ಮೈಗ್ರೇನ್‍ಗೆ ಕಾರಣಗಳೇನು ?

ಮೈಗ್ರೇನ್‍ಗೆ ಕಾರಣಗಳೇನು ? ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ಮೈಗ್ರೇನ್ ಆಕ್ರಮಣದ ಆರಂಭಿಕ ಎಚ್ಚರಿಕೆಯ ಚಿಹ್ನೆಗಳೆಂದರೆ – ಏರಿಳಿತ ಭಾವನೆ, ಕಿರಿಕಿರಿ, ಹತಾಶೆ ಅಥವಾ ಅತಿ ಸಡಗರ, ಕ್ಷೋಭೆ-ಖಿನ್ನತೆ, ಅತಿಯಾದ ನಿದ್ರೆ, ಕೆಲವು ಆಹಾರದ ಬಯಕೆ (ಉದಾಹರಣೆಗೆ ಚಾಕೋಲೇಟ್), ಗೊಂದಲ ಮತ್ತು ಏಕಾಗ್ರತೆ ಕೊರತೆ.

ಮೈಗ್ರೇನ್‍ಗೆ ಕಾರಣಗಳೇನು

ತಲೆಯಲ್ಲಿ ಮುಖ್ಯವಾಗಿ ನೋವನ್ನು ಉಂಟು ಮಾಡುವ ಸಮಸ್ಯೆಯೇ ಮೈಗ್ರೇನ್. ಮಂಪರಿನೊಂದಿಗೆ ಕಣ್ಣುಗಳು, ಮೂಗು ಮತ್ತು ಕಿವಿಗಳಲ್ಲೂ ಸಹ ನೋವು ಕಂಡುಬರುತ್ತದೆ. ದೇಹದ ಒಂದು ಕಡೆ ಜೋಮು, ತಲೆಯ ಒಂದು ಭಾಗ ಮತ್ತು ಕಾಲಿನಲ್ಲಿ ದುರ್ಬಲತೆ ಗೋಚರಿಸುತ್ತದೆ. ಅಲ್ಪಾವಧಿ ಮಾತನಾಡಲು ಕಷ್ಟವಾಗುತ್ತದೆ. ಮೈಗ್ರೇನ್ ಮನುಕುಲದ ತೀರ ಸಾಮಾನ್ಯ ಯಾತನೆಯ ಸ್ಥಿತಿಗಳಲ್ಲಿ ಒಂದು. ಆರಂಭದಲ್ಲೇ ಮೈಗ್ರೇನ್‍ಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅದು ಉಲ್ಬಣಗೊಂಡು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಗಟ್ಟಬಹುದು.

ಇದು ತಲೆಯ ಒಂದು ಅಥವಾ ಎರಡು ಪಾಶ್ರ್ವಗಳಲ್ಲಿ ತೀವ್ರ ನೋವಿನಿಂದ ಕಂಡು ಬರುವ ತಲೆ ನೋವಿನ ವ್ಯಾಪಕ ಪರಿಣಾಮವಾಗಿದೆ. ಈ ಸ್ಥಿತಿಯಲ್ಲಿ ತಲೆನೋವು ಅನೇಕ ಗಂಟೆಗಳ ಕಾಲ ಮುಂದುವರೆಯುತ್ತದೆ ಹಾಗೂ ಬೆಳಕು ಮತ್ತು ಧ್ವನಿಗೆ ಶಿರೋಭ್ರಮಣೆ (ತಲೆ ಸುತ್ತುವಿಕೆ) ತೀವ್ರತೆ ಕಂಡು ಬರುತ್ತದೆ. 25-45 ವರ್ಷ ವಯೋಮಾನದವರಲ್ಲಿ ಮೈಗ್ರೇನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ಆಕ್ರಮಣದ ಆರಂಭಿಕ ಎಚ್ಚರಿಕೆಯ ಚಿಹ್ನೆಗಳೆಂದರೆ – ಏರಿಳಿತ ಭಾವನೆ, ಕಿರಿಕಿರಿ, ಹತಾಶೆ ಅಥವಾ ಅತಿ ಸಡಗರ, ಕ್ಷೋಭೆ-ಖಿನ್ನತೆ, ಅತಿಯಾದ ನಿದ್ರೆ, ಕೆಲವು ಆಹಾರದ ಬಯಕೆ (ಉದಾಹರಣೆಗೆ ಚಾಕೋಲೇಟ್), ಗೊಂದಲ ಮತ್ತು ಏಕಾಗ್ರತೆ ಕೊರತೆ.

ಮೈಗ್ರೇನ್‍ಗೆ ಕಾರಣಗಳೇನು ?

ಮೈಗ್ರೇನ್‍ಗೆ ತೀರಾ ಸಾಮಾನ್ಯವಾದ ಕಾರಣಗಳ ಕೆಲವು ಅಂಶಗಳನ್ನು ಈ ಕೆಳಗೆ ನೀಡಲಾಗಿದೆ :

1. ಹಾರ್ಮೋನುಗಳ ಬದಲಾವಣೆಗಳು : ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರೊನ್ ಮಟ್ಟಗಳಲ್ಲಿ ಏರಿಳಿತ. ಋತುಚಕ್ರಕ್ಕೂ ಮುನ್ನ, ಸಂದರ್ಭ ಅಥವಾ ನಂತರ ಮೈಗ್ರೇನ್ ಹೆಚ್ಚಾಗುತ್ತದೆ ಹಾಗೂ ಗರ್ಭಧಾರಣೆಯ ಮೂರನೇ ತಿಂಗಳಿನ ನಂತರ ಕಾಣದಾಗುತ್ತದೆ.

2. ಆಹಾರಗಳು : ಆಲ್ಕೋಹಾಲ್, ಚೀಸ್, ಚಾಕೋಲೇಟ್, ಹುಳಿ ಹಿಡಿಸಿದ ಅಥವಾ ಸಮುದ್ರ ಆಹಾರಗಳು, ಕೃತಕ ಸಹಿಗಳು, ಕೆಫೆನ್, ಡಬ್ಬದಲ್ಲಿನ ಅಥವಾ ಸಂಸ್ಕರಿತ ಆಹಾರ ಇತ್ಯಾದಿಯೊಂದಿಗೆ ಊಟಗಳನ್ನು ತ್ಯಜಿಸುವಿಕೆ ಅಥವಾ ಉಪವಾಸ ಮೈಗ್ರೇನ್‍ಗೆ ಕಾರಣವಾಗುತ್ತದೆ.

3. ಒತ್ತಡ : ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಶ್ರಮದಾಯಕ ಕೆಲಸ ಅಥವಾ ಒತ್ತಡದ ಅವಧಿಯ ನಂತರ ವಿಶ್ರಾಂತಿ ಪಡೆದಾಗ ವಾರಾಂತ್ಯದಲ್ಲಿ ಮೈಗ್ರೇನ್‍ಗೆ ಎಡೆ ಮಾಡಿಕೊಡುತ್ತದೆ.

4. ಸಂವೇದನೆ ಉದ್ದೀಪನಗಳು : ಪ್ರಖರ ಬೆಳಕುಗಳು, ಸೂರ್ಯ ರಶ್ಮಿ, ಸುಗಂಧ, ಹೂವು, ಮತ್ತು ಬಣ್ಣದ ಥಿನ್ನರ್‍ನ ಅಸಾಧಾರಣ ವಾಸನೆ, ಕಿರಿಕಿರಿ ಉಂಟು ಮಾಡುವ ಶಬ್ದ ಇತ್ಯಾದಿಯಿಂದ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ.

5. ಭೌತಿಕ ಅಂಶಗಳು : ನಿದ್ರಾ ವಿಧಾನದಲ್ಲಿ ಬದಲಾವಣೆ (ವಿಪರೀತ ನಿದ್ರೆ ಅಥವಾ ನಿದ್ರಾ ಹೀನತೆ), ಲೈಂಗಿಕ ಚಟುವಟಿಕೆ ಸೇರಿದಂತೆ ವ್ಯಾಪಕ ದೈಹಿಕ ದಣಿವಿನಿಂದ ಮೈಗ್ರೇನ್ ಹೆಚ್ಚಾಗುತ್ತದೆ.

6. ಪರಿಸರದಲ್ಲಿ ಪರಿವರ್ತನೆ : ವಾತಾವರಣ, ಋತು, ಎತ್ತರದ ಮಟ್ಟ, ಗಾಳಿ, ಮಾಲಿನ್ಯ ಇತ್ಯಾದಿ ಬದಲಾವಣೆಯಿಂದ ಮೈಗ್ರೇನ್ ಉಂಟಾಗುತ್ತದೆ.

7. ಔಷಧಿ : ಗರ್ಭನಿರೋಧಕ ಔಷಧಿಗಳು, ಹಾರ್ಮೋನು ಬದಲಾವಣೆ ಚಿಕಿತ್ಸೆಯಂಥ ಕೆಲವು ಔಷಧಿಗಳು ಮೈಗ್ರೇನ್‍ನನ್ನು ಉಲ್ಬಣಗೊಳಿಸುತ್ತದೆ.

Also Read: ಮೈಗ್ರೇನ್ ವಿರುದ್ದ ಹೋರಾಟಕ್ಕೆ ಜೀವನ ಶೈಲಿ ಬದಲಾವಣೆ ಮಾಡಬೇಕು 

Solution for migraine

dr-siddukumar-ghanti/ ಮೈಗ್ರೇನ್‍ಗೆ ಕಾರಣಗಳೇನು ?

ಡಾ. ಸಿದ್ದುಕುಮಾರ್ ಘಂಟಿ

ಡಾ. ಸಿದ್ದುಕುಮಾರ್ ಘಂಟಿ
ಮಹಾಲಕ್ಷ್ಮಿ ಆಯುರ್ವೇದಿಕ್ ಸೆಂಟರ್
116/13, 12 ನೇ ಮುಖ್ಯ ರಸ್ತೆ, ICICI ಎಟಿಎಂ ಹತ್ತಿರ
ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-76
ದೂ.: 98450 42755

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!