ಮಹಿಳಾ ಆರೋಗ್ಯ ಸಮಸ್ಯೆಗಳು ಅಭಿವೃದ್ದಿ ಹೊಂದುತ್ತಿರುವ ಮತ್ತು ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಆತಂಕವಾಗಿದೆ. ಹೀಗಾಗಿ ಇಂತಹ ರೋಗ ಸ್ಥಿತಿಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಸ್ತ್ರೀರೋಗ ಶಾಸ್ತ್ರವು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದ್ದು, ಸಂತಾನೋತ್ಪತ್ತಿ ಸ್ಥಳದ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಮಹಿಳಾ ಆರೋಗ್ಯ ಸಮಸ್ಯೆಗಳು ಅಭಿವೃದ್ದಿ ಹೊಂದುತ್ತಿರುವ ಮತ್ತು ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಆತಂಕವಾಗಿದೆ. ಹೀಗಾಗಿ ಇಂತ ರೋಗ ಸ್ಥಿತಿಗಳ ಬಗ್ಗೆ ಹಾಗೂ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಏಕೆಂದರೆ, ಇಂಥ ರೋಗಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಯಾಗಿದ್ದು, ಇವುಗಳನ್ನು ಪ್ರಾಥಮಿಕ ಆರೋಗ್ಯ ಆರೈಕೆ (ಪಿಎಚ್‍ಸಿ) ಮಟ್ಟದಲ್ಲೇ ನಿಭಾಯಿಸುವುದು ತುಂಬಾ ಮುಖ್ಯ.
ಮಹಿಳೆಯರು ಮತ್ತು ಯುವತಿಯರಲ್ಲಿ ಅಗಾಗ ಕಾಣಿಸಿಕೊಳ್ಳುವ ಸ್ತ್ರೀರೋಗಗಳೆಂದರೆ :
1. ಸರ್ವಿಕಲ್ ಕ್ಯಾನ್ಸರ್ (ಗರ್ಭಕೊರಳಿನ ಕ್ಯಾನ್ಸರ್)
2. ಬ್ರೆಸ್ಟ್ ಕ್ಯಾನ್ಸರ್ (ಸ್ತನ ಕ್ಯಾನ್ಸರ್)
3. ಪಿಸಿಒಎಸ್ (ಪಾಲಿಸಿಸ್ಟಿಕ್ ಒವರಿಯನ್ ಸಿಂಡ್ರೋಮ್)
4. ವಜೈನಲ್ ಇನ್‍ಫೆಕ್ಷನ್ (ಯೋನಿ ಸೋಂಕು)
5. ಅಸಮರ್ಪಕ/ಅಸಾಧಾರಣ ಸ್ರಾವ
6. ಸೆಕ್ಸುಯಲ್ ಟ್ರಾನ್ಸ್‍ಮಿಟೆಡ್ ಡಿಸೀಸಸ್ (ಲೈಂಗಿಕ ಸಂಪರ್ಕದಿಂದ ಹರಡುವ ರೋಗಗಳು)
1.ಸರ್ವಿಕಲ್ ಕ್ಯಾನ್ಸರ್ :
ಪ್ರಾಥಮಿಕವಾಗಿ 45 ರಿಂದ 50 ವರ್ಷಗಳ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಈ ಸರ್ವಿಕಲ್ ಕ್ಯಾನ್ಸರ್ ರೋಗಕ್ಕೆ ಒಳಗಾಗುವ ರೋಗಿಗಳಲ್ಲಿ ಶೇಕಡ 37ರಷ್ಟು ಮಹಿಳೆಯರು 35 ವರ್ಷಗಳ ಒಳಗಿನವರಾಗಿರುತ್ತಾರೆ.
ಕಾರಣೋತ್ಪಾದಕ ಜೀವಿಗಳು : ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್‍ಪಿವಿ), ಹ್ಯೂಮನ್ ಇಮ್ಯೂನೋ ಡಿಫಿಷಿಯನ್ಸಿ ವೈರಸ್ (ಎಚ್‍ಐವಿ), ಹರ್ಪಸ್ ಸಿಂಪ್ಲೆಕ್ಸ್ ವೈರಸ್ ಟೈಪ್ 2
ಸಾಮಾನ್ಯ ಗಂಡಾಂತರ ಅಂಶಗಳು :
1. ನಿಯತ ಆರೋಗ್ಯ ಆರೈಕೆಯ ಕಡಿಮೆ ಸಂಭವನೀಯದೊಂದಿಗೆ ಕೆಳ ಸಾಮಾಜಿಕ-ಆರ್ಥಿಕ ವರ್ಗ
2. ವಯಸ್ಸಿಗೆ ಮುನ್ನವೇ ಲೈಂಗಿಕ ಜೀವನ
3. ಲೈಂಗಿಕ ಸಂಗಾತಿಗಳ ಅಧಿಕ ಸಂಖ್ಯೆ
4. ಅಗಾಗ ಮಕ್ಕಳನ್ನು ಹೆರುವಿಕೆ
5. ಧೂಮಪಾನ ಮತ್ತು ದೀರ್ಘ ಕಾಲ ಗರ್ಭ ನಿರೋಧಕಗಳನ್ನು ಬಳಸುವ ಮಹಿಳೆಯರು
ತಡೆಗಟ್ಟುವ ಕ್ರಮಗಳು :
1.ಅಗಾಗ ಕ್ರಮಬದ್ದ ಸ್ತ್ರೀರೋಗ ಪರೀಕ್ಷೆ
2.ಅವಧಿಗೆ ಮುನ್ನವೇ ವಿವಾಹವಾಗುವುದನ್ನು ತಪ್ಪಿಸುವಿಕೆ
3.ಏಕ ಸಂಗಾತಿ ಜೊತೆ ಸಂಬಂಧ (ಏಕ ಪತಿತ್ವ ಬಾಂಧವ್ಯ)
4.ಸುರಕ್ಷಿತ ಲೈಂಗಿಕ ಅಭ್ಯಾಸಗಳು
5.ಮಕ್ಕಳ ಹೆರುವಿಕೆ ಮಿತಿಗೊಳಿಸುವಿಕೆ
6.ಪ್ಯಾಪ್ ಸಿಮಿಯರ್ ಟೆಸ್ಟ್ (ಒಂದು ವರ್ಷಕ್ಕೊಮ್ಮೆ ಈ ಪರೀಕ್ಷೆ ಮಾಡಿಸಬೇಕು)
7.18 ವರ್ಷಗಳ ವಯಸ್ಸಿಗೆ ಮುನ್ನವೇ ಅಥವಾ ಲೈಂಗಿಕ ಸಂಬಂಧಗಳು ಆರಂಭವಾಗುವ ಹಂತದಿಂದಲೇ ತಪಾಸಣೆಯನ್ನು ಆರಂಭಿಸಬೇಕು.
8.30 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರು ಎಚ್‍ವಿಪಿ ಡಿಯೋಕ್ಸಿಬೊನ್ಯೂಕ್ಲಿಯಿಕ್ ಆಸಿಡ್ ಸ್ಕ್ರೀನಿಂಗ್ ಟೆಸ್ಟ್‍ಗೆ ಒಳಗಾಗಬೇಕು.
2.ಬ್ರೆಸ್ಟ್ ಕ್ಯಾನ್ಸರ್ :
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ತೀರಾ ಸಾಮಾನ್ಯವಾದ ಕ್ಯಾನ್ಸರ್. ಅಲ್ಲದೇ ಇದು 45-55 ವರ್ಷದಲ್ಲಿ ಮಹಿಳೆಯರ ಸಾವಿಗೆ ತೀರಾ ಸಾಮಾನ್ಯವಾದ ಕಾರಣವೂ ಆಗಿದೆ.
ಸಾಮಾನ್ಯ ಗಂಡಾಂತರ ಅಂಶಗಳು :
1. ಋತುಚಕ್ರ ನಿಂತ ನಂತರ ಶೇಕಡ 80ರಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ.
2. ಈ ಹಿಂದೆ ಸ್ತನ ಕ್ಯಾನ್ಸರ್‍ನಿಂದ ಚಿಕಿತ್ಸೆ ಪಡೆದ ಮಹಿಳೆಯರಲ್ಲಿ ಇನ್ನೊಂದು ಸ್ತನಕ್ಕೆ ಕ್ಯಾನ್ಸರ್ ಬರುವ ಸಾಧ್ಯತೆ ಎರಡು ಪಟ್ಟು ಅಧಿಕವಾಗಿರುತ್ತದೆ.
3. ಅನುವಂಶೀಯ ಅಂಶಗಳು.
ತಡೆಗಟ್ಟುವ ಕ್ರಮಗಳು :
1. ಮ್ಯಾಮ್ಮೊಗ್ರಫಿ (ಸ್ತನದ ಎಕ್ಸ್-ರೇ ಇಮೇಜ್, 40 ವರ್ಷಗಳ ನಂತರ ಇದನ್ನು ಆರಂಭಿಸಬೇಕು)
2. 20-40 ವರ್ಷಗಳ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ನಿಯತವಾಗಿ ಆರೋಗ್ಯ ಪರೀಕ್ಷೆಯ ಒಂದು ಭಾಗವಾಗಿ ಕ್ಲಿನಿಕಲ್ ಸ್ತನ ಪರೀಕ್ಷೆ ಮಾಡಿಸಿಸಬೇಕು. ನಂತರ ಪ್ರತಿ ವರ್ಷ ತಪಾಸಣೆಗೆ ಒಳಗಾಗಬೇಕು.
3. ಸ್ತನ ಸ್ವಯಂ ತಪಾಸಣೆ. ಇದನ್ನು 20 ವರ್ಷ ವಯಸ್ಸಿನಲ್ಲಿ ಆರಂಭಿಸಬೇಕು.
3. ವಜೀನಲ್ ಇನ್‍ಫೆಕ್ಷನ್ :
ಈ ರೀತಿಯ ಯೋನಿ ಸೋಂಕಿಗೆ ಹಲವಾರು ಕಾರಣಗಳಿವೆ. ಸ್ಟ್ರೆಪ್ಟೊಕೊಕ್ಕಸ್, ಸ್ಟಫಿಲೋಕೊಕ್ಕಸ್, ಎಶ್ಚೆರಿಯಾ ಕೊಲಿ, ನೀಸ್ಸೆರಿಯಾಗೊನೋರಿಯಾ, ಚ್ಲಾಮಿಡಿಯಾ ಟ್ರಾಕೋಮಟಿಸ್, ಟ್ರಿಚೋಮಸ್ ವಜೀನಲಿಸ್, ಮೈಕೊಪ್ಲಾಸ್ಮಾ ಹೊಮಿನಿಸ್, ಎಚ್‍ಪಿವಿ, ಮತ್ತು ಸೈಟೊಮೆಗಲೊವೈರಸ್‍ನಿಂದ ವಜೀನಲ್ ಇನ್‍ಫೆಕ್ಷನ್ ಉಂಟಾಗುತ್ತದೆ.
ಸಾಮಾನ್ಯ ಗಂಡಾಂತರ ಅಂಶಗಳು :
1. ಜೆನಿಟಲ್ ಟುಮರ್ಸ್ (ವಂಶವಾಹಿ ಗೆಡ್ಡೆಗಳು)
2. ಹಾರ್ಮೋನು ಬದಲಾವಣೆಗಳು
3. ದುರ್ಬಲ ವೈಯಕ್ತಿಕ ಶುಚಿತ್ವ
ತಡೆಗಟ್ಟುವ ಕ್ರಮಗಳು :
1. ಜೆನಿಟಲಿಯಾವನ್ನು (ಜನನಾಂಗ) ಮೃದು ಸೋಪಿನಿಂದ (ಅಂಟಿಸೆಪ್ಟಿಕ್ ಅಲ್ಲ) ದಿನವೂ ಸ್ವಚ್ಚಗೊಳಿಸಬೇಕು.
2. ಪ್ರತಿ ವಿಸರ್ಜನೆ ನಂತರ ಜನನಾಂಗ ಸ್ಥಳವನ್ನು ಚೆನ್ನಾಗಿ ಸ್ವಚ್ಚಗೊಳಿಸಿ ಒಣಗಿಸಬೇಕು.
3. ಸೋಂಕು ಇರುವ ಲೈಂಗಿಕ ಸಂಗಾತಿ ಜೊತೆ ಲೈಂಗಿಕ ಕ್ರಿಯೆಯನ್ನು ತಪ್ಪಿಸಬೇಕು.
4. ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು ಅಥವಾ ಒಬ್ಬ ಸಂಗಾತಿಯನ್ನು ಹೊಂದಬೇಕು.
5. ಸಂಗಾತಿಯು ಕಾಂಡೋಮ್ ಉಪಯೋಗಿಸಬಹುದು.
6. ಋತುಸ್ರಾವವ ವೇಳೆ ಸ್ರಾವದ ಆಧಾರದ ಮೇಲೆ ದಿನಕ್ಕೆ ಕನಿಷ್ಟ ಮೂರು ಬಾರಿ ಪ್ಯಾಡ್‍ನನ್ನು ಬದಲಿಸಬೇಕು.
7. ಕಾಟನ್ ಅಂಡರ್‍ವೇರ್ ಧರಿಸಬೇಕು ಹಾಗೂ ಜನನಾಂಗ ಸ್ಥಳದಲ್ಲಿ ಬಿಗಿಯಾದ ಉಡುಪು ಧರಿಸಬಾರದು.
8. ಡಿಯೋಡರೆಂಟ್ ಸೋಪ್‍ಗಳು, ಪೌಡರ್ ಮತ್ತು ಪಫ್ರ್ಯೂಮ್ ಸ್ಪ್ರೆ ಬಳಸಬಾರದು.
9. ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು ಹಾಗೂ ಉತ್ತಮ ರೀತಿಯಲ್ಲಿ ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.
4.ಪಿಸಿಒಎಸ್ (ಪಾಲಿಸಿಸ್ಟಕ್ ಒವರಿಯನ್ ಸಿಂಡ್ರೋಮ್) :
ಪಿಸಿಒಎಸ್ (ಪಾಲಿಸಿಸ್ಟಕ್ ಒವರಿಯನ್ ಸಿಂಡ್ರೋಮ್) ಮಕ್ಕಳನ್ನು ಹೆರುವ ವರ್ಷದಲ್ಲಿ ಮಹಿಳೆಯರಲ್ಲಿ ಕಂಡುಬರುವ ತೀರಾ ಸಾಮಾನ್ಯವಾದ ಸಂತಾನೋತ್ಪತ್ತಿ ಮತ್ತು ಚಯಾಪಚಯಾ ದೋಷವಾಗಿದೆ.
ಸಂಬಂಧಪಟ್ಟ ಅಂಶಗಳು :
1. ಸ್ಥೂಲಕಾಯ, ಬೊಜ್ಜು
2. ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟ ಹೆಚ್ಚಳ
3. ಇನ್ಸುಲಿನ್ ಪ್ರತಿರೋಧಕ ಮತ್ತು ಟೈಪ್ 2 ಡಯಾಬಿಟಿಸ್
4. ಪೂರ್ವಾವಧಿ ಋತುಸ್ರಾವ
5. ಬಂಜೆತನ
6. ಅಸಾಧಾರಣ ಗರ್ಭಧಾರಣೆಗಳು
ತಡೆಗಟ್ಟುವ ಕ್ರಮಗಳು :
1. ಇಡೀ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿರುವಂಥ ಫೈಬರ್‍ಯುಕ್ತ ಆಹಾರವನ್ನು ಸೇವಿಸಬೇಕು.
2. ಸಾಕಷ್ಟು ನೀರು ಹಾಗೂ ಎಳನೀರಿನಂಥ ನೈಸರ್ಗಿಕ ಹಣ್ಣಿನ ರಸಗಳನ್ನು ಕುಡಿಯಬೇಕು.
3. ಋತುಸ್ರಾವವನ್ನು ಕ್ರಮಬದ್ದಗೊಳಿಸಲು ನೈಸರ್ಗಿಕ ಆಹಾರ ಸೇವಿಸಿ.
4. ವಾಕಿಂಗ್, ರನ್ನಿಂಗ್, ಸ್ವಿಮ್ಮಿಂಗ್, ಜಾಗಿಂಗ್ ಮತ್ತು ಯೋಗದಂತಹ ದೈಹಿಕ ವ್ಯಾಯಾಮಗಳನ್ನು ನಿಯತವಾಗಿ ಮಾಡಬೇಕು.
5. ರೋಗ ನಿರ್ಧಾರ ಪರೀಕ್ಷೆ ಮಾಡಿಸಿ ಹಾರ್ಮೋನ್ ಮಟ್ಟವನ್ನು ಸರಿಪಡಿಸಬೇಕು
5. ಅಸಾಧಾರಣ ಸ್ರಾವ :
ಸಾಮಾನ್ಯ ಋತುಸ್ರಾವವಲ್ಲದ, ಗರ್ಭಕೋಶದಿಂದ ಆಗುವ ಯಾವುದೇ ಸ್ರಾವವನ್ನು ಅಸಾಧಾರಣ ಸ್ರಾವ ಎನ್ನುವರು.
ಸಾಮಾನ್ಯ ಗಂಡಾಂತರ ಅಂಶಗಳು :
1. ಸಂವೇದನೆಯ ಸಾಮಥ್ರ್ಯದಿಂದಾಗಿ ಮಾನಸಿಕ ಅಂಶಗಳು
2. ದೈಹಿಕವಾಗಿ ದುರ್ಬಲ ಮಹಿಳೆಯರು (ರಕ್ತ ಹೀನತೆ, ಡಯಾಬಿಟಿಸ್, ಕ್ಷಯದಂಥ ರೋಗದಿಂದ ನರಳುತ್ತಿರುವವರು)
3. ಹಾರ್ಮೋನು ಅಸಮತೋಲನ
ತಡೆಗಟ್ಟುವ ಕ್ರಮಗಳು :
1. ಆರೋಗ್ಯಕರ ತೂಕವನ್ನು ನಿರ್ವಹಣೆ ಮಾಡಿ (ಅತಿಯಾದ ಮತ್ತು ಕಡಿಮೆ ತೂಕವನ್ನು ತಪ್ಪಿಸಿ)
2. ಸರಳ ಮಾಂಸಖಂಡ ವಿಶ್ರಾಂತಿ ವ್ಯಾಯಾಮ ಹಾಗೂ ಪ್ರೊಗ್ರೆಸ್ಸಿವ್ ಮಸಲ್ ರಿಲ್ಯಾಕ್ಸೆಷನ್ ವ್ಯಾಯಾಮದಂಥ ವಿಶ್ರಾಂತಿ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
3. ಸೂಚಿಸಿದಂತೆ ಅಥವಾ ಕ್ರಮಬದ್ದವಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸಿ (ಅನ್ವಯಿಸಿದರೆ).
6. ಲೈಂಗಿಕವಾಗಿ ಹರಡುವ ರೋಗಗಳು :
ಲೈಂಗಿಕವಾಗಿ ಹರಡುವ ರೋಗಗಳು (ಎಸ್‍ಟಿಡಿಗಳು) ಸೋಂಕುಗಳಾಗಿದ್ದು, ಲೈಂಗಿಕ ಸಂಪರ್ಕದ ಮೂಲಕ ಹರಡುತ್ತವೆ. ಯಾರೇ ಆಗಲಿ ಇನ್ನೊಂದು ವ್ಯಕ್ತಿಯ ಜೊತೆ ಯೋನಿ, ಬಾಯಿ ಅಥವಾ ಗುದ ಲೈಂಗಿಕ ಕ್ರಿಯೆ ನಡೆಸಿದರೆ ಅವರಿಗೆ ಒಂದು ಅಥವಾ ಅದಕ್ಕಿಂತ ಹೆಚ್ಚು ಎಸ್‍ಟಿಡಿಗಳು ಬರುವ ಸಾಧ್ಯತೆ ಇರುತ್ತದೆ. ಇವುಗಳು ಬ್ಯಾಕ್ಟೀರಿಯಾ ಅಥವಾ ವೈರಸ್‍ನಿಂದ ಉಂಟಾಗುತ್ತವೆ.
ಸಾಮಾನ್ಯ ಗಂಡಾಂತರ ಅಂಶಗಳು :
1. 20 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು
2. ತಡೆಗಟ್ಟುವ ಗರ್ಭನಿರೋಧಕಗಳನ್ನು ಬಳಸಲು ವಿಫಲರಾದವರು
3. ಲೈಂಗಿಕವಾಗಿ ಸಕ್ರಿಯರಾದವರು.
4. ಸಲಿಂಗ ಕಾಮಿಗಳು
5. ಚುಚ್ಚುಮದ್ದಿನ ಮೂಲಕ ಮಾದಕ ವಸ್ತುಗಳನ್ನು ಬಳಸುವವರು
6. ಸಾಮಾಜಿಕವಾಗಿ ಪದಚ್ಯುತಗೊಂಡಿರುವವರು
7. ವಾಣಿಜ್ಯ ಲೈಂಗಿಕ ಕಾರ್ಯಕರ್ತರು
8. ಎಸ್‍ಟಿಡಿಗಳಿಗೆ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಸಾಧ್ಯವಾಗದವರು
9. ಎಸ್‍ಟಿಡಿಗಳೊಂದಿಗೆ ರೋಗ ನಿರ್ಧಾರವಾದ ಲೈಂಗಿಕ ಸಂಗಾತಿ
ಎಸ್‍ಟಿಡಿಗಳ ಎಚ್ಚರಿಕೆ ಚಿಹ್ನೆಗಳು :
1. ಯಾವುದೇ ರೀತಿಯ ತೆರೆದ ಹುಣ್ಣುಗಳು, ವ್ರಣಗಳು, ಕೆಂಪು ಅಥವಾ ಬಿಳಿ ಬಾವು ಅಥವಾ ದದ್ದುಗಳು, ಗುಳ್ಳೆಗಳು ಅಥವಾ ದ್ರವ ತುಂಬಿದ ಬೊಕ್ಕೆಗಳು.
2. ಜನನಾಂಗ ಸ್ಥಳದಲ್ಲಿ ಕೆಂಪಾಗುವಿಕೆ ಅಥವಾ ಊದಿಕೊಳ್ಳುವಿಕೆ
3. ಯೋನಿ ಸ್ರಾವ ಪ್ರಮಾಣ, ಬಣ್ಣ, ವಾಸನೆ ಅಥವಾ ಸಾಂದ್ರತೆಯಲ್ಲಿ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆ
4. ತಲೆ ಸುತ್ತುವಿಕೆ ಅಥವಾ ವಾಂತಿ ಸಹಿತ ಅಥವಾ ರಹಿತವಾಗಿ, ಪಿತ್ತಾಶಯ ಅಥವಾ ಹೊಟ್ಟೆಯಲ್ಲಿ ನೋವು
5. ಲೈಂಗಿಕ ಕ್ರಿಯೆ ವೇಳೆ ನೋವು, ವ್ರಣವಾಗುವಿಕೆ, ಉರಿ ಅಥವಾ ಇತರ ಅನಾನುಕೂಲ ಅಥವಾ ಸಂಭೋಗದ ನಂತರ ಸ್ರಾವ
6. ಜ್ವರ, ಹಸಿವು ಇಲ್ಲದಿರುವಿಕೆ, ಖಿನ್ನತೆ, ಕ್ಷೋಭೆ ಅಥವಾ ತೊಡೆ ಸಂಧಿ ಅಥವಾ ಕುತ್ತಿಗೆಯಲ್ಲಿ ಲಿಂಫ್ ನೋಡ್ಸ್‍ಗಳ ಊತ
7. ಅಸಾಧಾರಣ, ತೀವ್ರ ಋತುಸ್ರಾವ ಸೆಳೆತ
8. ಶಿಲೀಂಧ್ರ ಸೋಂಕುಗಳು ಅಥವಾ ಇತರ ಸೋಂಕುಗಳು ಮರುಕಳಿಸುವಿಕೆ
ತಡೆಗಟ್ಟುವ ಕ್ರಮಗಳು :
1. ಏಕ ವ್ಯಕ್ತಿ ಜೊತೆ ಸಂಬಂಧ (ಏಕಪತಿತ್ವ)
2. ಚುಚ್ಚುಮದ್ದನ್ನು ಪಡೆಯುವಿಕೆ (ಎಚ್‍ಪಿವಿ, ಹೆಪಾಟಿಟಿಸ್ ಎ ಮತ್ತು ಬಿ)
3. ಕಾಂಡೋಮ್ ಧರಿಸುವಂತೆ ಪುರುಷ ಸಂಗಾತಿ ಒತ್ತಾಯಿಸುವಿಕೆ
4. ಅನುಷಂಗಿಕ ಲೈಂಗಿಕ ಕ್ರಿಯೆ ತಪ್ಪಿಸುವಿಕೆ
5. ಸೋಂಕು ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆ ತಪ್ಪಿಸುವಿಕೆ.
ಪದ್ಮ ಪ್ರಿಯ. ಎಸ್.-ಪ್ರೊಫೆಸರ್
ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066,
ಫೋನ್ : +91-80-49069000, +91-80-28413382, +91-80-28410871/2/3/4
ಮೊ: 9481247652