ವಾಕ್ ಮತ್ತು ಭಾಷಾ ಸುಧಾರಣೆಗೆ ಸಂಗೀತ ಚಿಕಿತ್ಸೆ !

ಭಾಷೆ ಅಭಿವೃದ್ದಿಯು ಆರಂಭಿಕ ಬಾಲ್ಯಾವಸ್ಥೆಯ ವಿಕಸನದ ಬಹು ಮುಖ್ಯ ಪ್ರಕ್ರಿಯೆಗಳಲ್ಲಿ ಒಂದು. ನಿಧಾನವಾಗಿ ಮಾತು ಕಲಿಸುವ ಅಥವಾ ವಿಳಂಬವಾಗಿ ಭಾಷೆ ಅಭಿವೃದ್ದಿಯಾಗುವ ಮಕ್ಕಳು ಇತರ ಅರಿವು, ಸಾಮಾಜಿಕ-ಭಾವನಾತ್ಮಕ ಮತ್ತು ಶಾಲೆ-ಶಿಕ್ಷಣಕ್ಕೆ ಸಂಬಂದಪಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ. ಮ್ಯೂಸಿಕ್ ಥೆರಪಿ ಅಥವಾ ಸಂಗೀತ ಚಿಕಿತ್ಸೆಯು ಅತ್ಯಲ್ಪ ಅವಧಿಯಲ್ಲಿ ಮಕ್ಕಳಲ್ಲಿ ವಾಕ್ ಮತ್ತು ಭಾಷಾ ಬೆಳವಣಿಗೆಗೆ ಅನುವು ಮಾಡಿಕೊಟ್ಟು ಅವರ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಬಾಲ್ಯದಿಂದಲೇ ಮಾತನಾಡುವ ಮತ್ತು ಬಾಷೆ ಕಲಿಯುವ ತೊಡಕು ಹೊಂದಿರುವ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆ ಹೊಂದುವುದು ಸಹಜ. ವಾಕ್ ಮತ್ತು ಭಾಷೆ ಕಲಿಕೆ ಸಾಮಥ್ರ್ಯವುಳ್ಳ ಮಕ್ಕಳು ಓದು ಮತ್ತು ಇತರ ಚಟುವಟಿಕೆಗಳಲ್ಲಿ ಮುಂದಿರುತ್ತಾರೆ. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲೂ ಮಕ್ಕಳಲ್ಲಿ ವಾಕ್ ಸಮಸ್ಯೆ ಇರುವುದು ಕಂಡುಬರುತ್ತದೆ. ಇದು ಮಕ್ಕಳ ಬೆಳವಣಿಗೆಯಾಗುತ್ತಿದ್ದಂತೆ ಅವರ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ.

ಸಕಾಲದಲ್ಲಿ ಮಕ್ಕಳು ಮಾತನಾಡುವುದನ್ನು ಅಥವಾ ಭಾಷೆ ಕಲಿಯುವುದನ್ನು ಕಲಿಸದಿದ್ದರೆ ಅದು ಅವರ ಶೈಕ್ಷಣಿಕ, ಸಾಮಾಜಿಕ ವಿಕಸನದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಬಾಲ್ಯದಲ್ಲೇ ಆದಷ್ಟೂ ಶೀಘ್ರ ಈ ನ್ಯೂನತೆಯನ್ನು ಸರಿಪಡಿಸುವುದು ಅನಿವಾರ್ಯ. ಇಂಥ ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಹಲವು ಚಿಕಿತ್ಸಾ ವಿಧಾನಗಳು ಇವೆಯಾದರೂ, ಸಂಗೀತ ಚಿಕಿತ್ಸೆ ಅಥವಾ ಮ್ಯೂಸಿಕ್ ಥೆರಪಿ ಅತ್ಯಂತ ಸರಳ ಮತ್ತು ಪರಿಣಾಮಕಾರಿ ಚಿಕಿತ್ಸೆ ಎನಿಸಿದೆ.

ಏನಿದು ಮ್ಯೂಸಿಕ್ ಥೆರಪಿ?

ಮ್ಯೂಸಿಕ್ ಥೆರಪಿಸ್ಟ್‍ಗಳು (ಸಂಗೀತ ಚಿಕಿತ್ಸಕರು) ಸಂಗೀತ ವಾದ್ಯಗಳಾದ ಗಿಟಾರ್, ಫಿಯಾನೋ, ಕೊಳಲು ಮುಂತಾದುವುಗಳನ್ನು ಬೇರೆ ಬೇರೆಯಾಗಿ ನುಡಿಸಿ, ನಿಮ್ಮನ್ನು ಸೂP್ಷÀ್ಮವಾಗಿ ಗಮನಿಸುತ್ತಾರೆ. ನೀವು ಯಾವುದಕ್ಕೆ ಹೆಚ್ಚು ಸ್ಪಂದಿಸುತ್ತೀರಿ ಎಂಬುದನ್ನು ತಿಳಿದು ನಂತರ ಥೆರಪಿಯನ್ನು ಮುಂದುವರೆಸುತ್ತಾರೆ. ಇದೇ ಮ್ಯೂಸಿಕ್ ಥೆರಪಿ. ಸಂಗೀತ ಆಲಿಕೆಗೆ ಟಿಪ್ಸ್. ಸಂಗೀತ ಕೇಳಲು ಇಷ್ಟವಿಲ್ಲದಿದ್ದರೆ, ಇತರ ಇಂಪಾದ ನಿನಾದ ಕೇಳಬಹುದು.. ಮನಸ್ಸಿಗೆ ಮುದ ನೀಡುವಂತಹ ಸಂಗೀತವನ್ನು ಕೇಳುತ್ತೀರಿ..ಇದರಿಂದ ಮುದುಡಿದ ಮನಸ್ಸು ಅರಳುತ್ತದೆ. ಕರ್ಕಶವಾದ ಸಂಗೀತವನ್ನು ಆಲಿಸಿದರೆ, ಮನಸ್ಸು ಜರ್ಝರಿತವಾಗುತ್ತದೆ.

ಮ್ಯೂಸಿಕ್ ಥೆರಪಿ- ಇದೊಂದು ಸೃಜನಾತ್ಮಕ ಕಲಾ ಚಿಕಿತ್ಸೆಯ ಒಂದು ರೂಪ. ಸಂಗೀತ ಮತ್ತು ಅಭಿವ್ಯಕ್ತಿಯನ್ನು ಒಂದು ನಿರ್ದಿಷ್ಟ ಸಂವಹನವಾಗಿ ಬಳಸಿಕೊಳ್ಳುವ ವಿಧಾನ ಇದು. ಮಕ್ಕಳ ವೈಯಕ್ತಿಕ ಸಾಮಥ್ರ್ಯ ಮತ್ತು ಕಲಿಕಾ ಕೌಶಲ್ಯವನ್ನು ಆಧರಿಸಿ ಸಂಗೀತ ಚಿಕಿತ್ಸೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ. ಇದು ಮಕ್ಕಳ ಮಾನಸಿಕ ಮತ್ತು ಭೌತಿಕ ಚೇತರಿಕೆಯನ್ನು ಕ್ರಿಯಾಶೀಲಗೊಳಿಸುವ ಮತ್ತು ಬೆಂಬಲ ನೀಡುವ ಅತ್ಯಂತ ಪ್ರಯೋಜನಕಾರಿ ವಿಧಾನವಾಗಿದೆ. ಸಂಗೀತ ಚಿಕಿತ್ಸೆಯಿಂದ ನರವ್ಯೂಹಗಳು ಉದ್ದೀಪನಗೊಂಡು ಮಕ್ಕಳ ಮಾತು ಮತ್ತು ಭಾಷಾ ಕಲಿಕೆಯನ್ನು ಹೆಚ್ಚಿಸಿರುವುದು ಅನೇಕ ಸಂಶೋಧನೆ ಮತ್ತು ಪ್ರಯೋಗಗಳಿಂದ ದೃಢಪಟ್ಟಿದೆ.

ಮ್ಯೂಸಿಕ್ ಥೆರಪಿ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಹಗುರವಾಗಿಸುತ್ತದೆ. ಸಕಾರಾತ್ಮಕ ಯೋಚನೆ ಹುಟ್ಟುಹಾಕುತ್ತದೆ. ಸಂಗೀತದ ನಿನಾದ ಧ್ವನಿಯೊಂದು ಇಂಪಾಗಿ ನಮ್ಮ ಕಿವಿಯ ಮೇಲೆ ಬೀಳುತ್ತಾ ಇದ್ದರೆ, ಮನಸ್ಸಿಗಾಗುವ ಆನಂದ ಅಷ್ಟಿಷ್ಟಲ್ಲ! ಮನಸ್ಸಿಗೆ ಉಂಟಾದ ನೋವನ್ನು ಮರೆಮಾಚುವ ಶಕ್ತಿ ಸಂಗೀತಕ್ಕಿದೆ. ಮ್ಯೂಸಿಕ್ ಥೆರಪಿಯಿಂದ ನಮಗೆ ಸಂತೋಷ, ಉ¯್ಲÁಸ ಲಭಿಸುತ್ತದೆ, ಮನಸ್ಸಿನಲ್ಲಿ ಕಿರಿ-ಕಿರಿ, ಅಸಮಾಧಾನವನ್ನು ಹೋಗಲಾಡಿಸಿ ಆರೋಗ್ಯ ವೃದ್ದಿಯಾಗುವಂತೆ ಮಾಡುತ್ತದೆ.

ಮ್ಯೂಸಿಕ್ ಥೆರಪಿಯಿಂದ ಅನೇಕ ರೋಗಗಳನ್ನು ಸಹ ಗುಣಪಡಿಸಬಹುದು ಮತ್ತು ನಿಯಂತ್ರಿಸಬಹುದು. ಮಾನಸಿಕ ರೋಗಗಳು, ಹತಾಶೆ, ಖಿನ್ನತೆ, ಮಾನಸಿಕ ಕ್ಷೋಭೆ, ಸ್ಕೀಜೋಫೆರ್ನಿಯಾ, ನರದೌರ್ಬಲ್ಯ, ಚಿತ್ತ ವೈಕಲ್ಯ, ಮರೆಗುಳಿತನ, ಮಾನಸಿಕ ಯಾತನೆ ಮೊದಲಾದ ದೋಷಗಳು ಸಂಗೀತ ಚಿಕಿತ್ಸೆಯಿಂದ ಗುಣಪಟ್ಟಿರುವುದು ಸಾಬೀತಾಗಿದೆ.

Also Read: Singing can increase one’s life span 

ಮಕ್ಕಳಿಂದ ಹಿಡಿದು ಅಬಾಲವೃದ್ದರಾಗಿಯಾಗಿ ಎಲ್ಲರಿಗೂ ಅನೇಕ ಸಮಸ್ಯೆಗಳ ನಿವಾರಣೆಗಾಗಿ ಸಂಗೀತ ಚಿಕಿತ್ಸೆಯನ್ನು ಉಪಶಮನಕ್ಕಾಗಿ ಉಪಯೋಗಿಸಬಹುದು. ಮನಸ್ಸಿಗೆ ಉಂಟಾದ ನೋವನ್ನು ಮರೆಮಾಚುವ ಶಕ್ತಿ ಸಂಗೀತಕ್ಕಿದೆ. ಮ್ಯೂಸಿಕ್ ಥೆರಪಿಯಿಂದ ನಮಗೆ ಸಂತೋಷ, ಉ¯್ಲÁಸ ಲಭಿಸುತ್ತದೆ, ಮನಸ್ಸಿನಲ್ಲಿ ಕಿರಿ-ಕಿರಿ, ಅಸಮಾಧಾನವನ್ನು ಹೋಗಲಾಡಿಸಿ ಆರೋಗ್ಯ ವೃದ್ದಿಯಾಗುವಂತೆ ಮಾಡುತ್ತದೆ. ಸಂಗೀತ ಚಿಕಿತ್ಸೆ ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದ ಸಾಕಷ್ಟು ನಿದರ್ಶನಗಳಿವೆ.

ಅಮೆರಿಕ, ಇಂಗ್ಲೆಂಡ್‍ನಂಥ ಮುಂದುವರಿದ ರಾಷ್ಟ್ರಗಳಲ್ಲಿ ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಸಂಗೀತ ಗೋಷ್ಠಿ ನಡೆಸುವ ಪ್ರತ್ಯೇಕ ವಿಭಾಗಗಳೇ ಆಸ್ಪತ್ರೆಗಳಲ್ಲಿ ಇವೆ. ವಿಶ್ವದ ಅನೇಕ ಯೂನಿವರ್ಸಿಟಿಗಳಲ್ಲಿ ಈ ನಿಟ್ಟಿನಲ್ಲಿ ಈಗಲೂ ಸಂಶೋಧನೆ ಮತ್ತು ಪ್ರಯೋಗಗಳು ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್ ಥೆರಪಿ ಮಾನಸಿಕ ರೋಗಗಳು ಮತ್ತು ಮಕ್ಕಳ ಸಾಮಥ್ರ್ಯ ವೃದ್ದಿಗಾಗಿ ಪ್ರಮುಖ ಚಿಕಿತ್ಸೆಯಾಗಿ ಉಪಯೋಗಕ್ಕೆ ಬಂದಿರುವುದು ಇದರ ಪರಿಣಾಮಕಾರಿ ಪ್ರಯೋಜನಕ್ಕೆ ಸಾಕ್ಷಿಯಾಗಿದೆ.

ಮಕ್ಕಳನ್ನು ಕಾಡುವ ಆಟಿಸಂ, ನಡವಳಿಕೆ ಸಮಸ್ಯೆ, ಹಠಮಾರಿತನ, ಕಲಿಕಾ ದೋಷಗಳು, ತೊದಲುವಿಕೆ, ಶಿಕ್ಷಣದಲ್ಲಿ ಏಕಾಗ್ರತೆ ಕೊರತೆ, ವಿದ್ಯಾಭ್ಯಾಸದಲ್ಲಿ ಹಿಂದುಳಿಯುವಿಕೆ ಇವೆ ಮಾದಲಾದ ಸಮಸ್ಯೆಗಳನ್ನು ಸಂಗೀತ ಚಿಕಿತ್ಸೆಯಿಂದ ಸರಿಪಡಿಸಬಹುದು. ಮಕ್ಕಳ ವಾಕ್‍ಚಾತುರ್ಯ ವೃದ್ದಿ, ಸಂವಹನ ಕೌಶಲ್ಯ ಮತ್ತು ಕಲಿಕಾ ಆಸಕ್ತಿಗಳು ಮ್ಯೂಸಿಕ್ ಥೆರಪಿಯಿಂದ ಗಮನಾರ್ಹವಾಗಿ ಹೆಚ್ಚಳವಾಗಿರುವ ಸಾಕಷ್ಟು ಉದಾಹರಣೆಗಳು ಲಭ್ಯ.

ಮ್ಯೂಸಿಕ್ ಥೆರಪಿ ವಿಧಾನಗಳು:

ಸೃಜನಾತ್ಮಕ ಸಂಗೀತ ಚಿಕಿತ್ಸೆ ಪರಿಕಲ್ಪನೆಯು ನೋರ್ಡೊಫ್=ರಾಬಿನ್ಸ್ ವಿಧಾನವನ್ನು ಆಧರಿಸಿದೆ. ಇಲ್ಲಿ ರೋಗಿ ಮತ್ತು ಥೆರಪಿಸ್ಟ್‍ಗಳು(ಚಿಕಿತ್ಸೆ ನೀಡುವವರು) ಇಬ್ಬರೂ ಗಾಯನದಲ್ಲಿ ತೊಡಗುತ್ತಾರೆ. ಇವರ ಹಾಡುಗಾರಿಕೆಗೆ ಸಂಗೀತ ವಾದ್ಯಗಳು(ಗಂಟೆಗಳು, ಡ್ರಮ್‍ಗಳು, ಗಿಟಾರ್, ಫಿಯಾನೋ, ಕೊಳಲು ಮೊದಲಾದವು) ಸಾಥ್ ನೀಡುತ್ತವೆ. ಈ ವಾದ್ಯ ಪರಿಕರಗಳ ಹಿಮ್ಮೆಳದೊಂದಿಗೆ ರೋಗಿ ಮತ್ತು ತರಬೇತುದಾರರು ಒಟ್ಟಿಗೆ ಹಾಡುಗಳನ್ನು ಹಾಡುತ್ತಾರೆ. ಕೆಲವೆಡೆ ಇದಕ್ಕಾಗಿ ನಿರ್ದಿಷ್ಟ ಹಾಡುಗಳನ್ನು ಸಂಯೋಜನೆ ಮಾಡಲಾಗಿರುತ್ತದೆ. ಮಕ್ಕಳ ಆಸಕ್ತಿಗಳನ್ನು ಗಮನಿಸಿ ಅವರಿಗೆ ಪ್ರಿಯವಾದ ಹಾಡು ಮತ್ತು ಸಂಗೀತ ವಾದ್ಯಗಳನ್ನು ಬಳಸಲಾಗುತ್ತದೆ. ಪ್ರಾಣಿಗಳು, ಪರಿಸರ ಕುರಿತು ಇಂಪಾದ ಮಾಧರ್ಯ ಸಂಗೀತವು ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ. ಇದು ಮಕ್ಕಳಲ್ಲಿ ಹೊಸ ಚೈತನ್ಯ ಮತ್ತು ನವೋಲ್ಲಾಸ ಸೃಷ್ಟಿಸಿ ಇದರತ್ತ ಆಸಕ್ತಿ ಬೆಳೆಯುತ್ತದೆ.

ಹಾಡು ಮತ್ತು ವಾದ್ಯವನ್ನು ಕಲಿಯುತ್ತಾ ಮಕ್ಕಳ ವಾಕ್ ಸಾಮಥ್ರ್ಯ ಮತ್ತು ಕಲಿಕಾ ಕೌಶಲ್ಯವೂ ಕ್ರಮೇಣ ವೃದ್ದಿಯಾಗುತ್ತದೆ. ಮಕ್ಕಳು ಮುಂದೆ ತಾವೇ ಗಾಯನ ಮಾಡಲು ಮತ್ತು ಸಂಗೀತ ವಾದ್ಯಗಳನ್ನು ನುಡಿಸಲು ಪ್ರೋತ್ಸಾಹ ನೀಡುವುದರಿಂದ ಅವರಲ್ಲಿನ ಸೃಜತಾತ್ಮಕ ಮತ್ತು ಪ್ರತಿಭೆ ಹೊರಹೊಮ್ಮಿ ಅದು ಶಿಕ್ಷಣ ಕೌಶಲ್ಯ ವೃದ್ದಿಗೂ ಸಹಕಾರಿಯಾಗುತ್ತದೆ. ಈ ತರಬೇತಿ ವೇಳೆ, ಸಂಗೀತ ಚಿಕಿತ್ಸೆ ಪರಿಣಾಮ ಕಿವಿಯಲ್ಲಿನ ನರಗಳು ಮೆದುಳಿಗೆ ಸಂಪರ್ಕ ಕಲಿಸುತ್ತದೆ. ಮೆದುಳಿನ ನರವ್ಯೂಹ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಗಮನಾರ್ಹ ವೃದ್ದಿಯಾಗುತ್ತದೆ. ಕ್ರಮೇಣ ಸಂಗೀತ ಸ್ಪರ್ಶದೊಂದಿಗೇ ಮಕ್ಕಳು ಶಿಕ್ಷಣ ಮತ್ತು ಕಲಿಕೆಯತ್ತ ಆಸಕ್ತಿ ತೋರುವಂತಹ ವಾತಾವರಣ ನಿರ್ಮಾಣವಾಗುತ್ತದೆ.

ಸಂಗೀತ ಚಿಕಿತ್ಸೆಯ ಪರಿಣಾಮಗಳು:

Sangeeta-chikitse

1. ಮಕ್ಕಳಲ್ಲಿ ಸಂಗೀತ ಚಿಕಿತ್ಸೆಯ ಪರಿಣಾಮದಿಂದ ಅವರ ಭಾಷಾ ಕಲಿಕೆ, ಏಕಾಗ್ರತೆ ಸಾಮಥ್ರ್ಯ ವೃದ್ದಿಯಾಗುತ್ತದೆ.

2. ಮಕ್ಕಳ ನರವ್ಯೂಹದ ಮೇಲೆ ಇದು ಸತ್ಪರಿಣಾಮ ಬೀರುವುದರಿಂದ ಮಕ್ಕಳಲ್ಲಿ ಸಂವಹನ ಸಾಮಥ್ರ್ಯವೂ ಹೆಚ್ಚಾಗುತ್ತದೆ.

3. ಮಕ್ಕಳು ಸಂಗೀತ ಕಲಿಯುವುದರಿಂದ ಅವರ ಶಿಕ್ಷಣದಲ್ಲಿ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿನ ಆಸಕ್ತಿ ಮೂಡಿ ಕಲಿಕೆ ಸುಲಲಿತವಾಗುತ್ತದೆ.

4. ಸಂಗೀತ ಚಿಕಿತ್ಸೆಯಿಂದ ಮಕ್ಕಳ ವಾಕ್‍ಚಾತುರ್ಯ ಹೆಚ್ಚಾಗಿ ಅವರು ಇತರರೊಂದಿಗೆ ಮುಜುಗರವಿಲ್ಲದೇ ಸಂಹವನ ನಡೆಸಲು ಸಹಕಾರಿಯಾಗುತ್ತದೆ.

5. ಮ್ಯೂಸಿಕ್ ಥೆರಪಿಯಿಂದ ಕೀಳರಿಮೆ ಕಡಿಮೆಯಾಗಿ ಮಕ್ಕಳಲ್ಲಿ ಬಾಲ್ಯದಿಂದಲೇ ಸಕರಾತ್ಮಕ ಆಲೋಚನೆಗಳು ಮೂಡುತ್ತವೆ ಮತ್ತು ನಕರಾತ್ಮಕ ಚಿಂತನೆಗಳು, ಖಿನ್ನತೆ, ಹತಾಶೆಗಳು ದೂರವಾಗುತ್ತವೆ.

6. ತಮ್ಮಲ್ಲಿ ಈ ಮುನ್ನ ಇದ್ದ ಮಾತನಾಡುವ ಸಮಸ್ಯೆಗಳು ದೂರವಾಗಿ ಅವರು ಕ್ಷಿಪ್ರವಾಗಿ ಕಲಿಕಾ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

7. ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಮಕ್ಕಳು ಧೈರ್ಯವಾಗಿ ಪೈಪೋಟಿ ಎದುರಿಸಲು ಮ್ಯೂಸಿಕ್ ಥೆರಪಿ ಸಹಕಾರಿ.

ಡಾ. ಶ್ರೀಕೃಷ್ಣ ಮಾಯ್ಲೆಂಗಿ

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!