ಮಕ್ಕಳಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿವಳಿಕೆ ನೀಡಿ

ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರುಮಾಡುವುದು ಹೇಗೆ?

ಒಂದು ದಿನ ‘ನಾಲ್ಕುವರ್ಷದ ಮಗುವೊಂದನ್ನು ಆಮಿಷವೊಡ್ಡಿ ಅದನ್ನು ಬಲಾತ್ಕರಿಸಲಾಯಿತು’ ಇದು ಮಾಧ್ಯಮದ ಪ್ರಮುಖ ಸುದ್ದಿಯಾಗಿತ್ತು. ಮಾರನೆಯ ದಿನ ‘ಏಳು ವರ್ಷದ ಮಗು ಶಾಲೆಯ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿತ್ತು’. ಸಾಮಾನ್ಯವಾಗಿ ಒಂದುವಾರದ ದಿನಪತ್ರಿಕೆಯಲ್ಲಿ ನೋಡಿದಾಗ ಇಂತಹ ಸಣ್ಣ ಮಕ್ಕಳ ಮೇಲಿನ; ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಇಬ್ಬರ ಮೇಲೆಯೂ ನಡೆಯುವ ಲೈಂಗಿಕ ಕಿರುಕಳ ಮತ್ತು ದೌರ್ಜನ್ಯದ ಸುದ್ದಿಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ.

ಅದರಲ್ಲೂ ಅವರಿಗೆ ಪರಿಚಿತರಿರುವ ಸಾಮಾಜಿಕ ವ್ಯಕ್ತಿಗಳಿಂದಲೇ ಅಗುತ್ತಲಿದೆ. ಹೆಚ್ಚಾಗಿ ಈ ವ್ಯಕ್ತಿಗಳು ಯಾರೆಂದರೆ ನಾವು ಯಾರಿಗೆ ನಮ್ಮ ಮಕ್ಕಳನ್ನು ಗಮನಿಸುವ, ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿರುತ್ತೇವೆಯೋ ಅವರೇ ಆಗಿರುತ್ತಾರೆ – ಶಾಲೆಯ ವಾಹನ ಚಾಲಕ ಅಥವಾ ನಿರ್ವಾಹಕ, ಭದ್ರತಾ ಸಿಬ್ಬಂದಿ ಮತ್ತು ಕೆಲವೊಮ್ಮೆ ನಮ್ಮ ನೆರೆಹೊರೆಯ ವ್ಯಕ್ತಿಗಳು. ಇನ್ನು ಕೆಲವು ಸಂದರ್ಭಗಳಲ್ಲಿ, ವಿಷಯವು ಅತಿರೇಕಕ್ಕೆ ಹೋಗಿ ಘಟನೆಗಳು ದುಃಖಕರ ಘಟನೆಗಳಾಗಿ ಪರಿವರ್ತಿತವಾಗುತ್ತದೆ, ಅಪರಾಧಿಗಳು ತಾವೆಸಗಿದ ಲೈಂಗಿಕ ಕ್ರಿಯೆಗಳ ಸಾಕ್ಷಿಯನ್ನು ನಾಶಮಾಡಲು ಮಕ್ಕಳಿಗೆ ದೈಹಿಕ ಹಾನಿಯನ್ನುಂಟು ಮಾಡುತ್ತಾರೆ ಮತ್ತು ಇನ್ನು ಕೆಲವು ಸಂದರ್ಭಗಳಲ್ಲಿ ಆ ಅಮಾಯಕ ಮಗುವಿನ ಹತ್ಯೆಗೂ ಮುಂದಾಗುತ್ತಾರೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ವ್ಯಾಪಕ ಸಮಸ್ಯೆ:

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಒಂದು ವ್ಯಾಪಕ ಸಮಸ್ಯೆಯಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಯಾವುದೇ ಒಂದು ಸಮಾಜದ ಶ್ರೇಣಿಯ ವರ್ಗಕ್ಕೆ ಮಾತ್ರ ಮೀಸಲಾಗಿರುವುದಿಲ್ಲ – ದುರದೃಷ್ಟವಶಾತ್ ಎಲ್ಲ ಕಡೆಯು ಈ ರೀತಿಯ ಘಟನೆಗಳು ನಡೆಯುತ್ತಲಿವೆ. ಬಹಳಷ್ಟು ಅಧ್ಯಯನಗಳು ನಡೆದಿದ್ದು ಅವುಗಳಿಂದ ತಿಳಿದು ಬಂದ ಸತ್ಯ ಸಂಗತಿಯ ಅಂಶವೇನೆಂದರೆ ಈ ರೀತಿಯ ಲೈಂಗಿಕ ದೌರ್ಜನ್ಯಗಳು ತಿಳಿದ ವ್ಯಕ್ತಿಗಳು ಅಥವಾ ನಂಬಿಕೆ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಿಂದಲೇ ಆಗಿರುತ್ತದೆ.

ಸಣ್ಣವಯಸ್ಸಿನಲ್ಲಿ ಮಕ್ಕಳಲ್ಲಿ ಉಂಟಾಗುವ ಇಂತಹ ಲೈಂಗಿಕ ದೌರ್ಜನ್ಯವು ಮುಂದೆ ಮಕ್ಕಳ ಬೆಳವಣಿಗೆಯ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಪುನರಾವರ್ತಿತವಾಗಿ ಅವರ ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಮಕ್ಕಳಿಗೆ ಕೆಟ್ಟ ಸ್ಪರ್ಶದ ಪರಿಣಾಮ ಬಹಳ ಮುಖ್ಯವಾಗಿದೆ ಅವರ ದೇಹದ ಯಾವ ಭಾಗಗಳನ್ನು ಮುಟ್ಟಲಾಗಿದೆ ಎಂಬುದರಿಂದ ಅತ್ಯಾಚಾರ ಮಾಡಿದಷ್ಟೇ ಕೆಟ್ಟ ಪರಿಣಾಮಗಳು ಆಗುತ್ತವೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ಮಾಧ್ಯಮವು ಈ ಸಮಸ್ಯೆಯ ಕಡೆಗೆ ಸಾಕಷ್ಟು ಗಮನ ಹರಿಸಿದಾಗಿಯೂ, ಒಮ್ಮೊಮ್ಮೆ ಈ ರೀತಿ ಮುಜುಗರದ ಭಾವನೆಯುಂಟಾಗುವ ಘಟನೆಗಳು ಸತತವಾಗಿ ನಡೆಯುತ್ತಲೇ ಇವೆ ಮತ್ತು ಈ ಸಮಸ್ಯೆಯು ತಗ್ಗುವಂತಹ ಯಾವುದೇ ಚಿಹ್ನೆಗಳು ಕಾಣಿಸುತ್ತಲಿಲ್ಲ. ಒಬ್ಬ ಪೋಷಕರಾಗಿ ನಾವು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಘಟನೆಗೆ ಈ ಎರಡು ರೀತಿಯಾಗಿ ಪ್ರತಿಕ್ರಿಯಿಸುತ್ತೇವೆ – ಮೊದಲನೆಯದಾಗಿ ಈ ತರಹದ ಘಟನೆಗಳು ಬೇರೆ ಮಕ್ಕಳೊಂದಿಗ ಮಾತ್ರ ಘಟಿಸುತ್ತದೆ ಮತ್ತು ನಮ್ಮ ಮಕ್ಕಳು ಈ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದಿಲ್ಲ. ಪೋಷಕರು ಸಾಮಾನ್ಯವಾಗಿ ಈ ರೀತಿ ತಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಂದ ಅಥವಾ ರಕ್ಷಕರು ತಪ್ಪಾದ ರೀತಿಯಿಂದ ಮುಟ್ಟಲ್ಪಡಬಹುದು ಅಥವಾ ದೌರ್ಜನ್ಯಕ್ಕೆ ಒಳಗಾಗಬಹುದು ಎಂದು ಯೋಚಿಸುವುದೂ ಇಲ್ಲ ನಂಬುವುದೂ ಇಲ್ಲ, ಎಲ್ಲಿಯವರೆಗೆ ಅಸಹ್ಯಕರವಾದ ಅತ್ಯಾಚಾರದಂತಹ ಲೈಂಗಿಕ ದೌರ್ಜನ್ಯದ ಘಟನೆಯಾಗಿ ಅಥವಾ ದೈಹಿಕ ದೌರ್ಜನ್ಯದ ಘಟನೆಯಾಗಿ ಪರಿವರ್ತಿತವಾಗಿ ತೊಂದರೆ ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ಅವರುಗಳಿಗೆ ನಂಬಿಕೆ ಬರುವುದಿಲ್ಲ.

ಎರಡನೆಯದಾಗಿ ಪೋಷಕರು ಮಕ್ಕಳ ಸುರಕ್ಷತೆಯ ಬಗೆಗೆ ಚಿಂತಿತರಾಗುತ್ತಾರೆಯೇ ಹೊರತು ಅವರಿಗೆ ಸಮಸ್ಯೆಯ ಪರಿಹಾರವನ್ನು ಹೇಗೆ ಕಂಡುಕೊಳ್ಳಬೇಕೆಂದು ತಿಳಿಯುವುದಿಲ್ಲ. ಈಗಿನ ಸದ್ಯದ ಸಾಮಾಜಿಕ ಪರಿಸ್ಥಿತಿಯ ಕುರಿತಾಗಿ ಚರ್ಚಿಸುವುದಾದರೆ ಈಗಿನ ಕಾಲದಲ್ಲಿ ಪೋಷಕರು ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ ಮತ್ತು ಅವರಿಗೆ ಕೆಲಸದ ಒತ್ತಡವೂ ಅಧಿಕವಾಗಿರುತ್ತದೆ, ಮತ್ತು ಅವರ ಗುರುತು ಪರಿಚಯದವರಲ್ಲಿ ಸಾಮಾಜಿಕ ವಲಯದಲ್ಲಿ ಒಬ್ಬ ಒಳ್ಳೆಯ ವಯಸ್ಕ ವ್ಯಕ್ತಿಯನ್ನು ಹುಡುಕುವುದೇ ಕಷ್ಟಕರವಾಗಿದೆ, ಅದರಲ್ಲಿ ಸಂಭಾವನೆ ಪಡೆದು ನೋಡಿಕೊಳ್ಳುವ ಸಂರಕ್ಷಕರಾಗಿರಲಿ ಅಥವಾ ನೆರೆಹೊರೆಯವರಾಗಿರಲಿ ಅಥವಾ ಸಂಬಂಧಿಕರಾಗಿರಲಿ ಅವರೊಂದಿಗೆ ಮಕ್ಕಳನ್ನು ಯಾವುದೇ ಭಯವಿಲ್ಲದೇ ಬಿಟ್ಟುಹೋಗುವ ಧೈರ್ಯಮಾಡುವ ಪರಿಸ್ಥಿತಿ ಇರುವುದಿಲ್ಲ.

ಇಂತಹ ಭಯದ ಸಂಶಯದ ಅನುಮಾನವಿದ್ದರೂ ಸಹ ತಾವು ಕೆಲಸಕ್ಕೆ ಹೋಗುವ ಸಮಯದಲ್ಲಿ ಇಂತಹ ಸಂರಕ್ಷಕರಾಗಿರಲಿ ಅಥವಾ ನೆರೆಹೊರೆಯವರಾಗಿರಲಿ ಅಥವಾ ಸಂಬಂಧಿಕರಾಗಿರಲಿ ಅವರೊಂದಿಗೆ ಮಕ್ಕಳನ್ನು ಬಿಟ್ಟು ಹೋಗ ಬೇಕಾದ ಅನಿವಾರ್ಯತೆಯು ಉಂಟಾಗುತ್ತದೆ. ಇಂತಹ ಅನಿವಾರ್ಯತೆ ಇರುವಾಗ, ಮಕ್ಕಳನ್ನು ಸುರಕ್ಷಿತವಾಗಿಡಲು ಒಂದೇ ಒಂದು ದಾರಿಯೆಂದರೆ ಮಕ್ಕಳಿಗೆ ಕೆಟ್ಟ ಸ್ಪರ್ಶ ಮತ್ತು ಒಳ್ಳೆಯ ಸ್ಪರ್ಶದ ಬಗೆಗೆ ತಿಳುವಳಿಕೆ ಮತ್ತು ಲೈಂಗಿಕ ದೌರ್ಜನ್ಯಗಳ ಬಗೆಗೆ ಮಾಹಿತಿ ನೀಡುವುದಾಗಿದೆ.

ಮಕ್ಕಳಿಗೆ ಮಾಹಿತಿ ನೀಡಿ:

ಇದು ಮಾತನಾಡಲು ಬಹಳ ಕಷ್ಟಕರವಾದ ವಿಷಯವಾಗಿದೆ. ಆದರೂ ಸಹ ನಾವು ಈ ವಿಚಾರದ ಬಗೆಗೆ ಮಾತನಾಡಲೇ ಬೇಕು. ನಾವು ಪೋಷಕರಾಗಿ ಶಿಕ್ಷಕರಾಗಿ ಇಂತಹ ವಿಚಾರವನ್ನು ಮಾತನಾಡಲು ಮುಜುಗರ ಪಟ್ಟುಕೊಳ್ಳದೆ ಮತ್ತು ನಮ್ಮ ಮಕ್ಕಳಿಗೆ ಈ ವಿಚಾರಗಳ ಬಗೆಗೆ ತಿಳುವಳಿಕೆ ನೀಡಲೇ ಬೇಕಾಗಿದೆ, ಅದು ಏನೇ ಇರಲಿ ಮಕ್ಕಳು ಎಷ್ಟೇ ಸಣ್ಣವರಿರಲಿ ಇಂತಹ ಭಯಂಕರವಾದ ವಿಷಯದ ತಿಳುವಳಿಕೆಯನ್ನು ನೀಡಲೇ ಬೇಕು. ನಮ್ಮ ಮಕ್ಕಳು ತಮ್ಮನ್ನು ತಾವು ಸುರಕ್ಷಿತವಾಗಿಟ್ಟು ಕೊಳ್ಳಲು ತಿಳಿಹೇಳಬೇಕಾದುದು ಅತಿ ಅವಶ್ಯಕವಾಗಿದೆ ಮತ್ತು ಅವರು ಈ ರೀತಿಯ ಪರಿಸ್ಥಿತಿಯುಂಟಾದಾಗ ಅದನ್ನು ಎದುರಿಸಲು ತಿಳುವಳಿಕೆಯನ್ನು ನೀಡಿ ಧೈರ್ಯವಂತರಾಗಿ ಆಗಲು ಅವರನ್ನು ನಾವು ಸಿದ್ಧಪಡಿಸಿರಬೇಕು.

ಹಾಗಾದರೆ ನಾವು ನಮ್ಮ ಮಕ್ಕಳಿಗೆ ಈ ರೀತಿಯ ತಿಳುವಳಿಕೆಯ ಶಿಕ್ಷಣವನ್ನು ಹೇಗೆ ನೀಡುತ್ತೇವೆ ಮತ್ತು ಲೈಂಗಿಕ ದೌರ್ಜನ್ಯದಿಂದ ತಮ್ಮನ್ನು ತಾವು ಸುರಕ್ಷಿತವಾಗಿಟ್ಟು ಕೊಳ್ಳುವಂತೆ ನಾವು ಹೇಗೆ ಶಿಕ್ಷಣವನ್ನು ನೀಡುತ್ತೇವೆ? ಇಂದಿನ ದಿನಮಾನದಲ್ಲಿ ಮತ್ತು ಸಣ್ಣ ವಯಸ್ಸಿನಲ್ಲೇ ತಿಳುವಳಿಕೆಯನ್ನು ನೀಡಲು ಆರಂಭಿಸುವುದು ಅನಿವಾರ್ಯವಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಅಂಕೆ ಸಂಖ್ಯೆಗಳನ್ನು ನಾವು ಗಮನಿಸಿದಾಗ ಸಣ್ಣವಯಸ್ಸಿನ ಮಕ್ಕಳು ಹೆಚ್ಚಾಗಿದ್ದಾರೆ.

ನಮ್ಮ ಮೊದಲ ಹೆಜ್ಜೆ ಏನೆಂದರೆ ಅವರಿಗೆ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶಗಳ ಬಗೆಗೆ ತಿಳುವಳಿಕೆ ನೀಡುವುದಾಗಿದೆ. ನಾವು ಈ ವಿಚಾರವಾಗಿ ಮಾತನಾಡುವಾಗ ನಾವು ಗಮನದಲ್ಲಿಟ್ಟು ಕೊಳ್ಳಬೇಕಾದ ವಿಷಯವೆಂದರೆ, ನಾವೇ ಆಗಲಿ ಮಕ್ಕಳೇ ಆಗಲಿ ಈ ವಿಚಾರದಲ್ಲಿ ಪರಸ್ಪರ ಸಂಶಯ ಪಟ್ಟು ಕೊಳ್ಳಬಾರದು. ಮಕ್ಕಳು ಯಾರಿಂದಲೇ ಆಗಲಿ ಬಹು ಬೇಗ ಪ್ರಭಾವಿತರಾಗಬಲ್ಲವರಾಗಿರುತ್ತಾರೆ ಮತ್ತು ನಾವು ಈ ಕಾರಣದಿಂದ ಒಳ್ಳೆಯ ಸ್ಪರ್ಶ ಹೇಗಿರುತ್ತದೆ ಎಂಬುದನ್ನು ತಿಳಿಸಿಹೇಳಬೇಕಾಗುತ್ತದೆ, ಆದ್ದರಿಂದ ‘ಒಳ್ಳೆಯ ಸ್ಪರ್ಶ’ ವೆಂದರೆ ಹೇಗಿರುತ್ತದೆ ಅಥವಾ ಕೆಟ್ಟ ಸ್ಪರ್ಶ ಯಾವುದೆಂದು ತಿಳಿಯುವುದು ಹೇಗೆ ಎಂದು ಅವರಿಗೆ ಸರಿಯಾಗಿ ತಿಳಿಸಿ ಹೇಳಬೇಕಾಗುತ್ತದೆ.

ಒಂದು ಒಳ್ಳೆಯ ಸ್ಪರ್ಶ ಎಂದರೆ ಯಾವ ಸ್ಪರ್ಶವು ಮಕ್ಕಳಿಗೆ ಮುಜುಗರವನ್ನು ಉಂಟು ಮಾಡುವುದಿಲ್ಲವೋ, ಉದಾಹರಣೆಗೆ ಒಂದು ಆತ್ಮೀಯ ಅಪ್ಪುಗೆ ಅಥವಾ ಒಂದು ವಾತ್ಸಲ್ಯ ಭರಿತ ಮುತ್ತು ಕೆನ್ನೆಯ ಮೇಲೆ ಅಥವಾ ಹಣೆಯ ಮೇಲೆ, ಪ್ರೀತಿಯಿಂದ ತಲೆಗೂದಲಿನಲ್ಲಿ ಕೈ ಆಡಿಸುವುದು ಅಥವಾ ಕೈ ಕುಲುಕುವುದು ಅಥವಾ ಹೈ ಫೈ ಮಾಡುವುದು. ಈ ತರದ ಸ್ಪರ್ಶಗಳು ಹೇಗೆ ಒಳ್ಳೆಯ ಸ್ಪರ್ಶಗಳಾಗಿರುವುವು ಎಂದು ಮಕ್ಕಳಿಗೆ ಬಹಳ ಪ್ರೀತಿ ಮತ್ತು ಎಚ್ಚರಿಕೆಯಿಂದ ಕಲಿಸಬೇಕು.

ಮಕ್ಕಳಿಗೆ ಕೆಟ್ಟ ಸ್ಪರ್ಶದ ಬಗೆಗೆ ತಿಳಿಸುವುದು ಹೇಗೆ?

ಕೆಟ್ಟ ಸ್ಪರ್ಶ ಎಂದರೆ ಯಾವ ಸ್ಪರ್ಶದಿಂದ ಮಗುವಿನ ಮನದಲ್ಲಿ ಮುಜುಗರ ಉಂಟಾಗುವುದೋ, ನಾಚಿಕೆಯ ಅಥವಾ ಅವಮಾನವೆನಿಸುವುದೋ, ನೋವುಂಟಾಗುವುದೋ ಅಥವಾ ಯಾವುದೇ ರೀತಿಯಿಂದ ಸರಿಯಾದ ಸ್ಪರ್ಶವಾಗಿರುವುದಿಲ್ಲವೋ ಅಂತಹ ಸ್ಪರ್ಶ ಕೆಟ್ಟ ಸ್ಪರ್ಶ. ಕೆಟ್ಟ ಸ್ಪರ್ಶವನ್ನು ಹೇಗೆ ಗುರುತಿಸಬಹುದು ಏಂದರೆ, ಮಕ್ಕಳ ಗುಪ್ತ ಭಾಗಗಳು ಮುಟ್ಟುವುದು, ತೋರಿಸುವುದು ಅಥವಾ ಬೇರೋಬ್ಬರ ಗುಪ್ತ ಭಾಗಗಳು ಮುಟ್ಟಲು ಹೇಳುವುದು ಅಥವಾ ತೋರಿಸುವುದು, ಮಕ್ಕಳ ತುಟಿಗಳ ಮೇಲೆ ಅಥವಾ ಬಾಯಿಗೆ ಮುತ್ತು ಕೊಡುವುದು. ಮಕ್ಕಳಿಗೆ ಗುಪ್ತ ಭಾಗಗಳು ಎಂದರೆ ಯಾವಾಗಲೂ ಬಟ್ಟೆಯಿಂದ ಮುಚ್ಚಿರುವ ಭಾಗವನ್ನು ಗುಪ್ತ ಭಾಗಗಳು ಎಂದು ಹೇಳಿಕೊಡಬೇಕು. ಮಕ್ಕಳಿಗೆ ಬಟ್ಟೆಯ ಮೇಲಿನಿಂದಲೂ ಕೂಡ ಗುಪ್ತ ಭಾಗಗಳನ್ನು ಲೈಂಗಿಕವಾಗಿ ಸ್ಪರ್ಶಿಸಲು ಬರುತ್ತದೆ ಎಂಬ ತಿಳುವಳಿಕೆಯನ್ನು ನೀಡಬೇಕು.

ಎರಡನೆಯದಾಗಿ, ಪೋಷಕರು ದೇಹದ ಎಲ್ಲ ಭಾಗಗಳ ಹೆಸರುಗಳನ್ನು ಶರೀರ ಶಾಸ್ತ್ರದ ಪ್ರಕಾರವಾಗಿ ಸರಿಯಾಗಿ ಹೇಳಿ ಗುರುತಿಸಲು ಹೇಳಿಕೊಟ್ಟಿದ್ದರೆ, ಗುಪ್ತಾಂಗಗಳನ್ನೂ ಕೂಡ ಹೇಳಿದರೆ ಇನ್ನು ಒಳ್ಳೆಯದಿರುತ್ತದೆ, ಬಾಲ ಭಾಷೆಯಲ್ಲಿ ಹೇಳುವಂತೆ ಇದು ಉಚ್ಚೆ ಮಾಡುವ ಜಾಗ ಅಂತ ಹೇಳುವ ಬದಲು ಸರಿಯಾದ ಪದವನ್ನು ತಿಳಿಸಿ ಹೇಳಕೊಡಬೇಕು. ಮಕ್ಕಳಿಗೆ ನೇರವಾಗಿ ಅವರಿಗೆ ಅಥವಾಗುವ ರೀತಿಯಲ್ಲಿ ಸರಳವಾಗಿ ಹೇಳಿದರೆ ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ. ಇಂತಹ ತಿಳುವಳಿಕೆ ಇದ್ದರೆ ಮಕ್ಕಳಿಗೆ ನಿಜವಾಗಲೂ ಯಾವುದೇ ವಿಚಾರದ ಬಗೆಗೆ ಹೇಳುವ ಸಮಯದಲ್ಲಿ ಸಂಕೋಚವಾಗುವುದಿಲ್ಲ. ಮತ್ತು ಇಲ್ಲಿ ಬಹಳ ಮುಖ್ಯವಾದ ಸಂಗತಿ ಎಂದರೆ ಒತ್ತಿಹೇಳುವುದೇನೆಂದರೆ, ಗುಪ್ತ ಭಾಗಗಳು ಶರೀರ ಶಾಸ್ತ್ರದ ಪ್ರಕಾರದಿಂದ ಹೆಸರು ಹೇಳಿ ಮಾತನಾಡುವಾಗ ಸಾಮಾನ್ಯವಾಗಿ ಮಾತನಾಡಿ ಮತ್ತು ಭಾವುಕರಾಗದ ಸರಳವಾಗಿ ಮಾತನಾಡಿದಲ್ಲಿ ಆ ವಿಷಯದ ವಿಚಾರವಾಗಿ ಮಾತನಾಡುವಾಗ ಅಥವಾ ಪ್ರಶ್ನೆಗಳನ್ನು ಕೇಳುವಾಗ ಮಕ್ಕಳು ಯಾವುದೇ ಮುಜುಗರ ಪಟ್ಟುಕೊಳ್ಳದೇ ಮಾತನಾಡುವಷ್ಟು ಧೈರ್ಯ ಅವರಲ್ಲಿ ನೀವು ತುಂಬ ಬೇಕು.

ಇಂತಹ ಸಂಭಾಷಣೆಗಳನ್ನು ನಮ್ಮ ದಿನ ನಿತ್ಯದ ಕೆಲಸ ಕರ್ಮಗಳಾದ ಸ್ನಾನ ಮಾಡುವಾಗ ಮಲ ವಿಸರ್ಜನೆ ಮಾಡುವ ಸಮಯದಲ್ಲಿ ಸಾಮಾನ್ಯ ಸಂಭಾಷಣೆಯನ್ನು ನಡೆಸುವಂತೆ ಹೆಣೆದು ಮಾತನಾಡಬೇಕು ಮತ್ತು ಮಕ್ಕಳಿಗೆ ಯಾರಾದರೂ ಅವರಿಗೆ ಇಷ್ಟವಾಗದ ಅಥವಾ ಮುಜುಗರವಾದ ರೀತಿಯಲ್ಲಿ ಮಾತನಾಡಿಸಲಿ ಅಥವಾ ಸ್ಪರ್ಶಿಸಲು ಬಂದಾಗ ಅವರಿಗೆ ಹಾಗೆ ಮಾಡುವವರಿಗೆ ನಿರಾಕರಣೆ ಮಾಡುವ ಅಧಿಕಾರ ಇದೆ ಎಂಬ ತಿಳುವಳಿಕೆಯನ್ನೂ ನೀಡಬೇಕು. ಮಕ್ಕಳು ತಮ್ಮನ್ನು ಯಾರು ಮುಟ್ಟಬಹುದು, ಮುದ್ದಿಸಬಹುದು ಅಥವಾ ಅಪ್ಪಿಕೊಳ್ಳಬಹುದು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಅವರಿಗೆ ಇರಬೇಕು. ಪೋಷಕರು ತಮಗೆ ಪರಿಚಯವಿರುವ ಎಲ್ಲ ದೊಡ್ಡವರಿಗೂ ಮುತ್ತುಕೊಡಲು ಅಥವಾ ಅಪ್ಪಿಕೊಳ್ಳಲು ಒತ್ತಾಯಮಾಡಬಾರದು, ಅವರು ಎಷ್ಟೆ ಹತ್ತಿರದ ಸಂಬಂಧಿಯಾರಲಿ ಅಥವಾ ಎಷ್ಟೆ ಹತ್ತಿರವಿರಲಿ ಆಗಲೂ ಒತ್ತಾಯ ಮಾಡಬಾರದು.

ಇದಲ್ಲದೆ, ಮಕ್ಕಳಿಗೆ ನಾವು ಕಲಿಸಬೇಕಾದ ವಿಚಾರವೆಂದರೆ ಯಾರಾದರೂ ಕೆಟ್ಟ ರೀತಿಯ ಸ್ಪರ್ಶ ಮಾಡಿದಾಗ, ಆ ಸ್ಥಳದಿಂದ ತಕ್ಷಣದ ದೂರ ಬರಬೇಕು ಮತ್ತು ಅಂತಹ ವ್ಯಕ್ತಿಗಳ ಜೊತೆಯಲ್ಲಿ ಒಬ್ಬಂಟಿಯಾಗಿ ಇರದಿರಲು ಪ್ರಯತ್ನಿಸಬೇಕು ಎಂದು ತಿಳಿಹೇಳಬೇಕು. ಇದರೊಂದಿಗೆ ಆ ಸಮಯದಲ್ಲಿ ಸಹಾಯಕ್ಕೆ ಕರೆಯಬೇಕು ಮತ್ತು ಯಾರೇ ದೊಡ್ಡವರು ಹತ್ತಿರ ಇಲ್ಲದೇ ಇದ್ದಾಗ ಜೋರಾಗಿ ಕಿರುಚಿಕೊಳ್ಳಬೇಕು. ಮತ್ತು ಅವರಿಗೆ ತಿಳುವಳಿಕೆ ಹೇಳಬೇಕಾಗಿರುವುದು ಏನೆಂದರೆ ಪೋಷಕರು ಅಥವಾ ಶಿಕ್ಷಕರ ಬಳಿ ಹೋಗಿ ಏನೆಲ್ಲ ನಡೆಯಿತು ಎಂಬುದನ್ನು ಧೈರ್ಯವಾಗಿ ಹೇಳಬೇಕೆಂಬ ತಿಳುವಳಿಕೆಯನ್ನು ನೀಡಬೇಕು. ಅವರಿಗೆ ಆಪ್ತ ಸಮಾಲೋಚನೆಯ ಮೂಲಕ ತಿಳಿ ಹೇಳಬೇಕಾಗಿರುವದೆಂದರೆ ಅವರು ಯಾವುದೇ ತಪ್ಪನ್ನು ಅಥವಾ ಅಪರಾಧವನ್ನು ಮಾಡಿಲ್ಲ ಆದ್ದರಿಂದ ತಪ್ಪಿತಸ್ಥರಲ್ಲ ಎಂದು ಧೈರ್ಯ ನೀಡಬೇಕು. ಅವರೊಂದಿಗೆ ತಪ್ಪಾಗಿ ನಡೆದು ಕೊಂಡವರು ತಪ್ಪಿತಸ್ಥರು ಇವರು ಅಲ್ಲ ಎಂಬುದನ್ನು ತಿಳಿಹೇಳಬೇಕು.

ಇದಲ್ಲದೆ, ಪೋಷಕರು ಮತ್ತು ಶಿಕ್ಷಕರು ಈ ಕೆಳಗಿನ ಆಚರಣೆಹೊಂದಿರುವ ವಯಸ್ಕರ ಮೇಲೆ ಒಂದು ಕಣ್ಣಿಟ್ಟಿರಬೇಕು :
1. ಮಕ್ಕಳೊಂದಿಗೆ ಅನವಶ್ಯಕವಾಗಿ ಹೆಚ್ಚಿನ ಸಮಯ ಕಳೆಯುವ ವ್ಯಕ್ತಿಗಳು
2. ಅವರನ್ನು ಮುಟ್ಟಲು, ಮುತ್ತಿಡಲು ಮತ್ತು ಅಪ್ಪಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿ
3. ಮಕ್ಕಳಿಗೆ ಯಾರಾದರೂ ಬಂದಾಗ ಭಯದ ಅನುಭವ ಪಡೆಯು

ಇದಲ್ಲದೆ, ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಕೆಲವೊಂದು ಪ್ರಕರಣಗಳಲ್ಲಿ ಅಪರಾಧಿಗಳು ಮಗುವನ್ನು ಬಹಳ ದಿನಗಳಿಂದ ಹಿಂಬಾಲಿಸಿಕೊಂಡು ಇರುತ್ತಾರೆ. ಕೆಲವರು ಮಕ್ಕಳನ್ನು ಹಿಂಬಾಲಿಸಿ ಅವರ ಅಭ್ಯಾಸಗಳ ಬಗೆಗೆ ಅಧ್ಯಯನ ಮಾಡಿಟ್ಟುಕೊಂಡಿರುತ್ತಾರೆ. ಅವರು ಸಾಮಾನ್ಯವಾಗಿ ತಮ್ಮ ಮನೆಯನ್ನು ಶಾಲೆ ಅಥವಾ ಉದ್ಯಾವನದ ಹತ್ತಿರದಲ್ಲಿ ನೋಡಿಕೊಂಡು, ಆ ಮಕ್ಕಳನ್ನು ಹಿಂಬಾಲಿಸಲು ಸರಿಯಾದ ಜಾಗಮತ್ತು ಮಕ್ಕಳನ್ನು ಹಿಂಬಾಲಿಸಿ ಅವರನ್ನು ಹೇಗೆ ಬಲೆಗೆ ಬೀಳಿಸಿಕೊಳುವುದೆಂಬ ವಿಚಾರದಲ್ಲೇ ಇರುತ್ತಾರೆ. ಸಾಮಾನ್ಯವಾಗಿ ಇಂತಹ ಅಪರಾಧಿಗಳು ಹೆಚ್ಚಾಗಿ ಪುರುಷರೇ ಇರುತ್ತಾರೆ.

ಇದರೊಂದಿಗೆ ನಾವು ಮಕ್ಕಳಿಗೆ ‘ಒಳ್ಳೆಯ ಸ್ಪರ್ಶ’ ಮತ್ತು ‘ಕೆಟ್ಟ ಸ್ಪರ್ಶ’ ದೊಂದಿಗೆ ಒಂದು ಹೆಜ್ಜೆ ಮುಂದುವರೆದು ‘ಒಳ್ಳೆಯ ನೋಟ’ ಮತ್ತು ‘ಕೆಟ್ಟ ನೋಟ’ದ ಬಗೆಗೂ ಸರಿಯಾದ ತಿಳುವಳಿಕೆ ನೀಡಿದಲ್ಲಿ ಮಕ್ಕಳಿಗೆ ಒಳ್ಳೆಯದಾಗುತ್ತದೆ. ಇದರಿಂದ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಉದ್ಯಾನ ಅಥವಾ ಮಾಲ್‍ಗಳಲ್ಲಿ ಅವರನ್ನು ಗಮನಿಸುತ್ತಿರುವ ವ್ಯಕ್ತಿಯ ಬಗೆಗೆ ಅವರ ನಡವಳಿಕೆಯ ಬಗೆಗೆ ಮಗು ನಿರ್ಧರಿಸಲು ಅನುಕೂಲವಾಗುತ್ತದೆ. ಅವರಿಗೆ ಜನರ ನಡವಳಿಕೆಯನ್ನು ಗಮನಿಸುವಂತೆ ಮಾಡÀಬಹುದು ಮತ್ತು ಅಪರಿಚಿತರೊಂದಿಗೆ ದೃಷ್ಟಿಸಿ ನೋಡಿ ತಿಳಿದುಕೊಳ್ಳಲು ಹೇಳಿಕೊಡಬಹುದು ಮತ್ತು ಅವರಿಗೆ ಅಪರಿಚಿತರು ಯಾವಾಗ ಒಳ್ಳೆಯ ನಡತೆಯಿಂದ ಇರುತ್ತಾರೆ ಹೇಗೆ ನೋಡಿದರೆ ಕೆಟ್ಟ ದೃಷ್ಟಿ ಯಾವ ನಡುವಳಿಕೆ ಕೆಟ್ಟದ್ದು ಎಂಬ ವ್ಯತ್ಯಾಸ ತಿಳಿಸಿಕೊಡಬೇಕು ಮತ್ತು ಅಂತಹ ಕೆಟ್ಟ ನಡವಳಿಕೆ ಉಳ್ಳ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದೆಂಬ ತಿಳುವಳಿಕೆಯನ್ನು ಹೇಳಿಕೊಡಬೇಕು. ಇದು ಏನು ಬಹಳ ನಿಖರವಾದ ವೈಜ್ಞಾನಿಕ ನಡವಳಿಕೆ ಇಲ್ಲದಿರಬಹುದು ಏಕರೂಪ ನಡವಳಿಕೆಯನ್ನು ಗುರುತಿಸಿ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅಪಾಯದಿಂದ ಪಾರಾಗಲು ನಮ್ಮ ಮಕ್ಕಳಿಗೆ ಸುರಕ್ಷತಾ ಕ್ರಮ ಅನುಸರಿಸಲು, ನಮ್ಮ ಭಯಪರಿಹಾರ ಮಾಡಿಕೊಳ್ಳಲು ಹೇಳಿಕೊಡುವ ಒಂದು ವಿಧಾನವಷ್ಟೆ. ಇಲ್ಲಿ ಬಹಳ ಮುಖ್ಯವಾದ ವಿಚಾರವೆಂದರೆ ನಮ್ಮ ಮಕ್ಕಳಿಗೆ ನಾವು ತಮ್ಮ ಸುರಕ್ಷತೆಯ ಬಗೆಗೆ ಮತ್ತು ಕೆಟ್ಟ ನಡವಳಿಕೆಗಳ ಬಗೆಗೆ ಸರಿಯಾದ ಶಿಕ್ಷಣ ತಿಳುವಳಿಕೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಇಂತಹ ಅಪರಾಧಿ ವಯಸ್ಕರಿಂದ ರಕ್ಷಿಸಿಕೊಳ್ಳವಷ್ಟು ಜ್ಞಾನವನ್ನು ನೀಡಬೇಕು.

ಇಲ್ಲಿ ಒಂದು ಪ್ರಶ್ನೆ ಉದ್ಭವವಾಗಬಹುದು ಇಲ್ಲಿ ನಾವು ಮಕ್ಕಳ ಮನಸ್ಸಿನಲ್ಲಿ ಸಂಶಯವನ್ನು ಉತ್ಪತ್ತಿ ಮಾಡುತ್ತಿದ್ದೇವೆಯೇ ಎಂದು? ಇದಕ್ಕೆ ಉತ್ತರ ಇಲ್ಲ ಸರ್ವಥಾ ಇಲ್ಲ. ನಾವು ಅವರಿಗೆ ಕಲಿಸುತ್ತಿರುವುದು ಅವರ ತಿಳುವಳಿಕೆಗಾಗಿ ಗಮನಿಸುವುದನ್ನು, ಕೆಟ್ಟ ನಡವಳಿಕೆ ಯಾವುದೆಂದು ತಿಳಿದು ಕೊಂಡು, ಕೆಟ್ಟ ದೃಷ್ಟಿ ಯಾವುದೆಂದು ಗಮನಿಸಿ ಅಪರಾಧಿ ಮನೋಭಾವದ ವ್ಯಕ್ತಿಯ ನಡವಳಿಕೆಯನ್ನು ಗುರುತಿಸಲು ಕಲಿಸುವುದು – ಉದಾಹರಣೆಗೆ ಯಾರಾದರೂ ಅವರನ್ನು ಗಮನಿಸುತ್ತಿದ್ದರೆ, ಅವರನ್ನು ಹಿಂಬಾಲಿಸುತ್ತಿದ್ದರೆ, ಯಾರಾದರೂ ಅತಿ ಸ್ನೇಹ ತೋರಿಸುತ್ತಿದ್ದರೆ ಅಥವಾ ಅತಿಯಾದ ಸಲುಗೆಯಿಂದ ವರ್ತಿಸಲು ಪ್ರಯತ್ನಿಸುತ್ತಿದ್ದರೆ ಕಾರಣವಿಲ್ಲದೇ ಹತ್ತಿರಬರುತ್ತಿದ್ದರೆ. ಇಂತಹ ಸಂದರ್ಭದಲ್ಲಿ ಮಗು ತನ್ನ ಪೋಷಕರು ಅಥವಾ ಶಿಕ್ಷಕರ ಬಳಿ ತನಗೆ ಆದ ಅನುಭವವನ್ನು ಹೇಳಿದಾಗ, ನಾವು ಎಚ್ಚರಿಕೆಯಿಂದ ಇರಬಹುದು ಮತ್ತು ಅವಶ್ಯಕ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಮ್ಮ ಮಗುವಿಗೆ ಉಂಟಾಗಬಹುದಾದ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟಬಹುದಾಗಿದೆ.

ಪೋಷಕರು, ಶಿಕ್ಷಕರು ಮತ್ತು ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಮಕ್ಕಳ ಸುರಕ್ಷತೆ ನಮ್ಮ ಕರ್ತವ್ಯ. ನಮಗೆ ಅವರಿಗೆ ಉಂಟಾಗಬಹುದಾದ ಎಲ್ಲ ರೀತಿಯ ತೊಂದರೆಗಳಿಂದ ದೂರ ಇರಿಸಬೇಕಿದೆ. ಅವರಿಗೆ ಉಂಟಾಗುವ ಸ್ಪರ್ಶಗಳು ಮತ್ತು ದೃಷ್ಟಿಗಳ ಬಗೆಗೆ ಸರಿಯಾದ ಜ್ಞಾನವನ್ನು ನೀಡಿ ನಾವು ಅವರಿಗೆ ಈ ಮಕ್ಕಳನ್ನು ತಮ್ಮ ಅಪರಾಧಿಕ ಹವ್ಯಾಸಗಳಿಗೆ ಬಳಸಿಕೊಳ್ಳುತ್ತಿರುವ ವ್ಯಕ್ತಿಗಳಿಂದ, ಮಕ್ಕಳ ಮುಗ್ಧತೆಯನ್ನು ದುರುಪಯೋಗ ಪಡೆಸಿಕೊಳ್ಳುವ ವ್ಯಕ್ತಿಗಳಿಂದ ಸಂರಕ್ಷಿಸಿ ಕೊಳ್ಳುವುದು ಆಗಿದೆ. ಇಂತಹ ಸಹಜವಲ್ಲದ ಕ್ರಿಯೆಗಳ ಬಗೆಗೆ ಜ್ಞಾನ ನೀಡಿ ಅವರು ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು ಸಶಕ್ತರಾಗುವಂತೆ ಅವರಿಗೆ ಪ್ರೋತ್ಸಾಹಿಸುವುದು ಪೋಷಕರಾಗಿ, ಶಿಕ್ಷಕರಾಗಿ ನಮ್ಮ ಕರ್ತವ್ಯವಾಗಿದೆ. ಹೀಗೆ ತಿಳುವಳಿಕೆ ನೀಡುವುದರಿಂದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ ಬೇರೆಯವರ ಜೀವದ ರಕ್ಷಣೆಯ ಬಗೆಗೂ ತಿಳುವಳಿಕೆ ನೀಡಿದಂತೆ ಆಗುತ್ತದೆ.

 

 

 

 

ಡಾ. ಅನುರಾಧಾ ಸತ್ಯಶೀಲನ್*
ಪ್ರೋ. ಬಿ. ಸತ್ಯಶೀಲನ್**
* ಸಹಾಯಕ ಪ್ರೋಫೆಸರ್ ಮನಃಶಾಸ್ತ್ರ
** ಸಹಾಯಕ ಪ್ರೋಫೆಸ್ ಒಬಿ ಮತ್ತು ಎಚ್‍ಆರ್
ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು
ಮೊ.: * 9535007186

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!