ಶ್ವಾನ ಚಿಕಿತ್ಸೆ (ಡಾಗ್ ಥೆರಪಿ) – ಸಾಕುಪ್ರಾಣಿಗಳ ಚಿಕಿತ್ಸಕ ಬಳಕೆ

ಶ್ವಾನ ಚಿಕಿತ್ಸೆ (ಡಾಗ್ ಥೆರಪಿ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಗಮನಸೆಳೆಯುತ್ತಿದೆ. ಸ್ವಾಮಿ ನಿಷ್ಠೆಯ ಶ್ವಾನಗಳನ್ನು ವಯೋವೃದ್ಧರು ಮತ್ತು ಮಾನಸಿಕ ಚೇತನ ವ್ಯಕ್ತಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಹೃದಯಾಘಾತಕ್ಕೆ ಒಳಗಾದ ರೋಗಿಯು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ದೀರ್ಘಕಾಲ ಬದುಕುತ್ತಾರೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ.

ಶ್ವಾನ ಚಿಕಿತ್ಸೆ (ಡಾಗ್ ಥೆರಪಿ) - ಸಾಕುಪ್ರಾಣಿಗಳ ಚಿಕಿತ್ಸಕ ಬಳಕೆ

ಒಡನಾಡಿಗಳಾಗಿ ಸಾಕುಪ್ರಾಣಿಗಳ ಚಿಕಿತ್ಸಕ ಬಳಕೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಗಮನಸೆಳೆಯುತ್ತಿದೆ. ಸ್ವಾಮಿ ನಿಷ್ಠೆಯ ಶ್ವಾನಗಳನ್ನು ವಯೋವೃದ್ಧರು ಮತ್ತು ಮಾನಸಿಕ ಚೇತನ ವ್ಯಕ್ತಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಚಿಕಿತ್ಸಾ ಶ್ವಾನವು (ಥೆರಪಿ ಡಾಗ್) ಒಂದು ನಾಯಿಯಾಗಿದ್ದು, ಒಡನಾಟ, ಸಹವಾಸ ಹಾಗೂ ಪ್ರೀತಿ ತೋರಲು ವಿಶೇಷವಾಗಿ ತರಬೇತಿ ನೀಡಲಾಗಿರುತ್ತದೆ. ಸ್ನೇಹ, ಪ್ರೀತಿಯ ಅಗತ್ಯವಿರುವ ಹಾಗೂ ಪ್ರಾಣಿಯೊಂದಿಗೆ ಒಡನಾಡ ಹೊಂದಲು ಬಯಸುವ ಮಂದಿಗೆ ವಿಶಿಷ್ಟ ಸೇವೆಗಳನ್ನು ಒದಗಿಸಲು ಇಂಥ ವಿಶೇಷ ಶ್ವಾನಗಳನ್ನು ಆಸ್ಪತ್ರೆಗಳಿಗೆ, ಮಾನಸಿಕ ಆರೋಗ್ಯ ಕೇಂದ್ರಗಳಿಗೆ, ಕಾರಾಗೃಹಗಳಿಗೆ, ಶಾಲೆಗಳಿಗೆ ಹಾಗೂ ದುರಂತ ಸಂಭವಿಸಿದ ಸ್ಥಳಗಳಿಗೆ ಕರೆತರಲಾಗುತ್ತದೆ.

ಹೃದಯಾಘಾತಕ್ಕೆ ಒಳಗಾದ ರೋಗಿಯು ಸಾಕು ಪ್ರಾಣಿಗಳನ್ನು ಹೊಂದಿದ್ದರೆ ದೀರ್ಘಕಾಲ ಬದುಕುತ್ತಾರೆ, ಅದೇ ರೀತಿ ಅಲಂಕಾರಿಕ ಮೀನುಗಳಿರುವ ಅಕ್ವೇರಿಯಂ ಅಥವಾ ಜಲೋದ್ಯಾನಗಳನ್ನು ನೋಡುತ್ತಿದ್ದರೆ ತಾತ್ಕಾಲಿಕವಾಗಿಯಾದರೂ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂಬುದನ್ನು ಸಂಶೋಧನೆಗಳು ತೋರಿಸಿವೆ. ಅಂಜಿನಾ ಅಥವಾ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶೇಕಡ 92ರಷ್ಟು ಮಂದಿಯಲ್ಲಿ ಸಾಕು ಪ್ರಾಣಿಗಳನ್ನು ಹೊಂದಿರುವ ರೋಗಿಗಳು ಸಾಕು ಪ್ರಾಣಿಗಳನ್ನು ಹೊಂದಿಲ್ಲದವರಿಗಿಂತ ಒಂದು ವರ್ಷ ಹೆಚ್ಚಾಗಿ ಬದುಕುವ ಸಾಧ್ಯತೆ ಇರುವುದನ್ನು ಅಧ್ಯಯನವೊಂದು ತಿಳಿಸಿದೆ.

ಸಾಕು ಪ್ರಾಣಿಗಳನ್ನು ಹೊಂದಿಲ್ಲದ ಶೇಕಡ 28ರಷ್ಟು ರೋಗಿಗಳಿಗೆ ಹೋಲಿಸದರೆ, ಸಾಕು ಪ್ರಾಣಿಗಳನ್ನು ಹೊಂದಿರುವ ರೋಗಿಗಳಲ್ಲಿ ಕೇವಲ ಶೇಕಡ 6ರಷ್ಟು ರೋಗಿಗಳು ಮಾತ್ರ ಒಂದು ವರ್ಷದೊಳಗೆ ಮೃತಪಟ್ಟಿರುವುದು ಅಧ್ಯಯನದಿಂದ ಕಂಡುಬಂದಿದೆ. ಒಡನಾಡಿಗಳಾಗಿ ಸಾಕುಪ್ರಾಣಿಗಳ ಚಿಕಿತ್ಸಕ ಬಳಕೆಯು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಗಮನಸೆಳೆಯುತ್ತಿದೆ. ಸ್ವಾಮಿ ನಿಷ್ಠೆಯ ಶ್ವಾನಗಳನ್ನು ಏಡ್ಸ್ ಅಥವಾ ಕ್ಯಾನ್ಸರ್ ಹೊಂದಿರುವ ರೋಗಿಗಳು, ವಯೋವೃದ್ಧರು ಮತ್ತು ಮಾನಸಿಕ ಚೇತನ ವ್ಯಕ್ತಿಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಸಂವಹನ ನಡೆಸಲು ತುಂಬಾ ಕಷ್ಟವಿರುವ ಹಾಗೂ ವಿಚಿತ್ರ ವರ್ತನೆಯ ಮಂದಿಗೆ ಇಂಥ ಶ್ವಾನಗಳು ಒಂದು ಸಂವಹನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.

Also Read: ರೇಬಿಸ್ ಎನ್ನುವ ನಾಯಿಯ ಕಡಿತದ ಮಾರಣಾಂತಿಕ ರೋಗ

ಸಾಕು ಪ್ರಾಣಿಗಳ ಮಾಲೀಕರುಗಳಿಗೆ ಈ ಕೆಳಕಂಡ ಪ್ರಯೋಜನಗಳಾಗುವುದು ಸಂಶೋಧನೆಯಿಂದ ದೃಢಪಟ್ಟಿದೆ.

1. ಒತ್ತಡ, ಖಿನ್ನತೆ ಲಕ್ಷಣಗಳು ಕಡಿಮೆಯಾಗುತ್ತವೆ.

2. ಒಂದು ನಾಯಿಯನ್ನು ಸಾಕುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.

3. ನರ್ಸಿಂಗ್ ಹೋಂ ಅಥವಾ ಆಸ್ಪತ್ರೆಗೆ ಒಂದು ಶ್ವಾನವನ್ನು ಕರೆತರುವುದರಿಂದ ರೋಗಿಗಳ ಭಾವನೆಗಳು ವೃದ್ಧಿಯಾಗುತ್ತವೆ ಹಾಗೂ ಅವರ ಸಾಮಾಜಿಕ ಸಂವಹನ ಹೆಚ್ಚಾಗುತ್ತದೆ.

Also Read: Nurturing Health and Well-being Through Pet Therapy 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!