ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯಕರ ಅಡುಗೆ ಹೇಳಿಕೊಡಲಾಯಿತು. ತರಕಾರಿ, ಹಣ್ಣುಗಳ ಮಹತ್ವದ ಮಾಹಿತಿ ನಿಡಲಾಯಿತು. ಅವರ ಪುಟ್ಟ ಕಣ್ಣುಗಳಿಗೆ ವ್ಯಾಯಮ ಹೇಳಿಕೊಟ್ಟು, ಯೋಗಾಸನ ಮಾಡಿಸಲಾಯಿತು. ಅವರಿಗಿಷ್ಟವಾದ ಆಟ ಆಡಿಸಲಾಯಿತು.
ಬೇಸಿಗೆಯ ಬಿಸಿ, ಶಾಲೆಯ ರಜೆ, ಮಕ್ಕಳ ಆಟ, ಹಸಿವು ಇವೆಲ್ಲವನ್ನು ತಣಿಸುದಕ್ಕೆ ಅಪ್ಪ ಅಮ್ಮಂದಿರು ಹುಡುಕುವುದು ಬೇಸಿಗೆಯ ಶಿಬಿರ. ಮಹಾನಸ ಕೂಡ ವಿಭಿನ್ನವಾದ ಬೇಸಿಗೆ ಶಿಬಿರವನ್ನು ಆಯೋಜಿಸಿತ್ತು. ಶಿಬಿರದಲ್ಲಿ ಮಾಡಿದ ಓಟ್ಸ್ ಲಾಡು ಮತ್ತು ಹೆಸರು ನೀರು ಮಾಡುವ ವಿಧಾನ ಇಲ್ಲಿದೆ. ಇವೆರಡೂ ಆರೋಗ್ಯಕ್ಕೂ ಉಪಯುಕ್ತ. ಮಹಾನಸ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯಕರ ಅಡುಗೆ ಹೇಳಿಕೊಡಲಾಯಿತು. ತರಕಾರಿ, ಹಣ್ಣುಗಳ ಮಹತ್ವದ ಮಾಹಿತಿ ನಿಡಲಾಯಿತು. ಅವರ ಪುಟ್ಟ ಕಣ್ಣುಗಳಿಗೆ ವ್ಯಾಯಮ ಹೇಳಿಕೊಟ್ಟು, ಯೋಗಾಸನ ಮಾಡಿಸಲಾಯಿತು. ಅವರಿಗಿಷ್ಟವಾದ ಆಟ ಆಡಿಸಲಾಯಿತು.
ಮಕ್ಕಳ (ವ್ಯಾಯಾಮ) ಯೋಗಾಸನದಲ್ಲಿ – ಸೂರ್ಯನಮಸ್ಕಾರ, ವೃಕ್ಷಾಸನ, ಮಕರಾಸನ, ಹಾಲಾಸನ ಮುಂತಾದವುಗಳನ್ನು ಖುಷಿಯಾಗಿ ಶ್ರದ್ಧೆಯಿಂದ ಮಾಡಿದರು. ಆರೋಗ್ಯಕರ ಅಡುಗೆಗಳಲ್ಲಿ ಹೆಸರು ನೀರು, ಕ್ಯಾರೆಟ್ ಜ್ಯೂಸ್, ಬೆರಿಟೊ, ಓಟ್ಸ್ ಲಾಡು ಮುಂತಾದವುಗಳನ್ನು ಮಾಡುತ್ತಾ, ಹಣ್ಣಿನ ಜೊತೆ ಸವಿಯುತ್ತಿದ್ದರು. ಶಿಬಿರದ ಕಡೆಯ ದಿನ ಅವರೇ ಅಡುಗೆ ಮಾಡಿ (fireless cooking) ನಮಗೆ ತಿನಿಸಿದ್ದು ವಿಶೇಷವಾಗಿತ್ತು.
ಓಟ್ಸ್ (Oats) ಲಾಡು
ಸುಲಭವಾಗಿ ಮಾಡಬಹುದಾದ ಮಕ್ಕಳ ಸಿಹಿಯಾದ ಲಾಡು
ಬೇಕಾಗುವ ಸಾಮಾಗ್ರಿ:
ಓಟ್ಸ್ – 1 ಕಪ್, ಕಡ್ಲೆ ಬೀಜ/ಎಳ್ಳು -¼ ಕಪ್, ಬೆಲ್ಲ – ½ ಕಪ್.
ಮಾಡುವ ವಿಧಾನ:
ಓಟ್ಸ್ ಅನ್ನು ಬಾಣಲಿಯಲ್ಲಿ ಹಾಕಿ ಸ್ವಲ್ಪ ಬಿಸಿಮಾಡಬೇಕು ನಂತರ ಕಡ್ಲೆಬೀಜ ಅಥವ ಎಳ್ಳು(ಯಾವುದಾದರು ಒಂದು) ಇದನ್ನು ಉರಿದುಕೊಳ್ಳ ಬೇಕು. ಈಗ ಇದೆರಡರ ಜೊತೆ ಬೆಲ್ಲ ಸೇರಿಸಿ ರುಬ್ಬಬೇಕು. ರುಬ್ಬಿರುವುದನ್ನು ಉಂಡೆ ಕಟ್ಟಿ ತಿನ್ನಲು ಕೊಡಬೇಕು. ಇದನ್ನು 3 ರಿಂದ 4 ದಿನದ ವರೆಗೆ ಕೆಡದಂತೆ ಇಡಬಹುದು.
ಹೆಸರು ನೀರು:
ಬೇಕಾಗುವ ಸಾಮಗ್ರಿ:
ಹೆಸರು ಕಾಳು – 1 ಕಪ್, ಬೆಲ್ಲ – 1 ಕಪ್, ನೀರು – ಬೇಕಾಗುವಷ್ಟು.
ಮಾಡುವ ವಿಧಾನ:
ಹೆಸರು ಕಾಳನ್ನು ಕಂದು ಬಣ್ಣ ಬರುವವರೆಗೆ ಉರಿದುಕೊಳ್ಳ ಬೇಕು. ನಂತರ ಬೆಲ್ಲ ಮತ್ತು ನೀರು ಸೇರಿಸಿ ನುಣ್ಣನೆ ರುಬ್ಬಬೇಕು. ಬೇಕಾಗುವಷ್ಟು ನೀರು ಸೇರಿಸಿ ಕುಡಿಯಲು ಕೊಡಬೇಕು.
ಡಾ. ಅರ್ಚನ ಸಿ.
ಮಹಾನಸ ಹೆಲ್ತೀ ಕಿಚನ್,
ನಂ. 57/1, 2ನೇ ಮುಖ್ಯರಸ್ತೆ, 3ನೇ ಕ್ರಾಸ್, ಎಇಸಿಎಸ್ ಲೇಔಟ್, ಸಂಜಯನಗರ, ಬೆಂಗಳೂರು-94
Mob: +91 9620580101/9844456687
info@mahanasa.com
www. mahanasa.com