ಆಂತರಿಕ ರೋಗ ನಿರೋಧಕ ಶಕ್ತಿ ‌-ಇದು ಭಾರತೀಯರಲ್ಲಿ  ಹೆಚ್ಚು

ಆಂತರಿಕ ರೋಗ ನಿರೋಧಕ ಶಕ್ತಿ ‌-ಇದು ಭಾರತೀಯರಲ್ಲಿ  ಹೆಚ್ಚು.ಭಾರತೀಯರ ದೇಹದಲ್ಲಿ ವಿಶೇಷ ನ್ಯಾಚರಲ್ ಕಿಲ್ಲರ್ ಸೆಲ್ಸ್ ಎಂಬ ಬಿಳಿ ರಕ್ತ ಕಣಗಳ  ಹೆಚ್ಚಿನ ದಂಡು ಇರುವುದು ಕಂಡುಬಂದಿದೆ.ಇದು ಭಾರತೀಯರಿಗೆ ನಿಸರ್ಗದ ಕೊಡುಗೆ ಎನ್ನಬಹುದು.

ಸಾಂಕ್ರಾಮಿಕ ರೋಗ ಹರಡಲು, ಅಥವಾ ಸಾಂಕ್ರಾಮಿಕ ರೋಗದ ಪರಿಣಾಮ‌ ಉಂಟುಮಾಡಲು ಮೂರು ಮುಖ್ಯ ಅಂಶಗಳು ಸಹಕಾರಿ. ಇದನ್ನು ಎಪಡೆಮಿಯಾಲಜಿಕಲ್ ಟ್ರಯಾಡ್ (Epidemiological triad) ಎಂದು ಕರೆಯಲಾಗುತ್ತದೆ.

 ಸಾಂಕ್ರಾಮಿಕ‌ ರೋಗದ ಮೂರು ಕಾರಣೀಭೂತ ಅಂಶಗಳು (ತ್ರಿಮೂರ್ತಿಗಳು)-

1. Agent- ರೋಗಕಾರಕ ಜಂತು, ಜೀವಿ

2. Host – ರೋಗದ ಪ್ರಾಣಿ (ಅತಿಥೇಯ ಪ್ರಾಣಿ)

3. Environment- ಪರಿಸರ, ವಾತಾವರಣ.

ಈ ಮೂರು ಅಂಶಗಳು ಅನೂಕಲಕರವಾಗಿದ್ದಲ್ಲಿ ರೋಗ ಉಂಟಾಗುತ್ತದೆ, ಸಾಂಕ್ರಾಮಿಕ ಹರಡುತ್ತದೆ .

1. Agent- ರೋಗಕಾರಕ ಜಂತು, ಜೀವಿ : ರೋಗದ ಏಜಂಟ್, ಕ್ರಿಮಿ, ಸೂಕ್ಷ್ಮಾಣುಜೀವಿ, ಪ್ರಸ್ತುತದಲ್ಲಿ ಕೋರೋನಾ ವೈರಸ್. ಇಲ್ಲಿ ವೈರಸ್‌ ಶಕ್ತಿ, ವೈರಸ್‌ಗಳ ರೋಗ ಉಂಟುಮಾಡುವ ಶಕ್ತಿ, ಹಲವಾರು ಅಂಶಗಳ ಮೇಲೆ‌ ಅವಲಂಭಿತ. ಅದರಲ್ಲಿ ಮುಖ್ಯವಾಗಿ ಅದರ ಬಾಹ್ಯ ಸ್ವರೂಪ ಬದಲಾಯಿಸುವ ಶಕ್ತಿ. ಮಾನವ ದೇಹ ವೈರಸ್ಗಳನ್ನು ಕೊಲ್ಲಲು ವೈರಸ್‌ನ ಬಾಹ್ಯ ಕವಚ ಗುರಿಯಾಗಿಟ್ಟು   ಪ್ರತಿಕಣಗಳನ್ನು ನಿರ್ಮಿಸುತ್ತದೆ. ಮಾನವ ಪ್ರತಿಕಣಗಳ ದಾಳಿ ಆರಂಭವಾದ ತಕ್ಷಣ ವೈರಸ್ ತನ್ನ ಬಾಹ್ಯಕವಚ ರೂಪ ಬದಲಾಯಿಸಿಬಿಡುತ್ತದೆ. ಆಗ ಪ್ರತಿ ಕಣಗಳ ಕೆಲಸ ನಡೆಯದೆ ವೈರಸ್ ರೋಗ ಉಂಟುಮಾಡುವ ಕೆಲಸ ಮುಂದುವರಿಸುತ್ತದೆ. ಹೊಸ ಬಾಹ್ಯ ಕವಚಕ್ಕೆ ಮತ್ತೆ ಪ್ರತಿಕಣಗಳ ನಿರ್ಮಿತಿ ಆರಂಭ. ಹಾಗೆಯೆ ವೈರಸ್ ದಾಳಿ ಮುಂದುವರೆಸಿ ಮನುಷ್ಯನಲ್ಲಿ ರೋಗ ಉಂಟುಮಾಡುತ್ತವೆ.

2. Host- ರೋಗದ ಪ್ರಾಣಿ (ಅತಿಥೇಯ ಪ್ರಾಣಿ ): ಅಂದರೆ ಮಾನವ ಶರೀರ, ವಯಸು, ದೇಹದ ಶಕ್ತಿ, ಪೂರ್ವಾಸ್ತಿತ್ವದ ಕಾಯಿಲೆಗಳು. ಸದ್ಯಕ್ಕೆ, ಮಧುಮೇಹ, ಬಿಪಿ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ದೇಹದ ಆಂತರಿಕ ರೋಗ ನಿರೋಧಕ ಶಕ್ತಿ ಕುಂದಿಸುವ ರೋಗಗಳು, ಔಷಧಿಗಳು (ಕ್ಯಾನ್ಸರ್, ಸ್ಟೀರಾಯ್ಡ್, ಅಂಗಾಂಗ ಕಸಿ ಮಾಡಿಸಿಕೊಂಡಿರುವವರು )

ಆಂತರಿಕ ರೋಗ ನಿರೋಧಕ ಶಕ್ತಿ ‌-ಇದು ಭಾರತೀಯರಲ್ಲಿ  ಹೆಚ್ಚು :

ದೇಹದ ಆಂತರಿಕ ನಿರೋಧಕ ಶಕ್ತಿ ಇದರಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ. ಸಮುದಾಯದ ರೋಗನಿರೋಧತೆ (Herd Immunity), (ಇದರ ಮೇಲಿನ  ನನ್ನ ಮುಂಚಿನ ಬರಹ ಓದಬಹುದು) ಹಾಗೂ ಆಂತರಿಕ ರೋಗನಿರೋಧಕ ಶಕ್ತಿ‌. ಇದು ಭಾರತೀಯರಲ್ಲಿ ತುಂಬಾ ಹೆಚ್ಚು. ಒಂದು ಹೊಸ ಸಂಶೋಧನೆಯ ಪ್ರಕಾರ : ಭಾರತೀಯರ ದೇಹದಲ್ಲಿ ವಿಶೇಷ ನ್ಯಾಚರಲ್ ಕಿಲ್ಲರ್ ಸೆಲ್ಸ್ ಎಂಬ ಬಿಳಿ ರಕ್ತ ಕಣಗಳ  ಹೆಚ್ಚಿನ ದಂಡು ಇರುವುದು ಕಂಡುಬಂದಿದೆ. ಇವು ಪ್ರತಿ ಸೋಂಕನ್ನು ಮೊದಲ ಹಂತದಲ್ಲೆ ಮಟ್ಟಹಾಕತ್ತವೆ. ಇದು ಭಾರತೀಯರಿಗೆ ನಿಸರ್ಗದ ಕೊಡುಗೆ ಎನ್ನಬಹುದು.ಇತಿಹಾಸ ಪೂರ್ವಕಾಲದಲ್ಲಿ, ಸುಮಾರು ಲಕ್ಷ ವರ್ಷಗಳ ಹಿಂದೆ ಭಾರತ  ಆಫ್ರಿಕಾದ ಭಾಗವಾಗಿತ್ತು, (ನಂತರದ ಭೂಪದರಗಳ ಸರಿದಾಡುವಿಕೆಯಿಂದ ಆಫ್ರಿಕದಿಂದ ಕಳಚಲ್ಪಟ್ಟ ಭೂಭಾಗ ಏಷಿಯಾ ಖಂಡಕ್ಕೆ ಸರಿದು ಬಂದು, ಏಷಿಯಾದ ಭಾಗವಾಯಿತು) ಹಾಗಾಗಿ ಆಫ್ರಿಕಾದ ವಿಷಮ‌ ಪರಿಸ್ಥಿತಿಗಳಲ್ಲ್ಲಿ ಬದುಕಲು ಮಾನವ ದೇಹ ನಿಧಾನವಾಗಿ ಹೊಸ ಮಾರ್ಪಾಟುಗಳನ್ನು ಹೊಂದಲಾರಂಭಿಸಿತು. ಈ ವಿಶೇಷ ವಂಶವಾಹಿನಿ ಹೊಂದಿದ ಮನುಷ್ಯರೆ ಬದುಕುಳಿದು ಮಾನವ ಸಂತತಿ ಮುಂದುವರೆಯಿತು. ‌ಇದು  ನಿಸರ್ಗದ ಆಯ್ಕೆ‌ ಎನ್ನಬಹುದು (Natural Selection). ಹೆಚ್ಚುವರಿ, ಶಕ್ತಿಶಾಲಿ “ನ್ಯಾಚುರಲ್ ಕಿಲ್ಲರ್ ಸೆಲ್ಸ್‌ಗಳು” ಭಾರತೀಯರು (ಹಾಗೂ ಆಫ್ರಿಕನ್ನರು) ಅತ್ಯಂತ ಅನಾದಿಕಾಲದ ಹಾಗೂ ಶಕ್ತಿಶಾಲಿ  ಕಣಗಳು ಪ್ರತಿ ಸೊಂಕನ್ನು ಎದುರಿಸುವ ಮೊದಲ ಪಂಕ್ತಿಯ ಸೈನಿಕರಿದ್ದಂತೆ. ಈ ಕಣಗಳನ್ನು ತಯಾರಿಸುವ ವಿಶೇಷ ವಂಶವಾಹಿಗಳು ಸದ್ಯಕ್ಕೆ ಭಾರತೀಯರಿಗೆ ನಿಸರ್ಗದ ವರದಾನವೆ‌ ಸರಿ.

ಇದರ ಜೊತೆಗೆ ಭಾರತ ಹಾಗೂ ಆಫ್ರಿಕ ಖಂಡಗಳಲ್ಲಿ ಮಲೇರಿಯಾ ಹಾಗೂ ಕ್ಷಯ ರೋಗಗಳು ಹೆಚ್ಚು. ನಮ್ಮ ದೇಹದ ಆಂತರಿಕ ರೋಗನಿರೋಧಕ ಶಕ್ತಿಯು ಈ ಕಾಯಿಲೆಗಳೊಂದಿಗೆ ಸತತ ಹೋರಾಟದಲ್ಲಿರುವದರಿಂದ ಕೊರೋನಾ ವೈರಸನ್ನು ಯಾವುದೆ ಕಷ್ಟವಿಲ್ಲದೆ ಸಾಯಿಸುವಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಹಾಗಾಗಿ ನಾವೆಲ್ಲ ಕೋರೋನಾಗೆ ಸಂಪೂರ್ಣ ನಿರೋಧಕ.

ಬಾಲ್ಯದಲ್ಲಿ ಬಿಸಿಜಿ ಚುಚ್ಚುಮದ್ದು ಹಾಕಿಸಿಕೊಂಡವರೂ ಕೋರೋನಾದ ಜೊತೆ ಹೋರಾಡಿ ಸಾಯಿಸುವ ವಿಶೇಷ ಶಕ್ತಿ ಹೊಂದಿದ್ದಾರೆ. ಹಾಗಾಗಿ ನಮ್ಮ ಮೊದಲ ಪಂಕ್ತಿಯ ಸೈನಿಕರ ಬಲವರ್ಧನೆಯ ಪುರಾವೆಗಳು ಸಾಕಷ್ಟು‌. ಭಯ ಬೇಡ .

COVID19-map
COVID19-map

3. Environment – ಪರಿಸರ, ವಾತಾವರಣ: ಸೊಂಕುಕಾರಕ ಜೀವಿ ಸೊಂಕು ಉಂಟುಮಾಡಲು ಪರಿಸರ ಹಾಗು ವಾತಾವರಣಗಳು ಅನುಕೂಲವಾಗಿದ್ದರೆ ಮಾತ್ರ ವೈರಸ್ ಬೆಳೆಯುತ್ತದೆ. ಪೂರ್ವ -ಪಶ್ಚಿಮ ಭೂಭಾಗದ, 30-50° N ಅಕ್ಷಾಂಶ ರೇಖೆಯ ನೇರದ ಚಿಕ್ಕ ಅಗಲದ ಭೂಭಾಗ ಹಾಗೂ 5 ರಿಂದ 11° ಸೆಲ್ಸಿಯಸ್ ತಾಪಮಾನದ ಸ್ಥಳಗಳಲ್ಲಿ‌ ವೈರಸ್ನ ತೀವ್ರ ಸೊಂಕು ಕಂಡುಬಂದಿದೆ. ಅಂದರೆ  ಭಾರತಕ್ಕಿಂತ ಸುಮಾರು ಮೂರು ಅಥವಾ ನಾಲ್ಕು ಪಟ್ಟು ಕಡಿಮೆ‌ ಉಷ್ಣಾಂಷದ ಸ್ಥಳಗಳಲ್ಲಿ ಕೋರೋನಾ ತುಂಬ ಶಕ್ತಿಶಾಲಿಯಾಗುತ್ತದೆ. ‌ ಭಾರತದ ವಾತಾವರಣ ಕೋರೊನಾಗೆ ತುಂಬ ಮಾರಕ .

ಒಂದು ಕಾಯಿಲೆಯ ಮೂರು ಅಂಶಗಳೂ ಸರಿಯಾಗಿದ್ದರೆ ಮಾತ್ರ ಸಾಂಕ್ರಾಮಿಕ ಅಥವಾ ರೋಗ ಬೆಳೆಯುತ್ತದೆ. ಭಾರತದಲ್ಲಿ ಇದಕ್ಕೆ ಪೂರಕವಾಗಬೇಕಾದ ಎರಡು ಮುಖ್ಯ ಅಂಶಗಳು ಸಹಕಾರಿಯಲ್ಲ, ಹಾಗಾಗಿ ಸೊಂಕು ನಮ್ಮ ದೇಶದಲ್ಲಿ ಕೊನೆಗಾಣುತ್ತದೆ. ನಮ್ಮ ದೇಹಗಳು ಕೋರೋನಾವನ್ನು ಸಾಯಿಸಿಬಿಡುತ್ತವೆ. ಈ ಮೇಲಿನ‌ ವಿವರಣೆಗೆ ಪುರಾವೆಗಳಿಗೆ ನಾವು ಕೋರೋನಾದ ಹೆಜ್ಜೆಗಳನ್ನು‌ ಹಿಂಬಾಲಿಸೋಣ‌.

 ಇಟಲಿಯಲ್ಲಿ ಮೊದಲಸೊಂಕಿತ ವ್ಯಕ್ತಿಗಳು : ಉಹಾನ್ ಪ್ರಾಂತ್ಯದಿಂದ ಇಟಲಿಯ ಮಿಲಾನ್ ನಗರಕ್ಕೆ ಬಂದಿಳಿದ ಚೈನಿಸ್ ದಂಪತಿಗಳು. ಜನವರಿ 23ಕ್ಕೆ ಅವರು ಇಟಲಿಯಲ್ಲಿ ಸೊಂಕಿನ  ಮೂಲವಾಗುತ್ತಾರೆ. ಇದರ ನಂತರದ ಕಥೆ ಹೇಳಬೇಕಾಗಿಲ್ಲ.

ಪಾಸಿಟಿವ್ ಕೇಸುಗಳು 1,01,739

– ಸಾವುಗಳು (ಕೋರೋನಾದಿಂದ) 11,591

– ರೋಗದಿಂದ ಗುಣಹೊಂದಿದವರು : 14,620

 ಜನಸಂಖ್ಯೆಯಲ್ಲಿ ವಯಸ್ಸುಗಳ ಅನುಪಾತ :

25-54 ವರ್ಷದವರು: 41.82% (ಪುರುಷರು 12,845,442 /ಮಹಿಳೆಯರು 13,183,240)

55-64 ವರ್ಷದವರು: 13.29% (ಪು 4,012,640 /ಮ 4,261,956)

65 ಕ್ಕೆ ಮೇಲ್ಪಟ್ಟವರು : 21.69% (ಪು 5,817,819 /ಮ 7,683,330)

 ಇಟಾಲಿಯ ಸಾವಿನಲ್ಲಿ ಅನುಪಾತ :

0-18 ವರ್ಷದವರು : 1.3%

19-50 ವರ್ಷದವರು :25.7%

51-70ವರ್ಷದವರು:37.3%

70ಕ್ಕೆ ಮೇಲ್ಪಟ್ಟವರು :35.7%

ಇಲ್ಲಿ ಸುಮಾರು ಅರ್ಧದಷ್ಟು ಜನ ವೃದ್ದರು ಅಂದರೆ ಕೋರೋನಾಗೆ ಸುಲಭವಾಗಿತುತ್ತಾಗುವರು. ಹಾಗಾಗಿ ಸಾವಿನ ಸಂಖ್ಯೆ ಹೆಚ್ವು . ಆಂತರಿಕ ರೋಗನಿ ರೋಧಕತೆ ಭಾರತೀಯರಿಗಿಂತ ಅತೀ ಕಡಿಮೆ.

ಇನ್ನುಭಾರತದಲ್ಲಿ ಕೋರೋನಾದ ಹೆಜ್ಜೆಗುರುತು:

ಪಾಸಿಟಿವ್ ಕೇಸುಗಳು:1251

– ಸಾವುಗಳು (ಕೋರೋನಾದಿಂದ) :32

– ರೋಗದಿಂದ ಗುಣಹೊಂದಿದವರು : 102

– ಮೊದಲ‌ ಪಾಸಿಟಿವ್ ಕೇಸು. ಉಹಾನ್ ನಲ್ಲಿ ವ್ಯಾಸಂಗ ಮಾಡುತಿದ್ದ ಕೇರಳದ ವಿದ್ಯಾರ್ಥಿ. ಭಾರತದಕ್ಕೆ ಮರಳಿದಾಗ ಮೊದಲ ಸೊಂಕಿತ ವ್ಯಕ್ತಿಯ. ವರದಿಯಾದ ದಿನ ಜನವರಿ 30. ಸುಮಾರು ಒಂದು ವಾರದ ವ್ಯತ್ಯಾಸವಷ್ಟೆ. ಜಗತ್ತಿನ ಎರಡನೆ ಅತ್ಯುತ್ತಮ ಆರೋಗ್ಯಸೇವೆಯ ರಾಷ್ಟ್ರದಲ್ಲಿ ಮಾರಣಹೋಮ. ಅಲ್ಲಿಗೆ ಹೋಲಿಕೆ‌ಮಾಡಿದರೆ ನಮ್ಮ ದೇಶದಲ್ಲಿ ಇಟಲಿಯ 25% ದಷ್ಟು ಸಾವುಗಳಿಲ್ಲ. ಸೋಂಕಿತರಿದ್ದರೂ, ಸಾವುಗಳು ಕಡಿಮೆ, ರೋಗದೊಂದಿಗೆ ಹೋರಾಡಿ ಗೆದ್ದವರು ಹೆಚ್ಚು.  ಭಾರತದ ಅಂಕಿಸಂಖ್ಯೆಗಳು ಎಲ್ಲರಿಗೂ ಗೊತ್ತು. ಇಟೆಲಿ ಇಂಡಿಯಾದ ನಡುವೆ ಅಜಗಜಾಂತರ.

ಹಾಗಾಗಿ ಭಾರತೀಯರ ಆಜನ್ಮ‌ರೋಗನಿರೋಧತೆ, ನಿಸರ್ಗದ ಕೊಟ್ಟ ಕೆಲ ವಂಶವಾಹಿಗಳು, ಹಾಗೂ ನಮ್ಮ ಅವ್ಯವಸ್ಥೆಯಿಂದ ನಮ್ಮ ದೇಹಗಳಲ್ಲಿ ಬೆಳೆದ ಸಮುದಾಯ ರೋಗ ನಿರೋಧತೆ  ಕೊರೊನಾವನ್ನು ಸಾಯಿಸುತ್ತಿದೆ. ಭಯಬೇಡ ಧೈರ್ಯವಿರಲಿ.

(ಅಂಕಿ ಸಂಖ್ಯೆಗಳು ದಿನಾಂಕ 31.03.2020  10:00 ಗಂಟೆಗೆ. ಕರೋನಾ ಲಾಕ್‌ಡೌನ್‌ ನಡುವೆ ಆಹಾರ ಇಲ್ಲದೆ ಹಾಗೂ ಇತರೆ ಕಾರಣಗಳಿಗಾಗಿ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಮದ್ಯದಂಗಡಿ ತೆರೆಯಲು ಕೇರಳ ಮತ್ತು ಉತ್ತರಭಾರತದ ಕೆಲವೆಡೆ ಆತ್ಮಹತ್ಯೆಮಾಡಿದ ಮೂರ್ನಾಲ್ಕು ಪ್ರಕರಣಗಳು ವರದಿಯಾಗಿವೆ. ಕರೋನಾಗಿಂತಲೂ ಕರೋನಾದ ಭಯವೇ ಜನರನ್ನು ಸಾಯಿಸುತ್ತಿವೆ…!?)

Dr-Salim-Nadafa

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!