ಹೃದಯಾಘಾತವಾದಾಗ ಕೈಗೊಳ್ಳಬೇಕಾದ ಐದು ಕ್ರಮಗಳು

 ನಿಮ್ಮ ಕುಟುಂಬದ ಸದಸ್ಯರೋ, ಹತ್ತಿರದ ಸಂಬಂಧಿಗಳೋ ಅಥವಾ ಆಪ್ತರೇಷ್ಟರೋ ಹೃದಯಾಘಾತಕ್ಕ ಒಳಗಾಗಿದ್ದಾರೆಯೇ? ಹಾಗಾದರೆ ಆತಂಕ ಬೇಡ. ಶುದ್ಧ ರಕ್ತನಾಳಲ್ಲಿ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯ ಸಂಚಾರವಿಲ್ಲದ ಕಾರಣದಿಂದ ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ತ್ವರಿತವಾಗಿ ರಕ್ತಚಲನೆಯನ್ನು ಸರಿಪಡಿಸದಿದ್ದರೆ, ಆಮ್ಲಜನಕ ಮತ್ತು ಪೋಷಕಾಂಶದ ಕೊರತೆಯಿಂದಾಗಿ ಹೃದಯಚ ಮಾಂಸಖಂಡಗಳಿಗೆ ಹಾನಿಯಾಗಿ ಮರಣ ಸಂಭವಿಸಬಹುದು.
ಹೃದಯಾಘಾತ ಉಂಟಾದಾಗ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಬೇಕು. ಹೃದಯಾಘಾತ ಸಂಭವಿಸಿದಾಗ ಉಂಟಾಗುವ ಸ್ಥಿತಿಯ ಮೊದಲ ತಾಸನ್ನು ಗೋಲ್ಡನ್ ಹವರ್ ಎಂದು ಕರೆಯಲಾಗುತ್ತದೆ. ಇದು ಜೀವನ್ಮರಣದ ನಡುವೆ 15 ನಿಮಿಷಗಳ ನಿರ್ಣಾಯಕ ಸಮಯವಾಗಿರುತ್ತದೆ. ಈ ತುರ್ತು ಸಮಯದಲ್ಲಿ ತೀರಾ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬೇಕಾಗುತ್ತದೆ.

ಹೃದಯಾಘಾತದ ಸಾಮಾನ್ಯ ಲಕ್ಷಣಗಳು :-

  • ಎದೆನೋವು, ಹೃದಯ ಭಾರವಾಗುವಿಕೆ
  • ಉಸಿರಾಟದಲ್ಲಿ ತೊಂದರೆ
  • ಹೆಗಲು, ಭುಜ ಅಥವಾ ದವಡೆ ನೋವು
  • ಅಸ್ವಸ್ಥತೆ
  • ಕಡಿಮೆ ನಾಡಿಮಿಡಿತ
  • ಅತಿಯಾಗಿ ಬೆವರುವಿಕೆ
  • ವಾಂತಿ
  • ತಲೆಸುತ್ತುವಿಕೆ/ಶಿರೋಭ್ರಮಣೆ

ಹೃದಯಾಘಾತದ ಚಿಹ್ನೆ ಮತ್ತು ಲಕ್ಷಣಗಳಲ್ಲಿ ವ್ಯತ್ಯಾಸಗಳಿರುತ್ತವೆ. ಒಮ್ಮೊಮ್ಮೆ ಈ ಲಕ್ಷಣ ಬಿರುಸಾಗಿದ್ದರೆ, ಕೆಲವೊಮ್ಮೆ ಲಘುವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಯಾವುದೇ ಲಕ್ಷಣವಿಲ್ಲದೇ ಅಥವಾ ಲಘು ಲಕ್ಷಣಗಳೊಂದಿಗೆ ಸಂಭವಿಸುವ ಹಾರ್ಟ್ ಅಟ್ಯಾಕ್ ತೀವ್ರ ಎದೆನೋವಿನಂಥ ಮರಣಾಂತಿಕ ಪರಿಣಾಮಗಳಷ್ಟೇ ಅಪಾಯ ತಂದೊಡ್ಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಜೀರ್ಣ, ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು ಗೋಚರಿಸಿದರೂ ಅದನ್ನು ನಿರ್ಲಕ್ಷ ಮಾಡದೇ ವೈದ್ಯರ ಗಮನಕ್ಕೆ ತರಬೇಕು.

ಹೃದಯಾಘಾತವಾದಾಗ ನೀವು ಕೈಗೊಳ್ಳಬೇಕಾದ ಐದು ಕ್ರಮಗಳು :-

  • ಕ್ರಮ 1 : ರೋಗಿಯನ್ನು ಅನುಕೂಲಕರ ಸ್ಥಿತಿಯಲ್ಲಿ ಮಲಗಿಸಿ ಆಸ್ಪ್ರಿನ್ ನೀಡಬಹುದು.
  • ಕ್ರಮ 2 : ತಕ್ಷಣ ಆಂಬ್ಯುಲೆನ್ಸ್ ಕರೆಸಿ, ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು. (ತುರ್ತು ಸೇವೆಗಳ ಮೊಬೈಲ್/ದೂರವಾಣಿ ಸಂಖ್ಯೆಗಳು ನಿಮ್ಮ ಬಳಿ ಇರಲಿ).
  • ಹೃದಯ ಬಡಿತ ನಿಂತಿದ್ದರೆ ಕಾರ್ಡಿಯೋಪಲ್ಮನರಿ ರಿಸಸ್‍ಸಿಟೇಷನ್-ಸಿಪಿಆರ್ ಚಿಕಿತ್ಸೆ ನೀಡಬೇಕು..
  • ರೋಗಿಯನ್ನು ಅಂಗಾತ ಮಲಗಿಸಬೇಕು.
  • ರೋಗಿಯ ಎದೆಯ ಮೇಲೆ ಹಸ್ತಗಳನ್ನಿಡಬೇಕು.
  • ಎದೆ ಒಂದೂವರೆ ಅಂಗುಲ ಒಳಹೋಗುವಂತೆ ಹಸ್ತಗಳಿಂದ ಒತ್ತಬೇಕು.
  • ನಿಮಿಷಕ್ಕೆ 100 ಬಾರಿಯಂತೆ ಒತ್ತಬೇಕು (ಸೆಕೆಂಡ್‍ಗೆ ಎರಡು ಬಾರಿ ಇದನ್ನು ಪರಿಸ್ಥಿತಿ ಸುಧಾರಿಸುವ ತನಕ ಮುಂದುವರಿಸಬೇಕು)
  • ಕ್ರಮ 4 : ರೋಗಿಯನ್ನು ಕೊಡಲೇ ಆಸ್ಪತ್ರೆಗೆ ದಾಖಲಿಸಿ ಎಲೆಕ್ಟ್ರೋಕಾರ್ಡಿಯೋಗ್ರಾಮ್-ಇಸಿಜಿ ತಪಾಸಣೆಗೆ ಒಳಪಡಿಸಬೇಕು.
  • ಕ್ರಮ 5 : ತಪಾಸಣೆ ದೃಢಪಟ್ಟ ನಂತರ ರೋಗಿಗೆ ಚುಚ್ಚುಮದ್ದಿನ ಔಷಧಗಳನ್ನು ನೀಡಲಾಗುತ್ತದೆ. ಯಾವುದೇ ಅಪಾಯಕಾರಿ ರಕ್ತ ಹೆಪ್ಪುಗಟ್ಟಿರುವಿಕೆ ಇದ್ದರೆ ಅದನ್ನು ಒಡೆಯಲು ಅಗತ್ಯಕ್ಕೆ ಅನುಗುಣವಾಗಿ ಔಷಧಿಯನ್ನು (ಕ್ಲೋಟ್ ಬ್ಲಸ್ಟರ್ಸ್) ನೀಡಲಾಗುತ್ತದೆ. ಇದನ್ನು ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆ್ಯಂಬುಲೆನ್ಸ್‍ನಲ್ಲೇ ನೀಡಬಹುದು). ಹೃದಯಾಘಾತವನ್ನು ಮೊದಲು ಗುರುತಿಸುವುದು ಒಳಿತು. ಏಕೆಂದರೆ 15 ನಿಮಿಷಗಳಿಗೆ ಮೇಲ್ಪಟ್ಟರೆ ಅಪಾಯದ ಪ್ರಮಾಣ ಶೇಕಡ 30ರಷ್ಟು ಹೆಚ್ಚಾಗುತ್ತದೆ. ಇದು ನಾಲ್ಕು ಗಂಟೆಗಿಂತ ಹೆಚ್ಚಾದರೆ, ಕೆಂಪುಗಟ್ಟಿದ ರಕ್ತವನ್ನು ಒಡೆದು ಹಾಕಲು ಉಪಯೋಗಿಸುವ ಔಷಧಿಗಳು ನಿಷ್ಪ್ರಯೋಜನವಾಗುತ್ತದೆ. ಹೃದಯಾಘಾತದಲ್ಲಿ ಜೀವನ್ಮರಣದ ನಡುವೆ ಇರುವ ಅಂತರ ಕೇವಲ 15 ನಿಮಿಷಗಳು ಮಾತ್ರ.

ಡಾ. ಮಹಂತೇಶ್ ಆರ್. ಚರಂತಿಮಠ್
ಹೃದ್ರೋಗ ತಜ್ಞರು ತಥಾಗತ್ ಹಾರ್ಟ್‍ಕೇರ್ ಸೆಂಟರ್,
ಮಲ್ಲಿಗೆ ಮೆಡಿಕಲ್ ಸೆಂಟರ್ ಆವರಣ, ನಂ. 31/32, ಕೆಸೆಂಟ್ ರಸ್ತೆ, ಬೆಂಗಳೂರು-01
ಭೇಟಿ ಮಾಡಲು ಸಂಪರ್ಕಿಸಿ : 080-22357777, 9900356000
E-mail: mahanteshrc67@gmail.com

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!