ಮೊಡವೆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆಯೇ?

ಮೊಡವೆ ಸಮಸ್ಯೆ ಯವೌನದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಒಂದು ಚರ್ಮ ದೋಷ. ಮೊಡವೆಗೆ ಕಾರಣವೇನು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಒಂದು ಹಂತದಲ್ಲಿ ಅಂದಾಜು ಶೇ.80ರಷ್ಟು ಜನರಿಗೆ ಮೊಡವೆಯ ಅನುಭವವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಮೊಡವೆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆಯೇ?

ಮೊಡವೆ ಒಂದು ಚರ್ಮ ದೋಷ. ಈ ಸಮಸ್ಯೆಯಿಂದ ಕಪ್ಪು ತಲೆಗಳು ಅಥವಾ ಬಿಳಿ ತಲೆಗಳು, ಮೊಡವೆಗಳು ಅಥವಾ ಗುಳ್ಳಗಳು ಉಂಟಾಗುತ್ತವೆ. ಈ ದೋಷ ಯವೌನದಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಹದಿಹರೆಯದವರಲ್ಲಿ ಮುಖ, ಎದೆ, ಕತ್ತು ಮತ್ತು ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತವೆ. ಒಂದು ಹಂತದಲ್ಲಿ ಅಂದಾಜು ಶೇ.80ರಷ್ಟು ಜನರಿಗೆ ಮೊಡವೆಯ ಅನುಭವವಾಗಿರುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮೊಡವೆಗೆ ಕಾರಣವೇನು ಎಂಬುದು ಯಾರಿಗೂ ನಿಖರವಾಗಿ ತಿಳಿದಿಲ್ಲ. ಆದರೂ, ಕೆಲವು ಅಭಿಪ್ರಾಯಗಳಿವೆ.

1. ಮೊಡವೆಗಳು ಸಾಮಾನ್ಯವಾಗಿ 11 ರಿಂದ 13 ವರ್ಷಗಳ ನಡುವೆ ಅರಂಭವಾಗುತ್ತದೆ: ಹಾರ್ಮೋನು ಮಟ್ಟಗಳಲ್ಲಿ ಬದಲಾವಣೆಯಿಂದಾಗಿ ಹುಡುಗ ಮತ್ತು ಹುಡುಗಿ ಇಬ್ಬರಲ್ಲೂ ಮೊಡವೆಗಳು ಕಂಡುಬರುವುದು ವಾಸ್ತವ. ಅಂಡ್ರೋಜೆನ್‍ಗಳೆಂದು ಕರೆಯಲ್ಪಡುವ ಇಂಥ ಹಾರ್ಮೋನುಗಳು ಮುಖದಲ್ಲಿನ ಗ್ರಂಥಿಗಳನ್ನು ದೊಡ್ಡದಾಗಿ ಮಾಡುತ್ತವೆ. ಈ ಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ತೈಲವನ್ನು ಸೆಬಮ್ ಎನ್ನುತ್ತಾರೆ. ರೋಮದ ಸಣ್ಣ ಚೀಲವು ಸತ್ತ ಕೋಶಗಳನ್ನು ತ್ವರಿತವಾಗಿ ಉದುರಿಸುತ್ತವೆ ಹಾಗೂ ಕೋಶಗಳು ಮತ್ತು ಸೆಬಮ್ ಗ್ರಂಥಿಯಲ್ಲಿ ತಡೆಯುಂಟು ಮಾಡುತ್ತವೆ.

2. ಬಿಗಿಯಾದ ಉಡುಪುಗಳಿಂದ ಒತ್ತಡ ಮತ್ತು ಉಜ್ಜುವಿಕೆ: ಮೊಡವೆ ಸಮಸ್ಯೆ ಇರುವ ಹದಿಹರೆಯದವರು ಬಿಗಿಯಾದ ಕಾಲರ್ ಇರುವ ಶರ್ಟ್‍ಗಳನ್ನು ಧರಿಸಬಾರದು. ಇದು ಮೊಡವೆಗೆ ಇನ್ನಷ್ಟು ಕಿರಿಕಿರಿ ಉಂಟು ಮಾಡಬಹುದು. ಹದಿಹರೆಯದ ಅಥ್ಲೀಟ್‍ಗಳಲ್ಲಿ ಬ್ಯಾಕ್‍ಪ್ಯಾಕ್ಸ್ ಅಥವಾ ಅಥ್ಲೆಟಿಕ್ ಹೆಲ್ಮಟ್‍ಗಳಿಂದಾಗಿ ಮೊಡವೆ ಉಲ್ಬಣಗೊಂಡಿರುವುದನ್ನು ಗಮನಿಸಬಹುದು.

3. ವಂಶವಾಹಿಗಳು ಕೂಡ ಮೊಡವೆಗೆ ಕಾರಣವಾಗಬಹುದು: ನಿಮಗೆ ಮೊಡವೆಗಳಿದ್ದರೆ, ನಿಮ್ಮ ಕೌಟುಂಬಿಕ ಹಿನ್ನೆಲೆಯಲ್ಲಿ ಯಾರಿಗಾದರೂ ಮೊಡವೆ ಸಮಸ್ಯೆಗಳಿದ್ದರೆ, ಅದು ಅನುವಂಶೀಯವಾಗಿ ಪರಿಣಾಮ ಬೀರಿ ದೋಷವನ್ನು ಉಲ್ಬಣಗೊಳ್ಳುವಂತೆ ಮಾಡಬಹುದು. ತಂದೆ ಅಥವಾ ತಾಯಿಗೆ ಯವೌನದಲ್ಲಿ ಮೊಡವೆಗಳು ಕಂಡು ಬಂದಿದ್ದರೆ, ನಿಮ್ಮ ಮೊಡವೆಗೆ ಅದು ವಂಶವಾಹಿ ಕಾರಣವಾಗುತ್ತದೆ.

4. ಮಹಿಳೆಯರಿಗೆ ಸಂಬಂಧಿಸಿದ ಸಂಗತಿಗಳು: ಮಹಿಳೆಯರು ಜೀವನದಲ್ಲಿ ಹಲವಾರು ಹಂತಗಳ ಮೂಲಕ ಸಾಗುವುದರಿಂದ ಅವರ ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆ ಮತ್ತು ಏರಿಳಿತಗಳು ಕಂಡು ಬರುತ್ತವೆ. ಈ ಪರಿವರ್ತನೆಗಳಿಂದಾಗಿ ಋತು ಚಕ್ರಕ್ಕೆ ಮುನ್ನ ಎರಡು ಮತ್ತು ಏಳು ದಿನಗಳ ನಡುವೆ ಹರೆಯದ ಮಹಿಳೆಯರಲ್ಲಿ ಮೊಡವೆಗೆ ಕಾರಣವಾಗುತ್ತದೆ.

5. ಗರ್ಭಧಾರಣೆ ಮತ್ತು ಹಾರ್ಮೋನುಗಳು: ಗರ್ಭಿಣಿಯರಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುತ್ತದೆ. ಈ ಹಿಂದೆ ಸ್ವಲ್ಪ ಮಟ್ಟಿಗೆ ಅಥವಾ ಮೊಡವೆ ಸಮಸ್ಯೆಯೇ ಇಲ್ಲದ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಮತ್ತು ಮಗು ಜನಿಸಿದ ಸ್ವಲ್ಪ ಕಾಲದ ತನಕ ಕಾಣಿಸಿಕೊಳ್ಳುವ ಮೊಡವೆ ಹಾರ್ಮೋನು ಮಟ್ಟಗಳು ಸಾಮಾನ್ಯ ಸ್ಥಿತಿಗೆ ಹಿಂದಿರುಗುವ ತನಕ ಮುಂದುವರೆಯುತ್ತಿದೆ.

6. ಋತು ಚಕ್ರ ಮತ್ತು ಹಾರ್ಮೋನುಗಳು: ಮಹಿಳೆಯರಲ್ಲಿ ಋತು ಚಕ್ರದಿಂದ ಮತ್ತು ಮುಟ್ಟಿನ ಸಮಸ್ಯೆಯಂದಾಗಿ ಹಾರ್ಮೋನುಗಳಲ್ಲಿ ಬದಲಾವಣೆಗಳು ಕಂಡು ಬರುತ್ತದೆ. ಇದು ಕೂಡ ಮೊಡವೆಗೆ ಕಾರಣವಾಗುತ್ತದೆ. ಮಹಿಳೆಯರು ತುಂಬಾ ಮೇಕಪ್ ಮಾಡಿಕೊಳ್ಳುವುದರಿಂದ ಮೊಡವೆ ಉಲ್ಬಣಗೊಳ್ಳುತ್ತದೆ.

7. ಒತ್ತಡ: ವಿಶೇಷವಾಗಿ ವಯಸ್ಕರರಲ್ಲಿ ಒತ್ತಡವು ಮೊಡವೆ ಮತ್ತೊಂದು ಕಾರಣವಾಗಬಲ್ಲದು. ಒತ್ತಡಕ್ಕೆ ಒಳಗಾದಾಗ, ಕೊರ್ಟಿಸೋಲ್ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದು ನಿಮಗೆ ಇರುವ ಮೊಡವೆ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಒತ್ತಡದಿಂದ ಉಂಟಾಗುವ ಮೊಡವೆಯನ್ನು ಹೋಗಲಾಡಿಸಲು ಪ್ರಶಾಂತ ಚಿತ್ತರಾಗಿರಲು ಮತ್ತು ಧ್ಯಾನ ಮಾಡಲು ಯತ್ನಿಸಿ.

8. ಚರ್ಮದ ಮೇಲಿನ ಗುಳ್ಳೆಗಳನ್ನು ಕೀಳುವುದರಿಂದ: ಮುಖದ ಮೇಲಿರುವ ಮೊಡವೆ ಅಥವಾ ಗುಳ್ಳೆ ಅಥವಾ ಯಾವುದೇ ರೀತಿಯ ಕಪ್ಪು ತಲೆಗಳನ್ನು ಕೀಳಲು ಇಲ್ಲವೆ ಹಿಸುಕಲು ಯತ್ನಿಸಬೇಡಿ. ಇದು ಮೊಡವೆ ಇನ್ನಷ್ಟು ಉಲ್ಬಣಗೊಳ್ಳಲು ಮತ್ತು ಸೋಂಕಿಗೆ ಕಾರಣವಾಗಬಹುದು. ನಿಮ್ಮ ಮುಖವನ್ನು ಸ್ವಚ್ಚಗೊಳಿಸುವಾಗ ಸಾಧ್ಯವಾದಷ್ಟು ಗಡುಸಾದ ಫೇಷಿಯಲ್ ಕ್ಲೀನರ್‍ಗಳ ಬಳಕೆಯನ್ನು ತಪ್ಪಿಸಿ ಹಾಗೂ ಮುಖವನ್ನು ತುಂಬಾ ಬಿರುಸಾಗಿ ಉಜ್ಜಬೇಡಿ.ಏಕೆಂದರೆ ಇವು ಹೆಚ್ಚು ಸೆಬಲ್ ಸೃಷ್ಟಿಯಾಗಲು ಕಾರಣವಾಗುತ್ತದೆ.

ಮೊಡವೆ ಚಿಕಿತ್ಸೆ:
ಮೊಡವೆ ಚಿಕಿತ್ಸೆ ಗಾಗಿ ಒವರ್ ದಿ  ಕೌಂಟರ್ (ಮೊಡವೆ ಪ್ರತಿರೋಧಕ) ಉತ್ಪನ್ನಗಳು ಲಭಿಸುತ್ತವೆ. ಮೊಡವೆ ಚಿಕಿತ್ಸೆಗಾಗಿ ಲಭಿಸುವ ಇಂತಹ ಒವರ್ ದಿ ಕೌಂಟರ್ ಉತ್ಪನ್ನಗಳು ಪ್ರಾಸಂಗಿಕವಾಗಿದ್ದು, ಕ್ರೀಮ್, ಸೋಪ್, ಲೋಷನ್ ಅಥವಾ ಜೆಲ್ ರೂಪದಲ್ಲಿ ಲಭಿಸುತ್ತವೆ. ಇಂತಹ ಉತ್ಪನ್ನಗಳು ಸಾಮಾನ್ಯವಾಗಿ ಬೆನ್‍ಜೋಲ್ ಪರಾಕ್ಸೈಡ್ (ಬ್ಯಾಕ್ಟಿರಿಯಾಗಳನ್ನು ಕೊಲ್ಲಲು ಮತ್ತು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಕಾರಿ), ಸಲ್ಫರ್ (ಕಪ್ಪು ತಲೆಗಳು ಮತ್ತು ಬಿಳಿ ತಲೆಗಳ ನಿರ್ಮೂಲನೆಗೆ ಸಹಕಾರಿ) ಮತ್ತು / ಅಥವಾ ಸಾಲಿಸಿಲಿಕ್ ಆ್ಯಸಿಡ್ (ಜೀವ ಕೋಶಗಳ ಹಾನಿ ವೇಗವನ್ನು ಕಡಿಮೆ ಮಾಡುತ್ತದೆ) ಒಳಗೊಂಡಿರುತ್ತದೆ.

ತೀವ್ರ ಪ್ರಕರಣಗಳಲ್ಲಿ ಸೂಚಿಸಲ್ಪಟ್ಟ ಮೊಡವೆ ಚಿಕಿತ್ಸೆ ಔಷಧಿಗಳು ಬೇಕಾಗಿದ್ದು, ಇದನ್ನು ಪ್ರಾಸಂಗಿಕವಾಗಿ ಮತ್ತು ಬಾಯಿ ಮೂಲಕ ಸೇವಿಸಬೇಕು. ಮೊಡವೆ ಚಿಕಿತ್ಸೆಗಾಗಿ ಬಾಯಿಯ ಮೂಲಕ ಸೇವಿಸುವ ಇಂಥ ಔಷಧಿಗಳು ಬ್ಯಾಕ್ಟೀರಿಯಾ ಬೆಳವಣಿಗೆ ಮತ್ತು ಗ್ರಂಥಿಗಳ ಉರಿಯುವಿಕೆ ಈ ಎರಡನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಡವೆ ಉಲ್ಬಣಗೊಳ್ಳುವುದನ್ನು ನಿರ್ಮೂಲನೆ ಮಾಡಲು ಅಥವಾ ಕಡಿಮೆ ಮಾಡಲು ಹಾಗೂ ತೀವ್ರ ಮೊಡವೆಗಳಿಂದ ಚರ್ಮದ ಮೇಲೆ ಕಲೆಗಳು ಉಂಟಾಗುವುದನ್ನು ತಪ್ಪಿಸಲು ಜನರು ಮನೆಯಲ್ಲಿ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಬೆನ್‍ಜೋಲ್ ಪರಾಕ್ಸೈಡ್ ಲೋಷನ್ ಬಳಸಿ ಮನೆಯಲ್ಲಿ ಮೊಡವೆಗೆ ಚಿಕಿತ್ಸೆ ನೀಡಬಹುದು. ಇದು ಮೊಡವೆಗಳ ಪರಿಣಾಮಕಾರಿ ಉಪಶಮನ ಮತ್ತು ಮತ್ತೆ ಮೊಡವೆ ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ನೆರವಾಗುತ್ತದೆ.

Also Read: ಮೊಡವೆ ಆಗದಿರಲಿ ನಿಮ್ಮ ಒಡವೆ

ಡಾ. ಭಾನು ಪ್ರಕಾಶ್
ಪ್ರೊಫೆಸರ್, ಚರ್ಮಶಾಸ್ತ್ರ ವಿಭಾಗ
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್

82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-66

ಫೋನ್ : 080-49069000 Extn: 1147/1366
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!