ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಮಾರಕ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ.
ಡಿಸೆಂಬರ್ 2019 ರಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ ಆರಂಭವಾದ ಈ ಕೊರೋನಾ ವೈರಾಣು ಜ್ವರ ಮನುಕುಲದ ಮೇಲೆ ಸವಾರಿ ಮಾಡುತ್ತಿದೆ. ಕರೋನಾ ಜ್ವರದ ಆರ್ಭಟಕ್ಕೆ ಜಗತ್ತೇ ಮಕಾಡೆ ಮಲಗಿದೆ. ಭಾರತ ದೇಶ ಕೂಡಾ ರೋಗಾಣುವಿನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಇಡೀ ವಿಶ್ವವೇ ವೈರಾಣುವಿನ ರುದ್ರ ನರ್ತನೆಗೆ ಕಂಗಾಲಾಗಿ ಹೋಗಿದ್ದಾರೆ. ಆರೋಗ್ಯವೆಂಬುದು ಹಣವಲ್ಲದ ಐಶ್ವರ್ಯ. ನಮ್ಮ ಜೀವನದ ತಳಹದಿ ‘ಆರೋಗ್ಯ’‘.
ಜನರ ಆರೋಗ್ಯವೇ ರಾಷ್ಟ್ರದ ಸಂಪತ್ತು’. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ ಎಂಬುದು ಸರಳ ಸತ್ಯ. ವಿಶ್ವ ಆರೋಗ್ಯ ಸಂಸ್ಥೆಯು, ಹೆಚ್ಚಿನ ಕಾಯಿಲೆಗಳಿಗೆ, ಜೀವನ ಶೈಲಿ ಸರಿಯಿಲ್ಲದೇ ಇರುವುದೇ ಕಾರಣವೆಂದಿದೆ. ಆರೋಗ್ಯಕರ ಜೀವನ ಶೈಲಿಯಿಂದ, ಜೀವನ ನಡೆಸುವುದು ಯಾರ ಕೈಯ್ಯಲ್ಲಿದೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ.
ಆಹಾರವೇ ಔಷಧ
“ನಿನ್ನ ಆಹಾರವೇ ನಿನ್ನ ಔಷಧ”ವೆಂದು ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಹಿಪೊಕ್ರೆಟಿಸ್ ಹೇಳಿದ್ದಾನೆ. ಕೆಲವರು ಔಷಧಿಯನು ಆಹಾರವಾಗಿ ತೆಗೆದುಕೊಂಡರೆ, ಇನ್ನು ಕೆಲವರು ಆಹಾರವನ್ನೇ ಔಷಧಿಯನ್ನಾಗಿ ತೆಗೆದುಕೊಳ್ಳುತ್ತಾರೆಂಬ ಮಾತಿದೆ. “ಆಹಾರವೇ ಔಷಧ”ಎಂದು ಭಗವದ್ಗೀತೆ ಸಹ ಹೇಳಿದೆ. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಮಾರಕ. ನಮ್ಮ ಹಿರಿಯರಿಂದ ಕಲಿತ ಆಹಾರ ಪದ್ದತಿಯೇ ಶ್ರೇಷ್ಠ ಮತ್ತು ಸಮತೋಲನದ ಆಹಾರ ಸೇವನೆ ಆರೋಗ್ಯಕ್ಕೆ ಅಗತ್ಯ. ಆಹಾರವೇ ಔಷಧಿ ಎನ್ನುವುದನ್ನು ನಾವು ಮತ್ತಷ್ಟು ಹೆಚ್ಚಾಗಿ ಪಾಲಿಸಬೇಕು.
ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. “ಆರೋಗ್ಯವೇ ಭಾಗ್ಯ”, ಈ ಮಾತು ಎಷ್ಟು ಸತ್ಯ ಎಂದು ಈಗ ಎಲ್ಲರಿಗೂ ಅರಿವಾಗಿದೆ. ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ಯಾವುದೇ ಖಾಯಿಲೆ ನಮಗೆ ಬರದಂತೆ ತಡೆಗಟ್ಟುವುದು ಹೇಗೆ ಎಂದು ತಿಳಿಯುವ ಕುತೂಹಲದಲ್ಲಿದ್ದಾರೆ. ಈಗ ನಾವು ನಮ್ಮ ಮನೆಯವರ ಆರೋಗ್ಯ, ಸುತ್ತಮುತ್ತಲಿನ ಜನರ ಆರೋಗ್ಯ ಹಾಗೂ ಸಮಾಜದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು:
“ಊಟ ಬಲ್ಲವನಿಗೆ ರೋಗವಿಲ್ಲ”, ಎಂಬ ಗಾದೆ ಮಾತನ್ನು ಕೇಳಿರುತ್ತೀರ. ಈಗ ಅದನ್ನು ಪಾಲಿಸುವ ಸಮಯ. ನಿಮ್ಮ ಆರೋಗ್ಯವನ್ನು ತೆಗೆದುಕೊಳ್ಳುವ ಆಹಾರದಿಂದ ಹಾಗೂ ಜೀವನ ಶೈಲಿಯಿಂದ ಮಾತ್ರ ಕಾಪಾಡಿಕೊಳ್ಳಲು ಸಾಧ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಈ ಸಮಯದಲ್ಲಿ ಮಾತ್ರ ಅಲ್ಲ ನಮ್ಮನ್ನು ಸದಾ ಕಾಲ ಕಾಪಾಡುತ್ತದೆ. ಇದಕ್ಕೆ ಸಾಕ್ಷಿಯಾಗಿ ಇಡೀ ವಿಶ್ವದ ಮುಂದೆ ನಮ್ಮ ಭಾರತ ಕೊರೊನ ವೈರಸ್ ಮಧ್ಯೆ ನಿಂತಿದೆ.
ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದರೂ ಸಹ ಇತರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮಲ್ಲಿ ಅತಿ ಹೆಚ್ಚು ರೋಗನಿರೋಧಕ ಶಕ್ತಿ ಇರುವುದು ಎಲ್ಲರಿಗೂ ತಿಳಿಯುತ್ತಿದೆ. ಇದಕ್ಕೆ ಕಾರಣ ನಮ್ಮ ಪೂರ್ವಜರು ನಮಗೆ ಬಿಟ್ಟ ನಮ್ಮ ಭಾರತೀಯ ಸಂಪ್ರದಾಯದ ಅಡುಗೆಗಳು ಹಾಗೂ ಅದನ್ನು ಪಾಲಿಸುತ್ತಿರುವ ಸಾಕಷ್ಟು ಜನರು. ನಾವು ನಮ್ಮ ಮುಂದಿನ ಜನಾಂಗಕ್ಕೆ ಕೊಡುವ ಉಡುಗೊರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು, ಅದರ ಬಗ್ಗೆ ಮಾಹಿತಿಗಳು ಮತ್ತು ಅದನ್ನು ಮಾಡುಹಾಗೂ ಉಪಯೋಗಿಸುವ ಕ್ರಮಗಳು.
1.ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. ಕ್ರಮವಾದ ದಿನಚರಿ, ಋತುಚರ್ಯಗಳನ್ನು ಪಾಲಿಸುವಂತಹ ಜೀವನ ಶೈಲಿಯಾಗಿರಬೇಕು.
2.ಆಯುಷ್ ಇಲಾಖೆ ಪ್ರಕಟಿಸಿರುವಂತೆ ಬಿಸಿ ನೀರು ಕುಡಿಯುವುದು, ಯೋಗಾಸನ, ಪ್ರಾಣಾಯಾಮ ಮಾಡುವುದು, ಅಡುಗೆಯಲ್ಲಿ ಅರಿಶಿನ, ಜೀರಿಗೆ, ಬೆಳ್ಳುಳ್ಳಿ, ದನಿಯ ಬಳಸುವುದು, ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.
3.ಪಿಜ್ಜಾ, ಬಿಸ್ಕತ್, ಕೇಕು, ಚಾಕಲೇಟ್, ಚಿಪ್ಸ್, ಐಸ್ ಕ್ರೀಮ್ ಈ ರೀತಿಯ ಯಾವುದೇ ಜಂಕ್ ಪದಾರ್ಥಗಳನ್ನ ತಿನ್ನಬೇಡಿ ಮತ್ತು ಮಕ್ಕಳಿಗೂ ಕೊಡಬೇಡಿ. stress, depression ರೀತಿಯ ಸಮಸ್ಯೆಗಳಿಂದ ಜಂಕ್ ಫುಡ್ ತಿನ್ನಬೇಕೆಂಬ ಹಂಬಲ ಹೆಚ್ಚುತ್ತದೆ. ಆದರೆ ಈ ಜಂಕ್ ನಿಮ್ಮ ಇಮ್ಮ್ಯೂನಿಟಿ ಕಡಿಮೆ ಮಾಡುತ್ತದೆ ಹಾಗೂ ಖಾಯಿಲೆ ತಂದುಕೊಡುತ್ತದೆ.
4. ಸ್ಟ್ರೆಸ್, ಡಿಪ್ರೆಶನ್ ನನ್ನು ನಿಯಂತ್ರಣದಲ್ಲಿಡಲು ಯೋಗ, ಮೆಡಿಟೇಶನ್, ಸ್ತೋತ್ರ ಪಠನ ಮೊರೆಹೋಗಬೇಕು. ಬದಲಾಗಿ ಆರೋಗ್ಯ ಹಾಳು ಮಾಡುವ ಆಹಾರಗಳ ಕಡೆ ಅಲ್ಲ.
ಕಟ್ಟುನಿಟ್ಟಾದ ಜೀವನ ಶೈಲಿ:
ಆರೋಗ್ಯ ಕಾಪಾಡುವುದು ನಾವು ತೆಗೆದುಕೊಳ್ಳುವ ಆಹಾರ ಮತ್ತು ನಮ್ಮ ಕಟ್ಟುನಿಟ್ಟಾದ ಜೀವನ ಶೈಲಿಯ ಮೇಲೆ ಅವಲಂಭಿಸಿರುತ್ತದೆ. ಪ್ರತಿನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಯಾವುದೇ ರಾಷ್ಟ್ರ ಪ್ರಗತಿ ಹೊಂದಬೇಕಾದರೆ, ಆ ದೇಶದ ಆರ್ಥಿಕ ವ್ಯವಸ್ಥೆ ಜತೆಗೆ ಪ್ರತಿಯೊಬ್ಬ ನಾಗರೀಕನೂ ಮೇಲೆ ತಿಳಿಸಿದಂತೆ ಪರಿಪೂರ್ಣ ಆರೋಗ್ಯವಂತನಾಗಿರಬೇಕು. ಆರೋಗ್ಯವೇ ಭಾಗ್ಯವೆನ್ನುವ ಮಂತ್ರವನ್ನು ಮರೆಯದಿರೋಣ.
ರೋಗವಿಲ್ಲದ ಜೀವನಕ್ಕೆ, ಉತ್ತಮ ದೈಹಿಕ, ಮಾನಸಿಕ, ಆದ್ಯಾತ್ಮಿಕ ಮತ್ತು ಸಾಮಾಜಿಕ ಸ್ಥಿತಿ, ಹಾಗೂ ಕಲ್ಮಷ ರಹಿತ ವಾತಾವರಣದ ಅಗತ್ಯವಿದೆ. ಮಾನವ ಪ್ರಕೃತಿಯ ಒಂದು ಭಾಗ. ಆದ್ದರಿಂದ ಪ್ರಕೃತಿಯೊಂದಿಗೆ ಉತ್ತಮ ಸಂಬಂಧ ಹೊಂದುವುದೂ ಸಹ ಆರೋಗ್ಯಕರ ಜೀವನಕ್ಕೆ ಅವಶ್ಯಕ. ಪ್ರಕೃತಿ ಹೇಳಿದಂತೆ ಕೇಳಿದರೆ ಆರೋಗ್ಯ ಉಚಿತ. ಪ್ರಕೃತಿ ವಿರುದ್ದವಾಗಿ ನಡೆದರೆ ಅನಾರೋಗ್ಯ ಖಚಿತ.
ವಿಶ್ವ ಆರೋಗ್ಯ ಸಂಸ್ಥೆ, ಕೋರೋನ ಕಾಯಿಲೆ ತಡೆಗಟ್ಟುವಿಕೆಗೆ ಭಾರತ ಸರಕಾರ ತೆಗೆದುಕೊಂಡ ಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳಿದೆ. ಆತ್ಮವಿಶ್ವಾಸ ಹೊಂದುವುದು ಅಸಡ್ಡೆಗೆ ಎಡೆ ಮಾಡಿಕೊಡದಿರಲಿ. ಅದಕ್ಕೋಸ್ಕರವೇ ಸಾಮಾಜಿಕ ಸಂಪರ್ಕಗಳನ್ನು ಕಡಿಮೆಗೊಳಿಸುವುದು. ವ್ಯಕ್ತಿ ವ್ಯಕ್ತಿಗಳ ಮಧ್ಯೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಳ್ಳುವುದು, ಆ ಮೂಲಕ ರೋಗಾಣುವನ್ನು ಸೋಲಿಸುವುದು, ನಾವು, ನಮ್ಮ ಕುಟುಂಬ, ನಮ್ಮ ಸ್ನೇಹಿತರು ಹಾಗೂ ನಮ್ಮ ಸಮಾಜವನ್ನು ಸುರಕ್ಷಿತವಾಗಿಡುವುದು ನಮ್ಮ ಆರೋಗ್ಯ ಮಂತ್ರಗಳಾಗಿರಲಿ.
ಪ್ರಧಾನ ಸಂಪಾದಕರು
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 49069000 Extn: 1147/1366
http://www.vims.ac.in/