ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ : ಚಿಹ್ನೆಗಳು ಮತ್ತು ಲಕ್ಷಣಗಳೇನು?

ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಒಂದು ವಿಭಿನ್ನ ರೋಗ. ಅಧಿಕ ಬಿಪಿ ಹೊಂದಿರುವ ಬಹುತೇಕ ಮಂದಿಗೆ ಹಲವಾರು ವರ್ಷಗಳ ತನಕ ಯಾವುದೇ ರೋಗ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಇದು ಕಾಲಕ್ರಮೇಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಂಥ ಬಹುಮುಖ್ಯ ಅಂಗಗಳಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಆದಷ್ಟೂ ಮುಂಚಿತವಾಗಿ ಹೈಪರ್‍ಟೆನ್ಷನ್‍ನನ್ನು ಗುರುತಿಸಿ ಚಿಕಿತ್ಸೆ ನೀಡುವುದು ತುಂಬಾ ಅಗತ್ಯವಾಗಿರುತ್ತದೆ. ಆ ಮೂಲಕ ಇಂಥ ಅಮೂಲ್ಯ ಅಂಗಗಳು ಹಾನಿಗೀಡಾಗುವುದನ್ನು ತಪ್ಪಿಸಬಹುದು. ಈಗಾಗಲೇ ಹೇಳಿರುವಂತೆ ರೋಗಿಗಳಿಗೆ ಅಧಿಕ ರಕ್ತದೊತ್ತಡದ ಯಾವುದೇ ನಿರ್ದಿಷ್ಟ ಚಿಹ್ನೆ ಮತ್ತು ಲಕ್ಷಣಗಳು ಗೋಚರಿಸದೇ ಇರುವುದರಿಂದ, ಯಾವುದೇ ಸಣ್ಣ ಅನಾರೋಗ್ಯಕ್ಕಾಗಿ ವೈದ್ಯರ ಬಳಿ ಹೋದಾಗ ಹೈಪರ್‍ಟೆನ್ಷನ್ ಪತ್ತೆಯಾಗುತ್ತದೆ.
ರಕ್ತದೊತ್ತಡ ಎಂದರೇನು ?
ರಕ್ತದೊತ್ತಡ ಎಂದರೆ ರಕ್ತನಾಳ ಗೋಡೆಗಳಿಗೆ ವಿರುದ್ದವಾಗಿ ರಕ್ತ ಪ್ರವಹಿಸುವಿಕೆ ಎಂದರ್ಥ. ಅಪಧಮನಿಗಳು ರಕ್ತನಾಳಗಳಾಗಿದ್ದು ಹೃದಯದಿಂದ ದೇಹಕ್ಕೆ ರಕ್ತವನ್ನು ಪೂರೈಸುತ್ತವೆ. ಇಡೀ ದಿನ ರಕ್ತದೊತ್ತಡದಲ್ಲಿ ಏರಿಳಿತ ಕಂಡು ಬರುತ್ತದೆ. ಆದರೆ ಸಾಮಾನ್ಯ ರಕ್ತದೊತ್ತಡವು 120ಎಂಎಂಎಚ್‍ಜಿ ಸಿಸ್ಟೋಲಿಕ್ (ಸಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಸಂಕುಚಿತವಾದಾಗ ರಕ್ತನಾಳಗಳ ಮೇಲೆ ಬೀಳುವ ಒತ್ತಡ) ಹಾಗೂ 80ಎಂಎಂಎಚ್‍ಜಿ ಡಿಸ್ಟೋಲಿಕ್ ರಕ್ತದೊತ್ತಡ (ಡಿಸ್ಟೋಲಿಕ್ ರಕ್ತದೊತ್ತಡ ಅಂದರೆ ಹೃದಯ ಬಡಿತದ ನಡುವೆ ಹೃದಯ ವಿಶ್ರಮಿಸಿದಾಗ ಉಂಟಾಗುವ ಒತ್ತಡ ಎಂದರ್ಥ)
ಅಧಿಕ ರಕ್ತದೊತ್ತಡ ಎಂದರೇನು ?
ರಕ್ತದ ಒತ್ತಡದಲ್ಲಿ ಹೆಚ್ಚಾದಾಗ ಇದನ್ನು ಅಧಿಕ ರಕ್ತದೊತ್ತಡ ಅಥವಾ ಹೈಪರ್‍ಟೆನ್ಷನ್ ಎಂದು ಕರೆಯಲಾಗುತ್ತದೆ. ಅಧಿಕ ರಕ್ತದೊತ್ತಡವು ಕಾರ್ಡಿಯೋವ್ಯಾಸ್ಕುಲರ್ ರೋಗಗಳು, ಮೂತ್ರಪಿಂಡ ರೋಗಗಳು ಮತ್ತು ಪಾಶ್ರ್ವವಾಯು ಗಂಡಾಂತರವನ್ನು ಹೆಚ್ಚಿಸುತ್ತದೆ.ಹೃದಯ ಮಾಂಸಖಂಡಗಳ ಕುಗ್ಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ರಕ್ತ ನಾಳಗಳ ಪ್ರತಿರೋಧದಿಂದಲೂ ಹೈಪರ್‍ಟೆನ್ಷನ್ ಉಂಟಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ವೇಳೆ ಹೃದಯದ ಸಂಕೋಚನವು ಆರ್ಟರಿಗಳ ವಿಸ್ತರಣೆಗೆ ಒತ್ತಡ ಹಾಕುತ್ತದೆ. ಹೃದಯವು ಸಂಕುಚಿತಗೊಂಡಾಗ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದು ವಿಶ್ರಾಂತಿಯಲ್ಲಿದ್ದಾಗ ಒತ್ತಡವು ಕಡಿಮೆಯಾಗುತ್ತದೆ
ಅಧಿಕ ರಕ್ತದೊತ್ತಡದ ಚಿಹ್ನೆಗಳು ಮತ್ತು ಲಕ್ಷಣಗಳೇನು?
ಅಧಿಕ ರಕ್ತದೊತ್ತಡ ಯಾವುದೇ ಚಿಹ್ನೆಗಳು ಅಥವಾ ಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಸಾಂದರ್ಭಿಕವಾಗಿ ತಲೆನೋವು ಉಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಅಥವಾ ಮೌನ ಹಂತಕ ಎಂದು ಕರೆಯಲಾಗುತ್ತದೆ. ಯಾವುದೇ ಚಿಹ್ನೆ ಅಥವಾ ಲಕ್ಷಣಗಳು ಇಲ್ಲದೇ ಹೃದಯ, ರಕ್ತನಾಳಗಳು, ಮೂತ್ರಪಿಂಡ ಹಾಗೂ ದೇಹದ ಇತರ ಭಾಗಗಳಿಗೆ ಇದು ಹಾನಿಯನ್ನು ಮುಂದುವರೆಸುವುದರಿಂದ ಹೀಗೆ ಬಣ್ಣಿಲಾಗಿದೆ. ಬಹುತೇಕ ರಕ್ತದೊತ್ತಡದ ಪ್ರಕರಣಗಳಲ್ಲಿ ರಕ್ತದೊತ್ತಡ ಇರುವುದೇ ತಿಳಿಯದ ಕಾರಣ ಅಗಾಗ ರಕ್ತದೊತ್ತಡವನ್ನು ತಪಾಸಣೆಗೆ ಒಳಪಡಿಸುವುದು ತುಂಬಾ ಮುಖ್ಯವಾಗಿರುತ್ತದೆ.
ಅಧಿಕ ರಕ್ತದೊತ್ತಡ ಹೊಂದುವ ಗಂಡಾಂತರ ನಿಮಗಿದೆಯೇ ?
ಕೆಲವು ಆರೋಗ್ಯ ಸ್ಥಿತಿಗಳು, ಹಾಗೆಯೇ ಜೀವನ ಶೈಲಿ ಮತ್ತು ವಂಶವಾಹಿ ಅಂಶಗಳು ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುವ ಗಂಡಾಂತರಕ್ಕೆ ಕೊಡುಗೆ ನೀಡುತ್ತವೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಗಂಡಾಂತರದ ಸಂಗತಿಗಳೆಂದರೆ :
ವೃದ್ದಾಪ್ಯ : ವಯಸ್ಸಾದಂತೆ ಅಧಿಕ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿರುತ್ತದೆ. 45 ವರ್ಷ ಮೇಲ್ಪಟ್ಟ ಪುರುಷರು ಹಾಗೂ 55 ವರ್ಷ ಮೇಲ್ಪಟ್ಟ ಮಹಿಳೆಯರು ಅಧಿಕ ರಕ್ತದೊತ್ತಡಕ್ಕೆ ಒಳಗಾಗುವ ಸಂಭವ ಹೆಚ್ಚಾಗಿರುತ್ತದೆ.
ಅತಿಯಾದ ತೂಕ ಮತ್ತು ಬೊಜ್ಜು :  ಸಾಮಾನ್ಯಕ್ಕಿಂತ ಅಧಿಕ ದೇಹ ತೂಕವಿದ್ದರೆ ಅಧಿಕ ರಕ್ತದೊತ್ತಡ ಗಂಡಾಂತರ ಹೆಚ್ಚಾಗಿರುತ್ತದೆ.
ಲಿಂಗ : ವಯಸ್ಕ ಮಹಿಳೆಯರಲ್ಲಿ ವಯಸ್ಕ ಪುರುಷರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ಯುವತಿಯರಲ್ಲಿ ಯುವಕರಿಗಿಂತ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚಾಗಿರುತ್ತದೆ. 50 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬರುತ್ತದೆ.
ಅನಾರೋಗ್ಯಕರ ಜೀವನಶೈಲಿ : ಅತಿಯಾದ ಸೋಡಿಯಂ (ಉಪ್ಪು) ಆಹಾರ ಪದಾರ್ಥಗಳು, ಆಲ್ಕೋಹಾಲ್ ಸೇವನೆ, ಧೂಮಪಾನ, ಸಾಕಷ್ಟು ದೈಹಿಕ ಚಟುವಟಿಕೆಗಳು ಇಲ್ಲದಿರುವಿಕೆ, ಆಹಾರದಲ್ಲಿ ಸಾಕಷ್ಟು ಪೋಟ್ಯಾಷಿಯಂ ಬಳಸದಿರುವಿಕೆ
ಅಧಿಕ ರಕ್ತದೊತ್ತಡದ ಕೌಟುಂಬಿಕ ಹಿನ್ನಲೆ
ದೀರ್ಘಕಾಲದ ಒತ್ತಡ ಯಾವುದೇ ಚಿಕಿತ್ಸೆಯನ್ನು ಪಡೆಯಲು ವಿಫಲವಾದರೆ ಏನು ತೊಡಕುಗಳು ಉಂಟಾಗುತ್ತವೆ ?
ಹೃದ್ರೋಗ : ಹೃದಯ ವೈಫಲ್ಯ. ದೇಹಕ್ಕೆ ಹೃದಯದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪಂಪ್ ಮಾಡುವಲ್ಲಿ ಸಾಧ್ಯವಾಗದಿರುವಿಕೆ, ಹೃದಯಾಘಾತ.
ಪಾಶ್ರ್ವವಾಯು : ಮೆದುಳಿನ ಪ್ರದೇಶಕ್ಕೆ ರಕ್ತ ಪೂರೈಕೆ ಕುಂಠಿತವಾದಾಗ ಪಾಶ್ರ್ವವಾಯು ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಮಂದಿ ಪಾಶ್ರ್ವವಾಯುವಿಗೆ ಒಳಗಾಗುವ ಸಾಧ್ಯತೆ ನಾಲ್ಕರಿಂದ ಆರು ಪಟ್ಟು ಹೆಚ್ಚಾಗಿರುತ್ತದೆ.
ಮೂತ್ರಪಿಂಡ ರೋಗ : ಮೂತ್ರಪಿಂಡ ವೈಫಲ್ಯ. ಮೂತ್ರಪಿಂಡದಲ್ಲಿನ ರಕ್ತನಾಳಗಳು ಕಿರಿದಾಗುವುದರಿಂದ ಕಿಡ್ನಿ ವಿಫಲತೆಗೆ ಕಾರಣವಾಗುತ್ತದೆ.
ನೇತ್ರ ಸಮಸ್ಯೆ : ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡದಿದ್ದರೆ ನೇತ್ರ ದೃಷ್ಟಿಗೆ ಧಕ್ಕೆಯಾಗಿ ರೆಟಿನಾದಲ್ಲಿನ ರಕ್ತನಾಳಗಳ ಹಾನಿಗೆ ಕಾರಣವಾಗುತ್ತದೆ. ಈ ದೋಷವನ್ನು ಹೈಪರ್‍ಟೆನ್‍ಸಿವ್ ರೆಟಿನೋಪಥಿ ಎಂದು ಕರೆಯುತ್ತಾರೆ.
ಅಪಧಮನಿಯ ಊದುವಿಕೆ : ಅನ್ಯೂರಿಸಮ್ ಅಥವಾ ಅಪಧಮಿನಿಯ ಊದುವಿಕೆ ಎಂದರೆ ರಕ್ತನಾಳದ ಗೋಡೆಯಲ್ಲಿನ ಅಸಾಧಾರಣ ಊತ ಮತ್ತು ಹೃದಯದಿಂದ ದೇಹಕ್ಕೆ ರಕ್ತವನ್ನು ಕೊಂಡೊಯ್ಯವ ಮುಖ್ಯ ಅಪಧಮನಿಯು ಊದಿಕೊಳ್ಳುವಿಕೆಯ ಸಾಮಾನ್ಯ ಜಾಗವಾಗಿರುತ್ತದೆ.
ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!