ಪೌಷ್ಠಿಕ ಆಹಾರವನ್ನೇ ಏಕೆ ತಿನ್ನಬೇಕು?

ಪೌಷ್ಠಿಕ ಆಹಾರವನ್ನೇ ಏಕೆ ತಿನ್ನಬೇಕು?ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ ಅನುಗುಣವಾಗಿ, ಗೊತ್ತುಪಡಿಸಿದ ಹಾಗೂ ತೆಗೆದುಕೊಳ್ಳುವ ಆಹಾರವೇ ಪೌಷ್ಟಿಕತೆ. ಸದ್ಯದ ಹಾಗೂ ಮುಂದಿನ ತಲೆಮಾರುಗಳ ಉಳಿವು, ಆರೋಗ್ಯ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಮುಖ್ಯ ವಿಷಯ ಇದು. ತಮ್ಮ ತೂಕ ಕಡಿಮೆ ಮಾಡಿಕೊಳ್ಳುವವರು ಅಥವಾ ದೇಹದ ಆಕಾರ ಮತ್ತ್ತು ಪಡೆಯ ಬಯಸುವ ಜನ ಮಾತ್ರ ಸರಿಯಾಗಿ ತಿನ್ನಬೇಕು ಎಂಬುದು ಸರಿಯಲ್ಲ. ಕಾಹಿಲೆಗಳನ್ನು ದೂರ ಇಟ್ಟು ಆರೋಗ್ಯಕರ ದೇಹ ಹೊಂದಲು, ಪ್ರತಿಯೊಬ್ಬರ ಜೀವನ ಶೈಲಿಯಲ್ಲೇ ಇದು ಒಳಹೊಕ್ಕಬೇಕು. ನೀವು ಏನನ್ನು ತಿನ್ನುತ್ತಿರೋ ಅದೇ ನೀವು.
ಉತ್ತಮ ಪೌಷ್ಠಿಕ ಆಹಾರ ಹಾಗೂ ನಿತ್ಯ ಶಾರೀರಿಕ ಚಟುವಟಕೆಗಳ ಜೊತೆಗಾರಿಕೆಯೇ, ಉತ್ತಮ ಆರೋಗ್ಯದ ಆಧಾರ ಸ್ತಂಭ. ಆರೋಗ್ಯವಂತ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ಸಾಕಷ್ಟು ಪೌಷ್ಠಿಕತೆ ಹೊಂದಿರುವ ಜನ ಹೆಚ್ಚು ಉತ್ಪಾದಕತೆ ಹೊಂದಿರುತ್ತಾರೆ. ಒಳ್ಳೆಯ ಪೌಷ್ಠಿಕತೆ ಇರದಿದ್ದರೆ, ರೋಗನಿರೋಧಕ ಶಕ್ತಿ ಕಡಿಮೆಯಾಗಿ, ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿ, ಶಾರಿರಿಕ ಹಾಗೂ ಮಾನಸಿಕ ಅಭಿವೃದ್ಧಿ ಕುಂಠಿತವಾಗಿ, ಉತ್ವಾದಕತೆ ಕಡಿಮೆಯಾಗುತ್ತದೆ. ಒಳ್ಳೆಯ ಪೌಷ್ಠಿಕತೆ ಆರೋಗ್ಯವಂತ ವ್ಯಕ್ತಿಗಳನ್ನು ಸಿದ್ಧ ಮಾಡುತ್ತದೆ. ಇದು ಕ್ರಮೇಣ ಆರೋಗ್ಯವಂತ ದೇಶ ಸೃಷ್ಟಿಸುತ್ತದೆ. ಸಮತೋಲ ಆಹಾರವೆಂದರೆ ವಿಶೇಷ ಪೌಷ್ಠಿಕತೆ ಹೊಂದಿರುತ್ತದೆ. ಅವು ಸಸಾರಜನಕ, ಪಿಷ್ಠ, ಕೊಬ್ಬು, ಜೀವಸತ್ವಗಳು, ಖನಿಜಗಳು ಹಾಗೂ ನೀರು. ಇವೆಲ್ಲ ಜೀವಿಸಲು ಅತ್ಯಾವಶ್ಯಕ. ದೇಹದ ಬೆಳವಣಿಗೆ, ದೈಹಿಕ ಕ್ರಿಯೆಗಳು ಹಾಗೂ ಜೀವಕೋಶಗಳ ದುರಸ್ತಿಗೆ ಪೌಷ್ಠಿಕತೆ ಬೇಕೇ ಬೇಕು.
ಕೃತಕ ಸಿಹಿ ನೀಡುವ ವಸ್ತುಗಳು, ಸಕ್ಕರೆ, ಕೆಫಿನ್ ಹಾಗೂ ರುಚಿ-ಪರಿಮಳಗಳು ಯಾವ ಪೌಷ್ಠಿಕ ಅಂಶಗಳನ್ನೂ ಹೊಂದಿರದೇ ದೇಹಕ್ಕೆ ಕೆಡುಕು ಮಾಡಬಲ್ಲವು ಕಚ್ಛಾ ರಸಗಳಲ್ಲಿರುವ ಕೇಂದ್ರೀಕೃತ ಜೀವಸತ್ವಗಳು, ಖನಿಜಗಳು, ಸಕ್ಕರೆ ಹಾಗೂ ಸಸಾರಜನಕಗಳು, ರಕ್ತಪ್ರವಾಹದಲ್ಲಿ ಬೇಗ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಜೀರ್ಣಾಂಗ ವ್ಯವಸ್ಥೆ ಮೇಲೆ ಹೆಚ್ಚಿನ ಭಾರ ಹಾಕುವುದಿಲ್ಲ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಅಥವಾ ಸುಣ್ಣದಂಶ ಅವಶ್ಯ. ಕ್ಯಾಲ್ಸಿಯಂನಿಂದ ಶ್ರೀಮಂತವಾಗಿರುವ ಆಹಾರ ಪದಾರ್ಥಗಳು- ಹಾಲು ಹಾಗೂ ಹಾಲಿನ ಉತ್ಪನ್ನಗಳು, ಹಸಿರು ಸೊಪ್ಪುಗಳು, ಹಾಗೂ ಮೊಟ್ಟೆ .

ಪೌಷ್ಠಿಕತೆಗಾಗಿ ಕಿವಿ ಮಾತುಗಳು:

  1. ಟಾನಿಕ್ ಅಥವಾ ಶಕ್ತಿವರ್ಧಕ ಮಾತ್ರೆಗಳ ಬೆನ್ನು ಹತ್ತದೇ ತಾಜಾ ಆಹಾರ ತಿನ್ನಿ.
  2. ಸಂಸ್ಕರಿಸಿದ ಆಹಾರ ತ್ಯಜಿಸಿ. ಸಾಧ್ಯವಾದಗಲೆಲ್ಲ ಕಚ್ಚಾ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಿ.
  3. ತರಕಾರಿ ಬೇಯಿಸಲು ಕಡಿಮೆ ನೀರು ಬಳಸಿ.ಬಿಸಿಮಾಡಿದಾಗ, ಕುದಿಸಿದ ನೀರಿನಿಂದ ಬಹಳಷ್ಟು ಪೌಷ್ಠಿಕಾಂಶಗಳು ನಾಶವಾಗುತ್ತವೆ.
  4. ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವಾಗ, ಸಾಧ್ಯವಾದಷ್ಟೂ ಸಿಪ್ಪೆಗಳೊಂದಿಗೇ ತಿನ್ನಿ. ಆದರೆ ನೆಲದಲ್ಲಿ ಮಣ್ಣಿನಲ್ಲಿಯ ವೊಷಾಂಶಗಳನ್ನು ಹೀರಿಕೊಳ್ಳುವ ಗಜ್ಜರಿಯ ಸಿಪ್ಪೆ ಮಾತ್ರ ತೆಗೆದುಹಾಕಿ, ಒಳಗಿನ ಗಜ್ಜರಿ ತಿನ್ನಿ.
  5. ಯಾವ ಯಾವುದೇ ಬಚ್ಚಲನೀರು, ಕೊಳಚೆ ನೀರಿನಲ್ಲಿ ಬೆಳೆದಿರಬಹುದಾದ, ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕದ ಅಂಶ ಹೊಂದಿರಬಹುದಾದ, ತರಕಾರಿ ಹಣ್ಣುಗಳನ್ನು ಚೆನ್ನಾಗಿ ತೊಳೆಯದೇ ಬಳಸಬಾರದು. ಬಿಸಿ ನೀರಿಗೆ ಉಪ್ಪು ಹಾಕಿ, ಅವುಗಳಲ್ಲಿ ಈ ತರಕಾರಿ -ಹಣ್ಣು ಹಾಕಿ ಚೆನ್ನಾಗಿ ತೊಳೆಯಿರಿ.
  6. ಯಾವುದೇ ಕಾರಣಕ್ಕೆ ತರಕಾರಿ ಅಥವಾ ಸೊಪ್ಪುಗಳನ್ನು ಹಚ್ಚಿದ ಮೇಲೆ ತೊಳೆಯಬೇಡಿ. ತೊಳೆದೇ ಹಚ್ಚಬೇಕು. ತಿನ್ನುವಾಗ ಮಾತ್ರ ಹಣ್ಣು ತರಕಾರಿಗಳನ್ನು ತೊಳೆದು ಕತ್ತರಿಸಿ ಬಳಸಬೇಕು. ಸುಮ್ಮನೇ ಇವುಗಳನ್ನು ನೀರಿನಲ್ಲಿ ನೆನಸಿಡಬೇಡಿ, ಕತ್ತರಿಸಿ ಇಡಬೇಡಿ.
  7. ಮನೆಯಲ್ಲೇ ಮಾಡಿದ ಸಾಂಪ್ರದಾಯಿಕ ಅಡುಗೆ ಆಹಾರ ಪದಾರ್ಥಗಳಿಗೆ ಪ್ರಾಶಸ್ತ್ಯ ಕೊಡಿ.
  8. ತ್ವರಿತ ಆಹಾರ (ಫಾಸ್ಟ್ ಫುಡ್)ಬೇಡ. ಕುರುಕಲು ಪದಾರ್ಥಗಳು ತಿಂಡಿ ತಿಂದು ಊಟ ಬಿಡಬೇಡಿ. ಸಕ್ಕರೆ ಬಳಕೆಗೆ ಮಿತಿ ಇರಲಿ. ಅನಾರೋಗ್ಯಕರ -ಸಂಸ್ಕರಿಸಿದ ಆಹಾರ ತ್ಯಜಿಸಿ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!