ಸೈನುಸೈಟಿಸ್ ಮತ್ತು ಅದರ ಚಿಕಿತ್ಸೆ

 
ಡಾ. ತೇಜಸ್ವಿ ಕೆ.ಪಿ.
ಸಹ ಪ್ರಾಧ್ಯಾಪಕರು, ಭಗವಾನ್ ಬುದ್ಧ ಹೋಮಿಯೋಪತಿ ವೈದ್ಯಕೀಯ ಕಾಲೇಜು
ಸುರಭಿ ಹೋಮಿಯೋ ಕ್ಲಿನಿಕ್, ನಂದಾವತ್ ಕಾಂಪ್ಲೆಕ್ಸ್, ದೊಡ್ಡಬೊಮ್ಮಸಂದ್ರ,
ವಿದ್ಯಾರಣ್ಯಪುರ ಮುಖ್ಯರಸ್ತೆ, ಬೆಂಗಳೂರು-97 ಮೊ: 9731133819
email: suಡಿಚಿbhihomoeoಛಿಟiಟಿiಛಿ@gmಚಿiಟ.ಛಿom
ಸೈನುಸೈಟಿಸ್ ಅಥವಾ ಸೈನಸ್ಗಳ ಸೋಂಕು, ಮಳೆ ಅಥವಾ ಛಳಿಯ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ತೊಂದರೆ. ಅದರಿಂದಾಗುವ ತೊಂದರೆಗಳು ಅನುಭವಿಸಿದ್ದವರಿಗೇ ಗೊತ್ತು. ಈ ಸೈನುಸೈಟಿಸ್ ಅಂದರೆ ಏನು, ಇದಕ್ಕೆ ಕಾರಣಗಳೇನು ಮತ್ತು ಪರಿಹಾರ ಹೇಗೆ ಎಂಬುದನ್ನು ತಿಳಿಯೋಣ.
ಸೈನುಸಸ್ – ಗಾಳಿ ತುಂಬಿದ ಕುಳಿಗಳು
ಸೈನಸ್ ಎಂಬ ಗಾಳಿ ತುಂಬಿದ ಕುಳಿಗಳು ನಮ್ಮ ತಲೆಬುರುಡೆ ಮತ್ತು  ಮುಖದ ಮೂಳೆಯ ವಿವಿಧಭಾಗಗಳಲ್ಲಿ ಹರಡಿಕೊಂಡಿವೆ. ಇವು ನಮ್ಮ ಶಿರದ ಭಾರವನ್ನು ಕಡಿಮೆಮಾಡುತ್ತವೆ, ಉಸಿರಿನ ಮೂಲಕ ಒಳಗೆ ತಗೆದುಕೊಂಡ ಗಾಳಿಯನ್ನು ಬಿಸಿಮಾಡುವ ಅಥವಾ ತೇವಾಂಶವನ್ನು ಹೆಚ್ಚಿಸುವುದಕ್ಕೆ ಹಾಗೂ ಮಾತುಗಳ  ಉಚ್ಚಾರಣೆಗೆ ಸಹಾಯಮಾಡುತ್ತವೆ.
ನಾಲ್ಕು ತರಹದ ಜೋಡಿ ಕುಳಿಗಳು (siಟಿuses) ನಮ್ಮ ದೇಹದಲ್ಲಿವೆ. mಚಿxiಟಟಚಿಡಿಥಿ ಸೈನಸ್ ಮೂಗಿನ ಅಕ್ಕ ಪಕ್ಕ ಮುಖದ ಮೇಲೆ ಇದ್ದರೇ, ಈಡಿoಟಿಣಚಿಟ ಸೈನಸ್ ಕಣ್ಣುಗಳ ಹುಬ್ಬಿನ ಮೇಲ್ಭಾಗದಲ್ಲಿ ಇವೆ, eಣhಚಿmoiಜ ಸೈನಸ್ ಎರಡೂ ಕಣ್ಣುಗಳ ನಡುವೆ ಇವೆ. sಠಿheಟಿoiಜ ಸೈನಸ್ ಮೂಗಿನ ಹಿಂಭಾಗದಲ್ಲಿ ಆಳವಾದ ಸ್ಥಳದಲ್ಲಿ ಇವೆ.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಸುಮಾರು 134 ಮಿಲಿಯನ್ ಗಿಂತ ಹೆಚ್ಚು ಭಾರತೀಯರು ಸೈನುಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಪ್ರತೀ 8 ಜನಕ್ಕೆ ಒಬ್ಬರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ.  ಹೆಚ್ಚುತ್ತಿರುವ ವಾಯು ಮಾಲಿನ್ಯ ಸೈನುಸೈಟಿಸ್  ಉಂಟಾಗಲು ಪ್ರಮುಖ ಕಾರಣ ಎನ್ನಬಹುದು.
ಸಾಮಾನ್ಯವಾಗಿ ಗಾಳಿ ತುಂಬಿದ ಸೈನಸ್ ಕುಳಿಗಳು, ದ್ರವ ಮತ್ತು ರೋಗಾಣುಗಳ ಸೋಂಕಿನಿಂದ ಮುಚ್ಚಿಕೊಂಡಾಗ ಉಂಟಾಗುವುದು ಸೈನುಸೈಟಿಸ್.
ಸೈನುಸೈಟಿಸ್ -ಕಾರಣಗಳು 
  • ಮೂಗಿನ ಸೋಂಕು ( ಸಾಮಾನ್ಯ ಶೀತ, ಇನ್ಫ್ಲುಯೆಂಜಾ )
  • ಅಲರ್ಜಿಯಿಂದ ಉಂಟಾಗುವ ಮೂಗಿನ ಉರಿಯೂತ (ಚಿಟಟeಡಿgiಛಿ ಡಿhiಟಿiಣis)
  • ಮೂಗು ಕಟ್ಟುವುದು (ಟಿose bಟoಛಿಞ)  (ಮೂಗಿನಲ್ಲಿ ಬೆಳೆವ  ದುರ್ಮಾಂಸ, ಅಡ್ಡವಾಗಿ ಬೆಳೆದ ಮೂಗಿನ ಕಂಬ ಇತ್ಯಾದಿ)
  • ವಾಯು ಮಾಲಿನ್ಯ, ಪರಿಸರ ಮಾಲಿನ್ಯ
  • ಕುಗ್ಗಿದ ರೋಗನಿರೋಧಕ ಶಕ್ತಿ (ಖesisಣಚಿಟಿಛಿe ಠಿoತಿeಡಿ)
ಸೈನುಸೈಟಿಸ್ -ವಿಧಗಳು 
ನಾಲ್ಕು ಸೈನಸ್ಗಳಲ್ಲಿ ಯಾವ ಸೈನಸ್ ತೊಂದರೆಗೀಡಾಗಿದೆ ಎಂಬುದರ ಮೇಲೆ ನಾಲ್ಕು ವಿಧದ ಸೈನಸೈಟಿಸ್ ವಿಭಾಗಿಸಲಾಗಿದೆ. ಮ್ಯಾಕ್ಸಿಲ್ಲರಿ (mಚಿxiಟಚಿಡಿಥಿ) ಸೈನಸೈಟಿಸ್ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ.
ಕಾಲಾವಧಿಯ ಆಧಾರದ ಮೇಲೆ ಅಲ್ಪಕಾಲೀನ (ಚಿಛಿuಣe), ದೀರ್ಘಕಾಲೀನ (ಛಿhಡಿoಟಿiಛಿ) ಮತ್ತು ಪುನರಾವರ್ತಿಸುವ (ಡಿeಛಿuಡಿಡಿeಟಿಣ) ಸೈನುಸೈಟಿಸ್.
ಸೈನುಸೈಟಿಸ್ -ಲಕ್ಷಣಗಳು 
  • ಮುಖದಲ್ಲಿ ಒತ್ತಡ ಅಥವಾ ನೋವು, ಈ ನೋವು ಕಿವಿ ಅಥವಾ ದವಡೆಯವರೆಗೆ ವಿಸ್ತರಿಸಬಹುದು
  • ಸೈನಸ್ ತಲೆನೋವು ಅಥವಾ ತಲೆ ಭಾರವೆನ್ನಿಸುವುದು, ಈ ನೋವು ಬೆಳಗ್ಗಿನ ಜಾವದಲ್ಲಿ ಜಾಸ್ತಿಯೆನ್ನಿಸುವುದು.
  • ಯಾವಾಗಲೂ ಮೂಗು ಕಟ್ಟಿಕೊಂಡಿರುವುದು (ಟಿose bಟoಛಿಞ)
  • ಕೆಲವೊಮ್ಮೆ ಮೂಗಿನಿಂದ ಗಟ್ಟಿಯಾದ ಕಫ ಬರುವುದು
  • ಮೂಗಿನಿಂದ ಕೆಟ್ಟ ವಾಸನೆ ಬಂದಂತೆ ಅನಿಸುವುದು.
  • ಇವೆಲ್ಲದರ ಜೊತೆ ಕೆಮ್ಮು, ಗಂಟಲು ಕೆರೆತ, ಸುಸ್ತು ಮತ್ತು ಜ್ವರದಂತಹ ತೊಂದರೆಗಳೂ ಕಾಣಿಸಬಹುದು
ಸೈನಸೈಟಿಸ್–ಮನೆ ಮದ್ದು 
ಆವಿ ತೆಗೆದುಕೊಳ್ಳುವುದು 
ಕುದಿಯುವ ಬಿಸಿ ನೀರನ್ನು ಅಗಲವಾದ ಬಾಯಿ ಇರುವ ಪಾತ್ರೆಗೆ ಹಾಕಿ ಅದರಲ್ಲಿ 8-10 ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ಹಬೆ ತೆಗೆದುಕೊಳ್ಳಿ. ಇದು ಸೈನಸ್ ಸಮಸ್ಯೆಯನ್ನು ಸ್ವಲ್ಪ ಕಮ್ಮಿ ಮಾಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ಸೈನಸ್ ಸಮಸ್ಯೆ ಕಾಣಿಸಿಕೊಂಡಾಗ ಸುಮಾರು 3-4 ಲೀಟರ್ ನೀರು ಕುಡಿಯಬೇಕು, ಬಿಸಿನೀರು ಸೇವನೆ   ಒಳ್ಳೆಯದು.  ಸೈನಸ್ ಆದಾಗ ಮದ್ಯ, ಕೆಫೀನ್ ಮತ್ತು ಧೂಮಪಾನ ವರ್ಜಿಸಬೇಕು, ಇವುಗಳಿಂದ ದೇಹದ ನೀರಿನಂಶ ಕಡಿಮೆಯಾಗುತ್ತದೆ.
ಯೋಗ 
ಸೂರ್ಯ ನೇತಿ, ಜಲ  ನೇತಿ, ಕಪಾಲಭಾತಿ, ಭಸ್ತ್ರಿಕ ಹಾಗು ಅನುಲೋಮ-ವಿಲೋಮ ಪ್ರಾಣಾಯಾಮ ಗಳು  ಸೈನುಸೈಟಿಸ್ ನಿವಾರಣೆಗೆ ಸಹಾಯಕಾರಿ. ಇವುಗಳನ್ನು ಯೋಗ ಗುರುಗಳ ನಿರ್ದೇಶನದಂತೆ ಮಾಡುವುದೊಳ್ಳೆಯದು.
ಕಷಾಯ ಸೇವನೆ 
ಕಾಳು ಮೆಣಸು, ಮೂಲಂಗಿ ಗಳಿಂದ ಮಾಡಿದ ಕಷಾಯ ಸೇವನೆ ಲಾಭದಾಯಕ, ಮೆಣಸು, ಅರಿಶಿಣ, ಶುಂಠಿ, ನಿಂಬೆ ರಸ ಗಳಂತಹ ತೀಕ್ಷ್ನ ಗುಣವುಳ್ಳ ಪದಾರ್ಥಗಳಲ್ಲಿ  ರೋಗಾಣುನಿರೋಧಕ (ಂಟಿಣi-bಚಿಛಿಣeಡಿiಚಿಟ) ಮತ್ತು ಉರಿಯೂತ (iಟಿಜಿಟಚಿmmಚಿಣioಟಿ) ನಿರೋಧಕ ತತ್ವಗಳಿವೆ.  ಇವುಗಳಿಂದ ತಯಾರಿಸಿದ  ಕಷಾಯ ಅಥವಾ ಬಿಸಿ ನೀರಲ್ಲಿ ಬೆರೆಸಿ ತಯಾರಿಸಿದ ಪೇಯ  ಆರೋಗ್ಯಕ್ಕೆ ಒಳ್ಳೆಯದು.  ಚಿಕನ್ ಸೂಪ್ ಅಥವಾ ಗಿಡ ಮೂಲಿಕೆಗಳನ್ನು ಹಾಕಿ ಮಾಡಿದ ಸೂಪ್ ಕೂಡ ಒಳ್ಳೆಯದು
ವಿಶ್ರಾಂತಿ 
ಸೈನಸ್ ಬಂದಾಗ ವಿಶ್ರಾಂತಿ ತೆಗೆದುಕೊಳ್ಳಿ. ಚೆನ್ನಾಗಿ ನಿದ್ದೆ ಮಾಡಿ ಎದ್ದರೆ ತಲೆನೋವು ಕಡಿಮೆಯಾಗುವುದು. ಆಗಾಗ ತಲೆನೋವು ಕಾಣಿಸುತ್ತಿದ್ದರೆ ಕಡೆಗಣಿಸಬೇಡಿ, ವೈದ್ಯರಲ್ಲಿ ತೋರಿಸಿ.
ಹೋಮಿಯೋಪತಿ ಚಿಕಿತ್ಸೆ 
ಹೋಮಿಯೋಪಥಿ ವೈದ್ಯ ಪದ್ದತಿಯಲ್ಲಿ ಸೈನುಸೈಟಿಸ್ ಸಮಸ್ಯೆಯ ಶಾಶ್ವತ ಪರಿಹಾರ ಸಾಧ್ಯ. ರೋಗ ಮತ್ತು ರೋಗಿ ಎರಡರದ್ದೂ ಗುಣ ಲಕ್ಷಣಗಳನ್ನು ಆಧರಿಸಿ ನೀಡುವ ಚಿಕಿತ್ಸೆ ಸೈನುಸೈಟಿಸ್ ತೊಂದರೆಗಳನ್ನು  ತಾತ್ಕಾಲಿಕ ಶಮನ ಮಾಡದೆ ರೋಗದ ಮೂಲೋತ್ಪಾಟನೆ
ಮಾಡುತ್ತದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!