ಹೃದಯಕ್ಕೆ ಗಂಡಾಂತರ ತರುವ ಸಿಎಚ್‍ಡಿ-ಆರೋಗ್ಯಕರ ಪಥ್ಯಾಹಾರ ಟಿಪ್ಸ್


ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಎಂಬ ಹೃದ್ರೋಗ ಉಂಟಾಗುತ್ತದೆ.

ಕೊರೊನರಿ ಆರ್ಟರಿಗಳು ರಕ್ತನಾಳಗಳಾಗಿದ್ದು, ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ಸರಬರಾಜು ಮಾಡುತ್ತವೆ. ಹೃದಯದಲ್ಲಿ ಅಡಚಣೆ ಉಂಟಾಗುವುದರಿಂದ ಅಥವಾ ಶುದ್ದ ರಕ್ತನಾಳಗಳಿಗೆ ರಕ್ತ ಪೂರೈಕೆ ಕಡಿಮೆಯಾಗುವುದರಿಂದ ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಎಂಬ ಹೃದ್ರೋಗ ಉಂಟಾಗುತ್ತದೆ.ಕೊರೊನರಿ ಅಡಚಣೆಗಳಿಂದಾಗಿ ಸಾಮಾನ್ಯವಾಗಿ ಕಂಡು ಬರುವ ಚಿಹ್ನೆ ಮತ್ತು ಲಕ್ಷಣಗಳೆಂದರೆ, ಎದೆ ನೋವು (ತಾಂತ್ರಿಕವಾಗಿ ಆಂಜೈನಾ ಪೆಕ್ಟೊರಿಸ್ ಎಂದು ಕರೆಯುತ್ತಾರೆ), ಹೃದಯಾಘಾತ (ಮಯೋಕಾರ್ಡಿಯಲ್ ಇನ್‍ಫರ್‍ಕ್ಷನ್), ಪಂಪ್ ಮಾಡುವಿಕೆ ಇಳಿಮುಖ (ಹೃದಯ ವೈಫಲ್ಯ) ಹಾಗೂ ಹೃದಯ ಸ್ತಂಭನದಿಂದ ಹಠಾತ್ ಸಾವು ಸಂಭವಿಸಬಹುದು.

ಹೃದಯಾಘಾತಕ್ಕೆ ಕಾರಣವಾಗುವ ಗಂಡಾಂತರ ಅಂಶಗಳು:

  • ಧೂಮಪಾನಿಯಾಗಿದ್ದರೆ
  • ಅತಿಯಾದ ತೂಕ ಹೊಂದಿದ್ದರೆ
  • ಅಧಿಕ ರಕ್ತದೊತ್ತಡ ಹೊಂದಿದ್ದರೆ
  • ಡಯಾಬಿಟಿಸ್ ಹೊಂದಿದ್ದರೆ
  • ಅಧಿಕ ರಕ್ತ ಕೊಲೆಸ್ಟೆರಾಲ್ ಹೊಂದಿದ್ದರೆ
  • ತೀರಾ ಹತ್ತಿರದ ಸಂಬಂಧಿ ಹೃದಯಾಘಾತಕ್ಕೆ ಒಳಗಾಗಿದ್ದರೆ

ತಪಾಸಣೆ:

  • ನಿಯಮಿತ ಆರೋಗ್ಯ ತಪಾಸಣೆ
  • ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ
  • ಲಿಪಿಡ್ ಪ್ರೊಫೈಲ್. ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟೆರಾಲ್ ಪರೀಕ್ಷೆ
  • ಇಸಿಜಿ, ಸ್ಟ್ರೆಸ್ ಟೆಸ್ಟ್
  • 64 ಸ್ಲೈಸ್ ಸಿ ಟಿ ಸ್ಕ್ಯಾನರ್
  • ಟ್ರೇಡ್‍ಮಿಲ್ ಟೆಸ್ಟ್

ಹೃದ್ರೋಗದ ಚಿಹ್ನೆಗಳು

  • ಮಧ್ಯಭಾಗದಲ್ಲಿ ಹಿಂಡುವ ಎದೆ ನೋವು
  • ವಿಪರೀತ ಬೆವರು
  • ತಲೆ ಸುತ್ತುವಿಕೆ ಮತ್ತು/ಅಥವಾ ವಾಂತಿ
  • ಮಂಪರು, ಆಯಾಸ
  • ಕೈಗಳಲ್ಲಿ ತಣ್ಣನೆಯ, ಜಿಗುಟು ಅನುಭವ
  • ಹೃದಯದ ವೇಗವಾದ ಬಡಿತದ ಅನುಭವ

ಹೃದಯಾಘಾತ ತಡೆಗೆ ಕ್ರಮಗಳು:

  • ಧೂಮಪಾನ ಬಿಟ್ಟುಬಿಡುವಿಕೆ
  • ರಕ್ತದೊತ್ತಡ ನಿಯಂತ್ರಣ
  • ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣ
  • ತೂಕ ನಿರ್ವಹಣೆ
  • ಶಿಫಾರಸು ಮಾಡಲ್ಪಟ್ಟ ಲಿಪಿಡ್ ಮಟ್ಟಗಳ ಸಾಧನೆ
  • ನಿಯಮಿತ ವ್ಯಾಯಾಮ/ಪಥ್ಯಾಹಾರ/ಒತ್ತಡ ನಿರ್ವಹಣೆ

ರಕ್ತದೊತ್ತಡ ನಿಯಂತ್ರಣ : ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಹೃದ್ರೋಗ ಪಾಶ್ರ್ವವಾಯು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮೂತ್ರಪಿಂಡ ವೈಫ್ಯಲಗಳ ಗಂಡಾಂತರವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮಾದರಿ ರಕ್ತದೊತ್ತಡವು ಯಾವಾಗಲೂ 135/85 ಎಂಎಂಎಚ್‍ಜಿಗಿಂತ ಕಡಿಮೆ ಹಾಗೂ ಮಧುಮೇಹವನ್ನು 110/70ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವ ಗುರಿ ಹೊಂದಬೇಕು.ಉಪ್ಪು ಸೇವನೆ ನಿರ್ಬಂಧ, ತೂಕ ನಿಯಂತ್ರಣ ನಿರ್ವಹಣೆ, ಆಲ್ಕೋಹಾಲ್ ತ್ಯಜಿಸುವಿಕೆ, ಏರೋಬಿಕ್ ವ್ಯಾಯಾಮಗಳು ಒತ್ತಡ ನಿರ್ವಹಣೆ ಹಾಗೂ ವೈದ್ಯರ ಸಲಹೆಯಂತೆ ಔಷಧಗಳ ಬಳಕೆಯಂಥ ಪ್ರಜ್ಞಾಪೂರ್ವಕ ಕ್ರಮಗಳಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
ಮಧುಮೇಹ ಮತ್ತು ಹೃದಯ : ಏಳು ಮಂದಿ ಭಾರತೀಯರಲ್ಲಿ ಒಬ್ಬರಿಗೆ ಡಯಾಬಿಟಿಸ್ ಇದೆ ಹಾಗೂ ಎಲ್ಲ ಹೃದ್ರೋಗಿಗಳಲ್ಲಿ ಶೇ.30 ಮಂದಿ ಮಧುಮೇಹಿಗಳು ಎಂಬುದನ್ನು ಅಂಕಿಅಂಶಗಳು ಬಹಿರಂಗಗೊಳಿಸಿವೆ. ಚಿಕ್ಕ ವಯಸ್ಸಿನಲ್ಲೇ ಗೋಚರಿಸುವ ಡಯಾಬಿಟಿಸ್ ರೋಗಗಳಲ್ಲಿ ಹೃದ್ರೋಗ ವ್ಯಾಪಕವಾಗಿದ್ದು, ಚಿಕಿತ್ಸೆ ನೀಡಲು ತುಂಬಾ ಕಷ್ಟವಾಗುತ್ತದೆ. ಕೊರೊನರಿ ಹಾರ್ಟ್ ಡಿಸೀಸ್ (ಸಿಎಚ್‍ಡಿ) ಕಾಣಿಸಿಕೊಳ್ಳಲು ಮತ್ತು ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಸಕ್ಕರೆ ಕಾಯಿಲೆಯನ್ನು ಉತ್ತಮವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯ.
ಕೊಲೆಸ್ಟೆರಾಲ್ ನಿಯಂತ್ರಣದ ಮಹತ್ವ: ಕೊಲೆಸ್ಟೆರಾಲ್ ಪ್ರಮಾಣಗಳ ಮೇಲೆ ನಿಗಾ ವಹಿಸುವುದು, ಬ್ಲಾಕ್‍ಗಳು (ರಕ್ತನಾಳಗಳಲ್ಲಿ ಸುಗಮ ರಕ್ತ ಪೂರೈಕೆಗೆ ಅಡಚಣೆಯಾಗುವಿಕೆ) ಅಭಿವೃದ್ದಿಯಾಗುವ ಸಾಧ್ಯತೆ ಬಗ್ಗೆ ಹಾಗೂ ಕೊಲೆಸ್ಟೆರಾಲ್ ಮಟ್ಟಗಳನ್ನು ತಗ್ಗಿಸುವ ಬಗ್ಗೆ ತಿಳಿಸುತ್ತದೆ. ಉತ್ತಮ ಪಥ್ಯಾಹಾರ, ವ್ಯಾಯಾಮ ಹಾಗೂ ಔಷಧಿಗಳ ಮೂಲಕ ಕೊಲೆಸ್ಟೆರಾಲ್ ನಿಯಂತ್ರಣವನ್ನು ಸಾಧಿಸಬಹುದು.

ಹೃದಯಕ್ಕೆ ಆರೋಗ್ಯಕರ ಪಥ್ಯಾಹಾರ ಟಿಪ್ಸ್:

  • ನಾನ್ ಸ್ಟಿಕ್ ಪ್ಯಾನ್ ಬಳಸಿ.
  • ಹುರಿದ ಆಹಾರ ಪದಾರ್ಥಗಳಿಗಿಂತ ಬೇಕ್ ಮಾಡಿದ, ಬೇಯಿಸಿದ, ಹಬೆ ಅಥವಾ ಕೆಂಡ/ಬೆಂಕಿ ಕಾವಿನಲ್ಲಿ ಬೇಯಿಸಿದ ಆಹಾರಗಳನ್ನು ಉಪಯೋಗಿಸಿ.
  • ಹುರಿದ ಉಪಹಾರಗಳ ಬದಲು ಕಡಿಮೆ ಕೊಬ್ಬಿನಾಂಶವಿರುವ ಬೇಕ್ ಮಾಡಿದ ಸ್ನ್ಯಾಕ್ ಸೇವಿಸಿ.
  • ಫಾಸ್ಟ್ ಫುಡ್‍ಗಳ (ಬರ್ಗರ್, ಹುರಿದ ಆಹಾರಗಳು) ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಬದಲಿಗೆ ಹೆಚ್ಚು ಹಣ್ಣು, ತರಕಾರಿಗಳು ಹಾಗೂ ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸಿ.
  • ಕಡಿಮೆ ಕ್ಯಾಲೋರಿ ಇರುವ ಪೇಯವನ್ನು ಕುಡಿಯಿರಿ.
  • ಕಡಿಮೆ ಕೊಬ್ಬಿನ ಪದಾರ್ಥಗಳನ್ನು ಸೇವಿಸಿ (ವಿಶೇಷವಾಗಿ ತುಪ್ಪ. ಬೆಣ್ಣೆ, ಕೊಬ್ಬರಿ/ತಾಳೆ ಎಣ್ಣೆ, ಕ್ರೀಮ್, ಪ್ರಾಣಿಜನ್ಯ ಕೊಬ್ಬು)
  • ಕೆನೆ ರಹಿತ ಹಾಲಿನಂಥ ಕಡಿಮೆ ಕೊಬ್ಬಿನಾಂಶವಿರುವ ಡೇರಿ ಉತ್ಪನ್ನಗಳನ್ನು ಹಾಗೂ ಕಡಿಮೆ ಕೊಬ್ಬು ಇರುವ ಚೀಸ್ ಬಳಸಿ.
  • ಸೇವಿಸುವ ಸಿಹಿ ಪದಾರ್ಥಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ.
  • ಮೊಟ್ಟೆಯ ಹಳದಿ ಭಾಗದ ಸೇವನೆಯನ್ನು ತಪ್ಪಿಸಿ ಇಲ್ಲವೇ ನಿರ್ಬಂಧಿಸಿ.
  • ರೆಡ್ ಮಿಟ್ (ಕೆಂಪು ಮಾಂಸ) ಸೇವನೆ ಒಳ್ಳೆಯದಲ್ಲ. ತೆಳುವಾಗಿ ಕತ್ತರಿಸಿದ ಮಾಂಸವನ್ನು ಖರೀದಿಸಿ. ಮೀನು ಹಾಗೂ ಚರ್ಮರಹಿತ ಕೋಳಿ ಮತ್ತು ಟರ್ಕಿ ಕೋಳಿ ಮಾಂಸ ಸೇವಿಸಿ.
  • ಹೃದ್ರೋಗಿಗಳು ತುಂಬಾ ಭಾರ ಎತ್ತುವಿಕೆ ಹಾಗೂ ಬಾಡಿ ಬಿಲ್ಡಿಂಗ್ ವ್ಯಾಯಾಮ ಮಾಡಬಾರದು.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com
http://tathagathearthospital.com/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!