ಅಪಸ್ಮಾರ – ಕಾರಣಗಳು ಮತ್ತು ಚಿಕಿತ್ಸೆ.

ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು ಹಲವು. ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು.

ಅಪಸ್ಮಾರ - ಕಾರಣಗಳು ಮತ್ತು ಚಿಕಿತ್ಸೆ.

#ಕಾರಣಗಳು:

10 ರಲ್ಲಿ 6 ಜನ ಅಪಸ್ಮಾರ ರೋಗಿಗಳಿಗೆ ಕಾರಣವೇ ತಿಳಿದಿಲ್ಲ. ಆದರೂ ಸಾಮಾನ್ಯವಾಗಿವಾಗಿರುವ ಕಾರಣಗಳೆಂದರೆ.

ಯುವಕರಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು:

* ಆನುವಂಶಿಕ ಕಾರಣಗಳು

* ಜನನದ ಸಮಯದಲ್ಲಿ ಉಂಟಾದ ತೊಂದರೆಗಳು

* ಮೆದುಳಿಗೆ ಅಥವಾ ತಲೆಗೆ ಆಘಾತ ಉಂಟಾಗಿದ್ದರೆ

* ಮೆದುಳಿಗೆ ಸಂಬಂಧಿಸಿದ ಕಾಯಿಲೆ ಇದ್ದರೆ. ಉದಾ: ಬ್ರೇನ್ ಟ್ಯೂಮರ್, ಮೆನೆಂಜೈಟಿಸ್(ಮೆದುಳಿನ ಉರಿಯೂತ)

* ಮೆದುಳಿಗೆ ರಕ್ತಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದರೆ.

* ಅತೀಯಾದ, ನಿರಂತರ ಮಧ್ಯಪಾನ ಸೇವಿಸುವವರು, ಏಕಾಏಕಿ ಬಿಟ್ಟರೆ “ಅಪಸ್ಮಾರ ಕಾಣಿಸಿಕೊಳ್ಳಬಹುದು.

*ಅತೀಯಾದ ಔಷಧಗಳ ಸೇವನೆ. ನಿದ್ರಾಹೀನತೆಗೆ ಉಪಯೋಗಿಸುವ “ಬೆನ್ಜೋಡಯಜಪಿನ್” ಔಷಧಿ ನಿಲ್ಲಿಸಿದಾಗ ಸಹ ಅಪಸ್ಮಾರ ಗೋಚರಿಸಬಹುದು.

* ರಕ್ತದಲ್ಲಿ ಗ್ಲೊಕೋಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದರೆ.

* ನಿರ್ಜಲೀಕರಣ (Dehydration)

ವೃದ್ಧರಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣಗಳು:

* ಆಲ್ಝೈಮರ್ ಕಾಯಿಲೆ

* ಮಿದುಳಿನಲ್ಲಿ ಆದ ಗಾಯದಿಂದ

* ಲಕ್ವ ಹೊಡೆಯುವುದರಿಂದ.

ನವಜಾತ ಶಿಶುಗಳಲ್ಲಿ ಅಪಸ್ಮಾರಕ್ಕೆ ಕಾರಣಗಳು:

* ಮಗು ಜನಿಸುವ ಸಮಯದಲ್ಲಿ ಆಮ್ಲಜನಕದ ಕೊರತೆ ಉಂಟಾದರೆ ಈ ರೋಗ ಬರಬಹುದು.

* ಮಗು ಜನ್ಮವನ್ನು ಪಡೆಯುವಾಗಲೇ ಮಿದುಳಿಗೆ ಸಂಬಂಧಿಸಿದ ವಿರೂಪತೆ ಅಥವಾ ದೋಷಗಳನ್ನು ಹೊಂದಿದ್ದರೆ.

* ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗಿರುವುದರಿಂದ.

* ರಕ್ತದಲ್ಲಿ ಕ್ಯಾಲ್ಸಿಯಂ,ಮೆಗ್ನಿಷಿಯಮ್ ಪ್ರಮಾಣ ಮತ್ತು ಎಲೆಕ್ಟೋಲೈಟ್ಸ್ ಕಡಿಮೆಯಾಗಿದ್ದರೆ ಅಪಸ್ಮಾರ ಕಾಣಿಸಿಕೊಳ್ಳುವುದು.

* ಗರ್ಭಾವಸ್ಥೆಯಲ್ಲಿ ಇರುವಾಗ ತಾಯಿ ಬಳಸುವ ಔಷಧಿಗಳ ಪ್ರಭಾವದಿಂದ.

* ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದರೆ.

ಶಿಶು ಮತ್ತು ಮಕ್ಕಳಲ್ಲಿ ಅಪಸ್ಮಾರ ಕಾಣಿಸಿಕೊಳ್ಳಲು ಕಾರಣ:

ಶಿಶು ಮತ್ತು ಮಕ್ಕಳಲ್ಲೂ ಸಹ ಅಪಸ್ಮಾರ ಅಥವಾ ಮೂರ್ಛೆ ರೋಗ ಉಂಟಾಗಬಹುದು.  ಪ್ರಮುಖ ಕಾರಣಗಳು ಎಂದರೆ

* ಸೋಂಕುಗಳು

* ಬ್ರೇನ್ ಟ್ಯೂಮರ್ ಮತ್ತು ಜ್ವರ.

#ಅಪಸ್ಮಾರ_ಪತ್ತೆ_ಹೇಗೆ?

ಅಪಸ್ಮಾರ ಪತ್ತೆ ಹಚ್ಚಲು, ಖಾತ್ರಿ ಮಾಡಿಕೊಳ್ಳಲು ಕೆಲ ಪರೀಕ್ಷೆ ಮತ್ತು ಸ್ಕ್ಯಾನ್ ಗಳನ್ನ ಮಾಡಲಾಗತ್ತೆ.

* ಇ.ಇ.ಜಿ(ECG) :

ಮೆದುಳಿನ ಮೆಲ್ಮೈ ಅಂದರೆ ತಲೆ ಬುರುಡೆ ಮೇಲೆ ಎಲೆಕ್ಟ್ರೋಡ್ ಗಳನ್ನ ಅಂಟಿಸಿ ಮೆದುಳಿನ ಚಟುವಟಿಕೆಗಳನ್ನು ರೇಕಾರ್ಡ್ ಮಾಡಲಾಗತ್ತೆ. ಇಸಿಜಿ ರೆಕಾರ್ಡ್ ನ್ನು “ನರರೋಗ ತಜ್ಞ”ರು ಪರಿಶೀಲಿಸಿ ಅಸಾಮಾನ್ಯ ದೋಷಗಳನ್ನು ಪತ್ತೆ ಮಾಡುವರು.

* ಮೆದುಳಿನ ಎಂ.ಆರ್.ಆಯ್ (MRI) ಅಥವಾ ಸಿ.ಟಿ(CT) ಸ್ಕಾನ್.

ಮೆದುಳಿನಲ್ಲಿರುವ ಅಸಾಧಾರಣ ದೋಷ ಅಂದರೆ ಗಡ್ಡೆ, ಅನೈಸರ್ಗಿಕ ಬೆಳವಣಿಗೆ, ಮೆದುಳಿನ ವಿರೂಪತೆ ಮುಂತಾದವುಗಳನ್ನ ಸ್ಕ್ಯಾನ್ ನಿಂದ ಪತ್ತೆ ಮಾಡುವರು.

* ವಿಡಿಯೋ ಇ.ಇ.ಜಿ (Video EEG):

ಮೆದುಳಿನ ಮೆಲ್ಮೈನಿಂದ ಅದರ ಚಟುವಟಿಕೆಯನ್ನು ದಾಖಲಿಸಲು ನೆತ್ತಿಯ ಮೇಲೆ ಎಲೆಕ್ಟ್ರೋಡಗಳನ್ನು ಅಂಟಿಸಿ, ಡಿಟೆಕ್ಟರ್ ಮಷೀನಿಗೆ ಸಂಪರ್ಕ ಕಲ್ಪಿಸಲಾಗತ್ತೆ. ಮೂರ್ಛೆರೋಗ ಆಕ್ರಮಣ ವೇಳೆ  ರೋಗಿಯ ಚಟುವಟಿಕೆಯ ವಿಡಿಯೋ ರೆಕಾರ್ಡ್ ಜೊತೆ ಮೆದುಳಿನಲ್ಲಾಗುವ ವಿದ್ಯುತ್ ಚಟುವಟಿಕೆಗಳನ್ನು ಸೆರೆ ಹಿಡಿಯಲಾಗತ್ತೆ.

ವಿಡಿಯೋ ಜೊತೆ ಇ.ಇ.ಜಿ ತಾಳೆ ಮಾಡುವ “ನರರೋಗ ತಜ್ಞ”ರು  ಅಪಸ್ಮಾರದ ವಿಧ ಹಾಗೂ ಆಕ್ರಮಿಸಿದ ಮೆದುಳಿನ ಜಾಗವನ್ನು ಗುರುತಿಸುತ್ತಾರೆ.

#ಚಿಕಿತ್ಸೆ.

ಅಪಸ್ಮಾರ ತೊಂದರೆಗೆ ದೀರ್ಘಕಾಲದ ತನಕ ಚಿಕಿತ್ಸೆ ನೀಡಬೇಕಾಗುತ್ತೆ. ಚಿಕಿತ್ಸೆ ನಿಯಮಿತವಾಗಿದ್ದರೆ ಅಪಸ್ಮಾರ ಸಂಪೂರ್ಣ ಹತೋಟಿಯಲ್ಲಿರುವುದು.

ಔಷಧಿ: ಇಇಜಿ(EEG), ಸ್ಕ್ಯಾನ್, ಪರೀಕ್ಷೆ ಆಧರಿಸಿ,  ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ, ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಗಮನದಲ್ಲಿಟ್ಟುಕೊಂಡು, ಅವಶ್ಯಕ ಔಷದಗಳನ್ನು ಸೂಚಿಸುವರು. ಈ ಸಂದರ್ಭದಲ್ಲಿ ರೋಗಿಯಲ್ಲಿ ಇರಬಹುದಾದ ಬೇರೆ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆಯನ್ನು ನೀಡಲೇಬೇಕಾಗುವುದು.

#ಸೂಕ್ಷ್ಮ_ನ್ಯುರೋ_ಸರ್ಜರಿ: ಮೂರ್ಛೆರೋಗ ಚಿಕಿತ್ಸೆ ಸಂಕೀರ್ಣವಾದರೂ, ಸೂಕ್ಷ್ಮ ನ್ಯುರೋ ಸರ್ಜರಿ ಚಿಕಿತ್ಸಾ ವಿಧಾನಗಳಿಂದ ಸಮಸ್ಯೆಯನ್ನ ನಿವಾರಿಸಬಹುದು. ಆಯ್ಕೆ ವೈದ್ಯರಿಗೆ ಬಿಟ್ಟಿದ್ದು.

ಮೆದುಳಿನ ಅಸಾಧಾರಣ ಪ್ರದೇಶದ ಸಂಪರ್ಕ ಕಡಿತಗೊಳಿಸುವ ಅಥವಾ ಅದನ್ನು ನಿಷ್ಕ್ರೀಯಗೊಳಿಸಿ ಪರಿತ್ಯಕ್ತಗೊಳಿಸುವ ಮೂಲಕ ಕೆಲವು ರೋಗಿಗಳಲ್ಲಿ “ಸೂಕ್ಷ್ಮ ನ್ಯುರೋ ಸರ್ಜರಿ” ಕೆಲವೂಮ್ಮೆ ಸಹಾಯವಾಗುತ್ತೆ. ಇದರಿಂದ  ಅಕ್ಕಪಕ್ಕದ ಸಾಮಾನ್ಯ ಮೆದುಳಿಗೆ ಆಕ್ರಮಣಗಳು ಹಬ್ಬುವುದನ್ನು ತಡೆಗಟ್ಟಬಹುದಾಗಿದೆ.

ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಪ್ರತಿನಿತ್ಯ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸಲೇಬೇಕು. ನಿಗದಿತ ಅವಧಿಗೆ ಮುನ್ನ ಔಷದಗಳ ಪ್ರಭಾವದಿಂದಾಗಿ ತನ್ನ ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ವ್ಯಾಧಿಯು ಮತ್ತೆ ಮರುಕಳಿಸುವುದು. ಮಾತ್ರವಲ್ಲ, ಇದರಿಂದಾಗಿ ಚಿಕಿತ್ಸೆಯ ಅವಧಿಯೂ ಇನ್ನಷ್ಟು ದೀರ್ಘವಾಗುವುದು.

ಸಾಮಾನ್ಯವಾಗಿ ಎರಡರಿಂದ ಐದು ವರ್ಷಗಳ ಕಾಲ ವೈದ್ಯರು ಸೂಚಿಸಿದಂತೆ ಸೇವಿಸಲೆಬೇಕಾಗಿರುವ ಔಷದಗಳನ್ನು ಮತ್ತೆ ವೈದ್ಯರ ಸಲಹೆಯಂತೆ ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸುವುದು ನಿಶ್ಚಿತವಾಗಿಯೂ ಹಿತಕರ.

ಅಪಸ್ಮಾರದಿಂದ  ಬಳಲುತ್ತಿರುವವರಲ್ಲಿ   ಮೂರನೆಯ ಒಂದು ಭಾಗದಷ್ಟು ಜನರಿಗೆ ಅನಿಯಂತ್ರಿತ ಸೆಳೆತ ಬರುವುದರಿಂದ, ಈಗ ಲಭ್ಯವಿರುವ ಯಾವುದೇ ಚಿಕಿತ್ಸೆಯು ನಾಟುವುದಿಲ್ಲ.

Also Read:

ಅಪಸ್ಮಾರ_ಅಪಾಯಕಾರಿಯಲ್ಲ_ಮುನ್ನೆಚ್ಚರಿಕೆ_ಇರಲಿ.

dr-prakash-barki

ಡಾ. ಪ್ರಕಾಶ ಬಾರ್ಕಿ

ಕಾಗಿನೆಲೆ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!