Health Vision

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ !

ಪ್ರಸ್ತುತ ವೈಜ್ಞಾನಿಕ ಕಾಲಮಾನದಲ್ಲಿ ಬಂಜೆತನವುಂಟಾಗುವುದಕ್ಕೆ ನಾನಾ ರೀತಿಯ ಕಾರಣಗಳು ಕಂಡುಬರುತ್ತವೆ. ದೈಹಿಕ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು ರಕ್ತಸಂಬಂಧ ವೈವಾಹಿಕತೆ, ಕಲುಷಿತಗೊಂಡಿರುವ ಪರಿಸರ, ರಾಸಾಯನಿಕ ಬಳಕೆಯಿಂದ ಬೆಳೆಯುವ ಧಾನ್ಯಗಳು ಹಾಗೂ ಆಹಾರ ಪದಾರ್ಥಗಳು, ಮದ್ಯಪಾನ, ಧೂಮಪಾನ ಇತ್ಯಾದಿಗಳಿಂದ ಬಂಜೆತನ ಹೆಚ್ಚಾಗುತ್ತಿವೆಯಲ್ಲದೇ ನಾನಾ ರೀತಿಯ ಕಾಯಿಲೆಗಳು ಉಲ್ಭಣಗೊಳ್ಳುವುದಕ್ಕೆ ಕಾರಣವಾಗಿವೆ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಇಂದು ವಿಶ್ವದಾದ್ಯಂತ ‘ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಬಂಜೆತನಕ್ಕೆ ದಂಪತಿಗಳಿಬ್ಬರೂ ಕಾರಣರಾಗುತ್ತಾರೆ. […]

Read More

Back To Top