ತಣ್ಣಗಾಗು ಸೃಷ್ಟಿಯೇ ….!!

ಸುಮಾರು 23 ವರ್ಷಗಳ ಹಿಂದೆ, ಬಯಲುಸೀಮೆಯ ಬಿಸಿಲ ಪ್ರದೇಶದಿಂದ‌ ಬೆಂಗಳೂರಿಗೆ ಬಂದ ನಮಗೆ ಪ್ರತಿ ಸಂಜೆ‌ ಚಳಿಯಾಗುತಿತ್ತು…!! .ಮುಂದಿನ ಇಪ್ಪತ್ತು ವರ್ಷಗಳಲ್ಲಿ ಚಳಿ ತ್ವರಿತಗತಿಯಲ್ಲಿ  ಮಾಯವಾಗಲಾರಂಭಿಸಿತು

ಚಳಿಚಳಿತಾಳೆನು “…ಎಂಬ ಹಾಡು ನಿಧಾನವಾಗಿ ” ಚಳಿ ಚಳಿ ಕಾಣೆನು …..ಎಂದು ಹಾಡುವ ಮಟ್ಟಿಗೆ  ಜಾಗತಿಕ ತಾಪಮಾನದ‌ ಬಿಸಿ,  ತಂಪು ತಂಪು ಏರ್ ಕಂಡಿಷನ್ ನಗರ ಬೆಂಗಳೂರಿಗೂ ತಲುಪಿತು . ಬೆಂಗಳೂರು ಶ್ರೀಮಂತವಾದಂತೆ  ಬಿಸಿಯಾಗಲಾರಂಭಿಸಿತು ಕೂಡ , ಬೆಂಗಳೂರಿನ ಜ್ವರ ಹೆಚ್ಚಾಗಲಾರಂಭಿಸಿತು.

ಜಗತ್ತಿಗೆ ಹೊರತಾಗಿ ಏನಲ್ಲ .ಇಡಿ ಜಗತ್ತಿನ ತಾಪಮಾನ ಹೆಚ್ಚಾಗಿ ಅದರ ಪರಿಣಾಮಗಳು ಕಂಡುಬರಲಾರಂಭಿಸಿದ್ದರೂ ಮುಂದುವರಿಯುವ ಧಾವಂತದಲ್ಲಿದ್ದ ಮನುಕುಲ

” ಓ …ಗ್ಲೋಬಲ್ ವಾರ್ಮಿಂಗಾ..? ಆಮೇಲೆ‌ ನೋಡೋಣ ” ಸೆಕೆಗೆ ಬೇಕಾದ ಚಳಿಯನ್ನು ಕೊಂಡಕೊಂಡರಾಯಿತೆಂದು ಎಲ್ಲ ಕಡೆ ಚಳಿತರುವ ಯಂತ್ರಗಳನ್ನೂ ಹಾಕಿದ್ದಾಯಿತು .

ದುಡ್ಡಿದ್ರೆ ಏನಾದ್ರೂ ಕೊಂಡ್ಕೋಬೋದು  “ಅನ್ನುವ ಮಟ್ಟಿಗೆ ಮದವೇರಿದ ಮನುಷ್ಯ  , ಮುಂದುವರಿತದ ಕುದುರೆಯೇರಿ ನಾಗಾಲೋಟದಲ್ಲಿದ್ದ. ಔನ್ಯತ್ಯದ ಬಿಸಿಲುಗುದುರೆ ಅವನತಿಯತ್ತ ಓಡಿದುದು ತಿಳಿಯಲೆ ಇಲ್ಲ.ಮೇಲೆರಿ ಸಾಧಿಸಿ ಮಾಡುವುದೇನು ಎಂಬುದು ಬುಧ್ದಿಮತ್ತೆಯ ಉತ್ತುಂಗುದಲ್ಲಿದ್ದ ಮಾನವ

ಪ್ರಾಣಿಗೆ  ಗೊತ್ತಾಗಲಿಲ್ಲ …!! 

ಧ್ರುವ ಪ್ರದೇಶದ ಸಹಸ್ರಮಾನಗಳ ಹಿಂದಿನ ಮಂಜು,ನೀರ್ಗಲ್ಲುಗಳು ಕರಗಿ ಸಮುದ್ರದ ಮಟ್ಟಗಳು ಏರಿ ,ವಿಪರೀತ  ವಾತಾವರಣಗಳು ಸೃಷ್ಟಿಯಾದವು. ‌ಕಂಡೂ ಕೇಳದ ಸುನಾಮಿ,ಚಂಡ ಮಾರುತಗಳು ,ಅತೀವೃಷ್ಟಿ ಅನಾವೃಷ್ಟಿಗಳೆಲ್ಲ ಉಂಟಾದವು .” ಅಲ್ಲಿ ಮಳೆ ಜಾಸ್ತಿನಮಗೇನೂ ಇಲ್ಲ ಸದ್ಯ ….ಅಲ್ಲಿ ಚಂಡಮಾರುತ ನಮ್ಮ ಊರೆ ಸೇಫು ” ಅಂದುಕೊಂಡು ಬಾಗಿಲು ಮುಚ್ಚಿ ಮಲಗಿದವರಿಗೆ  ಕಾರಣ ಹುಡುಕುವ ಸಮಯ ವ್ಯವಧಾನವೂ ಇರಲಿಲ್ಲ…..! .ಪೃಕೃತಿ ತನ್ನೆಲ್ಲ  ಲಘು ಅಪಾಯದ ಅಸ್ತ್ರಗಳನ್ನು ಬಳಸಿ‌ ಎಚ್ಚರಿಸಿದರೂ ಯಾರೂ ಎಚ್ಚೆತ್ತುಕೊಳ್ಳಲ್ಲಿಲ್ಲ.

ಕೇವಲ ಮನುಕುಲವೇ ಶ್ರೇಷ್ಠ ,…!!

“”ಮನುಷ್ಯರು ಮಾತ್ರ ಭೂಮಿಯ ಮೇಲಿರತಕ್ಕದ್ದು“” ಎಂಬ ಅಘೋಷಿತ ಕಾನೂನು ಮಾಡಿ ಇಡೀ ಭೂಮಿಯನ್ನೆ ತಿಪ್ಪೆ ಮಾಡಿ ಉಳಿದ ಚರಾಚರಗಳನ್ನು ನಿರ್ದಯವಾಗಿ ಕೊಲ್ಲಲಾರಂಭಿಸಿದಾಗ, ಸೃಷ್ಟಿ ಪೃಕೃತಿಯಲ್ಲಿ ಮನುಷ್ಯನ ಸ್ಥಾನ ತೋರಿಸಲು ಕಣ್ಣಿಗೆ ಕಾಣದಂತಹ ಅಸ್ತ್ರ ಬಿಟ್ಟು ಬಿಟ್ಟಿತು…..!! .ಇದರಿಂದ ಬೇರೆ ಯಾವ ಪ್ರಾಣಿಯೂ ಭಯ ಪಡಲಿಲ್ಲ. ಪ್ರತಿ ಮನುಷ್ಯನೂ ಬಿಲ ಹೊಕ್ಕಿದ .ಬಂದೂಕು ಬಾಂಬು ತಯಾರಿಸಿದವರು ಮಣ್ಣಾಗಿ ಹೋಗುವ ಭಯದಲ್ಲೀಗ ಪ್ರಕೃತಿಗೆ ಕ್ಷಮೆ ಕೇಳುವಷ್ಟೂ ಸಮಯವಿಲ್ಲ.

ಪ್ರಕೃತಿ ತನ್ನ ಮೂಕ ಸೃಷ್ಟಿಯ ಉಳಿವಿಗೆ ನಿಂತಿದೆ‌.ತನ್ನ ಗಾಯಗಳನ್ನು ವಾಸಿಮಾಡುವ ನಿಟ್ಟಿನಲ್ಲಿ ಗಾಯಮಾಡಿದ ಪ್ರತಿ ಜೀವಿಯನ್ನು ಶಿಕ್ಷಿಸುತ್ತಿದೆ. ಪ್ರತಿ ಕಾಡುಪ್ರಾಣಿ ಸ್ವಚ್ಛೆಯಿಂದ  ಹೊರಬಂದು  ಹೊಟ್ಟೆ ತುಂಬಾ ಉಣ್ಣುತ್ತಿಲ್ಲವೇ,, ಪ್ರಜನನಿಸುತ್ತಿವೆ…!! , ವಾಹನದ ಹೊಗೆಯುಂಡು ಉಸಿರುಗಟ್ಟಿದ್ದ ಮರಗಳೆಲ್ಲ ಹೊಗೆಯಿಲ್ಲದ ಹವೆಯಲ್ಲಿ ನಳನಳಿಸುತ್ತಿವೆ. ನಮ್ಮ ಹೊಲಸು ಕೊಳಚೆ ನುಂಗಿದ ಪ್ರತಿ ನದಿ ಸರೋವರ ಮಡಿಯಾಗುತ್ತಿದೆ…!!. ಪೃಕೃತಿ ನಲಿಯುತ್ತಿದೆ. ಬೆಂಗಳೂರು ಮತ್ತೆ ತಣ್ಣಗಾಗುತ್ತಿದೆ . ….

ತಣ್ಣಗಾಗು ಸೃಷ್ಟಿಯೆ.. ತಣ್ಣಗಾಗು…. ಅಕ್ಷಮ್ಯ  ಮನುಕುಲದ ಮೇಲೆ‌ ಕರುಣೆ ತೋರು ….!!!!

Dr-Salim-Nadafa

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!