ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ಕೋವಿಡ್-19 ತಡೆಯಿರಿ

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ ನಾವು ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಂತೆಯೇ ಕೋವಿಡ್-19  ಸೊಂಕಿನಿಂದ ಪಾರಾಗಬಹುದಾಗಿದೆ. 

Food-that-boosts-immunityಕೋವಿಡ್- 19 ತನ್ನ ಗ್ರಹಣಾಂಗಗಳನ್ನು ಅಪಾಯಕಾರಿಯಾಗಿ ಹರಡಿದೆ ಮತ್ತು ಅದನ್ನು ಎದುರಿಸಲು ಇಲ್ಲಿಯವರೆಗೆ ಯಾವುದೇ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಸ್ವಯಂ ಪ್ರತ್ಯೇಕತೆಯಿಂದ ಹಾಗೂ ಸಂಪರ್ಕ ತಡೆಯಿಂದ ಈ ವ್ವೆರಸ್ ಎದುರಿಸಲು ಸಾಧ್ಯವಾಗುತ್ತದೆ. ವಯಸ್ಸಾದವರು ಮತ್ತು ಮೊದಲೇ ವೈರಸ್ಸಿಗೆ ತುತ್ತಾದವರ ಬಳಿಯಲ್ಲಿ ಹಾಗೂ ನಮ್ಮ ಬಳಿಯಲ್ಲಿಯೂ ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವಕಾರಣ, ಹಲವಾರು ಮಂದಿ ಈ ಕೋವಿಡ್– 19 ಗೆ ತುತ್ತಾಗುವ ಸಾಧ್ಯತೆ ಇದೆ. ಈ ಸೋಂಕಿನ ವಿರುದ್ಧ ಹೋರಾಡಲು ಹಾಗೂ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿರುವ ಅಹಾರವನ್ನು ಆಂತರಿಕವಾಗಿ ನೋಡುವ ಸಮಯ ಬಂದಿದೆ.
ಕೆಲವು ಗಿಡ ಮೂಲಿಕೆಗಳು ಹಾಗೂ ವಿಟಮಿನ್“ಸಿ” ಮತ್ತು“ ಇ”ಇರುವ ಪದಾರ್ಥಗಳನ್ನು ಸೇವಿಸುವುದರ ಮೂಲಕ ರೋಗ ನಿರೋಧಕ ಶಕಿಯನ್ನು ಹೆಚ್ಚಿಸಬಹುದೆಂದು ಸಮಯ ಹಾಗೂ ಸಂಶೋಧನೆಗಳ ಮುಖಾಂತರ ಸಾಭೀತಾಗಿದೆ. ಅತ್ಯುತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಕೆಲವು, “ದೈನಂದಿನ” ಆಹಾರ ಸೇವಿಸಿದರೆ ನಮ್ಮ ದೇಹದಲ್ಲಿರುವ ರೋಗನಿರೋಧಕಶಕ್ತಿ ಹೆಚ್ಚುವುದರಿಂದ ನಾವು ನಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಅಂತೆಯೇ ಈ ಸೊಂಕಿನಿಂದ ಪಾರಾಗಬಹುದಾಗಿದೆ.

  • ವಯಸ್ಸಾದವರು ತಮ್ಮಆಹಾರದಲ್ಲಿ ಬೀಟಾಕ್ಯಾರೊಟಿನ್, ವಿಟಮಿನ್ ಸಿ. ಇ, ಹೊಂದಿರುವ ಪದಾರ್ಥಗಳನ್ನು ಸೇವಿಸಿದರೆ ಇದು  ಈ ಸೋಂಕಿನಿಂದ ರಕ್ಷಿಸುತ್ತದೆ. ಪಾಲಾಕ್, ಕ್ಯಾರೆಟ್, ಬಟಾಣಿ, ಕೋಸು, ಕೆಂಪು ಮತ್ತು ಹಳದಿ ದೊಡ್ಡ ಮೆಣಸಿನ ಕಾಯಿ, ಕಡು ಎಲೆಗಳ ಸೊಪ್ಪಿನಂತಹ ಆಹಾರಗಳಲ್ಲಿ ಬೀಟಾಕ್ಯಾರೊಟಿನ ಹಾಗೂ ವಿಟಮಿನ್ ಸಿ.ಇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುತ್ತದೆ.
  • ಹೈಡ್ರೀಕರಿಸಿದಂತೆ ಇರುವುದು: ಪ್ರತಿದಿನ 8-10 ಗ್ಲಾಸ್ ನೀರನ್ನು ಸೇವಿಸಿರಿ, ಹಸಿರು ಚಹ, ಎಳನೀರು ಮತ್ತು ಮನೆಯಲ್ಲಿತಯಾರಿಸುವ ಹಣ್ಣಿನ ರಸಗಳಲ್ಲಿ ಕೂಡ ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಹತ್ವವನ್ನು ಹೊಂದಿದೆ.
  • ವಿಟಮಿನ್‘ಸಿ’ಯಲ್ಲಿ ಸಮೃದ್ಧವಾಗಿರುವ ಆಹಾರಗಳು : ರೋಗನಿರೋಧಕ ಶಕ್ತಿಯನ್ನು ನಮ್ಮಲ್ಲಿ ಹೆಚ್ಚಿಸುವುದು ವಿಟಮಿನ್‘ಸಿ’ಎಂದು ಹಲವಾರು ಸಂಶೋಧನೆಗಳಿಂದ ಸಾಭೀತಾಗಿದೆ. ಈ ವಿಟಮಿನ್‘ಸಿ’, ಮಕ್ಕಳು, ವಯಸ್ಕರು, ವಯಸ್ಸಾದವರು ಎಲ್ಲರಲ್ಲಿಯೂ ಮುಖ್ಯವಾಗಿ ಇರಬೇಕಾದ ಒಂದು ಅಂಶವಾಗಿದೆ. ಕಿತ್ತಳೆ, ಪರಂಗಿ, ಕಿವಿಹಣ್ಣು ಪೇರಲ ಈ ಹಣ್ಣುಗಳಲ್ಲಿ ಹಾಗೂ ಹಲವಾರು ಹಣ್ಣುಗಳಲ್ಲಿ ವಿಟಮಿನ್‘ಸಿ’ ಹೆಚ್ಚಾಗಿರುತ್ತದೆ. ತರಕಾರಿಗಳಾದ ಬಿಳಿಬದನೆ, ದೊಣ್ಣೆಮೆಣಸು, ಕ್ಯಾಪ್ಸಿಕಂ, ಬೆಲ್ ಪೆಪ್ಪರ್, ಬೀಟ್ರೋಟ್,ಪಾಲಾಕ್ ಮತ್ತು ಹೂಕೋಸು ಇವುಗಳಲ್ಲಿ ವಿಟಮಿನ್‘ಸಿ’ ಹೆಚ್ಚಾಗಿರುತ್ತದೆ.
  • ಅರಶಿನವು ಕ್ಯಾನ್ಸರ್ ವಿರೋದಿ ಉರಿಯೂತದ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿವೆ ಎಂದು ಗುರುತಿಸಲ್ಪಟ್ಟಿದೆ. ಕಪ್ಪು ಮೆಣಸು ಮತ್ತು ಜೇನುತುಪ್ಪವನ್ನು ತುಳಸಿ ಎಲೆಯೊಂದಿಗೆ ಸೇವಿಸಿದರೆ ಸೋಂಕುಗಳ ವಿರುದ್ಧ ನಾವು ಬಲಿಷ್ಟರಾಗಿ ಹೋರಾಡಬಹುದು ಹಾಗೂ ಸೋಂಕನ್ನು ತಡೆಯಬಹುದೆಂದು ಹಲವಾರು ಸಂಶೋಧನೆಯಿಂದ ಸಾಭೀತಾಗಿದೆ.
  • ವಿಟಮಿನ್’ಇ’ಯಲ್ಲಿ ಸಮೃದ್ಧವಾಗಿರುವ ಆಹಾರಗಳು : ಹಲವಾರು ಸಂಶೋಧನೆಗಳಲ್ಲಿ ತಿಳಿದ ಪ್ರಕಾರ ವಿಟಮಿನ್’ಸಿ’ ನಮಗೆ ಎಷ್ಟು ಉಪಯೋಗವೋ ಅದೇರೀತಿಯಲ್ಲಿ ವಿಟಮಿನ್’ಇ’ಕೂಡತುಂಬಾ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಇದು ನಮ್ಮನ್ನು ಹಲವಾರು ಬ್ಯಾಕ್ಟೀರಿಯ ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ನೆನೆಸಿದ ಬಾದಾಮಿ, ಕಡಲೆಕಾಯಿ, ಬೆಣ್ಣೆ, ಸೂರ್ಯಕಾಂತಿ ಬೀಜಗಳು ಮತ್ತು ಹ್ಯೆಜೆಲ್ ನಟ್ ಇದನ್ನು ದಿನಾಲು ಸೇವಿಸಿದರೂ ಹೆಚ್ಚು ವಿಟಮಿನ್‘ಸಿ’ ನಮ್ಮ ದೇಹಕ್ಕೆ ದೊರೆಯುತ್ತದೆ.

ಈ ಸೋಂಕಿನ ಸಮಯದಲ್ಲಿ ಹೊರಗಡೆ ಇರುವುದರಿಂದ ಹಾಗೂ ಹೋಗುವುದರಿಂದ ನೀವು ಈ ರೋಗಕ್ಕೆ ತುತ್ತಾಗಬಹುದು. ಮನೆಯಲ್ಲೇ ಇದ್ದು ಈ ಮೇಲಿನ ಆಹಾರಗಳನ್ನು ಸೇವಿಸಿ ಹಾಗೂ ಕೆಲಕಾಲ ವ್ಯಾಯಾಮ, ಧ್ಯಾನ ಮಾಡುವುದರಿಂದ ಮನೆಯಲ್ಲಿಯೇ ಲಾಕ್‍ಡೌನ್ ಅಡಿಯಲ್ಲಿರುವ ನಿಮ್ಮ ಮನಸ್ಸು, ದೇಹ ಹಾಗೂ ಆತ್ಮದ ಮೇಲೆ ಯಾವುದೇ ಒತ್ತಡ ಬಾರದಂತೆ ತಡೆಯಬಹುದಾಗಿದೆ.

ಡಾ. ಅಂಜು ಮಜೀದ್ ಸಮಿ ಸಬಿನ್ಸಾ(ನೇರ)ಸಮೂಹದ ನಿರ್ದೇಶಕರು ಮತ್ತು ಹಿರಿಯ ವಿಜ್ಞಾನಿ

-ಡಾ. ಅಂಜು ಮಜೀದ್
ಸಮಿ ಸಬಿನ್ಸಾ(ನೇರ)ಸಮೂಹದ ನಿರ್ದೇಶಕರು ಮತ್ತು ಹಿರಿಯ ವಿಜ್ಞಾನಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!