ಆಹಾರ ಅಭ್ಯಾಸಗಳು ಮತ್ತು ಆರೋಗ್ಯ

ಆಹಾರ ಅಭ್ಯಾಸಗಳು ಮತ್ತು ಉತ್ತಮ ಆರೋಗ್ಯದೀರ್ಘ, ಆರೋಗ್ಯಕರ ಜೀವನ ನಡೆಸುವುದಕ್ಕಾಗಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸುವುದಾದರೆ,  ಬದುಕಿನ ಪ್ರತಿದಿನವೂ ಸಕಾರಾತ್ಮಕ ಆಹಾರ ಅಭ್ಯಾಸಗಳ ಬಗ್ಗೆ ಜಾಗೃತರಾಗಿರುವುದರ ಕಡೆ ಗಮನಹರಿಸಿ.ಆಹಾರವು ಪ್ರತಿಯೊಬ್ಬರಿಗೂ ತುಂಬಾ ಮುಖ್ಯವಾಗಿರುತ್ತದೆ. ನಾವು ವೈವಿಧ್ಯಮಯ ಅಹಾರಗಳನ್ನು ಸೇವಿಸಿರುತ್ತೇವೆ ಹಾಗೂ ಕೆಲವೊಮ್ಮೆ  ಸಭೆ-ಸಮಾರಂಭಗಳಲ್ಲಿ ನಮಗೆ ಅಧಿಕ ಆಹಾರವನ್ನು ಉಣಬಡಿಸಲಾಗುತ್ತದೆ ಅಥವಾ ನಾವು ಹೆಚ್ಚಾಗಿ ಆಹಾರವನ್ನು ತಿನ್ನುತ್ತೇವೆ. ‘ಅತಿಥಿ ದೇವೋ ಭವ:’ (ಅತಿಥಿಯನ್ನು ದೇವರಂತೆ ಕಾಣು) ಎಂಬ ವೇದವಾಕ್ಯವನ್ನು ಬಹಳ ಪುರಾತನ ಕಾಲದಿಂದಲೂ ನಮ್ಮ ಸಂಪ್ರದಾಯದಲ್ಲಿ ಅನುಸರಿಸಲಾಗುತ್ತಿದೆ.

ಕೆಲವೊಮ್ಮೆ ಅತಿಥಿಗಳನ್ನು ಸತ್ಕರಿಸುವವರು ತಮ್ಮ ಅತಿಥಿಗಳ ಊಟೋಪಚಾರದಲ್ಲಿ ತುಂಬಾ ಉದಾರತೆ ತೋರುವ ಮೂಲಕ ಉಪಚಾರದ ಕೊರತೆಯನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಸಭೆ ಸಮಾರಂಭಗಳಲ್ಲಿ ಹಾಗೂ ಔತಣಕೂಟಗಳಲ್ಲಿ ನಾವು ಪರಸ್ಪರ ಒಬ್ಬರನ್ನೊಬ್ಬರು ಚೆನ್ನಾಗಿ ಪರಿಚಿತವಾಗಲು ವೇದಿಕೆ ಕಲ್ಪಿಸುತ್ತದೆ. ನಾವು ಮನೆಯಲ್ಲಾಗಲಿ, ಹೋಟೆಲ್-ರೆಸ್ಟೋರೆಂಟ್‍ಗಳಲ್ಲಾಗಲಿ ಅಥವಾ ಔತಣಕೂಟಗಳಲ್ಲಾಗಲಿ ಆಹಾರದ ಮೇಜಿನ ಮುಂದೆ ಹೆಚ್ಚು ಹೊತ್ತು ಕಳೆದಷ್ಟು ಅಧಿಕ ಪ್ರಮಾಣದ ಆಹಾರಗಳನ್ನು ಸೇವಿಸುವ ಸಾಧ್ಯತೆ ಇರುತ್ತದೆ ಹಾಗೂ ಇದು ಬೊಜ್ಜು ಅಥವಾ ಸ್ಥೂಲಕಾಯಕ್ಕೆ ಎಡೆ ಮಾಡಿಕೊಡುತ್ತದೆ. ಅತಿಥಿ ಸತ್ಕಾರ ಮಡುವವರು ತೋರುವ ಉದಾರ ಮತ್ತು ಉಪಚಾರಗಳ ಒಟ್ಟು ಮೊತ್ತವು ಮುಂದೆ ಜೀವನದಲ್ಲಿ ಅನಾನುಕೂಲತೆಗೆ ಕಾರಣವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ಏನು ತಿನ್ನುತ್ತೇವೆ, ನಾವು ಹೇಗೆ ತಿನ್ನುತ್ತೇವೆ ಹಾಗೂ ಯಾವಾಗ ತಿನ್ನುತ್ತೇವೆ? ಎಂಬ ಬಗ್ಗೆ ಜಾಗರೂಕತೆ ವಹಿಸಬೇಕಾಗುತ್ತದೆ.   ಆದರೆ ಒಂದು ನಿರಂತರತೆಯ ಆಧಾರದ ಮೇಲೆ ನಮ್ಮ ಆಹಾರ ಅಭ್ಯಾಸಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ !ಆಹಾರ ಅಭ್ಯಾಸಗಳು ಮತ್ತು ಉತ್ತಮ ಆರೋಗ್ಯ

ಸುಲಭವಾಗಿ ಜೀರ್ಣವಾಗುವ, ಸಮೀಕರಣವಾಗುವ ಹಾಗೂ ವಿಸರ್ಜನೆಯಾಗುವ ವಿವಿಧ ಆಹಾರಗಳನ್ನು ಹೇಗೆ ಸಂಯೋಜನೆ ಮಾಡಬೇಕು ಎಂಬುದು ನಮಗೆ ತಿಳಿದಿಲ್ಲ. ಆಹಾರ ಪದಾರ್ಥಗಳು ಪೋಷಕಾಂಶದ ಕಚ್ಚಾ ವಸ್ತುಗಳಾಗಿರುತ್ತವೆ.

ಸಂಯೋಜನೆ ಮತ್ತು ಉಗಮ ಮೂಲಕ್ಕೆ ಅನುಗುಣವಾಗಿ ಗುಣಲಕ್ಷಣ ಮತ್ತು ಗುಣಮಟ್ಟದಲ್ಲಿ ವ್ಯಾಪಕವಾಗಿ ಬದಲಾವಣೆ ಹೊಂದಿರುತ್ತವೆ. ಇಂಥ ವ್ಯತ್ಯಾಸಗಳ ಆಧಾರದ ಮೇಲೆ ನಾವು ಅಹಾರವನ್ನು ಪ್ರೊಟೀನ್‍ಗಳು, ಪಿಷ್ಟಗಳು, ಕೊಬ್ಬುಗಳು, ಆಮ್ಲ ಹಣ್ಣುಗಳು, ಉಪ-ಆಮ್ಲ ಹಣ್ಣುಗಳು, ಪಿಷ್ಟ ರಹಿತ, ಸೊಪ್ಪುಗಳು ಮತ್ತು ಕಲ್ಲಂಗಡಿಗಳಾಗಿ ವರ್ಗೀಕರಣ ಮಾಡಬಹುದು.

ಪ್ರೊಟೀನ್‍ಗಳು : ಪ್ರೊಟೀನ್‍ಯುಕ್ತ ಆಹಾರಗಳು ತಮ್ಮ ಸಂಯೋಜನೆಯಲ್ಲಿ ಅಧಿಕ ಶೇಕಡವಾರು ಪ್ರೊಟೀನ್‍ಗಳನ್ನು ಹೊಂದಿರುತ್ತವೆ. ಉದಾಹರಣೆಗೆ ಬೀಜಗಳು, ಧಾನ್ಯಗಳು, ಒಣ ಹುರುಳಿಗಳು ಮತ್ತು ಬಟಾಣಿಗಳು, ಸೋಯಾ ಬೀನ್‍ಗಳು, ಕಡಲೆಕಾಯಿಗಳು, ಎಲ್ಲ ತಾಜಾ ಆಹಾರಗಳು, ಚೀಸ್ ಮತ್ತು ಹಾಲು.

ಕಾರ್ಬೋಹೈಡ್ರೇಟ್‍ಗಳು : ಕಾರ್ಬೋಹೈಡ್ರೇಟ್‍ಗಳನ್ನು ಮತ್ತೆ ಪಿಷ್ಟಗಳು, ಸಕ್ಕರೆ ಮತ್ತು ಸಕ್ಕರೆ ಪಾನಕ ಹಾಗೂ ಸಿಹಿ ಹಣ್ಣುಗಳಾಗಿ ವರ್ಗೀಕರಣ ಮಾಡಬಹುದಾಗಿದೆ. ಪಿಷ್ಟಗಳಲ್ಲಿ ಇವುಗಳು ಒಳಗೊಂಡಿರುತ್ತವೆ : ಧಾನ್ಯಗಳು, ಒಣ ಹುರುಳಿ ಮತ್ತು ಬಟಾಣಿಗಳು, ಆಲೂಗಡ್ಡೆಗಳು, ಕುಂಬಳಕಾಯಿ. ಸಕ್ಕರೆ ಮತ್ತು ಸಕ್ಕರೆ ಪಾನಕಗಳಲ್ಲಿ ಜೇನು, ಬ್ರೌನ್ ಮತ್ತು ವೈಟ್ ಶುಗರ್, ಕಬ್ಬಿನ ಹಾಲು ಒಳಗೊಂಡಿರುತ್ತವೆ. ಸಿಹಿ ಹಣ್ಣುಗಳಲ್ಲಿ ಬಾಳೆಹಣ್ಣು, ಖರ್ಜೂರ, ನಿಂಬೆ, ಹುಳಿ ಸೇಬು, ಹುಳಿ ದ್ರಾಕ್ಷಿ, ಹುಳಿ ಒಣದ್ರಾಕ್ಷಿ ಒಳಗೊಂಡಿರುತ್ತದೆ. ಲಘು ಪಿಷ್ಟ ಅಹಾರ ಪದಾರ್ಥಗಳು : ಹೂ ಕೋಸು, ಗಾಜರು ಗೆಡ್ಡೆ, ಸಿಹಿಗೆಣಸು, ಕ್ಯಾರೆಟ್, ಬೀಟ್‍ರೂಟ್.

ಕೊಬ್ಬುಗಳು : ಕೊಬ್ಬುಗಳೆಂದರೆ ಎಲ್ಲ ಕೊಬ್ಬುಗಳು ಮತ್ತು ಎಣ್ಣೆಗಳನ್ನು ಒಳಗೊಂಡಿರುತ್ತವೆ. ಅವುಗಳೆಂದರೆ : ಕಡಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಸೋಯಾ ಆಯಿಲ್, ಸೂರ್ಯಕಾಂತಿ ಬೀಜ ತೈಲ, ಬೆಣ್ಣೆ, ಕ್ರೀಮ್, ಬಹುತೇಕ ಎಲ್ಲ ಬೀಜಗಳು, ಮತ್ತು ಚೀಸ್ ಇತ್ಯಾದಿ.

ಆಮ್ಲ ಹಣ್ಣುಗಳು : ಕಿತ್ತಳೆ, ದ್ರಾಕ್ಷಿ, ಪೈನಾಪಲ್, ದಾಳಿಂಬೆ, ಟೊಮೊಟೊ, ನಿಂಬೆ, ಹುಳಿ ಸೇಬು, ಹುಳಿ ದ್ರಾಕ್ಷಿ, ಹುಳಿ ಒಣದ್ರಾಕ್ಷಿ.

ಉಪ ಆಮ್ಲ ಹಣ್ಣುಗಳು : ಉಪ ಆಮ್ಲ ಹಣ್ಣುಗಳು ಇವುಗಳನ್ನು ಒಳಗೊಂಡಿರುತ್ತವೆ : ಸಿಹಿ ಸೇಬು, ಮಾವಿನಹಣ್ಣು, ಪಪ್ಪಾಯಿ, ಜಲ್ದಾರು ಹಣ್ಣು, ಸಿಹಿ ಒಣದ್ರಾಕ್ಷಿ.

ಪಿಷ್ಟ ರಹಿತ ಮತ್ತು ಸೊಪ್ಪುಗಳು : ಎಲೆ ಕೋಸು, ಹೂ ಕೋಸು, ಗಡ್ಡೆ ಕೋಸು, ಪಾಲಕ್, ಸೌತೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಶತಾವರಿ, ಮೂಲಂಗಿ, ಸಿಹಿ ಮೆಣಸು, ಸಾಸುವೆ ಇತ್ಯಾದಿ ಹಾಗೂ ಹಸಿರು, ಕೆಂಪು, ಬಿಳಿ ಇತ್ಯಾದಿ ಬಣ್ಣಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲ ರಸಭರಿತ ಹಣ್ಣುಗಳು.

ಕಲ್ಲಂಗಡಿಗಳು : ಕಲ್ಲಂಗಡಿ, ಕರಬೂಜ, ಕರುಗುಂಚಿ, ಕೆಕ್ಕರಿಕೆ ಹಣ್ಣು, ಜೇನು

ತಿನ್ನುವಲ್ಲಿ ನಿಯಮ ಪಾಲಿಸಿಆಹಾರ ಅಭ್ಯಾಸಗಳು ಮತ್ತು ಉತ್ತಮ ಆರೋಗ್ಯ

ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಇಂಥ ಆಹಾರಗಳು ಬದಲಾವಣೆ ಮೂಲಕ ಹಾದು ಹೋಗುವುದಕ್ಕೆ ದೇಹದೊಳಗೆ ಸ್ರವಿಸಲ್ಪಡುವ ಕಿಣ್ವಗಳು ಪ್ರಭಾವ ಬೀರುತ್ತವೆ. ಇಂಥ ಕಿಣ್ವಗಳ ಕಾರ್ಯನಿರ್ವಹಣೆಯನ್ನು ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರ ಮೇಲೆ ವ್ಯಾಖ್ಯಾನಿಸಬಹುದಾಗಿದೆ. ಸೂಕ್ತ ಆಹಾರ ಸಂಯೋಜನೆಯಲ್ಲಿ ಸರಳ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ನಮ್ಮ ದೇಹದ ಅಂಗಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಹೇಗೆ ಆಹಾರ ತಿನ್ನಬೇಕು ಹಾಗೂ ಹೇಗೆ ದ್ರವರೂಪದ ಆಹಾರಗಳನ್ನು ಕುಡಿಯಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಆದರೆ, ನಾವು ಈಗಲೂ ಕೂಡ ಅಚ್ಚುಕಟ್ಟಿಲ್ಲದೇ ಸಾಂಪ್ರದಾಯಿಕ ರೀತಿಯಲ್ಲಿ ತಿನ್ನುವುದು ಮತ್ತು ಕುಡಿಯುವುದನ್ನು ಮಾಡುತ್ತಿದ್ದೇವೆ.

ಜೀವಶಾಸ್ತ್ರ ಮತ್ತು ಶರೀರಶಾಸ್ತ್ರ ನಿಯಮಗಳಿಗೆ ಅನುಗುಣವಾಗಿ ನಾವು ತಿನ್ನುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲ ನಿಯಮವೇನೆಂದರೆ ನೀವು ಏನಾದರೂ ತಿನ್ನಿ ಆದರೆ ಅದನ್ನು ಚೆನ್ನಾಗಿ ಅಗಿದು ತಿನ್ನಬೇಕು. EAT THE LIQUID AND DRINK THE SOLID ಅಂದರೆ ದ್ರವರೂಪದ ಆಹಾರವನ್ನು ತಿನ್ನಿ ಮತ್ತು ಘನರೂಪದ ಆಹಾರವನ್ನು ಕುಡಿಯಿರಿ ಎಂಬ ನಿಯಮವನ್ನು ಅನುಸರಿಸಬೇಕು.  ಏನೇ ತಿನ್ನಿ ಅಥವಾ ಏನೇ ಕುಡಿಯಿರಿ ಅದು ನಿಮ್ಮ ಹೊಟ್ಟೆಯೊಳಗೆ ಪ್ರವೇಶಿಸುವುದಕ್ಕೂ ಮುನ್ನ ಕೆಲ ಕಾಲ ಬಾಯಿಯಲ್ಲಿ ಇರಬೇಕಾಗುತ್ತದೆ ಎಂಬುದು ಇದರರ್ಥ. ನೀವು ತಿನ್ನುವ ಆಹಾರ ಅಥವಾ ಕುಡಿಯುವ ದ್ರವಗಳು ಬಾಯಿಯೊಳಗಿರುವ ಸಲೈವಾ ಅಥವಾ ಲಾಲಾರಸದೊಂದಿಗೆ ಮಿಶ್ರಣವಾಗಬೇಕು. ಇದರಿಂದ ಆರಂಭದ ಜೀರ್ಣಕ್ರಿಯೆ ಇಲ್ಲಿಂದಲೇ ಆರಂಭವಾದಂತೆ ಆಗುತ್ತದೆ.

ಆಹಾರವನ್ನು ಅಗಿಯದೇ ನುಂಗುವುದನ್ನು ತಪ್ಪಿಸಬೇಕು. ನೀವು ಎಷ್ಟರಮಟ್ಟಿಗೆ ಆಹಾರವನ್ನು ಅಗಿಯಬೇಕು ಅಥವಾ ಜಗಿಯಬೇಕು ಎಂದರೆ ಅದು ನಿಮ್ಮ ಹೊಟ್ಟೆಯೊಳಗೆ ದ್ರವರೂಪದಲ್ಲಿ ಹೋಗುವಂತಾಗಬೇಕು. ನೀರು ಸೇರಿದಂತೆ ಯಾವುದೇ ರೀತಿಯ ಆರೋಗ್ಯಕರ ಪಾನೀಯವನ್ನು ನೀವು ನುಂಗುವುದಕ್ಕೂ ಮುನ್ನ ಅದು ಕೆಲಕಾಲ ಬಾಯಿಯೊಳಗಿದ್ದು ಸಲೈವಾ ಜೊತೆ ಮಿಶ್ರಣವಾಗಬೇಕು. ಕೆಲವರು ಹೊಟ್ಟೆಯೊಳಗೆ ಹಲ್ಲುಗಳು ಇವೆಯೇನೋ ಎಂಬಂತೆ ಗಬಗಬನೆ ಮುಕ್ಕುತ್ತಾರೆ. ಪಚನಕ್ರಿಯೆಯ ಮೊದಲ ಹಂತ ಆರಂಭವಾಗುವುದು ಬಾಯಿಯಲ್ಲೇ ಎಂಬುದನ್ನು ಮರೆಯಬಾರದು.

ನಾವು ಸೇವಿಸುವ ಎಲ್ಲ ಆಹಾರ ಪದಾರ್ಥಗಳು ಅಗಿಯುವಿಕೆ ಪ್ರಕ್ರಿಯೆಯಿಂದ ಸಣ್ಣ ಸಣ್ಣ ಕಣಗಳಾಗಬೇಕು ಮತ್ತು ಸಲೈವಾದೊಂದಿಗೆ ಚೆನ್ನಾಗಿ ಮಿಶ್ರಣವಾಗಬೇಕು. ಆಹಾರದಲ್ಲಿನ ಪಿಷ್ಟ ಪದಾರ್ಥಗಳನ್ನು ಸಲೈವಾ ಬಾಯಿಯಲ್ಲೇ ಜೀರ್ಣಿಸಲು ಆರಂಭಿಸಿ ಮುಂದಿನ ಪ್ರಕ್ರಿಯೆಗಾಗಿ ಉದರದ ಕರುಳಿಗೆ ರವಾನಿಸಲ್ಪಡುತ್ತದೆ. ಲಾಲಾರಸದೊಂದಿಗೆ ಆಹಾರ ಪದಾರ್ಥಗಳು ಚೆನ್ನಾಗಿ ಮಿಶ್ರಣವಾಗಿದ್ದರೆ ಮಾತ್ರ ಉದರದ ಆಮ್ಲಗಳು ಮತ್ತು ಕಿಣ್ವಗಳು ಸುಲಭವಾಗಿ ಕಾರ್ಯನಿರ್ವಹಿಸುತ್ತವೆ.

ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು

 

 

 

 

 

 

 

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!