ಆರೋಗ್ಯ ಸಮಸ್ಯೆಗಳಿಗಾಗಿ ಈ ಪ್ರಥಮ ಚಿಕಿತ್ಸೆಯನ್ನು ಪ್ರಯತ್ನಿಸಬಹುದು

ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸುತ್ತವೆ. ಸ್ವಲ್ಪ ಎಚ್ಚರಿಕೆ ಮತ್ತು ಆರೈಕೆಯಿಂದ ಅವುಗಳನ್ನು ತಡೆಗಟ್ಟಬಹುದು. ಅಪಘಾತ ಸಂಭವಿಸಿದ ಪ್ರಕರಣದಲ್ಲಿ ನಿಮಗೆ ಮೂಲ ಪ್ರಥಮ ಚಿಕಿತ್ಸೆ ತಿಳಿದಿದ್ದರೆ, ನೀವು ನೆರವು ನೀಡಬಹುದು. ಈ ಕೆಳಗಿನ ವಿಷಯಗಳನ್ನು ಎಚ್ಚರಿಕೆಯಿಂದ ಓದಿ. ಅಗತ್ಯವಿದ್ದಾಗ ನೀವು ಮಹತ್ವದ ಪ್ರಥಮ ಚಿಕಿತ್ಸೆ ನೀಡಲು ಸಮರ್ಥರಾಗುತ್ತೀರಿ. ತಕ್ಷಣ ದೊಡ್ಡವರಿಂದ ಯಾವಾಗಲೂ ಸಹಾಯ ಕೇಳುವುದನ್ನು ಮರೆಯಬೇಡಿ. 

Arogya-samasyegaligagiಉಸಿರಾಟ : ಉಸಿರಾಟ ವಿಫಲವಾಗಿದ್ದರೆ ಅಥವಾ ಉಸಿರಾಡಲು ತೊಂದರೆಯಾಗುತ್ತಿದ್ದರೆ ಕೃತಕ ಉಸಿರಾಟ ಮಾಡಿಸಿ. ಬಾಯಿಯಿಂದ ಬಾಯಿಗೆ ಅಥವಾ ಬಾಯಿಯಿಂದ ಮೂಗಿಗೆ ಕೃತಕ ಉಸಿರಾಟ ಮಾಡಿಸಬೇಕು.

ರಕ್ತಸ್ರಾವ : ರಕ್ತಸ್ರಾವನ್ನು ಬಂದ್ ಮಾಡಿ ಗಾಯಕ್ಕೆ ರಕ್ಷಣೆ ನೀಡಿ. ನೇರ ಅಥವಾ ಪರೋಕ್ಷ ಒತ್ತಡ ಹಾಕಿ. ಗಾಯವಾದ ಜಾಗವನ್ನು ಡ್ರೆಸ್ಸಿಂಗ್‍ನಿಂದ ಸುತ್ತಿ. ಪ್ಯಾಡ್ ಮತ್ತು ದೃಢವಾದ ಬ್ಯಾಂಡೇಜ್ ಹಾಕಿ. ವ್ಯಕ್ತಿಯನ್ನು ಎತ್ತರವಾಗಿಸಿ ವಿಶ್ರಾಂತಿಯಲ್ಲಿ ಇರಿಸಿ.

ಮೂಳೆ ಮುರಿತಗಳು : ಮೂಳೆ ಮುರಿತಕ್ಕೆ ಒಳಗಾಗಿದ್ದರೆ ಎರಡು ಭಾಗಗಳ ಕೀಲುಗಳಿಗೆ ತಲುಪುವಂತೆ ಪ್ಯಾಡ್‍ನಿಂದ ಸ್ಥಿರವಾದ ಆಧಾರ ಒದಗಿಸಿ ಅಲುಗಾಡದಂತೆ ಮಾಡಿ. ಆ ಜಾಗದ ಎರಡೂ ಕಡೆ ಹಾಗೂ ಕೀಲುಗಳ ಎರಡೂ ಪಾಶ್ರ್ವಗಳಲ್ಲಿ ಬ್ಯಾಂಡೇಜ್ ಹಾಕಿ ಆಧಾರ ನೀಡಿ.

ಸುಟ್ಟಗಾಯಗಳು ಮತ್ತು ಬಿಸಿ ನೀರಿನಿಂದ ಸುಟ್ಟ ಗಾಯಗಳು: ಒಣ ಉಷ್ಣದಿಂದ ಸುಟ್ಟ ಗಾಯ ಹಾಗೂ ತುಂಬಾ ಬಿಸಿ ನೀರು ಅಥವಾ ಎಣ್ಣೆ ಹಬೆಯಂಥ ತೇವ ಉಷ್ಣದಿಂದ ಸುಟ್ಟ ಗುಳ್ಳೆ ಉಂಟಾಗುತ್ತದೆ. ತಕ್ಷಣ 15 ನಿಮಿಷಗಳ ಕಾಲ ಆ ಜಾಗದಲ್ಲಿ ಉರಿ ಮತ್ತು ನೋವು ಕಡಿಮೆಯಾಗುವ ತನಕ ತಣ್ಣೀರಿನಿಂದ ತಣ್ಣಗೆ ಮಾಡಬೇಕು. ಗುಳ್ಳೆಗಳನ್ನು ಒಡೆಯಬಾರದು ಅಥವಾ ಸುಟ್ಟ ಗಾಯದ ಮೇಲೆ ಏನನ್ನೂ ಲೇಪಿಸಬಾರದು. ಪರಿಶುದ್ದವಾದ ಅಥವಾ ಸ್ವಚ್ಚವಾದ ಬಟ್ಟೆ, ಪ್ಯಾಡ್ ಮತ್ತು ಬ್ಯಾಂಡೇಜ್‍ನಿಂದ ಸುಟ್ಟ ಗಾಯದ ಜಾಗವನ್ನು ಮುಚ್ಚಬೇಕು. ಗಾಯಾಳುವಿಗೆ ದ್ರವ ರೂಪದ ಆಹಾರ ನೀಡಬೇಕು.

ಮೂಗಿನ ರಕ್ತ ಸ್ರಾವ : ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ತಲೆಯನ್ನು ಸ್ವಲ್ಪ ಮುಂದೆ ತಂದು ಗಾಳಿಯಾಡುವಂತೆ ಕೂರಿಸಬೇಕು. ಬಾಯಿಯಿಂದ ಉಸಿರಾಡುವಂತೆ, ಮೂಗಿನಿಂದ ಜೋರಾಗಿ ಉಸಿರು ಬಿಡದಂತೆ ತಿಳಿಸಬೇಕು. ಮೂಗಿನ ಮೇಲೆ ತಣ್ಣನೆಯ ಒತ್ತಡವನ್ನು ಹಾಕಬೇಕು. ಮೂಗಿನ ಮೃದು ಭಾಗವನ್ನು 10 ನಿಮಿಷಗಳ ಕಾಲ ಬೆರಳುಗಳೊಂದಿಗೆ ಮೃದುವಾಗಿ ಚಿವುಟಬೇಕು. ಹಣೆ, ಕತ್ತು ಮತ್ತು ಬೆನ್ನಿಗೆ ತಣ್ಣಗಿರುವುದನ್ನು ಲೇಪಿಸುವುದರಿಂದ ಸಹಕಾರಿಯಾಗುತ್ತದೆ.

ಜೇನು ನೋಣ ಕುಟುಕುವಿಕೆ : ಜೇನು ನೋಟ ಕುಟುಕಿನ ಜಾಗವನ್ನು ಒತ್ತಬಾರದು. ಚಿಮ್ಮಟ ಬಳಸಿ ಕುಟುಕಿದ ಜಾಗದಿಂದ ಮುಳ್ಳನ್ನು ತೆಗೆಯಬೇಕು. ತಣ್ಣಗಿನ ಅಥವಾ ದುರ್ಬಲ ಅಮೋನಿಯಾ ಲೇಪಿಸಬಹುದು.

ಪ್ರಾಣಿಗಳು ಕಚ್ಚುವಿಕೆ : ಪ್ರಾಣಿಗಳು ಕಚ್ಚಿದ ಜಾಗವನ್ನು ಸೋಪು ಮತ್ತು ಸಾಕಷ್ಟು ನೀರಿನಿಂದ ತೊಳಯಬೇಕು. ಸಡಿಲವಾದ ಬ್ಯಾಂಡೇಜ್‍ನನ್ನು ಹಾಕಬಹುದು. ತಕ್ಷಣ ವೈದ್ಯಕೀಯ ನೆರವು ಒದಗಿಸಬೇಕು.

ಹಾವು ಕಡಿತ : ಹಾವು ಕಡಿತಕ್ಕೆ ಒಳಗಾದ ವ್ಯಕ್ತಿ ಗಾಬರಿಯಾಗದೇ ಶಾಂತವಾಗಿರುವಂತೆ ನೋಡಿಕೊಳ್ಳಬೇಕು. ಸೋಪು ಮತ್ತು ಸಾಕಷ್ಟು ನೀರಿನಿಂದ ಕಡಿತಕ್ಕೆ ಒಳಗಾದ ಜಾಗವನ್ನು ತೊಳೆಯಬೇಕು. ಜೋರಾಗಿ ಉಜ್ಜಬಾರದು. ಕಡಿತವಾದ ಮುಖ್ಯ ಜಾಗದ ಮೇಲೆ ಕನ್ಸ್‍ಟ್ರಕ್ಟಿವ್ ಬ್ಯಾಂಡೇಜ್‍ನನ್ನು ಮೊದಲು ಹಾಕಬೇಕು(20 ನಿಮಿಷಗಳಿಗಿಂತ ಹೆಚ್ಚು ಸಮಯ ಅದನ್ನು ಸತತವಾಗಿ ಹಾಕಬಾರದು). ಗಾಯದಿಂದ ವಿಷವನ್ನು ಎಳೆಯಲು ಪ್ರಯತ್ನಿಸಬಾರದು. ತಕ್ಷಣ ಚಿಕಿತ್ಸೆ ಕೊಡಿಸಬೇಕು. ಕಚ್ಚಿದ ಹಾವು ಯಾವುದೆಂದು ಪತ್ತೆ ಮಾಡಲು ಯತ್ನಿಸಬೇಕು.

What-is-first-aid-Dos-and-Donts.ಪ್ರಜ್ಞೆ ತಪ್ಪಿದಾಗ : ವ್ಯಕ್ತಿಯನ್ನು ಮಲಗಿಸಿ ಎದೆ ಮತ್ತು ಸೊಂಟದ ಸುತ್ತವಿರುವ ಬಟ್ಟೆಯನ್ನು ಸಡಿಲಗೊಳಿಸಬೇಕು. ತಲೆಯನ್ನು ಒಂದು ಪಕ್ಕಕ್ಕೆ ವಾಲಿಸಬೇಕು. ಕಾಲುಗಳನ್ನು ಸ್ವಲ್ಪ ಎತ್ತರದಲ್ಲಿ ಇರಿಸಬಹುದು. ವ್ಯಕ್ತಿಗೆ ಯಾವುದೇ ಘನ ಅಥವಾ ದ್ರವ ರೂಪದ ಆಹಾರ ನೀಡಲು ಯತ್ನಿಸಬಾರದು. ಚೇತರಿಸಿಕೊಂಡ ಮೇಲೆ ದ್ರವ ರೂಪದ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಬಹುದು. ವ್ಯಕ್ತಿಗೆ ಕುಳಿತುಕೊಳ್ಳಲು ಅವಕಾಶ ನೀಡಿ ವಿಶ್ರಾಂತಿ ನಂತರ ಓಡಾಡುವಂತೆ ತಿಳಿಸಬೇಕು.

ಸಾಮಾನ್ಯ : ನಿಮಗೆ ಚಿಕಿತ್ಸೆ ನೀಡುವ ಬಗ್ಗೆ ಏನಾದರೂ ಅನುಮಾನವಿದ್ದರೆ ಏನನ್ನೂ ಮಾಡಬೇಡಿ. ಇದರಿಂದ ಗಾಯಾಳು ಅಥವಾ ರೋಗಿಗೆ ಇನ್ನೂ ಹೆಚ್ಚಿನ ತೊಂದರೆಯಾಗಬಹುದು.

ಇವು ಕೇವಲ ಸುಳಿವುಗಳು ಮಾತ್ರ. ನೀವು ಉತ್ತಮ ಪ್ರಥಮ ಚಿಕಿತ್ಸಕರಾಗಲು ಪ್ರಥಮ ಚಿಕಿತ್ಸೆ ಕೋರ್ಸ್‍ಗಳನ್ನು ಮಾಡಬಹುದು. ಗಾಯಾಳುವನ್ನು ಅನಗತ್ಯವಾಗಿ ಚಲಿಸುವಂತೆ ಮಾಡಬೇಡಿ. ಅವರನ್ನು ಬೆಚ್ಚಗಿಡಿ. ರೋಗ ನಿರ್ಧಾರ ಮಾಡಿ. ಚಿಕಿತ್ಸೆ ನೀಡಲು ತೀರ್ಮಾನಿಸಿ. ಪ್ರಥಮ ಚಿಕಿತ್ಸೆಯ ಮೊದಲ ಪಾಠಗಳನ್ನು ಜ್ಞಾಪಿಸಿಕೊಳ್ಳಿ. ರೋಗಿ ಅಥವಾ ಗಾಯಾಳುವಿನ ಉಸಿರಾಟದ ಮಾರ್ಗ ಸುಗಮವಾಗಿದೆಯೇ? ಅಂದರೆ ಉಸಿರಾಟ ಸಾಮಾನ್ಯವಾಗಿದೆಯೆ ಮತ್ತು ರಕ್ತ ಪರಿಚಲನೆ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.

 

 

 

 

 

 

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!