ಭಾರತದ ಆರೋಗ್ಯ ಸೇತು ಮೊಬೈಲ್‍ ಆ್ಯಪ್‍ಗೆ ಡಬ್ಲ್ಯೂ.ಎಚ್.ಒ  ಮೆಚ್ಚುಗೆ

ಭಾರತದ ಆರೋಗ್ಯ ಸೇತು ಮೊಬೈಲ್‍ ಆ್ಯಪ್‍ಗೆ ಡಬ್ಲ್ಯೂ.ಎಚ್.ಒ  ಮೆಚ್ಚುಗೆ

Arogyasetu-app-newಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್‍ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಹೆಚ್ಚಾಗಿರುವ ವಲಯ, ಕೊರೋನಾ ಹಾಟ್‍ಸ್ಪಾಟ್ ಪ್ರದೇಶ, ಸೋಂಕಿತರ ಏರಿಯಾ ಸೇರಿದಂತೆ ಎಲ್ಲಾ ಮಾಹಿತಿಗಳು ಲಭ್ಯವಾಗುವ ಕಾರಣ, ನೇರವಾಗಿ ತೆರಳಿ ಪರೀಕ್ಷೆ ಮಾಡಿಸಿ, ಇತರರಿಗೆ ಹರಡದಂತೆ ತಡೆಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರಾಸ್‍ ಅಧಾನಮ್‍ ಗೆಬ್ರೆಯೆಸಸ್ ಹೇಳಿದ್ದಾರೆ.

ಎಚ್ಚೆತ್ತುಕೊಳ್ಳಲು ಲಕ್ಷಾಂತರ ಜನರಿಗೆ ನೆರವಾಗಿದೆ ಈ ಆ್ಯಪ್

ಭಾರತದ ಆರೋಗ್ಯ ಸೇತು ಆ್ಯಪ್‍ ಅನ್ನು 150 ಮಿಲಿಯನ್ ಬಳಕೆದಾರರು ಡೌನ್‍ಲೋಡ್ ಮಾಡಿಕೊಂಡಿದ್ದು ಇದು ಕೊರೋನ ಸೋಂಕು ಪರೀಕ್ಷೆಯನ್ನು ಹೆಚ್ಚಿಸಬೇಕಿರುವ ಕೋವಿಡ್-19 ಸಮೂಹವನ್ನು ಗುರುತಿಸಲು ಆರೋಗ್ಯ ಇಲಾಖೆಗೆ ನೆರವಾಗುತ್ತದೆ. ಕೊರೋನಾ ವೈರಸ್ ಸಮೂಹ ಪ್ರದೇಶಗಳನ್ನು, ಹೆಚ್ಚಾಗಿ ಸೋಂಕಿತರು ಇರುವ ಜಾಗವನ್ನು ಗುರುತಿಸಲು ಆ್ಯಪ್‍ನಿಂದ ಸಾಧ್ಯವಾಗುತ್ತಿದೆ. ಇದು ಆರೋಗ್ಯ ಇಲಾಖೆಗೆ ಸಹಾಯವಾಗಿದೆ.

ಏಪ್ರಿಲ್‍ನಲ್ಲಿ ಲಾಂಚ್ ಮಾಡಲಾಗಿದ್ದ ಆರೋಗ್ಯ ಸೇತು..!

ಕೊರೋನಾ ವೈರಸ್ ವಕ್ಕರಿಸಿದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್‍ ತಿಂಗಳಲ್ಲಿ ಮೊದಲ ಹಂತದ ಲಾಕ್‍ಡೌನ್‍ ಘೋಷಣೆ ಮಾಡಿದ್ದರು. ಈ ವೇಳೆ ಆರೋಗ್ಯ ಸೇತು ಆ್ಯಪ್ ಲಾಂಚ್ ಮಾಡಿದ್ದರು. ಎಪ್ರಿಲ್ ಬಿಡುಗಡೆಯಾದ ಆರೋಗ್ಯ ಸೇತು ಆ್ಯಪ್ ಇದೀಗ ಕೊರೋನಾ ಗುರುತಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ತಮ್ಮ ಸುತ್ತಮುತ್ತ ಕೊರೋನ ವೈರಸ್ ಸೋಂಕಿನ ಸಂಭವನೀಯ ಅಪಾಯದ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವ ಜೊತೆಗೆ, ಸೋಂಕಿಗೆ ಸಂಬಂಧಿಸಿದ ಮಾಹಿತಿ, ಸಲಹೆ ಹಾಗೂ ಆರೋಗ್ಯವಂತರಾಗಿ ಇರಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸುತ್ತದೆ.

ಮುಂಬೈಯ ಧಾರಾವಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ನಡೆಸಿದ್ದ ಪ್ರಯತ್ನವನ್ನು ಕೆಲ ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಶ್ಲಾಘಿಸಿದ್ದನ್ನು ಸ್ಮರಿಸಬಹುದು. ಭಾರತದ ರೀತಿಯಲ್ಲಿ ಜರ್ಮನಿ ಸರ್ಕಾರ ಹಾಗೂ ಇಂಗ್ಲೆಂಡ್ ಸರ್ಕಾರ ಆ್ಯಪ್ ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಇದು ಸಾರ್ವಜನಿಕರಿಗೆ ಮಾತ್ರವಲ್ಲ ಆರೋಗ್ಯ ಅಧಿಕಾರಿಗಳಿಗೂ ಉಪಯುಕ್ತವಾಗಿದೆ ಎಂದು ಟೆಡ್ರಾಸ್‍ ಅಧಾನಮ್‍ ಗೆಬ್ರೆಯೆಸಸ್  ಹೇಳಿದ್ದಾರೆ.

ಕೊರೋನಾ ಲಸಿಕೆ –ಗುಡ್ ನ್ಯೂಸ್‍ಕೊಟ್ಟ ಸರಕಾರ

ವಿಶ್ವವನ್ನೇ ಹೈರಾಣಾಗಿಸಿರುವ ಕೊರೋನಾ ವೈರಸ್ ನಿಗ್ರಹಕ್ಕೆ 2021ರ ಆರಂಭದಿಂದ ಭಾರತದಲ್ಲಿ ಲಸಿಕೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಡಾ. ಹರ್ಷವರ್ಧನ್‍ ಅವರು ಘೋಷಣೆ ಮಾಡಿದ್ದಾರೆ. ದೇಶಾದ್ಯಂತ ಈ ಲಸಿಕೆಯನ್ನು ಯಾವ ರೀತಿ ವಿತರಣೆ ಮಾಡಬೇಕು ಎಂಬ ಯೋಜನೆ ರೂಪಿಸುವ ಕಾರ್ಯದಲ್ಲಿ ತಜ್ಞರು ಮಗ್ನರಾಗಿದ್ದಾರೆ ಎಂದೂ ಹೇಳಿದ್ದಾರೆ. ಸಚಿವರ ಸಮೂಹದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಆರಂಭದಲ್ಲಿ ದೇಶದಲ್ಲಿ ಲಸಿಕೆ ದೊರೆಯಲಿದೆ. ಒಂದಕ್ಕಿಂತ ಹೆಚ್ಚು ಕಡೆಯಿಂದ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಬಳಿಕ ಇದೇ ವಿಷಯದ ಕುರಿತು ಟ್ವೀಟ್ ಮಾಡಿರುವ ಹರ್ಷವರ್ಧನ್‍ ಜುಲೈ ವೇಳೆಗೆ ದೇಶದ 20-25 ಕೋಟಿ ಜನರಿಗೆ 40-50 ಕೋಟಿ ಡೋಸ್‍ಗಳಷ್ಟುಲಸಿಕೆ ಲಭ್ಯವಾಗಬಹುದು ಎಂದು ಹೇಳಿದ್ದಾರೆ. ಪ್ರಸಕ್ತ ವಿಶ್ವದಾದ್ಯಂತ ಅಭಿವೃದ್ಧಿ ಹಂತದಲ್ಲಿರುವ ಲಸಿಕೆಗಳ ಪೈಕಿ ಒಂದನ್ನು ಹೊರತಪಡಿಸಿ ಉಳಿದೆಲ್ಲಾ ಲಸಿಕೆಗಳನ್ನು ರೋಗಿಗಳಿಗೆ 2 ಡೋಸ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು 25 ಕೋಟಿ ಜನರಿಗೆ 50 ಕೋಟಿ ಡೋಸ್ ಲಸಿಕೆಯ ಮಾತುಗಳನ್ನು ಆಡಿದ್ದಾರೆ. ಸದ್ಯ ಭಾರತದಲ್ಲಿ ಮೂರು ಲಸಿಕೆಗಳು ಪ್ರಯೋಗ ಹಂತದಲ್ಲಿವೆ. ಆ ಪೈಕಿ ಯಾವ ಲಸಿಕೆ ಜನರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಸಚಿವರು ಮಾಹಿತಿ ನೀಡಿಲ್ಲ.

ಇದಲ್ಲದೆ ರಷ್ಯಾದ ‘ಸ್ಪುಟ್ನಿಕ್’ ಲಸಿಕೆಯ ಪ್ರಯೋಗವನ್ನು ನಡೆಸಲು ಭಾರತ ಮುಂದೆ ಬಂದಿದೆ. ಈ ಮಧ್ಯೆ ವಿಶ್ವದಲ್ಲಿ 40 ಲಸಿಕೆಗಳು ಕ್ಲಿನಿಕಲ್‍ ಟ್ರಯಲ್  ಹಂತದಲ್ಲಿದ್ದು, ಆ ಪೈಕಿ 10 ಲಸಿಕೆಗಳು ಮೂರನೇ ಹಾಗೂ ಕಡೆಯ ಹಂತದ ಪರೀಕ್ಷೆಯಲ್ಲಿವೆ. ಈ ಹಂತದಲ್ಲಿ ಅವುಗಳ ಕ್ಷಮತೆ ಹಾಗೂ ಸುರಕ್ಷತೆ ತಿಳಿಯಲಿದೆ. 2020ರ ಅಂತ್ಯ ಅಥವಾ 2021ರ ಆರಂಭದಲ್ಲಿ ಒಂದು ಲಸಿಕೆಯಾದರೂ ನೋಂದಣಿ ಘಟ್ಟಕ್ಕೆ ಬರಲಿದೆ ಎಂದು ವಿಶ್ವಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‍ ಅವರು ಕೂಡ ತಿಳಿಸಿದ್ದಾರೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!