ಕೊಬ್ಬಿನ ಪದಾರ್ಥಗಳು ಇಲ್ಲದ ಮತ್ತು ಫೈಬರ್ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಬಳಸಿ. ಎಲ್ಲಾ ರೀತಿಯ ಕಾಳುಗಳು ಮತ್ತು ಧಾನ್ಯಗಳು ನಿಮ್ಮ ಅಹಾರದಲ್ಲಿ ಸೇರ್ಪಡೆಯಾಗಲಿ. ಅಕ್ಕಿಯನ್ನು ಮಿತವಾಗಿ ಬಳಸಿ, ಗೋಧಿ ಮತ್ತು ಓಟ್ಸ್ ಬಳಕೆ ಒಳ್ಳೆಯದು. ಬಿಸ್ಕತ್ತು, ಕೇಕ್, ಪ್ಯಾಸ್ಟ್ರಿಗಳು, ಮತ್ತು ಬೇಕರಿ ಪದಾರ್ಥಗಳು ಹಾಗೂ ಡೇರಿ ಉತ್ಪನ್ನಗಳ ಬಳಕೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಿ. ಏಕೆಂದರೆ ಇವುಗಳಲ್ಲಿ ಅಧಿಕ ಪ್ರಮಾಣದ ಕೊಬ್ಬು ಮತ್ತು ಸಕ್ಕರೆ ಅಂಶವಿರುತ್ತದೆ.
13.ಕೊಲೆಸ್ಟರಾಲ್ ಹತೋಟಿಯಲ್ಲಿಡುವ ಆಹಾರ ಪದಾರ್ಥಗಳನ್ನು ಸೇವಿಸಿ. ಅಧಿಕ ಪ್ರಮಾಣದ ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದರಿಂದ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗುತ್ತದೆ. ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕಡಿಮೆ ಕೊಬ್ಬು ಇರುವ ಆಹಾರ ಪದಾರ್ಥಗಳನ್ನು ಬಳಸಬೇಕು. ತಾಜಾ ಹಣ್ಣು ಮತ್ತು ತರಕಾರಿಗಳು, ಚರ್ಮ ತೆಗೆದ ಕೋಳಿ ಅಥವಾ ಟರ್ಕಿ ಕೋಳಿ ಮಾಂಸ (ರೋಸ್ಟ್ ಅಥವಾ ಬೇಕ್ ಮಾಡಿರಬೇಕು), ಕೊಬ್ಬಿನಾಂಶ ಮುಕ್ತ ಅಥವಾ ಕಡಿಮೆ ಕೊಬ್ಬು ಇರುವ ಡೇರಿ ಉತ್ಪನ್ನಗಳು ಹಾಗೂ ಸೊಪ್ಪು-ಕಾಳುಗಳಂಥ ಆಹಾರಗಳು ಕೊಲೆಸ್ಟರಾಲ್ ಹತೋಟಿಯಲ್ಲಿಡಲು ಸಹಕಾರಿ.
14. ಹೊರಗೆ ಹೋಗುವಾಗ ನಿಮ್ಮೊಂದಿಗೆ ನೀರನ್ನು ಕೊಂಡ್ಯೊಯಿರಿ. ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುವುದರಿಂದ ದೇಹದಲ್ಲಿ ನೀರು ಅಂಶ ಹೆಚ್ಚಾಗಿರುವಂತೆ ಮಾಡುತ್ತದೆ.
15.ಆರೋಗ್ಯಕರ ಜೀವನ ಹೊಂದಬೇಕಾದರೆ ಬಾಯಿ ಚಪಲಕ್ಕೆ ಬ್ರೇಕ್ ಹಾಕಿ. ಕಣ್ಣಿಗೆ ಕಾಣದ ಆಹಾರ ಪದಾರ್ಥಗಳು ಬಾಯಿಯಿಂದ ದೂರವಿರುತ್ತದೆ ಎಂಬುದನ್ನು ಮರೆಯಬೇಡಿ. ಪ್ಯಾಕೇಜ್ ಆಹಾರ ಪದಾರ್ಥಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಅಂಶಗಳು ಅಡಗಿ ಕುಳಿತಿರುತ್ತವೆ. ಅದ್ದರಿಂದ ಇಂತಹ ಆಹಾರ ಪದಾರ್ಥಗಳನ್ನು ಸಾಧ್ಯವಾದಷ್ಟೂ ದೂರವಿಡಿ. ಅದರ ಬದಲು ತಾಜಾ ಹಣ್ಣು ಮತ್ತು ತರಕಾರಿಗಳನ್ನು ಕಣ್ಣಿಗೆ ಕಾಣುವಂತೆ ಇಡಿ. ಹಾಗಾಗಿ ನೀವು ಇದನ್ನು ಮೊದಲು ನೋಡುವುದರಿಂದ ಇವುಗಳನ್ನು ಸೇವಿಸಲು ಮನಸ್ಸಾಗುತ್ತದೆ. ಅರೋಗ್ಯಕರ ಆಹಾರವನ್ನು ಮೊದಲು ಹಿಡಿಯುವಂತೆ ಮಾಡುತ್ತಿದ್ದರೆ, ಅದು ನಿಮಗೆ ಅಭ್ಯಾಸವಾಗಿ ಉತ್ತಮ ಜೀವನ ಶೈಲಿಗೆ ನಾಂದಿಯಾಗುತ್ತದೆ.
ಡಾ. ಅಶೋಕ್ ಕುಮಾರ್
ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರಿಸರ್ಚ್ ಸೆಂಟರ್
466/1, 13ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-27
ದೂ.: 080-22126994, 22220563,
ಮೊ.: 9845071610, 9480291404
Email : nisarga@nisargaayurvedic.in
website : nisargaayurvedic.in