ಡಾ|| ಹೆಚ್ ಹನುಮಂತರಾಯ – ಆಯುರ್ವೇದದಲ್ಲಿ ಅಜರಾಮರ ಸಾಧಕ

ಡಾ || ಹೆಚ್ ಹನುಮಂತರಾಯ – ಸ್ಥಾಪಕರು – ಕುಮಾರ್ ಆಯುರ್ವೇದ ಆಶ್ರಮ – ಆಯುರ್ವೇದದಲ್ಲಿ ಅಜರಾಮರ ಸಾಧಕ. ಶಿಕ್ಷಣ, ಸಾಹಿತ್ಯ, ಆಯುರ್ವೇದ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿದ ಮಹನೀಯರು. ತಮ್ಮ ಪರಿಶ್ರಮ, ಸ್ವಾಧ್ಯಯನ ಮತ್ತು ಸೇವಾ ಮನೋಭಾವದಿಂದ ಅನೇಕ ಮಂದಿಗೆ ಪ್ರೇರಣೆಯಾದವರು. ಅವರ ಜೀವನಗಾಥೆ ಸಾಧನೆಯ ಶ್ರೇಷ್ಠ ಉದಾಹರಣೆಯಾಗಿದೆ. ಇತ್ತೀಚೆಗೆ, ಡಿಸೆಂಬರ್ 2025ರಲ್ಲಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ನಡೆದ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ “ವಿಶ್ವ ಆರೋಗ್ಯ ರತ್ನ” ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.

Dr H Hanumantharaya - āyurvēdadalli ajarāmara sādhaka #vydyaloka #healthvision #kumarayurveda
ಡಾ || ಹೆಚ್ ಹನುಮಂತರಾಯ – ಆಯುರ್ವೇದದಲ್ಲಿ ಅಜರಾಮರ ಸಾಧಕ

1925ರ ಮೇ 28ರಂದು ತುಮಕೂರು ಜಿಲ್ಲೆಯ ರಾಮಗಾನಹಳ್ಳಿಯಲ್ಲಿ ಜನಿಸಿದ ಡಾ|| ಹೆಚ್. ಹನುಮಂತರಾಯರು ತಮ್ಮ ಜೀವನವನ್ನೇ ಸಾಧನೆ ಮತ್ತು ಸಮಾಜಸೇವೆಗೆ ಅರ್ಪಿಸಿದ ಮಹನೀಯರು. ಕರ್ನಾಟಕದ ಅತ್ಯಂತ ಹಳೆಯ ಹಾಗೂ ಪ್ರಮುಖ ಆಯುರ್ವೇದ ಔಷಧಿ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ **ಕುಮಾರ್ ಆಯುರ್ವೇದ ಆಶ್ರಮ** ವನ್ನು ಸ್ಥಾಪಿಸಿ, ಆಯುರ್ವೇದ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ವಿದ್ಯಾಭ್ಯಾಸ ಮತ್ತು ಸಾಹಿತ್ಯ ಸಾಧನೆ
“ಗುರುಮುಖವಿಲ್ಲದೆ ವಿದ್ಯಾಭ್ಯಾಸ” ಎನ್ನುವುದು ಇವರ ಜೀವನದ ವಿಶೇಷತೆ. ಪ್ರೌಢಶಾಲೆಯಲ್ಲಿ ಕುಳಿತು ಕಲಿಯದೇ ಪ್ರೌಢಶಾಲಾ ಅಧ್ಯಾಪಕರಾದರು; ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕೇಳದೇ ಉಪನ್ಯಾಸಕರಾದರು. ತಮ್ಮ ಸ್ವಾಧ್ಯಯನ ಮತ್ತು ಅಚಲ ಸಂಕಲ್ಪದಿಂದ ಎಂ.ಎ., ಬಿ.ಎಡ್. ಪದವಿಗಳನ್ನು ಪಡೆದು ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಇವರು ರಚಿಸಿದ ನಾಲ್ಕು ಕಿರು ಕಥೆಗಳು ಮಾಧ್ಯಮಿಕ ಶಾಲೆಗಳ ಉಪಪಠ್ಯಗಳಾಗಿ ಅಂಗೀಕಾರಗೊಂಡವು. ಪ್ರೊ|| ಶಾಮರಾಯರು ಹಾಗೂ ಪ್ರೊ|| ಹ.ಮ. ನಾಯಕರೊಡಗೂಡಿ ರಚಿಸಿದ “ಸಾಹಿತ್ಯ ಸಂಪುಟ” ಎಂಬ ಕೃತಿ ಹತ್ತನೇ ತರಗತಿಯ ಪಠ್ಯಪುಸ್ತಕವಾಗಿ ಹತ್ತು ವರ್ಷಗಳ ಕಾಲ ಮಾನ್ಯತೆ ಪಡೆದಿತ್ತು. ಪ್ರೊ|| ಜವರೇಗೌಡ, ಪ್ರೊ|| ಶಾಮರಾಯರು, ಪ್ರೊ|| ಹ.ಮ. ನಾಯಕರು ಮತ್ತು ಪ್ರೊ|| ವೆಂಕಟಸುಬ್ಬಯ್ಯ ಅವರೊಂದಿಗೆ ಕನ್ನಡ ಕಾರ್ಯಾಗಾರಗಳಲ್ಲಿ ಕಾರ್ಯನಿರ್ವಹಿಸಿ, ಅವರ ಪ್ರೀತಿಯ ಮತ್ತು ಗೌರವದ ಪಾತ್ರರಾಗಿದ್ದರು.

ಆಯುರ್ವೇದ ಮತ್ತು ಸಂಶೋಧನೆ
ಜ್ಯೋತಿಷ್ಯ, ಹೋಮಿಯೋಪತಿ ಮತ್ತು ಆಯುರ್ವೇದಗಳಲ್ಲಿ ಸ್ವತಂತ್ರವಾಗಿ ಪರಿಣಿತಿ ಗಳಿಸಿದ ಡಾ|| ಹನುಮಂತರಾಯರು ವಿಶೇಷವಾಗಿ ಆಯುರ್ವೇದ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಿದರು. ಮಧುಮೇಹ ಸೇರಿದಂತೆ ಸುಮಾರು ಮೂವತ್ತು ಸಂಶೋಧನೆಗಳನ್ನು ನಡೆಸಿ, ಅದರಲ್ಲಿ ಹತ್ತೊಂಬತ್ತು ಔಷಧಿಗಳಿಗೆ ಆಯುಷ್ ಇಲಾಖೆಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗೆ ಪರಿಚಯಿಸಿದರು.
ಕರ್ನಾಟಕ ಆಯುರ್ವೇದ ಔಷಧಿಗಳ ಪರವಾನಗಿ ಇಲಾಖೆಯು ಇವರ ಸಂಸ್ಥೆಯ 30ಕ್ಕೂ ಹೆಚ್ಚು ಉತ್ಪನ್ನಗಳಿಗೆ ಪರವಾನಿಗೆ ನೀಡಿದೆ. ಸಂಶೋಧನೆಯ ಫಲವಾಗಿ ನಿರ್ಮಿತವಾದ ಔಷಧಿಗಳು ಪರಿಣಾಮಕಾರಿಯಾಗಿರುವುದರಿಂದ ಜನಪ್ರಿಯತೆ ಗಳಿಸಿವೆ. ಇವರ ಸಾಧನೆಗಳನ್ನು ಗಮನಿಸಿ, ಕೇಂದ್ರ ಸರ್ಕಾರದ ನೆರವಿನಿಂದ ಬೆಂಗಳೂರಿನಲ್ಲಿ ಸ್ಥಾಪಿತವಾದ ಆಯುರ್ ಪಾರ್ಕ್ ಹೆಲ್ತ್ ಕೇರ್ ಲಿಮಿಟೆಡ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಆಧ್ಯಾತ್ಮಿಕ ಆಶೀರ್ವಾದ ಮತ್ತು ಸಮಾಜಸೇವೆ
ಸಿದ್ಧಗಂಗಾ ಶ್ರೀಗಳ ಆಶೀರ್ವಾದದಿಂದ ಆಯುರ್ವೇದದಲ್ಲಿ ಸಾಧನೆ ಮಾಡಿ, ಪರಿಶ್ರಮದಿಂದ ಕುಮಾರ್ ಆಯುರ್ವೇದ ಆಶ್ರಮವನ್ನು ಜನಪ್ರಿಯಗೊಳಿಸಿದರು. ಸಾದರ ಸಮಾಜದ ಅಭ್ಯುದಯಕ್ಕಾಗಿ “ಸಾದು ಸಂಗಮ” ಪತ್ತಿನ ಸಹಕಾರ ಸಂಸ್ಥೆಯನ್ನು ಸ್ಥಾಪಿಸಿದರು. ಹಿಂದುಳಿದ ಆಯೋಗದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ವೆಂಕಟಸ್ವಾಮಿಯವರ ನೆರವಿನಿಂದ ಸಾದರ ಸಮಾಜಕ್ಕೆ “ಹಿಂದೂ ಸಾದರು” ಎಂಬ ಹೆಸರಿನಲ್ಲಿ ಪ್ರವರ್ಗ 2ಎ ಮಾನ್ಯತೆ ದೊರಕಿಸಲು ಪ್ರಮುಖ ಪಾತ್ರವಹಿಸಿದರು.
ಮಂಜು ಸುಧಾ ಚಾರಿಟಬಲ್ ಟ್ರಸ್ಟ್ ಮೂಲಕ ಎಂಟು ವರ್ಷಗಳ ಕಾಲ ಗ್ರಾಮೀಣ ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿನಿಲಯವನ್ನು ನಡೆಸಿ, ಶಿಕ್ಷಣದ ಬೆಳಕನ್ನು ಹರಿಸಿದರು. ಭೂಗತವಾಗಿದ್ದ ಸಾದರ ಜನಾಂಗದ ಇತಿಹಾಸವನ್ನು ಶ್ರಮಪಟ್ಟು ಸಂಶೋಧಿಸಿ, ಒಂದು ಭಾಗವನ್ನು ಮುದ್ರಿಸಿ, ಇನ್ನೊಂದು ಭಾಗ ಮುದ್ರಣ ಹಂತದಲ್ಲಿದೆ.

ಪ್ರಶಸ್ತಿಗಳು ಮತ್ತು ಸನ್ಮಾನಗಳು
ಸಮಾಜಸೇವೆ ಹಾಗೂ ಆಯುರ್ವೇದ ಕ್ಷೇತ್ರದಲ್ಲಿ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಇವರಿಗೆ ಲಭಿಸಿವೆ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ – ಕರ್ನಾಟಕ ಸರ್ಕಾರ; ಎಕ್ಸಲೆನ್ಸ್ ಗೋಲ್ಡ್ ಮೆಡಲ್ ಪ್ರಶಸ್ತಿ – ದೆಹಲಿ; ಏಕಲವ್ಯ ಪ್ರಶಸ್ತಿ – ಶ್ರೀ ಸಿದ್ಧಗಂಗಾ ಶ್ರೀಗಳಿಂದ; ಆಯುರ್ವೇದ ರತ್ನ; ಸಂಘ ಸಿರಿ ಪ್ರಶಸ್ತಿ; ಶಿವಕುಮಾರ್ ಶ್ರೀ ಪ್ರಶಸ್ತಿ; ಆಯುರ್ವೇದ ತ್ರಿವಿಕ್ರಮ; ಕುವೆಂಪು ವಿಶ್ವಮಾನವ ಪ್ರಶಸ್ತಿ; ಒಕೆಷನಲ್ ಸರ್ವೀಸ್ ಅವಾರ್ಡ್; ರೋಟರಿ ಇಂಟರ್ನ್ಯಾಷನಲ್ ಅವಾರ್ಡ್; ನಾಡ ರತ್ನ ಪ್ರಶಸ್ತಿ; ಗಾರ್ಡನ್ ಸಿಟಿ ಕಲ್ಚರಲ್ ಅಕಾಡಮಿ ಅವಾರ್ಡ್; ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ; ಸ್ವಯಂ ಸಿದ್ಧ ವೈದ್ಯ ಪ್ರಶಸ್ತಿ; ಉಪಾಧ್ಯ ಪ್ರತಿಷ್ಠಾನ ಸನ್ಮಾನ; ನಾಡಪ್ರಭು ಕೆಂಪೇಗೌಡ ಪ್ರಶಸ್ತಿ – ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸನ್ಮಾನ.

#kumarayurveda Ashrma #vydyaloka #healthvision

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!