ಮಳೆಗಾಲದಲ್ಲಿ ಸೌಂದರ್ಯ ಆರೈಕೆ

ಮಳೆಗಾಲದಲ್ಲಿ ಸೌಂದರ್ಯ ಆರೈಕೆ ಕೆಲವು ಮಾಹಿತಿಗಳು ಇಲ್ಲಿವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ನಮ್ಮ ಸೌಂದರ್ಯದ ಕಡೆಗೆ ಎಷ್ಟು ಗಮನ ನೀಡುತ್ತೇವೋ ಅಷ್ಟೇ ಆಸಕ್ತಿಯನ್ನು ಮಳೆಗಾಲದಲ್ಲೂ ವಹಿಸಬೇಕಾಗುತ್ತದೆ.

ಮಳೆಗಾಲದಲ್ಲಿ ಸೌಂದರ್ಯ ರಕ್ಷಣೆವದನ ಆರೈಕೆ:

1. ಮಳೆಗಾಲದಲ್ಲೂ ಬೆವರು ಮತ್ತು ಮುಖದ ತೈಲದಿಂದ ಶೇಖರಣೆಯಾಗುವ ಕೊಳೆಯಿಂದ ತ್ವಚೆಯ ರೋಮರಂಧ್ರಗಳು ಮುಚ್ಚಲ್ಪಡುತ್ತವೆ. ಇದರಿಂದ ಮೊಡವೆ-ಗುಳ್ಳೆ ಮತ್ತು ಬೊಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದಕಾರಣ ಮಳೆಗಾಲದಲ್ಲಿ ತ್ವಚೆಯ ಸ್ವಚ್ಚತೆಯ ಬಗ್ಗೆ ಗಮನ ಕೊಡುವುದು ಅಗತ್ಯ.

2. ಸ್ಕೀನ್ ಟಾನಿಕ್ ಬಳಸುವುದರಿಂದ ಪ್ರಯೋಜನವಿದೆ. ಇದರಿಂದ ತ್ವಚೆಯ ರೋಮರಂಧ್ರಗಳು ಸ್ವಚ್ಚವಾಗಿ ಫೆಶ್‍ನೆಸ್ ಅನುಭವ ನೀಡುತ್ತದೆ.

3. ನಿಮ್ಮದು ಎಣ್ಣೆಯುಕ್ತ ಮುಖವಾಗಿದ್ದರೆ, ಬೇವಿನ ಎಲೆಗಳನ್ನು ಕುದಿಸಿ ನೀರು ಸೋಸಿಕೊಂಡು ನೀರನ್ನು ರೆಫ್ರಿಜರೇಟರ್‍ನಲ್ಲಿ ಇಟ್ಟುಕೊಳ್ಳಿ. ಈ ನೀರಿನಿಂದ ದಿನಕ್ಕೆ ಮೂರುನಾಲ್ಕು ಬಾರಿ ಮುಖವನ್ನು ಸ್ವಚ್ಚಗೊಳಿಸಿಕೊಳ್ಳಿ.

4. ದಿನವಿಡೀ ತಾಜಾತನದ ಅನುಭವ ಹೊಂದಲು ಸ್ನಾನದ ನೀರಿನಲ್ಲಿ ರಾತ್ರಿಯೇ ತಾಜಾ ಗುಲಾಬಿ ಹೂಗಳ ಎಸಳುಗಳನ್ನು ಹಾಕಿಡಿ. ಬೆಳಿಗ್ಗೆ ಅದೇ ಗುಲಾಬಿಯುಕ್ತ ನೀರಿನಿಂದ ಮುಖ ತೊಳೆಯಬಹುದು. ಈ ನೀರಿನಿಂದ ಸ್ನಾನ ಮಾಡಿದರೆ ಫ್ರೆಶ್‍ನೆಸ್ ಅನುಭೂತಿ ಉಂಟಾಗುತ್ತದೆ.

ಕಾಲುಗಳ ಆರೈಕೆ:

1. ಮಳೆಗಾಲದಲ್ಲಿ ಹೊರಗಿನಿಂದ ಬಂದ ನಂತರ ಕೈಕಾಲುಗಳನ್ನು ಸೋಪಿನಿಂದ ಚೆನ್ನಾಗಿ ಸ್ವಚ್ಚಗೊಳಿಸಬೇಕು.

2. ಮಳೆಯ ಕಾರಣದಿಂದ ನಾವು ಕಾಲುಗಳನ್ನು ಶೂಗಳಲ್ಲಿ ಭದ್ರಪಡಿಸಿಕೊಳ್ಳುತ್ತೇವೆ. ಈ ಕಾರಣದಿಂದಾಗಿ ಕಾಲ್ಬೆರಳುಗಳಿಗೆ ಗಾಳಿಯ ಸ್ಪರ್ಶ ಇರುವುದಿಲ್ಲ. ಬೆವರು ಒಳಗೊಳಗೆ ತುಂಬಿಕೊಳ್ಳುತ್ತದೆ. ಇದರಿಂದ ದುರ್ನಾತ ಉಂಟಾಗುತ್ತದೆ. ಇದು ಶೀಲಿಂಧ್ರ ಸೋಂಕಿಗೆ (ಪಂಗಲ್ ಇನ್‍ಫೆಕ್ಷನ್) ಎಡೆ ಮಾಡಿಕೊಡುತ್ತದೆ. ಅದಕಾರಣ ದಿನಕ್ಕೆ 3-4 ಬಾರಿ ಕಾಲುಗಳನ್ನು ಸ್ವಚ್ಚಗೊಳಿಸಿಕೊಂಡು ಕಾಲ್ಬೆರಳುಗಳು ನಡುವೆ ಟ್ಯಾಲ್ಕಂ ಪೌಡರ್ ಸಿಂಪಡಿಸಿಕೊಳ್ಳಬೇಕು.

ಕೂದಲುಗಳ ಆರೈಕೆ:

1. ಮಳೆಗಾಲದಲ್ಲಿ ಅಧಿಕ ತೇವಾಂಶದ ಕಾರಣ ಕೂದಲು ಅಂಟು ಅಂಟು ಎನಿಸುತ್ತದೆ. ಹೀಗಾಗಿ ವಾರದಲ್ಲಿ ಕನಿಷ್ಠ 2-3 ಸಲ ಕೂದಲನ್ನು ತೊಳೆದುಕೊಳ್ಳಬೇಕು. ಕೇಶರಾಶಿಯ ಸ್ವಚ್ಚತೆಗೆ ನೆಲ್ಲಿಕಾಯಿಯುಕ್ತ ಶಾಂಪೂ ಸೂಕ್ತ. ಇದರಿಂದ ಕೂದಲು ಹೊಳಪು ಮತ್ತು ಮೃದುತ್ವ ಪಡೆದುಕೊಳ್ಳುತ್ತದೆ.

2. ಮಳೆಗಾಲದಲ್ಲಿ ಹೇರ್‍ಜೆಲ್ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಮಳೆ ನೀರು ಸ್ವಲ್ಪ ತಲೆ ಮೇಲೆ ಬಿದ್ದರೂ ಸಹ ಕೂದಲು ಅಂಟು ಅಂಟು ಆಗುತ್ತದೆ. ಹೀಗಾಗಿ ವಾರದಲ್ಲಿ ಕನಿಷ್ಠ 2-3 ಸಲ ಕೂದಲನ್ನು ಅಗತ್ಯವಾಗಿ ಸ್ವಚ್ಚಗೊಳಿಸಬೇಕು.

3. ಕೂದಲು ತೊಳೆಯಲು ಸೋಪಿನ ಬದಲು ಆಯುರ್ವೇದ ಶ್ಯಾಂಪೂ ಬಳಕೆ ಉತ್ತಮ. ಇದರಿಂದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ.

ಮಳೆಗಾಲದಲ್ಲಿ ಮೇಕಪ್:

1. ಮೇಕಪ್ ಮಾಡಿಕೊಳ್ಳುವುದಕ್ಕೂ ಮೊದಲು ಐಸ್‍ಪ್ಯಾಂಡ್‍ನಿಂದ ಮುಖ ಮತ್ತು ಕಣ್ಣುಗಳನ್ನು ತಂಪುಗೊಳಿಸಿ

2. ಹಗಲು ಹೊತ್ತು ಫೌಂಡೇಶನ್ ಬದಲು ಟ್ರಾನ್ಸ್‍ಲ್ಯೂಸೆಂಟ್ ಪೌಡರ್ ಬಳಕೆ ಮಾಡಿ. ರಾತ್ರಿ ವೇಳೆ ಫೌಂಡೇಶನ್ ಬದಲು ಮುಖಕ್ಕೆ ಪ್ಯಾನ್‍ಕೇಕ್ ಬೇಸ್‍ನಲ್ಲಿ ಲೇಪಿಸಿ.

3. ಹಗಲು ವೇಳೆ ನ್ಯಾಚುರಲ್ ಲಿಪ್ ಟೋನ್‍ನ ಲಿಪ್‍ಸ್ಟಿಕ್ ಹಚ್ಚಿಕೊಳ್ಳಿ. ಲಿಪ್‍ಗ್ಲಾಜ್‍ನನ್ನು ಕೂಡ ಹಗುರವಾಗಿ ಲೇಪಿಸಿಕೊಳ್ಳುವುದು. ನಿಮ್ಮ ತುಟಿಗಳ ಸೀಳಿದಂತೆ ಅಥವಾ ಒಡೆದಂತೆ ಆಗಿದ್ದರೆ ಮೊದಲು ಗ್ಲಾಜ್ ಹಚ್ಚಿ ನಂತರ ಲಿಪ್‍ಸ್ಟಿಕ್ ಹಚ್ಚಿ.

4. ಕಚೇರಿ ಅಥವಾ ಹೊರಗೆ ಹೋಗಿ ಬಂದ ನಂತರ ಮೇಕಪ್ ತೆಗೆಯಲು ತಕ್ಷಣವೇ ಕ್ಲೆನ್ಸಿಂಗ್ ಮಿಲ್ಕ್ ಅಥವಾ ಟೋನರ್‍ನಿಂದ ಮುಖವನ್ನು ಸ್ವಚ್ಚಗೊಳಿಸಿ.

Dr-Manjushree ಡಾ|| ಮಂಜುಶ್ರೀ ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66, ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು ಸುರತ್ಕಲ್-575014 ದೂ:9482249762

ಡಾ|| ಮಂಜುಶ್ರೀ
ಪೂರ್ಣಾಯು ಕ್ಲಿನಿಕ್, ಎನ್‌ಹೆಚ್ 66
ಶಾನ್‌ಬಾನ್ ಟ್ರೇಡರ‍್ಸ ಎದುರು, ತಡಂಬೈಲು

ಸುರತ್ಕಲ್-575014  ದೂ: 9482249762

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!