ಸ್ವಯಂ ಇನ್ಸುಲಿನ್‍ಗೆ ಟಿಪ್ಸ್‌ಗಳು

  ಇನ್ಸುಲಿನ್ ಅವಲಂಬಿತ ಡಯಾಬಿಟಿಸ್ ಇರುವ(ಟೈಪ್ 1 ಡಯಾಬಿಟಿಸ್) ಎಲ್ಲ ವ್ಯಕ್ತಿಗಳು ಹಾಗೂ ಇನ್ಸುಲಿನ್ ಅವಲಂಬನೆ ರಹಿತ ಡಯಾಬಿಟಿಸ್ ಇರುವ (ಟೈಪ್ 2 ಡಯಾಬಿಟಿಸ್) ಕೆಲವರು ಪ್ರತಿದಿನ ಇನ್ಸುಲಿನ್ ಸೂಜಿಮದ್ದುಗಳನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ. ರೋಗಿಗಳು ತಾವಾಗಿಯೇ ಇನ್ಸುಲಿನ್ ಇಂಜೆಕ್ಷನ್‍ಗಳನ್ನು ತೆಗೆದುಕೊಳ್ಳಬಹುದು. ಇನ್ಸುಲಿನ್ ಜೀವರಕ್ಷಕ ಮತ್ತು ಡಯಾಬಿಟಿಸ್ ತೊಡಕುಗಳನ್ನು ತಡೆಗಟ್ಟುತ್ತದೆ.
ಇನ್ಸುಲಿನ್‍ನನ್ನು ಯೂನಿಟ್‍ನಲ್ಲಿ ಮಾಪನ ಮಾಡಲಾಗುತ್ತದೆ ಹಾಗೂ ವಿವಿಧ ಸಾಮಥ್ರ್ಯಗಳಲ್ಲಿ ಲಭಿಸುತ್ತದೆ. ಸಾಮಾನ್ಯವಾಗಿ ಬಳಸುವ ಸಾಮಥ್ರ್ಯವೆಂದರೆ ಪ್ರತಿ ಮಿಲಿ ಲೀಟರ್‍ಗೆ 40 ಯೂನಿಟ್‍ಗಳು (ಯು-40) ಅಥವಾ ಪ್ರತಿ ಮಿಲಿ ಲೀಟರ್‍ಗೆ 100 ಯೂನಿಟ್‍ಗಳು (ಯು-100). ಯು-40 ಇನ್ಸುಲಿನ್‍ನೊಂದಿಗೆ ಯು-40 ಸಿರಿಂಜ್‍ಗಳನ್ನು ಹಾಗೂ ಯು-100 ಇನ್ಸುಲಿನ್‍ನೊಂದಿಗೆ ಯು-100 ಸಿರಿಂಜ್‍ಗಳನ್ನು ಯಾವಾಗಲೂ ಬಳಸಬೇಕು.

ಇನ್ಸುಲಿನ್ ಇಂಜೆಕ್ಷನ್‍ಗೆ ಅಗತ್ಯವಿರುವ ವಸ್ತುಗಳು

  • ಬಳಸಿ ಎಸೆಯುವ ಇನ್ಸುಲಿನ್ ಸಿರಿಂಜ್
  • ಸ್ವಾಭಾವಿಕ ಗುಣರಹಿತ ಸ್ಪಿರಿಟ್
  • ಹತ್ತಿ

ಇನ್ಸುಲಿನ್ ನೀಡಬೇಕಾದ ಸ್ಥಳಗಳು

ಇನ್ಸುಲಿನ್ ಇಂಜೆಕ್ಷನ್ ಸ್ಥಳವು ಇನ್ಸುಲಿನ್ ಹೀರಿಕೊಳ್ಳುವುದರ ಮೇಲೆ ಪ್ರಭಾವ ಬೀರುತ್ತದೆ.

ಸ್ಥಳಗಳು :

  • ಉದರ
  • ತೊಡೆಗಳ ಮೇಲಿನ ಮತ್ತು ಹೊರ ಭಾಗ
  • ತೋಳುಗಳ ಮೇಲ್ಭಾಗ
  • ಉದರದಿಂದ ಇನ್ಸುಲಿನ್ ಉತ್ತಮ ರೀತಿಯಲ್ಲಿ ಹೀರಿಕೊಳ್ಳುತ್ತದೆ.

ಇನ್ಸುಲಿನ್ ಲೋಡ್ ಮಾಡುವ ವಿಧಾನ

  • ಸ್ವಾಭಾವಿಕ ಗುಣರಹಿತ ಸ್ಪಿರಿಟ್‍ನಲ್ಲಿ ಅದ್ದಿದ ಹತ್ತಿಯೊಂದಿಗೆ ಬಾಟಲ್‍ನ ಮುಚ್ಚಳವನ್ನು ಸ್ವಚ್ಚಗೊಳಿಸಬೇಕು.
  • ಅಗತ್ಯವಿರುವ ಇನ್ಸುಲಿನ್ ಪ್ರಮಾಣದಷ್ಟೇ ಗಾಳಿಯ ಪ್ರಮಾಣವನ್ನು ಸಿರಿಂಜ್‍ಗೆ ಎಳೆಯಬೇಕು.
  • ಇನ್ಸುಲಿನ್ ಬಾಟಲ್‍ನನ್ನು ಮೇಲ್ಮುಖವಾಗಿಸಿ ಸೂಜಿಯನ್ನು ಬಾಟಲ್‍ಗೆ ಚುಚ್ಚಬೇಕು ಮತ್ತು ಅದರೊಳಗೆ ಗಾಳಿಯನ್ನು ಸೇರಿಸಬೇಕು.
  • ಬಾಟಲ್‍ನನ್ನು ತಲೆಕೆಳಗಾಗಿ ಮಾಡಿ ಇನ್ಸುಲಿನ್ ಮೇಲ್ಮೈ ಕೆಳಗೆ ಸೂಜಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಸಿರಿಂಜ್‍ಗೆ ಸರಿಯಾದ ಪ್ರಮಾಣದ ಇನ್ಸುಲಿನ್‍ನನ್ನು ಎಳೆಯಬೇಕು.
  • ಗಾಳಿ ಗುಳ್ಳೆಗಳನ್ನು ಹೋಗಲಾಡಿಸಲು ಸಿರಿಂಜ್ ಮೇಲೆ ಮೃದುವಾಗಿ ಬಡಿಯಬೇಕು.
  • ಇಂಜೆಕ್ಷನ್‍ಗಾಗಿ ಈಗ ಸಿರಿಂಜ್ ಸಿದ್ಧವಾಗಿದೆ.

ಇನ್ಸುಲಿನ್ ಮಿಶ್ರಣ ವಿಧಾನ

  • ಸ್ವಾಭಾವಿಕ ಗುಣರಹಿತ ಸ್ಪಿರಿಟ್‍ನೊಂದಿಗೆ ಇನ್ಸುಲಿನ್ ಬಾಟಲ್‍ಗಳ ಮುಚ್ಚಳಗಳನ್ನು ಸ್ವಚ್ಚಗೊಳಿಸಬೇಕು.
  • ನಿಮ್ಮ ಮುಸುಕು ಇನ್ಸುಲಿನ್‍ಗೆ ಸಮಾನವಾಗಿ ಸಿರಿಂಜ್‍ಗೆ ಗಾಳಿಯನ್ನು ಎಳೆಯಬೇಕು.
  • ಮುಸುಕು ಇನ್ಸುಲಿನ್ ಬಾಟಲ್‍ನನ್ನು ಮೇಲ್ಮುಖವಾಗಿಸಿ ಸೂಜಿಯನ್ನು ಬಾಟಲ್‍ಗೆ ಚುಚ್ಚಬೇಕು ಮತ್ತು ಅದರೊಳಗೆ ಗಾಳಿಯನ್ನು ಸೇರಿಸಬೇಕು.
  • ಇನ್ಸುಲಿನ್‍ನನ್ನು ಎಳೆಯದೇ ಸೂಜಿಯನ್ನು ಹೊರಕ್ಕೆ ತೆಗೆಯಬೇಕು.
  • ಅಗತ್ಯವಾದ ನಿಮ್ಮ ಸ್ಪಷ್ಟ ಇನ್ಸುಲಿನ್‍ಗೆ ಸಮಾನವಾಗಿ ಸಿರಿಂಜ್‍ಗೆ ಗಾಳಿಯನ್ನು ಎಳೆಯಬೇಕು, ಹಾಗೂ ಸ್ಪಷ್ಟ ಇನ್ಸುಲಿನ್ ಬಾಟಲ್‍ಗೆ ಗಾಳಿಯನ್ನು ಸೇರಿಸಬೇಕು. ಈಗ ಅಗತ್ಯವಿರುವ ಸ್ಪಷ್ಟ ಇನ್ಸುಲಿನ್‍ನ ನಿಖರ ಪ್ರಮಾಣವನ್ನು ಎಳೆಯಬೇಕು. ನಂತರ ಮುಸುಕು ಇನ್ಸುಲಿನ್ ಬಾಟಲ್‍ನನ್ನು ತಲೆಕೆಳಗೆ ಮಾಡಬೇಕು ಹಾಗೂ ಎಚ್ಚರಿಕೆಯಿಂದ ಅದರೊಳಗೆ ಸೂಜಿಯನ್ನು ಸೇರಿಸಬೇಕು.
  • ಇನ್ಸುಲಿನ್ ಮೇಲ್ಮೈ ಕೆಳಗೆ ಸೂಜಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಿರುವ ಮುಸುಕು ಇನ್ಸುಲಿನ್‍ನ ನಿಖರ ಪ್ರಮಾಣವನ್ನು ಎಳೆಯಬೇಕು.
  • ಮೊದಲು ಸ್ಪಷ್ಟ ಇನ್ಸುಲಿನ್‍ನನ್ನು ನಂತರ ಮುಸುಕು ಇನ್ಸುಲಿನ್‍ನನ್ನು ಎಳೆಯುವ ಬಗ್ಗೆ ನೆನಪಿರಲಿ. ಇಂಜೆಕ್ಷನ್‍ಗಾಗಿ ಈಗ ಸಿರಿಂಜ್ ಸಿದ್ಧವಾಗಿದೆ.

ಸ್ವಯಂ ಸೂಜಿಮದ್ದು ಪಡೆಯಲು ಹೆಜ್ಜೆಗಳು

  • ಇನ್ಸುಲಿನ್ ಇಂಜೆಕ್ಷನ್ ಸ್ಥಳ ಯಾವುದೇ ಇರಲಿ ವಿಧಾನವು ಅದೇ ರೀತಿಯಾಗಿರುತ್ತದೆ.
  • ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
  • ಸ್ವಾಭಾವಿಕ ಗುಣರಹಿತ ಸ್ಪಿರಿಟ್‍ನೊಂದಿಗೆ ಸ್ಥಳವನ್ನು ಸ್ವಚ್ಚಗೊಳಿಸಿ.
  • ಮಾಂಸಖಂಡಕ್ಕೆ ಸೂಜಿ ಪ್ರವೇಶಿಸುವುದನ್ನು ತಡೆಯಲು ಚರ್ಮವನ್ನು ಬಿಗಿಯಾಗಿ ಹಿಡಿದುಕೊಂಡು ಚುಚ್ಚಬೇಕು.
  • ಸೂಜಿಯನ್ನು ಲಂಬವಾಗಿ ಸೇರಿಸಬೇಕು (ಅಂದರೆ) ಚರ್ಮದ ಮೇಲ್ಮೈಗೆ 90 ಡಿಗ್ರಿಗಳ ಕೋನದಲ್ಲಿ ಚುಚ್ಚಬೇಕು.
  • ಈಗ ಚರ್ಮವನ್ನು ಬಿಡುಗಡೆ ಮಾಡಬೇಕು ಮತ್ತು ಇನ್ಸುಲಿನ್‍ನನ್ನು ಚರ್ಮಕ್ಕೆ ಸೇರಿಸಬೇಕು.
  • ಸೂಜಿ ಚುಚ್ಚಿದ ಸ್ಥಳದ ಮೇಲೆ ಹತ್ತಿಯನ್ನು ಇರಿಸಬೇಕು ಹಾಗೂ ಸಿರಿಂಜ್‍ನನ್ನು ತೆಗೆಯಬೇಕು.
  • ಚುಚ್ಚುಮದ್ದು ನೀಡಿದ ನಂತರ ಆ ಜಾಗದ ಮೇಲೆ ಮಸಾಜ್ ಮಾಡಬಾರದು.
  • ಒಂದು ನಿರ್ದಿಷ್ಟ ಸ್ಥಳವು ಗಟ್ಟಿಯಾಗುವುದು ಅಥವಾ ಊದಿಕೊಳ್ಳುವುದನ್ನು ತಪ್ಪಿಸಲು ಹಾಗೂ ಇನ್ಸುಲಿನ್ ಅಸಮರ್ಪಕವಾಗಿ ಹೀರಿಕೊಳ್ಳುವುದನ್ನು ತಡೆಯಲು ಸ್ಥಳವನ್ನು ವೃತ್ತಾಕಾರವಾಗಿ ಬದಲಿಸುವುದು ಮುಖ್ಯ.
    ಇನ್ಸುಲಿನ್ ಇಂಜೆಕ್ಷನ್‍ನಲ್ಲಿ ಅನುಸರಿಸಬೇಕಾದ ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು

ಇನ್ಸುಲಿನ್ ಪೆನ್‍ಗಳು :
ಮೈಕ್ರೋಫೈನ್ ಸೂಜಿಗಳನ್ನು ಹೊಂದಿರುವ ಪೆನ್ ರೀತಿಯ ಇನ್‍ಜೆಕ್ಟರ್‍ಗಳ ಮುಖಾಂತರ ಇನ್ಸುಲಿನ್‍ನನ್ನು ತೆಗೆದುಕೊಳ್ಳುವ ಮೂಲಕ ನೋವುರಹಿತ ಚುಚ್ಚುಮದ್ದು ವಿಧಾನಗಳನ್ನು ಈಗ ಅಳವಡಿಸಿಕೊಳ್ಳಬಹುದಾಗಿದೆ. ಇವುಗಳ ವಿಧಾನವು ಮೇಲೆ ತಿಳಿಸಿದ್ದಕ್ಕಿಂತ ತುಂಬಾ ವಿಭಿನ್ನವಾಗಿರುತ್ತವೆ.
ಬ್ಲಡ್ ಗ್ಲುಕೋಸ್‍ನ ಸ್ವಯಂ-ಉಸ್ತುವಾರಿ
ಡಯಾಬಿಟಿಸ್ ನಿಯಂತ್ರಣವನ್ನು ಮೌಲ್ಯಮಾಪನ ಮಾಡಲು ಬ್ಲಡ್ ಗ್ಲುಕೋಸ್‍ನ ಸ್ವಯಂ ಉಸ್ತುವಾರಿಯು ಬಹು ಉಪಯುಕ್ತ ವಿಧಾನಗಳಲ್ಲಿ ಒಂದು

ಯಾರು ಸ್ವಯಂ-ಉಸ್ತುವಾರಿ ಮಾಡಬೇಕು ?

  • ಈಗ ಮುಕ್ತವಾಗಿ ಲಭಿಸುವ ಪರೀಕ್ಷೆ ಪಟ್ಟಿ ಮತ್ತು ಮೀಟರ್‍ಗಳನ್ನು ಬಳಸಿ ತಮ್ಮ ಬ್ಲಡ್ ಗ್ಲುಕೋಸ್ ಮಟ್ಟಗಳನ್ನು ಎಲ್ಲ ರೋಗಿಗಳು ಉಸ್ತುವಾರಿ ಮಾಡಬಹುದಾಗಿದೆ.
  • ವಿಶೇಷವಾಗಿ ಬಹು ಪ್ರಮಾಣ ಬಳಸುವ ಇನ್ಸುಲಿನ್ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳು.
  • ವ್ಯಾಪಕ ಏರಿಳಿತದ ಬ್ಲಡ್ ಗ್ಲುಕೋಸ್ ಮಟ್ಟಗಳಿರುವ ರೋಗಿಗಳು.
  • ತೀವ್ರ ಕೆಟೊಸಿಸ್ ಅಥವಾ ಮತ್ತೆ ಮತ್ತೆ ಕಾಣಿಸಿಕೊಳ್ಳು ಹೈಪೋಗ್ಲಿಸಿಮಿಯಾಗೆ ಒಳಗಾಗುವ ರೋಗಿಗಳು.
  • ಹೈಪೋಗ್ಲಿಸಿಮಿಕ್ ‘ಅರಿವು ಇಲ್ಲದ’ವರು.
  • ಗರ್ಭಧರಿಸಿದ ಡಯಾಬಿಟಿಸ್ ರೋಗಿಗಳು.
  • ಅಸಾಧಾರಣ “ರೆನಲ್ ಥ್ರೆಶೋಲ್ಡ್ಸ್’ ಅಂದರೆ ಮೂತ್ರ ಪರೀಕ್ಷೆಗಳು ಅವಾಸ್ತವವಾಗಿರುವವರು.

ಬ್ಲಡ್ ಗ್ಲುಕೋಸ್‍ನ ಸ್ವಯಂ-ಉಸ್ತುವಾರಿ ಪ್ರಯೋಜನಗಳು

ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಬ್ಲಡ್ ಗ್ಲುಕೋಸ್ ಮಟ್ಟಗಳನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಮೌಲ್ಯಮಾಪನ ಮಾಡಲು ಇದು ಅವಕಾಶ ನೀಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ರೋಗಿ ಮತ್ತು ವೈದ್ಯರಿಗೆ ಸಾಧ್ಯವಾಗುತ್ತದೆ.
ಜೀವನಶೈಲಿಗೆ ಉತ್ತಮ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ.
ಪ್ರಮಾಣಗಳಿಗೆ ಹೊಂದಿಕೊಳ್ಳುವ ಬಗ್ಗೆ ಮೂಲ ಅರಿವಿನೊಂದಿಗೆ, ರೋಗಿಯು ಗರಿಷ್ಠ ನಿಯಂತ್ರಣ ಹೊಂದುವುದಕ್ಕಾಗಿ ತಮ್ಮ ಚಿಕಿತ್ಸೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.
ಬ್ಲಡ್ ಗ್ಲುಕೋಸ್‍ನ ಸ್ವಯಂ-ಉಸ್ತುವಾರಿಯು ರಕ್ತದಲ್ಲಿ ಸಕ್ಕರೆ ಪ್ರಮಾಣ ತೀವ್ರ ಇಳಿಮುಖವಾದ ಸಂದರ್ಭದಲ್ಲಿ ಸಕಾಲದಲ್ಲಿ ಹೈಪೋಗ್ಲಿಸಿಮಿಯಾವನ್ನು ನಿರ್ಧರಿಸುವ ಏಕೈಕ ಪ್ರಾಯೋಗಿಕ ವಿಧಾನವಾಗಿದೆ.
ಸ್ವಯಂ-ಉಸ್ತುವಾರಿಯು ಬ್ಲಡ್ ಷುಗರ್ ನಿಯಂತ್ರಣವನ್ನು ಸುಧಾರಿಸಲು ಹಾಗೂ ಉತ್ತಮ ರೀತಿಯಲ್ಲಿ ಗ್ಲೈಕೋಸಿಲೇಟೆಡ್ ಹಿಮೋಗ್ಲೋಬಿನ್ (ಎಚ್‍ಬಿಎಐಸಿ) ಮಟ್ಟವನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.

ಬ್ಲಡ್ ಗ್ಲುಕೋಸ್ ಸ್ವಯಂ-ಉಸ್ತುವಾರಿಯ ಇತಿಮಿತಿಗಳು

  • ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸದಿದ್ದಲ್ಲಿ, ಫಲಿತಾಂಶವು ತಪ್ಪುದಾರಿಗೆ ಕೊಂಡೊಯ್ಯುತ್ತದೆ.
  • ಮೀಟರ್ ಮಾಪನದ ನಿಖರತೆಯನ್ನು ಪುನ: ತಪಾಸಣೆ ಮಾಡುವುದು ಅಗತ್ಯ.
  • ಮೀಟರ್‍ಗಳು ಮತ್ತು ಪ್ರಯೋಗಾಲಯ ಮೌಲ್ಯಮಾಪನಗಳ ನಡುವೆ ಶೇಕಡ 10-15ರಷ್ಟು ವ್ಯತ್ಯಾಸ ಇರಬಹುದಾಗಿರುತ್ತದೆ.

ಡಾ.ಶಿವಪ್ರಸಾದ್
ವೈದೇಹಿ ಹಾಸ್ಪಿಟಲ್
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್ : 080-28413381/2/3/4 www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!