ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ

ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ ಸಾಧ್ಯ. ಇಂದು ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ.  ಇದನ್ನು ಕಡಿಮೆಮಾಡಿಕೊಳ್ಳಲು ನಾವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯಕ.

ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರನಮ್ಮ ದೇಹವು ಯಾವೊಂದು ಆಹಾರವನ್ನು ಅಥವಾ ವಸ್ತುವನ್ನು ವಿಷವೆಂದು ಭಾವಿಸಿ ಅಲ್ಲದೇ ಪರಕೀಯವೆಂದು ಭಾವಿಸುವುದೋ ಅದಕ್ಕೆ ಕೂಡಲೇ ಪ್ರತಿಕ್ರಿಯಿಸುತ್ತದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೇ ಇರುವಾಗ ಅದು ಅಲರ್ಜಿಯಾಗಿ ಪರಿಣಮಿಸಬಹುದು. ಅಲರ್ಜಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಗಂಟಲು ಉರಿ, ತುರಿಕೆ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಇವೆಲ್ಲವುಗಳನ್ನು ಹತೋಟಿಗೆ ತರಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ರೋಗನಿರೊಧಕ ಶಕ್ತಿ ಹೆಚ್ಚಾದಾಗ ದೇಹವು ಇವುಗಳು ಬಾರದಂತೆ, ಬಂದರೆ ಅದನ್ನು ಹೆಚ್ಚಾಗದಂತೆ ತಡೆಯಲು ಕಾರಣವಾಗುತ್ತದೆ.

ಶೀತ, ನೆಗಡಿ, ಉಸಿರಾಟಕ್ಕೆ ತೊಂದರೆ ಆಗುವಂತದ್ದು. ಇಂತಹ ಅಲರ್ಜಿಗಳಿಗೆ ಅಲರ್ಜಿಕ್ ರೈನೈಟಿಸ್ ಎಂದು ಕರೆಯುತ್ತಾರೆ. ಇದರಲ್ಲಿ ಎರಡು ವಿಧಗಳಿವೆ.ಮೊದಲನೆಯದು ಬದಲಾದ ವಾತಾವರಣದ ಪ್ರಭಾವದಿಂದ ಬರುವಂತದ್ದು. ಇದಕ್ಕೆ ಸೀಸನಲ್ ರೈನೈಟಿಸ್ ಎಂದು ಕರೆಯಲಾಗುತ್ತದೆ.ಎರಡನೇಯದು ಯಾವಾಗಲು, ಪದೇ ಪದೇ ಕಾಡುವಂತದ್ದು. ಅದಕ್ಕೆ ಯಾವಾಗಲೂ ಕಾಡುವ ರೈನೈಟಿಸ್ ಎಂದು ಕರೆಯಲಾಗುತ್ತದೆ. ಮೂಗು ಸೋರುವಂತದ್ದು, ಪದೇ ಪದೇ ಸೀನು ಬರುವಂತದ್ದು, ಉಸಿರಾಡಲು ಕಷ್ಟ ಆಗುವಂತದ್ದು ಹೀಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.

ಸುಲಭವಾಗಿ ಈ ಅಲರ್ಜಿಯನ್ನು ಕಡಿಮೆಮಾಡಿಕೊಳ್ಳಲು ನಾವು ಮನೆಯಲ್ಲಿಯೇ ಅನುಸರಿಸಬಹುದಾದ ಕ್ರಮಗಳ ಬಗೆಗೆ ಗಮನಹರಿಸಿದಾಗ, ಮೊದಲು ಜೀವನಪದ್ಧತಿಯನ್ನು ಬದಲಿಸಿಕೊಳ್ಳಬೇಕು. ಜೀವನ ಪದ್ಧತಿಯ ಬದಲಾವಣೆಯಿಂದ ಮಾತ್ರ ದೀರ್ಘಕಾಲದ ಪರಿಹಾರ ದೊರೆಯುತ್ತದೆ.

1.ಮೊಟ್ಟಮೊದಲಿನದಾಗಿ ಯಾವುದರಿಂದ ಅಲರ್ಜಿ ಉಂಟಾಗುತ್ತದೆ ಎಂಬುದನ್ನು ಕಂಡುಹಿಡಿಯಬೇಕು. ಅದನ್ನು ತ್ಯಜಿಸುವುದು ಉತ್ತಮ.

2.ಆಹಾರದ ಬದಲಾವಣೆ ಅತ್ಯಗತ್ಯ.ಯಾವುದೇ ರೀತಿಯ ಆಹಾರದಿಂದ ಇರಬಹುದು, ಧೂಳಿನಿಂದ ಇರಬಹುದು, ಮನೆಯಲ್ಲಿನ ಯಾವುದೇ ಸಾಕುಪ್ರಾಣಿಯ ಹತ್ತಿರದ ಸಂಪರ್ಕದಿಂದ ಇರಬಹುದು, ಅದನ್ನು ಗಮನಿಸಿ ಅದರಿಂದ ದೂರವಿರುವುದು ಒಳಿತು.

3.ಕರಿದ ಆಹಾರ ಬಹಳ ಅಪಾಯ. ಅಂತೆಯೇ ಬಿಸಿ ಮಾಡಿದ ಎಣ್ಣೆಯೂ ಸಹ ಹೆಚ್ಚು ತೊಂದರೆಯನ್ನುಂಟುಮಾಡುತ್ತದೆ. ಸಂಸ್ಕರಿತ ಎಣ್ಣೆಯ ಬಳಕೆ ಕಡಿಮೆ ಮಾಡಬೇಕು.

4.ಬೇಕರಿಯ ಆಹಾರ ಪದಾರ್ಥ ಹಾಗೂ ಸಂಸ್ಕರಣೆಗೊಂಡ ಆಹಾರವನ್ನು ಸೇವಿಸದಿರುವುದು ಒಳಿತು. ಇವೆಲ್ಲವುಗಳು ಅಲರ್ಜಿಯನ್ನು ಉಲ್ಬಣಗೊಳಿಸುವ ಪರಿಣಾಮವನ್ನು ನೀಡುತ್ತದೆ.

5.ಒಮೆಗಾ-6 ಅಂಶವನ್ನು ಹೊಂದಿರುವ ಆಹಾರ ಪದಾರ್ಥವನ್ನು ಕಡಿಮೆಮಾಡಿ ಒಮೆಗಾ-3 ಪೋಷಕಾಂಶ ಹೊಂದಿರುವ ಆಹಾರವನ್ನು ತೆಗೆದುಕೊಳ್ಳಬೇಕು.

6.ವಿಟಮಿನ್ ‘ಸಿ’ ಜೀವಸತ್ವ ಹೊಂದಿರುವ ಆಹಾರಗಳಾದ ಸೀಬೆಹಣ್ಣು, ನಿಂಬೆಹಣ್ಣು, ಮೂಸಂಬಿ, ಕಿತ್ತಳೆಹಣ್ಣು ಇವುಗಳನ್ನು ಹೆಚ್ಚು ಸೇವಿಸಬೇಕು. ಅದರಲ್ಲೂ ಪೇರಲೆಹಣ್ಣು ಅಲರ್ಜಿಯ ವಿರುದ್ಧ ಹೋರಾಡುವ ವಿಶೇಷ ಸಾಮಥ್ರ್ಯವನ್ನು ಹೊಂದಿದೆ.

7.ಧೂಮಪಾನ, ಮದ್ಯಪಾನದ ಸೇವನೆಯಿದ್ದಲ್ಲಿ ಅದನ್ನು ತ್ಯಜಿಸುವುದು ಉತ್ತಮ. ಕಾರಣ ಈ ದುಶ್ಚಟಗಳು ಅಲರ್ಜಿಯನ್ನು ಉತ್ತೇಜಿಸುತ್ತದೆ.

8.ಆಹಾರಪದ್ಧತಿಯಲ್ಲಿ, ಕೆಲವೊಂದು ಬಾರಿ ಕೆಲವರಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ಅಲರ್ಜಿ ಹೆಚ್ಚಾಗುತ್ತದೆ. ಅದನ್ನು ಆ ನಿರ್ದಿಷ್ಟ ಸಮಯದಲ್ಲಿ ಸೇವಿಸದಿರುವುದು ಒಳಿತು.

9.ಒಂದು ವಾರ ತಪಸ್ಸಿನಂತೆ ನೈಸರ್ಗಿಕ ಆಹಾರವೊಂದನ್ನೇ (ಹಣ್ಣು, ಹಂಪಲುಗಳು, ನಟ್ಸ್‍ಗಳು, ಹಸಿತರಕಾರಿಗಳು, ಹಸಿರುಸೊಪ್ಪುಗಳು, ಮೊಳಕೆಕಾಳುಗಳು, ಸಲಾಡ್, ಜ್ಯೂಸ್ ಇತ್ಯಾದಿ) ಸೇವಿಸಿ ದೇಹವನ್ನು ನಿಯಂತ್ರಿಸಿಕೊಳ್ಳಬೇಕು. ಅಲರ್ಜಿಯನ್ನು ಕಡಿಮೆ ಮಾಡಲು ಇದು ಸಹಾಯಮಾಡುತ್ತದೆ.

10.ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವನ್ನು ಕಡಿಮೆಮಾಡಿದಾಗ ಇದು ಅಲರ್ಜಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳು ಬಹಳ ಸಹಕಾರಿ:

1. ಏರೋಬಿಕ್ಸ್ ವ್ಯಾಯಾಮ, ವೇಗ ನಡಿಗೆಯು ಅಲರ್ಜಿಯನ್ನು ಕಡಿಮೆ ಮಾಡಲು ಸಹಕಾರಿ. ಜೊತೆಯಲ್ಲಿ ಪ್ರಕೃತಿ ಚಿಕಿತ್ಸೆಗಳಾದ ಜಲನೇತಿ, ಸೂತ್ರನೇತಿ, ಉಗಿಚಿಕಿತ್ಸೆ, ಹೈಡ್ರೋಥೆರಪಿ, ಬಿಸಿನೀರಿನಲ್ಲಿ ಕಾಲಿಟ್ಟುಕೊಳ್ಳುವುದು ಇವುಗಳು ಪರಿಣಾಮಕಾರಿ. ಪ್ರಾಣಾಯಾಮಗಳು (ಸೂರ್ಯಬೇಧನ ಪ್ರಾಣಾಯಾಮ ಇತ್ಯಾದಿ), ಸೂರ್ಯನಮಸ್ಕಾರ ಮಾಡುವುದು ಬಹಳ ಸಹಕಾರಿ.

2. ಅಂತೆಯೇ ಮನೆಯಲ್ಲಿ ದೊರೆಯುವ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕಾಳುಮೆಣಸಿನ ಪುಡಿ ಇವೆಲ್ಲವುಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಪದಾರ್ಥಗಳಲ್ಲಿ ಹೆಚ್ಚೆಚ್ಚು ಬಳಸುತ್ತ ಬಂದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಯಲ್ಲಿ ಅಲರ್ಜಿಗಳು ಕಡಿಮೆಯಾಗುತ್ತದೆ.

3. ಶುಂಠಿ ಕಷಾಯ, ತುಳಸಿ ಕಷಾಯ ಒಳ್ಳೆಯದು.

ಈ ಎಲ್ಲವುಗಳನ್ನು ಸರಿಯಾಗಿ ಅನುಸರಿಸಿದಲ್ಲಿ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಈ ಅಲರ್ಜಿಗಳನ್ನು ಕಡಿಮೆ ಮಾಡಲು ಅವಸರ ಮಾಡಿದರೆ ಅದರಿಂದ ದೀರ್ಘಕಾಲ ಪರಿಹಾರ ಸಾಧ್ಯವಾಗದು. ಈ ಎಲ್ಲ ಉಪಾಯಗಳಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಅಲರ್ಜಿಯೊಂದಿಗೆ ಹೋರಾಡುವ ಸಾಮಥ್ರ್ಯವನ್ನು ವೃದ್ಧಿಸಿಕೊಂಡು ಸ್ವಸ್ಥ ಆರೋಗ್ಯವನ್ನು ಪಡೆಯೋಣ.

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!