Health Vision

ಚರ್ಮ ಸುಕ್ಕು..!! ಮತ್ತು ಕಣ್ಣಿನ ಕಪ್ಪು ವರ್ತುಲ – ಕಾರಣಗಳೇನು?

ವಯಸ್ಸಾಗುವಿಕೆಯ ಸ್ಪಷ್ಟ ಲಕ್ಷಣ ಚರ್ಮಗಳಲ್ಲಿ ಸುಕ್ಕಾಗುವುದು ಮತ್ತು ಕಣ್ಣಿನ ಸುತ್ತಲೂ ಕಪ್ಪಾಗುವುದು. ಇದು ಮನುಷ್ಯ ಜೀವನದ ಸಹಜ ಪ್ರಕ್ರಿಯೆ.

ದೇಹದ ಎಲ್ಲ ಅವಯವಗಳೂ ವಯಸ್ಸಾಗುವುದನ್ನು ವ್ಯಕ್ತಪಡಿಸುವಂತೆ ಚರ್ಮವು ಏಜಿಂಗ್‍ಗೆ ಒಳಗಾಗುತ್ತದೆ, ಹೀಗಾಗಿ ಚರ್ಮವು ಸುಕ್ಕುಗಟ್ಟುತ್ತದೆ. ಕಣ್ಣುಗಳ ಕೆಳಗೆ ಊದಿಕೊಂಡಂತಾಗುವುದು, ಗೆರೆಗಳು, ಕಪ್ಪುಗಟ್ಟುವುದು. ಒರಟಾಗುವುದು ಇತ್ಯಾದಿ ಚರ್ಮ ಸುಕ್ಕಿಗೆ ಸಂಬಂಧಿಸಿದ ವ್ಯತ್ಯಾಸಗಳು ಮೊದಲು ಮುಖದ ಮೇಲೆ ಮೂಡುತ್ತವೆ.
ಚರ್ಮದ ಕಾಂತಿಯನ್ನು ಮರಳಿ ಪಡೆಯಲಾಗದಿದ್ದರೂ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ತಕ್ಕ ಮಟ್ಟಿಗಾದರೂ ಪಡೆಯಬಹುದು. ವಯಸ್ಸು ಏರಿದಂತೆಲ್ಲಾ ಚರ್ಮವು ಸುಕ್ಕುಗಟ್ಟುವುದು ಸಹಜ. ಆದರೆ ವಯಸ್ಸು ಮೀರುವ ಮುನ್ನವೇ ಸುಕ್ಕುಗಟ್ಟುತ್ತಿದ್ದರೆ ಚರ್ಮದ ಸುರಕ್ಷತೆಗೆ ಚರ್ಮ ತಜ್ಞರನ್ನು ಭೇಟಿ ಮಾಡಿ ಉಪಯುಕ್ತ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳುವುದು ಒಳ್ಳೆಯದು.

ಕಾರಣಗಳೇನು?

ಚರ್ಮ ಸುಕ್ಕುಗಟ್ಟಲು ಜೀವನ ವಿಧಾನದಲ್ಲಿ ಅನೇಕ ಬದಲಾವಣೆಗಳು ಕಾರಣ ಎನ್ನಬಹುದು. ಬಿಸಿಲಿನಲ್ಲಿ ತಿರುಗಾಡುವುದು, ಹೆಚ್ಚಾಗಿ ತಿನ್ನುವುದು, ಧೂಮಪಾನ, ಆಹಾರಾಭ್ಯಾಸ, ಒತ್ತಡ, ಫ್ರೀರಾಡಿಕಲ್ಸ್, ನಿದ್ರಾಹೀನತೆ, ಜೀನ್ಸ್ ಸಂಬಂಧ. ಹೆಚ್ಚು ಗಂಟೆಗಳು ಕೆಲಸ ಮಾಡುವುದು, ಸೂರ್ಯನ ರಶ್ನಿಗೆ ಮುಖ ಒಡ್ಡದಿರುವುದು ಇತ್ಯಾದಿ. ಚರ್ಮವು ಸುಕ್ಕು ಬೀಳದಿರಲು ಹೆಚ್ಚಾಗಿ ಮೈಗೆ ಬಿಸಿಲು ತಾಗಬಾರದು. ಆದರೆ ಬೆಳಗಿನ ಎಳೆಬಿಸಿಲಿನ ಸೂರ್ಯನ ಕಿರಣಗಳನ್ನು ಪಡೆಯಬಹುದು.

ಏನು ಮಾಡಬೇಕು

  • ತಕ್ಕಮಟ್ಟಿಗಿಂತ ಹೆಚ್ಚಾಗಿ ನೀರು ಕುಡಿಯುತ್ತಿರುವುದರಿಂದ ದೇಹದಲ್ಲಿನ ಕಲ್ಮಶ, ಮಲಿನವು ತೊಳೆದುಕೊಂಡು ಹೋಗುತ್ತಿರುತ್ತದೆ. ಇದರಿಂದ ಚರ್ಮ ಆರೋಗ್ಯವಾಗಿ ಕಾಣುವುದು.
  • ವಿಟಮನ್ ಹೆಚ್ಚು ಇರುವ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಮೊಟ್ಟೆ, ಕ್ಯಾರೆಟ್ಸ್, ಬೀಟ್‍ರೂಟ್, ಬದನೆಕಾಯಿ, ಹಾಲನ್ನು ತೆಗೆದುಕೊಳ್ಳಬೇಕು.
  • ಆ್ಯಂಟಿ ಆಕ್ಸಿಡೆಂಟ್ಸ್ ಇರುವ ಪದಾರ್ಥಗಳು ಸೇವನೆ ಅತ್ಯಗತ್ಯ. ಧೂಮಪಾನ, ಮಧ್ಯಪಾನ ವರ್ಜಿತ ಮಾಡಬೇಕು. ಖನಿಜಗಳು ಆಹಾರದಲ್ಲಿ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು.
  • ದೇಹವನ್ನು ಹೆಚ್ಚು ಬಿಸಲಿಗೆ ಎಕ್ಸ್‍ಪೋಸ್ ಮಾಡುವುದು ಒಳ್ಳೆಯದಲ್ಲ.

ಕಪ್ಪು ವರ್ತಲ

ಕೆಲವರಿಗೆ ಕಣ್ಣುಗಳ ಕೆಳಗೆ ಕಪ್ಪನೆಯ ಸರ್ಕಲ್‍ಗಳು ಏರ್ಪಡುತ್ತವೆ. ಇದರಿಂದ ನಿಜವಾದ ವಯಸ್ಸಿಗಿಂತ ಅಧಿಕ ವಯಸ್ಸಾದಂತೆ ಕಾಣುತ್ತಾರೆ. `ಡಾರ್ಕ್ ಸರ್ಕಲ್ಸ್’ ಅನುವಂಶಿಕವಾಗಲೀ, ಅಲರ್ಜಿಯಿಂದಾಗಲಿ, ಪೋಷಣೆ ಕೊರತೆಯಿಂದಾಗಿ ಏರ್ಪಡುವ ಸಂದರ್ಭಗಳು ಹೆಚ್ಚು. ಇದು ಮೊದಲು ಕಣ್ಣು ಸುತ್ತಮುತ್ತಲೇ ಅಟ್ಯಾಕ್ ಆಗುವುದು.

ಸಾಕಷ್ಟು ನಿದ್ರೆ ಮಾಡದಿರುವುದರಿಂದಲೂ ಕಣ್ಣುಗಳು ಕೆಂಪಗಾಗಿ ಊದಿಕೊಂಡು ಡಾರ್ಕ್ ಸರ್ಕಲ್ಸ್‍ಗೆ ಹಾದಿಯಾಗಬಹುದು. ಇದರಿಂದ ಕಣ್ಣುಗಳ ಸುತ್ತಲೂ ರಕ್ತಪರಿಚಲನೆ ಕ್ಷೀಣಿಸಿ ಕಣ್ಣು ಗುಡ್ಡೆಗಳು ಬಿಳಚಿಕೊಳ್ಳುತ್ತವೆ. ಇದು ಕ್ರಮೇಣ ದೇಹದ ಎಲ್ಲ ಭಾಗಗಳಲ್ಲೂ ಕಾಣಿಸಿಕೊಳ್ಳುವ ಅಪಾಯವಿದೆ. ಇದು ಮುಖದ ಸೌಂದರ್ಯ ಮತ್ತು ದೇಹ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುತ್ತದೆ.

ಪರಿಹಾರ

  • ಶುಭ್ರವಾದ ನೀರಿನಲ್ಲಿ ಬಟ್ಟೆಯನ್ನು ಹಿಂಡಿ ಅದನ್ನು ಕಣ್ಣುಗಳ ಮೇಲೆ ರಾತ್ರಿ ಮಲಗುವಾಗ ಹಾಕಿಕೊಳ್ಳಬೇಕು.( ಹದಿನೈದು ನಿಮಷಗಳವರೆಗೆ ಮಾತ್ರ).
  • ಉದ್ಯೋಗ ಮಾಡುವ ಸ್ಥಳದಲ್ಲಾಗಲಿ, ಮನೆಯ ಪರಿಸರದಲ್ಲಾಗಲಿ ನಿಮಗೆ ಯಾವುದಾದರೂ ಅಲರ್ಜಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
  • ಮೆಗ್ನಿಷಿಯಂ ಮತ್ತು ಕ್ಯಾಲ್ಸಿಯಂನ್ನು ಹಾಲಿನ ಮೂಲಕ ದೇಹಕ್ಕೆ ಸೇರುವಂತೆ ಹಾಲನ್ನು ಕುಡಿಯಬೇಕು.
  • ಪಾಲಕ್ ಆಮ್ಲ, ಬಿ12, ಬ6 ವಿಟಮನ್ಸ್ ಇರುವಂತೆ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು. ಬಿ12 ಇರುವಂತಹ ತರಕಾರಿ ಸೊಪ್ಪುಗಳನ್ನು ತಿನ್ನಬೇಕು.
  • ತಾಜಾ ಸೌತೆಕಾಯಿಯನ್ನು ಬಿಲ್ಲೆಗಳನ್ನಾಗಿ ಕೊಯ್ದು ಬೆಳಗ್ಗೆ ಮತ್ತು ಸಂಜೆ ಹದಿನೈದು ನಿಮಿಷಗಳ ಕಾಲ ಕಣ್ಣುಗಳ ಮೇಲಿರಿಸಿಕೊಳ್ಳಬೇಕು.
  • ಕಂಪ್ಯೂಟರ್ ಕೆಲಸ ಮಾಡುತ್ತಿರುವಾಗ ಕಣ್ಣಿಗೆ ಹೆಚ್ಚು ತೊಂದರೆ ಆಗದಂತೆ ಮಧ್ಯೆ ಮಧ್ಯೆ ಐದು ನಿಮಿಷ ರಿಲ್ಯಾಕ್ಸ್ ಆಗಿ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ನೀಡುವುದು ಅತ್ಯುತ್ತಮ.

                          

ಡಾ. ಕೆ. ಹನುಮಂತಯ್ಯ        ಡಾ. ಮೇನಕಾ ಮೋಹನ್

ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, # 82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/1/2/3/4/5.   Email: info@vims.ac.in 

Back To Top