ದಿನ ಒಂದು ಬಾದಾಮಿ ತಿನ್ನಿ ….. ಆರೋಗ್ಯ ಕಾಪಾಡಿ.

ಬಾದಾಮಿ ತಿನ್ನಿ ಆರೋಗ್ಯ ಕಾಪಾಡಿ. ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು. ನಾವು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ  ತಿನ್ನುವ ಆಹಾರದಲ್ಲಿಯೂ ಸಮತೋಲನ ಕಾಪಾಡಿಕೊಳ್ಳಬೇಕು.

ಅಧಿಕ ಪ್ರಮಾಣದ ರಸಾಯನಿಕಗಳನ್ನು ಬಳಸಿ ಇಂದು ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಿಂದ ಬೆಳೆಯುವ ಆಹಾರ ಪದಾರ್ಥಗಳ ಸತ್ವ ಕುಂದಿ ಹೋಗಿರುತ್ತದೆ. ನಾವು ಹಾಗೂ ಮಕ್ಕಳು ತಿನ್ನುವ ಆಹಾರ ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರೊಟೀನ್, ವಿಟಮಿನ್ ಹಾಗೂ ಮಿನರಲ್ಸ್ ಗಳನ್ನು ಪೂರೈಸುವುದಿಲ್ಲ. ಹೀಗಾಗಿ ತಿನ್ನುವ ಆಹಾರದದಲ್ಲಿ ಎಷ್ಟು ಶಕ್ತಿ ಇದೆ, ಯಾವ ಆಹಾರ ತಿಂದರೆ ಎಷ್ಟು ಪೋಷಕಾಂಶಗಳು ಲಭ್ಯ ಎನ್ನುವುದನ್ನುಮನದಟ್ಟು ಮಾಡಿಕೊಳ್ಳಬೇಕಾಗಿದೆ. ಅಂಥ ಅತ್ಯಧಿಕ ಪೋಷಕಾಂಶ ಹಾಗೂ ಹೇರಳವಾಗಿ ವಿಟಮಿನ್ ಸಿಗುವ ಪದಾರ್ಥ ಬಾದಾಮಿ.

ಬಾದಾಮಿ ಸ್ವಾಭಾವಿಕವಾಗಿ ಅತಿ ಹೆಚ್ಚಿನ ಪ್ರಮಾಣದ ಪೌಷ್ಠಿಕಾಂಶ ಪೂರೈಸುವ ತಿನಿಸು. ಇದರಲ್ಲಿ ಕಡಿಮೆ ಪ್ರಮಾಣದ ಕೊಲೆಸ್ಟ್ಟಾಲ್ ಇರುವುದರಿಂದ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಹಸಿ ಬಾದಾಮಿಯನ್ನು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯಾದರೂ ತಿನ್ನಬಹುದು. ನೆನೆಸಿ ತಿಂದರೆ ತುಂಬಾ ಒಳ್ಳೆಯದು.ಹೇಗೆ ತಿಂದರೂ ಬಾದಾಮಿ ರುಚಿಕರ ಹಾಗೂ ಆರೋಗ್ಯಕರ. ಬಾದಾಮಿ ನಾಲಿಗೆಗೆ ರುಚಿಕರ ಮತ್ತು ದೇಹಾರೋಗ್ಯಕ್ಕೆ ಹಿತಕರ. ಮೆದುಳು ಆರೋಗ್ಯ ವೃದ್ಧಿ, ಮೂಳೆ ಬಲವರ್ಧನೆ, ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಮಲಬದ್ದತೆ ನಿವಾರಣೆಗೆ ಇದು ಸಹಕಾರಿ.

ದಿನಕ್ಕೊಂದು ಬಾದಾಮಿ ತಿಂದ್ರೆ  ಸ್ವಾಸ್ಥ್ಯ, ಸೌಂದರ್ಯ ವರ್ಧನೆಗೆ ಸಹಕಾರಿ. ಅಲ್‌ಮಂಡ್ ಅಥವಾ ಬಾದಾಮಿ ಇದನ್ನು ಕಿಂಗ್ ಆಫ್ ಡ್ರೈ ಫ್ರೂಟ್ಸ್ ಎನ್ನುತ್ತಾರೆ. ರುಚಿ-ಆರೋಗ್ಯ-ಸೌಂದರ್ಯವರ್ಧನೆ ಈ ಮೂರು ಪ್ರಮುಖ ಅಂಶಗಳ ಅಪರೂಪದ ಸಂಯೋಜನೆ ಇದು. ಇದು ನಿಜಕ್ಕೂ ಶುಷ್ಕಫಲಗಳ ರಾಜ. ವಿಶ್ವಕ್ಕೆ ಪರಿಚಿತವಾದ ಅತ್ಯಂತ ಹಳೆಯ ಶುಷ್ಕಫಲಗಳಲ್ಲಿ ಇದು ಕೂಡ ಒಂದು. ಇರಾನ್, ಸೌದಿ ಅರೇಬಿಯಾ, ಲೆಬನಾನ್, ಟರ್ಕಿ, ಸಿರಿಯಾ, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ಮುಖ್ಯವಾಗಿ ಇದು ಕಂಡುಬರುತ್ತವೆ. ಇದು ಮುಸ್ಲಿಂ ಸಮುದಾಯದವರಿಗೆ ಪವಿತ್ರ ಆಹಾರ. ಜೊತೆಗೆ ಎಲ್ಲ ಧರ್ಮದವರಿಗೂ ಪ್ರಿಯವಾದ ಕಾಯಿ ಇದು. ಇದು ಹಲವಾರು ರೀತಿಯ ಪ್ರಯೋಜನವನ್ನು ನೀಡುತ್ತದೆ .

  • ಬಾದಾಮಿಯಲ್ಲಿ ಅನೇಕ ಪೌಷ್ಠಿಕಾಂಶಗಳ ಮೂಲಗಳಿದ್ದು, ಮೆದುಳಿನ ವಿಕಾಸ ಮತ್ತು ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ. ಇದರಲ್ಲಿ ಮೆದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್-ಕಾರಿಟೈನ್ ಎಂಬ ಪೌಷ್ಠಿಕಾಂಶಗಳಿವೆ.
  • ಇದು ಮೆದುಳಿನಲ್ಲಿರುವ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ. ಇದರಿಂದ ಅಲ್‌ಝೆಮೈರ್ ರೋಗದ ಸಾಧ್ಯತೆಯನ್ನು ತಡೆಗಟ್ಟುತ್ತದೆ. ಇದರಲ್ಲಿನ ತೈಲವು (ಬಾದಾಮಿ ತೈಲ) ದೇಹದ ಸಮಗ್ರ ಆರೋಗ್ಯ ರಕ್ಷಣೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಪ್ರಯೋಜನಕಾರಿ.
  • ಬಾದಾಮಿ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ ಸಾಧ್ಯ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಆರೋಗ್ಯಕರ ಕೊಲೆಸ್ಟರಾಲ್ ಅಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್‌ಗಳು-ಎಚ್‌ಡಿಎಲ್ ಹೆಚ್ಚಳಕ್ಕೆ ನೆರವಾಗುತ್ತದೆ. ಇದೇ ವೇಳೆ ಹಾನಿಕರ ಕೊಲೆಸ್ಟರಾಲ್ ಅಂದರೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್‌ಗಳು ಎಲ್‌ಡಿಎಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಮತೋಲನವು ಆರೋಗ್ಯಕರ ಕೊಲೆಸ್ಟರಾಲ್ ಮಟ್ಟಕ್ಕೆ ಅತಿ ಮುಖ್ಯ, ಎಲ್‌ಡಿಎಲ್ ಎಂಬ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ದೇಹದಲ್ಲಿ ಕಡಿಮೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಸದಾ ತುಂಬಾ ಒಳ್ಳೆಯದು.
  • ಬಾದಾಮಿಯಲ್ಲಿ ಅನೇಕಾನೇಕ ಜೀವಸತ್ವಗಳು ಮತ್ತು ಖನಿಜಗಳ ಮೂಲಗಳಿವೆ. ಇದರಲ್ಲಿ ಫಾಸ್ಫರಸ್ ಹೇರಳವಾಗಿದೆ. ಇವೆಲ್ಲವೂ ಮೂಳೆ ಮತ್ತು ಹಲ್ಲುಗಳನ್ನು ಸದೃಢಗೊಳಿಸಿ, ದೀರ್ಘಬಾಳಿಕೆಗೆ ನೆರವಾಗುತ್ತದೆ. ಆಸ್ಟಿಯೋಪೊರೊಸಿಸ್‌ನಂಥ ವಯೋಮಾನ ಸಂಬಂಧಿತ ಟೊಳ್ಳು ಮೂಳೆ ರೋಗ ಅಥವಾ ಮೃದು ಎಲುಬು ಸಮಸ್ಯೆಯನ್ನು ಸಹ ತಡೆಗಟ್ಟಲು ಸಹಕಾರಿ.
  • ಬಾದಾಮಿಯಲ್ಲಿ ನಾರಿನಂಶ ಸಮೃದ್ಧವಾಗಿದೆ. ಇತರ ಫೈಬರ್ ಸಮೃದ್ಧ ಆಹಾರಗಳಂತೆ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಆದಾಗ್ಯೂ ಬಾದಾಮಿ ಬೀಜಗಳನ್ನು ಸೇವಿಸಿದಾಗ ಸಾಕಷ್ಟು ನೀರು ಕುಡಿಯಬೇಕು. ಇದರಿಂದ ಪಚನ ಪ್ರಕ್ರಿಯೆ ಕ್ಷಿಪ್ರಗೊಳ್ಳುತ್ತದೆ ಹಾಗೂ ಬೀಜದ ಆರೋಗ್ಯಕರ ಪ್ರಯೋಜನವು ದೇಹಕ್ಕೆ ದಕ್ಕಲು ಸಹಾಯ ಮಾಡುತ್ತದೆ. 2 ರಿಂದ 3 ಬಾದಾಮಿ ಬೀಜಗಳನ್ನು ತಿಂದರೆ ಜೀರ್ಣ ಕ್ರಿಯೆಗೆ ನೆರವಾಗುತ್ತದೆ.
  • ಇದು ಅದ್ಭುತ ಪಥ್ಯಾಹಾರವೂ ಹೌದು.  ಬಾದಾಮಿಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಸೇವಿಸಿದಾಗ ರೊಮ್ಯಾಂಟಿಕ್ ಮೂಡ್ ಹೆಚ್ಚಾಗುತ್ತದೆ.
  • ವಿಶೇಷವಾಗಿ ಸಿಹಿ ತಿಂಡಿಗಳ ಸ್ವಾದವನ್ನು ಇಮ್ಮಡಿಗೊಳಿಸುತ್ತದೆ. ರುಚಿಕರ ಮತ್ತು ಸ್ವಾದಿಷ್ಟವಾಗಿರುವ ಬಾದಾಮಿ ಅಧಿಕ ಪೌಷ್ಠಿಕಾಂಶಗಳ ಗುಣಗಳನ್ನು ಹೊಂದಿದೆ. ಇದು ವಿಟಮಿನ್ ಇ, ಕ್ಯಾಲ್ಷಿಯಂ, ಫಾಸ್ಫರಸ್, ಕಬ್ಬಿಣ ಮತ್ತು ಮ್ಯಾಗ್ನಿಷಿಯಂನಿಂದ ಸಮೃದ್ಧವಾಗಿದೆ. ಇದರಲ್ಲಿ ಸತು, ಸೆಲೆನಿಯಂ, ತಾಮ್ರ ಮತ್ತು ನಿಯಾಸಿನ್ ಸಹ ಇದೆ. ಇತರೆ ಎಲ್ಲ ಶುಷ್ಕಫಲಗಳು ಮತ್ತು ಬೀಜ-ಕಾಯಿಗಳಿಗೆ ಹೋಲಿಸಿದಲ್ಲಿ ಪೋಷಕಾಂಶಗಳು ಮತ್ತು ಪ್ರಯೋಜನಕಾರಿ ಅಂಶಗಳು ಹೆಚ್ಚಾಗಿರುವುದು ಬಾದಾಮಿಯಲ್ಲೇ.
  • ಬಾದಾಮಿ ಒಂದು ಅದ್ಭುತ ಸೌಂದರ್ಯವರ್ಧಕ. ಬಹು ಹಿಂದಿನಿಂದಲೂ ಇದನ್ನು ಚರ್ಮ,ತ್ವಚೆ ರಕ್ಷಣೆ, ಕೂದಲ ಆರೈಕೆಗೆ ಬಳಸಲಾಗುತ್ತಿದೆ. ಅನೇಕ ಪ್ರಸಿದ್ಧ ಕಂಪನಿಗಳು ತನ್ನ ಬ್ರಾಂಡ್ ಹೆಸರಿನಲ್ಲಿ ಸೋಪು, ಶಾಂಪೂ, ಹೇರ್ ಆಯಿಲ್, ಫೇಸ್‌ಪ್ಯಾಕ್ ಇತ್ಯಾದಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು. ಅಪಾರ ಬೇಡಿಕೆ ಇದೆ.

ಈ ಒಂದು ಬಾದಾಮಿಯ ಬೀಜ ಎಷ್ಟೆಲ್ಲ ಆರೋಗ್ಯಕ್ಕೆ ರಾಮಾಬಾಣವಾಗಿದೆ ನೀವು ತಿನ್ನಿ ಆರೋಗ್ಯ ಕಾಪಾಡಿ.

 

ನೀವು ಇಲ್ಲಿ ಬಾದಾಮ್ ಅನ್ನು ಖರೀದಿಸಬಹುದು

https://amzn.to/2Abnv4E

ನೀವು ಇಲ್ಲಿ ಬಾದಾಮ್ ಎಣ್ಣೆಯನ್ನು ಖರೀದಿಸಬಹುದು

https://amzn.to/2OhXovR

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!