ಪ್ರೇಮಿಗಳ ದಿನಾಚರಣೆ – ಎಚ್ಚರ!

ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ

ರವಿಚಂದ್ರನ್, ಶಾರೂಕ್ ಖಾನ್, ಯಶ್, ಮುಂತಾದ ನಾಯಕ ಪಾತ್ರಧಾರಿಗಳು, ಮಂಡಿಯೂರಿ ಕುಳಿತು ಕೆಂಪು ಗುಲಾಬಿ ಕೊಡುತ್ತಾ ‘I Love You’ ಎಂದಾಗ ILU ಎಂಬುದೇ ಪ್ರೇಮ ನಿವೇದನೆ ಎಂದುಕೊಳ್ಳುತ್ತಾ, ಆ ಸ್ಥಳದಲ್ಲಿ ತಮ್ಮನ್ನೇ ನಾಯಕರಾಗಿ ಕಲ್ಪಿಸಿಕೊಂಡು ಪ್ರೇಮಿಗಳಾಗುವರು ಎಷ್ಟೋ ಜನ.
ಪ್ರತೀ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಆಚರಿಸುವ ಉತ್ಸಾಹ ಕುತೂಹಲ, ಸಂಭ್ರಮ ಯುವಜನರಿಗೆ. ಕೆಂಪು ಬಣ್ಣದ ಹೃದಯ, ಕೆಂಪು ಗುಲಾಬಿ ಈ ದಿನಾಚರಣೆಯ ಲಾಂಛನಗಳು. ಆದರೆ ಅನೇಕ ಮುಗ್ಧರು, ಪ್ರೇಮ-ಕಾಮಗಳ ಅಂತರ ತಿಳಿಯದೇ, ಸಂಯಮ ಮೀರಿ ಲೈಂಗಿಕ ಸಂಬಂಧ, ಲೈಂಗಿಕ ಶೋಷಣೆ, ಅತ್ಯಾಚಾರ, ಹಿಂಸೆ – ಗರ್ಭಧಾರಣೆ ಮುಂತಾದ ಅಪಾಯಗಳಿಗೆ ತುತ್ತಾಗುವ ಸಂದರ್ಭ ಹೆಚ್ಚು.
ನಿಮ್ಮ ಎಚ್ಚರ ನಿಮಗಿರಲಿ:
ಮಿತ್ರರೊಂದಿಗೆ ಈ ದಿನಾಚರಣೆ ಆಚರಿಸುವ ಮೋಜು, ಮಸ್ತಿ ಅನುಭವಿಸಿ. ಆದರೆ ನಿಶೆಗೊಳಗಾಗುವ ಮದ್ಯಪಾನ, ಧೂಮ್ರಪಾನ, ಮಾದಕ ಪದಾರ್ಥ ಅಥವಾ ದ್ರವ್ಯಗಳ ಸೇವನೆ.ಗುಟ್ಕಾ – ತಂಬಾಕು ಸೇವನೆ ಬಗ್ಗೆ ಎಚ್ಚರ! ಗುಂಪಾಗಿ ಆಚರಿಸುವಾಗ ಒಂದು ರೀತಿ ಸುರಕ್ಷತೆ ಇದೆ. ಏಕಾಂಗಿಯಾಗಿ ಅಪರಿಚಿತರೊಂದಿಗೆ ಒಡನಾಟದಿಂದ ಅಪಾಯ ತಂದುಕೊಳ್ಳಬೇಡಿ. ಈ ಹಿನ್ನೆಲೆಯಲ್ಲಿ ಈ ಮುಂದಿನ ಕೆಲವು ಸಾಲುಗಳನ್ನು ಓದಿ. ಕೆಲವು ಪ್ರಶ್ನೆ – ಉತ್ತರಗಳನ್ನು ನೀವೇ ಹೋಲಿಸಿ ನೋಡಿ. ವ್ಯಾಮೋಹ (infatuation) ಹಾಗೂ ಪ್ರೇಮದಲ್ಲಿ ವ್ಯತ್ಯಾಸವಿದೆ.ಒಬ್ಬ ಹುಡುಗ ಒಂದು ದಶಲಕ್ಷ ಹುಡುಗಿಯರನ್ನು ಪ್ರೀತಿಸಬಹುದು ಅಂದುಕೊಳ್ಳುತ್ತಿರಬಹುದು. ಆದರೆ ನಿಜವಾದ ಒಬ್ಬ ಪ್ರೇಮಿ, ಅದೇ ಒಬ್ಬ ಹುಡುಗಿಯನ್ನು ದಶಲಕ್ಷ ರೀತಿ ಪ್ರೀತಿಸಬಹುದಾ?
ನಮ್ಮ ಗುರಿ – ನಮ್ಮ ಪ್ರೇಮ ಕಥೆಯ ಆರಂಭ, ಒಂದಾನೊಂದು ಕಾಲದಲ್ಲಿ ರೀತಿ ಆಗಿ, ಸದಾ ಸಂತಸವಾಗಿ ಮುಂದುವರೆಯುವಲ್ಲಿ ಮುಗಿಯಬೇಕು. ನಿಜವಾದ ಪ್ರೀತಿ ನೋಯಿಸುವದಿಲ್ಲ. ಆದರೆ ನೀವು ತಪ್ಪು ವ್ಯಕ್ತಿಯನ್ನು ಪ್ರೀತಿಸಿದರೆ, ಅದು ಖಂಡಿತ ನೋವು ಕೊಡುತ್ತದೆ. ರೋಮ್ಯಾನ್ಸ್ ಸುಲಭ. ನಿಜವಾದ ಪ್ರೀತಿ ಕಷ್ಟ. ಪ್ರತಿ ಪ್ರೇಮಕಥೆಯೂ ಸುಂದರ ಅಂದುಕೊಳ್ಳುತ್ತೇವೆ. ಆದರೆ ಅದು ಪರಸ್ಪರ ನಂಬಿಕೆ, ಗೌರವ, ಸಮಾನತೆ ಆಧರಿಸಿರಬೇಕು. ಆಧುನಿಕ ಪ್ರವೃತ್ತಿ ನಕಲಿಯಾಗಿದೆ.
ಒಬ್ಬ ಹೇಳಬಹುದು “ನಿನ್ನನ್ನು ಪ್ರೇಮಿಸುವುದು ಮಾದಕ ವಸ್ತುವಿದ್ದಂತೆ. ನಾನು ಆ ವ್ಯಕ್ತಿಯಾಗಿದ್ದೇನೆ. ನಾನು ಅತ್ಯುತ್ತಮ ಬೇಕೆನ್ನುತ್ತೇನೆ. ಆ ಅತ್ಯುತ್ತಮವೇ ನೀನು. ನಾನು ಮುಗುಳು ನಗಲು, ಪ್ರೀತಸಲು, ಉಸಿರಾಡುವ ಕಾರಣವೇ ನೀನು” ಹೀಗೆ ಹೇಳಿದಾಗ, ನೇರ ಹಾಗೇ ನಂಬುವ ಮೊದಲು, ಒಮ್ಮೆ ಯೋಚಿಸು. ನೀನು ಸಾಧಾರಣ ಎಂದು ಭಾವಿಸುವ ಯಾರನ್ನೂ ಎಂದೂ ಪ್ರೀತಿಸಬೇಡ. ನಿಜವಾದ ಸಂಬಂಧ ಎಂದೂ ಸ್ವಾಭಾವಿಕ ಮರಣ ಹೊಂದುವುದಿಲ್ಲ.
“ನಾನು ನಿನ್ನ ಕಾಣಲಾಗದಿದ್ದಾಗ ನನ್ನ ಕಣ್ಣುಗಳನ್ನು ಮುಚ್ಚಿಕೊಂಡರೆ ನೀನೇ ಕಾಣುತ್ತಿ” – ಎಂದು ಆತ ಅಂದರೆ, ಬೆಪ್ಪರಂತೆ ಒಮ್ಮೆಲೇ ಅಪ್ಪಿಕೊಳ್ಳದೇ ಯೋಚಿಸು. ಕೆಲವೊಮ್ಮೆ ಹುಡುಗಿಯನ್ನು ಸಂತೋಷ ಪಡಿಸಲು, ಒಬ್ಬ ಗಂಡು ಏನೇನು ಮಾಡಬೇಕಾಯ್ತು ಎಂಬುದನ್ನು ನೀನರಿಯೆ. ಗಂಡಿನ ಪ್ರಯತ್ನಗಳನ್ನು ಗಮನಿಸಿ ಮೆಚ್ಚು. ನಿಜವಾದ ಪ್ರೀತಿ ಹಾಗೂ ತಾಳ್ಮೆಯ ಸಂತೋಷವೇ, ಕಾಯುವುದು.ತಕ್ಷಣದ ಆಸಕ್ತಿ, ಆಕರ್ಷಣೆ, ಮೊದಲ ನೋಟದಲ್ಲೇ ಪರಿಣಾಮಕಾರಿಯಾಗುವ ವರ್ಣ ಹಾಗೂ ವಸ್ತ್ರ ಸಂಯೋಜನೆ, ಕುತೂಹಲ, ತನ್ನನ್ನೇ ಎಲ್ಲರೂ ಮತ್ತೆ ಮತ್ತೆ ನೋಡಬೇಕು, ಮೆಚ್ಚಿಕೊಳ್ಳಬೇಕು ಎಂಬ ಭಾವನೆ, ಪ್ರತಿ ಯುವತಿ ಯುವಕರಲ್ಲಿ. ಆಧುನಿಕ ಜೀವನದಲ್ಲಿ, ಇದು ಅಳತೆ ಮೀರುವ ಸಾಧ್ಯತೆ ಹೆಚ್ಚು.
ಯೌವ್ವನ ಚಂಚಲ ಕೋತಿ ಇದ್ದಂತೆ. ಪ್ರೇಮವೆಂಬುದು ಒಂದು ಹುಚ್ಚು. ವ್ಯಾಲೆಂಟೈನ್ಸ್‍ಡೇದಂತಹ ಸಂದರ್ಭ ಕುಡಿತದ ಕಿಕ್ ಇದ್ದಂತೆ. ಈ ಸಮಯದಲ್ಲಿ ಹುಚ್ಚು ಹಿಡಿದ ಕೋತಿಗೆ ಕುಡಿಸಿದರೆ ಅದು ಆಡುವ ಆಟದಂತೆ, ಅದೆಷ್ಟು ರಮ್ಯಮೋ, ಮಜವೋ, ಮೋಜೋ, ಅಷ್ಟೇ ಅಪಾಯಕಾರಿ!. ಉದ್ವೇಗ-ಉದ್ರೇಕ-ಅವಸರ ಬೇಗನೆ ಎಡವುವ ಸಂದರ್ಭ ಸನ್ನಿವೇಶ ಸೃಷ್ಟಿಸುತ್ತದೆ. ದೀರ್ಘಕಾಲದ ಸಂಬಂಧ, ಪರಸ್ಪರ ನಂಬಿಕೆ, ಬೆಂಬಲ, ಆಧಾರ, ನೈತಿಕತೆ ಆಧರಿಸುವುದರಿಂದ, ದಯವಿಟ್ಟು ಎಡವದೇ ಜಾಣತನದಿಂದ ವ್ಯವಹರಿಸಿ ಎಂಬುದೇ, 40 ವರ್ಷಗಳ ವೈವಾಹಿಕ ಸಂಬಂಧ ಇರುವ ಈ ಹಿರಿಯ ಪ್ರೇಮಿಯ ಕಳಕಳಿಯ ವಿನಂತಿ.
ಗಮನಿಸಿ:- ನಿಜವಾದ ಸಂಬಂಧದಲ್ಲಿ ಪ್ರತಿದಿನವೂ ಪ್ರೇಮಿಗಳ ದಿನವೇ! ಒಬ್ಬ ಹುಡುಗ ಹಾಗೂ ಹುಡುಗಿ ಉತ್ತಮ ಸ್ನೇಹಿತರಾಗಬಲ್ಲರೆ? ಇಷ್ಟಪಟ್ಟರೆ ಹೌದು; ವಿಮರ್ಶಿಸಿದರೆ ಇಲ್ಲ. ನೀವು ಕೋಪಿಸಿಕೊಂಡಾಗಲೂ ಪರಸ್ಪರ ಕಾಳಜಿ ಕೊಡುವುದೇ ಪ್ರೇಮ.
ನನ್ನನ್ನು ಪ್ರೇಮಿಸಲು ಇಡೀ ಪ್ರಪಂಚ ಬೇಡ, ನೀನು ಮಾತ್ರ ಬೇಕು; ಕಣ್ಣು ಮುಚ್ಚಿದಾಗಲೂ ನಾನು ನಿನ್ನನ್ನು ಕಾಣಬಲ್ಲೆ – ಎಂಬ ಮಾತುಗಳು ಕೇಳಲು ಮಾತ್ರ ಅಂದವೇ? ಅಥವಾ ನಿಜವೇ? ಕ್ಷಣಕಾಲ ಯೋಚಿಸಿ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!