ಉಬ್ಬಸ ಅಥವಾ ಅಸ್ತಮಾ ಬಾಧಿತರು ಅನುಭವಿಸುವ ವೇದನೆಗೆ ಮಿತಿಯೇ ಇಲ್ಲ. ಇದನ್ನು ಪೂರ್ಣವಾಗಿ ವಾಸಿ ಮಾಡುವುದು ಕಷ್ಟವಾದರೂ ಈಗ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣ ಸಾಧ್ಯ. ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ. ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ ಪರಿಸರದಿಂದಲೂ ಬರಲು ಸಾಧ್ಯವಿದೆ.
ಉಬ್ಬಸ ಅಥವಾ ಅಸ್ತಮಾ ಇದೊಂದು ನರಕಯಾತನೆ. ಉಬ್ಬಸದಿಂದ ನಮ್ಮ ಶ್ವಾಸ ಪ್ರಕ್ರಿಯೆ.. ಒಂದು ಭಯಂಕರ ಸಮಸ್ಯೆಯಾಗುತ್ತದೆ. ಉಬ್ಬಸದ ಹೆಸರು ಕೇಳುತ್ತಲೇ ಮನಸ್ಸು ತಲ್ಲಣಿಸಿ ಹೋಗುವ ಪರಿಸ್ಥಿತಿ. ಉಬ್ಬಸ ಅಥವಾ ಅಸ್ತಮಾ ಬಾಧಿತರು ಅನುಭವಿಸುವ ವೇದನೆಗೆ ಮಿತಿಯೇ ಇಲ್ಲ. ಇದನ್ನು ಪೂರ್ಣವಾಗಿ ವಾಸಿ ಮಾಡುವುದು ಕಷ್ಟವಾದರೂ ಈಗ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣ ಸಾಧ್ಯ. ಇದು ಯಾರಿಗೆ? ಯಾವಾಗ? ಏಕೆ? ಎಷ್ಟು? ತೀವ್ರವಾ ಗಿ ಬರುತ್ತದೆ ಅಥವಾ ಕಾಡುತ್ತದೆ ಎಂದು ಹೇಳಲಾಗದು. ಈ ನಿಟ್ಟಿನಲ್ಲಿ ಸಾಕಷ್ಟು ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿದ್ದರೂ ಜನಸಾಮಾನ್ಯರಲ್ಲಿ ಇದರ ಬಗ್ಗೆ ಇರುವ ಊಹಾಪೋಹಗಳು, ಸಂಶಯಗಳು ಸ್ಥಿರವಾಗಿವೆ. ಇದರ ಅತಿಯಾದ ಬಾಧೆಗೆ ನಿರ್ಲಕ್ಷ್ಯವೇ ಪ್ರಮುಖ ಕಾರಣ.
ಕಾರಣಗಳೇನು?
ವೇಗವಾಗಿ ನಡೆದರೂ, ನಾಲ್ಕು ಮೆಟ್ಟಿಲನ್ನು ಹತ್ತಿದರೂ `ಹುμï’ ಎಂದು ಆಯಾಸಪಡುವ ಲಕ್ಷಣಗಳು ಅಸ್ತಮಾದ್ದೇ ಆದರೂ ಅದರಲ್ಲಿ ವೈವಿಧ್ಯತೆಯಿದೆ. ಇವುಗಳನ್ನು `ಫೇನೋ ಟೈಪ್ಸ್’ ಎನ್ನುತ್ತಾರೆ. ಕೆಲವರಿಗೆ ಕೆಲವು ಋತುಮಾನಗಳಲ್ಲಿ ಅಸ್ತಮಾ ತುಂಬಾ ಪೀಡಿಸುತ್ತದಾದರೂ ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ. ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ ಪರಿಸರದಿಂದಲೂ ಬರಲು ಸಾಧ್ಯವಿದೆ. ಉದಾಹರಣೆಗೆ ಗಣಿ, ಗುಡ್ಡಗಾಡು, ತೀರಪ್ರದೇಶ, ಕಲುಷಿತ ಪ್ರದೇಶಗಳಲ್ಲಿ ಕೆಲಸ ಮಾಡುವವರನ್ನು ಅಸ್ತಮಾ ಹೆಚ್ಚಾಗಿ ಕಾಡಿಸುತ್ತದೆ. ಇನ್ನಷ್ಟು ಕಾರಣಗಳೆಂದರೆ ಎನ್ಕೂಲ್ಗಳು, ಅತಿ ತಣ್ಣನೆಯ ತಂಪು ಪೇಯಗಳ ಸೇವನೆ, ಮನೆಯಲ್ಲಿ ಧೂಳು, ಕಸ, ಮಣ್ಣು, ಸಮುದ್ರ ಆಹಾರ ಇತ್ಯಾದಿಗಳೂ ಅಸ್ತಾಮಾಗೆ ಕಾರಣ.
Also Read: The Asthma Diet : What you eat definitely makes a difference
ಬರುವುದೇಕೆ?
ನಮ್ಮ ಶ್ವಾಸಕೋಶಗಳಲ್ಲಿರುವ ಶ್ವಾಸನಾಳಗಳು ಬಲು ಸೂಕ್ಷ್ಮ. ಇವುಗಳಿಗೆ ಏನಾದರೂ ಅಲರ್ಜಿಯಂತಾದ್ದು(ಒಗ್ಗದಿರುವುದು) ಸೋಕಿದಾಗ ಇವು ಒಂದು ನಮೂನೆಯಲ್ಲಿ ಉಬ್ಬಿ ಹೋಗಿ ಸಂಕುಚಿತವಾಗುತ್ತವೆ. ಶ್ವಾಸ ತೆಗೆದುಕೊಳ್ಳುವುದು ಕಷ್ಟಕರವಾಗಲು ಇದೇ ಕಾರಣವಾಗಿದ್ದು ಉಬ್ಬಸಕ್ಕೆ ಮೂಲಕಾರಣವೂ ಇದೇ. ನೋವು ನಿವಾರಕ ಮಾತ್ರೆಗಳ ಸೇವನೆಯಿಂದಲೂ ಉಬ್ಬಸ ಬರಬಹುದು. ಆಂಟಿ ಇನ್ಫ್ಲೇಯೇಟರಿ (ಡ್ರಗ್ಸ್) ಇದು ಕ್ರಮೇಣ ಅಸ್ತಮಾಗೆ ತಿರುಗಬಹುದೆಂದು ವೈದ್ಯಕೀಯ ಸಂಶೋಧನೆ ಹೇಳಿದೆ. ಕೆಲವು ಆಹಾರ ಪದಾರ್ಥಗಳಲ್ಲಿ ಬಳಸುವ ಬಣ್ಣಗಳು ಸಹ ಅಸ್ತಮಾಕ್ಕೆ ಕಾರಣವಾಗುವುದರಿಂದ ಕೃತಕ ಬಣ್ಣಗಳಿಂದ ದೂರವಿರುವುದು ಕ್ಷೇಮಕರ.
ಜಾಗ್ರತೆಗಳು:
ಉಬ್ಬಸ ಬಾರದಂತೆ ಸಾಕಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸುವುದು ಅವಶ್ಯಕ.
1. ಧೂಳು, ಕಲುಷಿತ ವಾತಾವರಣದಿಂದ ಮುಕ್ತರಾಗುವುದು.
2. ಆಹಾರ ಪದಾರ್ಥಗಳ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ.
3. ತಂಬಾಕು ಸೇವನೆ, ಬೀಡಿ, ಸಿಗರೇಟು, ಚುಟ್ಟ, ಭಂಗಿಯಂತ ದುಶ್ಚಟಗಳಿಂದ ದೂರವಿರಬೇಕು.
4. ಮಲಗುವ ಕೋಣೆ (ಬೆಡ್ರೂಂ)ನ್ನು ಸ್ಟೋರ್ಸ್ ರೂಂನಂತೆ ಬಳಸಬಾರದು.
5. ತಂದೆ-ತಾಯಿಯರಲ್ಲಿ ಯಾರಿಗಾದರೂ ಧೂಮಪಾನದ ಅಭ್ಯಾಸವಿದ್ದರೆ ಮಕ್ಕಳಿಗೆ ಬೇಗ ಅಸ್ತಮಾ ಸಾಧ್ಯತೆ ಹೆಚ್ಚು.
Also Read: ಧೂಮಪಾನ ಮಾಡದಿರಿ; ಮಾಡಲು ಬಿಡದಿರಿ
6. ಕ್ರಿಮಿನಾಶಕಗಳ ವಾಸನೆ, ನೊಣ,ಸೊಳ್ಳೆ ಕಾಯಿಲ್ಸ್, ಊದುಬತ್ತಿಯ ಹೊಗೆ, ಘಾಟು ವಾಸನೆ ಅಸ್ತಮಾಕ್ಕೆ ಪ್ರೇರಕ ಅಂಶಗಳು.
7. ವ್ಯಾಯಾಮ ಮಾಡುವಾಗ ದೀರ್ಘವಾಗಿ ಉಸಿರಾಡುತ್ತಿರಬೇಕು.
8. ಹಗುರಾದ ವ್ಯಾಯಾಮ ಕಡ್ಡಾಯವಾಗಿ ಮಾಡಬೇಕು.
9. ಬೆಚ್ಚನೆ ವಾತಾವರಣದಲ್ಲಿ ಇರುವುದು ಒಳ್ಳೆಯದು.
ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್,
82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 ಮೊ.: 97422 74849