ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು. ಆರಂಭದಲ್ಲೇ ಮೈಗ್ರೇನ್‍ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು.

ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು

ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ತಲೆಯಲ್ಲಿ ಮುಖ್ಯವಾಗಿ ನೋವನ್ನು ಉಂಟು ಮಾಡುವ ಸಮಸ್ಯೆಯೇ ಮೈಗ್ರೇನ್. ಮೈಗ್ರೇನ್ ಆಕ್ರಮಣದ ಆರಂಭಿಕ ಎಚ್ಚರಿಕೆಯ ಚಿಹ್ನೆಗಳೆಂದರೆ – ಏರಿಳಿತ ಭಾವನೆ, ಕಿರಿಕಿರಿ, ಹತಾಶೆ ಅಥವಾ ಅತಿ ಸಡಗರ, ಕ್ಷೋಭೆ-ಖಿನ್ನತೆ, ಅತಿಯಾದ ನಿದ್ರೆ, ಕೆಲವು ಆಹಾರದ ಬಯಕೆ (ಉದಾಹರಣೆಗೆ ಚಾಕೋಲೇಟ್), ಗೊಂದಲ ಮತ್ತು ಏಕಾಗ್ರತೆ ಕೊರತೆ.

Also Read: Migraine can cause severe pain and nausea.

1. ಫೈಬರ್ (ಸೇಬು, ಬಾಳೆಹಣ್ಣು, ದ್ರಾಕ್ಷಿ, ಕಿತ್ತಳೆ, ಸೀಬೆ, ಬೇಯಿಸಿದ ಅಲೂಗಡ್ಡೆ, ಗಡ್ಡೆಕೋಸು, ಕ್ಯಾರೆಟ್, ಎಲೆಕೋಸು ಇತ್ಯಾದಿ) ಮತ್ತು ಸಿಹಿ ಈ ಎರಡರ ಉತ್ತಮ ಸೇವನೆ ಅಭ್ಯಾಸಗಳು ಮೈಗ್ರೇನ್ ಉಪಶಮನಕ್ಕೆ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ.

2. ಹಣ್ಣುಗಳು ಮತ್ತು ಎಲ್ಲಾ ಕಾಳು, ಧಾನ್ಯಗಳ ಅಹಾರಗಳನ್ನು ಒಳಗೊಂಡ ಆಹಾರ ಸೇವನೆ ಯೋಜನೆಯತ್ತ ಗಮನ ಹರಿಸಿ ಹಾಗೂ ಯೆಥೇಚ್ಚವಾಗಿ ನೀರು ಸೇವಿಸಿ.

3. ಕಾಫಿ, ಪ್ರಬಲ ಕೆಂಪು ವೈನ್ ಮತ್ತು ಚಾಕೋಲೇಟ್ ಮೈಗ್ರೇನ್‍ಗೆ ಕಾರಣವಾಗುತ್ತದೆ.

4. ನಿಮ್ಮ ಉಪಹಾರಗಳು ಅಥವಾ ಊಟಗಳ ನಡುವೆ ಮೂರು ಅಥವಾ ನಾಲ್ಕು ಗಂಟೆಗಳಿಗೂ ಹೆಚ್ಚಿನ ಅಂತರ ಕಾಯ್ಡುಕೊಳ್ಳಲು ಪ್ರಯತ್ನಿಸಿ.

5. ವಾರದಲ್ಲಿ ಮೂರು ಬಾರಿ ಕನಿಷ್ಠ 30 ನಿಮಿಷಗಳ ಕಾಲ ಏರೋಬಿಕ್ ವ್ಯಾಯಾಮ ಮಾಡುವುದರಿಂದ ಮೈಗ್ರೇನ್‍ನ ಅಂತರ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿ.

6. ಪ್ರತಿ ರಾತ್ರಿ ಉತ್ತಮ ಪ್ರಮಾಣದಲ್ಲಿ ನಿದ್ರೆ ಮಾಡಲು ಯತ್ನಿಸಿ.

7. ಲ್ಯಾಕ್ಟೋಸ್ (ಮಜ್ಜಿಗೆ, ಚೀಸ್ ಮತ್ತು ಗಿಣ್ಣಿನ ಆಹಾರಗಳು, ಕ್ರೀಮ್‍ಗಳು, ಬಾಷ್ಷೀಕರಿಸಿದ ಹಾಗೂ ಸಂಕುಚಿತಗೊಳಿಸಿದ ಹಾಲು, ಬಿಸಿ ಚಾಕೋಲೇಟ್ ಮಿಶ್ರಣಗಳು, ಐಸ್‍ಕ್ರೀಮ್ ಇತ್ಯಾದಿ) ಸಮೃದ್ದ ಆಹಾರವನ್ನು ವಿಪರೀತವಾಗಿ ಸೇವಿಸುವುದನ್ನು ತಪ್ಪಿಸಿ.

8. ಕೃತಕ ತಂಪು ಪಾನೀಯಗಳಿಗೆ ಸೂಕ್ಷ್ಮ ಸಂವೇದನೆ ಹೊಂದಿರುವ ಮಂದಿ ವಿಶೇಷವಾಗಿ ಮಹಿಳೆಯರು ಇಂಥ ಪಾನೀಯಗಳನ್ನು ಸೇವಿಸಿದರೆ ಮೈಗ್ರೇನ್ ಆಕ್ರಮಣ ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಇವುಗಳ ಸೇವನೆಯಿಂದ ದೂರವಿರುವುದು ಉತ್ತಮ.

9. ಆರಂಭದಲ್ಲೇ ಮೈಗ್ರೇನ್‍ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು.

Also Read: ಮೈಗ್ರೇನ್‍ಗೆ ಕಾರಣಗಳೇನು ?

ಡಾ. ಸಿದ್ದುಕುಮಾರ್ ಘಂಟಿ

ಡಾ. ಸಿದ್ದುಕುಮಾರ್ ಘಂಟಿ
ಮಹಾಲಕ್ಷ್ಮಿ ಆಯುರ್ವೇದಿಕ್ ಸೆಂಟರ್
116/13, 12 ನೇ ಮುಖ್ಯ ರಸ್ತೆ, ICICI ಎಟಿಎಂ ಹತ್ತಿರ
ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-76
ದೂ : 98450 42755

dr-siddukumar-ghanti

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!