ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ಜೀವನಶೈಲಿ

ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ಜೀವನಶೈಲಿಗೆ ಅನುಗುಣವಾಗಿ ಜೀವನವನ್ನು ನಡೆಸುವುದು ಬಹಳ ಮುಖ್ಯ.  ಆರೋಗ್ಯಕರ ನಿಯಮಗಳು ಮತ್ತು ಕಟ್ಟುಪಾಡುಗಳೊಂದಿಗೆ ಅದು ಪರಿಣಾಮ ಬೀರಬೇಕು. ಇಲ್ಲಿ ನೂತನ ವರ್ಷಕ್ಕಾಗಿ ಆಯುರ್ವೇದ ಪಠ್ಯಗಳಲ್ಲಿ ಉಲ್ಲೇಖಿಸಲಾಗಿರುವ ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ.

1. ಮುಂಜಾನೆಯೇ ಎದ್ದೇಳಬೇಕು :

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯದ ಒಂದು ಗಂಟೆ ಮುನ್ನವಿರುವ ಪ್ರಶಾಂತ ಸಮಯ. ಮುಂಜಾನೆಯೇ ಏಳುವುದರೆಂದರೆ ಆರೋಗ್ಯ, ಜ್ಞಾನ ಮತ್ತು ಸಂತೋಷ ಎಂದರ್ಥ. ಮುಂಜಾನೆಯ ಸಮಯವೆಂದರೆ ವಿಶ್ವದ ಸೃಷ್ಟಿಕರ್ತ ಬ್ರಹ್ಮನ ಕಾಲವೆಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಇದು ತುಂಬಾ ಅತ್ಯಂತ ಶಕ್ತಿ ಅಥವಾ ಬಲವಾಗಿದ್ದು, ಎಲ್ಲ ಸೃಜನ ಪ್ರಕ್ರಿಯೆಗಳೂ ನಡೆಯುವುದು ಇದೇ ಅವಧಿಯಲ್ಲಿ. ಬ್ರಾಹ್ಮಿ ಮುಹೂರ್ತದ ವಾಯುವನ್ನು ವೀರವಾಯು ಎಂದು ಕರೆಯಲಾಗುತ್ತದೆ. ವೀರವಾಯು ದೇಹವು ಉತ್ತಮ ಆರೋಗ್ಯ, ಮುಖದ ಕಾಂತಿ ವೃದ್ಧಿ, ಮನಸ್ಸಿನ ಪ್ರಫುಲ್ಲತೆ ಹಾಗೂ ಬುದ್ದಿಮತ್ತೆಯನ್ನು ಚುರುಕುಗೊಳಿಸುತ್ತದೆ. ಕೆಲವು ಪ್ರೇರಣೆಯನ್ನು ತುಂಬಲು ವಿಶ್ವದಲ್ಲಿನ ಬಹುತೇಕ ಯಶಸ್ವಿ ಮಂದಿ ಈ ಅಭ್ಯಾಸವನ್ನು ಅನುಸರಿಸುತ್ತಾರೆ ಹಾಗೂ ಇದನ್ನು ಪಾಲಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದುತ್ತಾರೆ.

2. ನೀರು ಕುಡಿಯಿರಿ:

ಮೂರು ಜೈವಿಕ ಶಕ್ತಿಗಳನ್ನು ಅಂದರೆ ವಾತಾ, ಪಿತ್ತ ಮತ್ತು ಕಫವನ್ನು ಸರಿದಾರಿಯಲ್ಲಿ ತರಲು ಪ್ರತಿ ದಿನ ನಸುಕಿನ ಅವಧಿಯಲ್ಲಿ ಸುಮಾರು 750 ಮಿ.ಲೀ. ನೀರು ಕುಡಿಯಿರಿ. ಆಯುರ್ವೇದದ ಪ್ರಕಾರ, ಪ್ರತಿದಿನ ಸೂರ್ಯೋದಯಕ್ಕೂ ಮುನ್ನ ಸಮಯದಲ್ಲಿ ಹಾಗೂ ನೈಸರ್ಗಿಕ ಕರೆಗೆ ಹೋಗುವುದಕ್ಕೂ ಮುನ್ನ ಎಂಟು ಪ್ರಸ್ರಿತಿ (ಸುಮಾರು 768 ಮಿ.ಲೀ) ನೀರನ್ನು ಕುಡಿಯಬೇಕು. ಇದರಿಂದ ಮೂರೂ ದೋಷಗಳಾದ ವಾತಾ, ಪಿತ್ತ ಮತ್ತು ಕಫ ನಿರ್ಮೂಲನೆಯಾಗಲು ನೆರವಾಗುತ್ತದೆ. ಇದು ಆರೋಗ್ಯಕರ ಚಯಾಪಚಯ ಅಗ್ನಿ ಕ್ರಿಯೆಗೆ ನೆರವಾಗುತ್ತದೆ. ಇದನ್ನು ಪಾಲಿಸುವವರು ಉತ್ತಮ ಆರೋಗ್ಯದೊಂದಿಗೆ ಸುದೀರ್ಘ ಜೀವನ ಹೊಂದುತ್ತಾರೆ.

ನೀರನ್ನು ತಾಮ್ರ, ಬೆಳ್ಳಿ ಇತ್ಯಾದಿಯಂಥ ಲೋಹದ ಪಾತ್ರೆಗಳಲ್ಲಿ ಅಥವಾ ಮರ ಅಥವಾ ಜೇಡಿಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಬಹುದಾಗಿದೆ. ನೀರನ್ನು ಇವುಗಳಲ್ಲಿ ಸಂಗ್ರಹಿಟ್ಟರೆ ಅವು ಗುಣಕಾರಿ ವಸ್ತುಗಳನ್ನು ಹೀರಿಕೊಳ್ಳುತ್ತದೆ. ಉದಾಹರಣೆಗೆ ಚಿನ್ನ/ಗಾಜಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಟ್ಟರೆ ಅದು ಎಲ್ಲ ಜೈವಿಕ ಶಕ್ತಿಗಳನ್ನು ಸಂಚಯಿಸಿ ದೃಷ್ಟಿಯನ್ನು ಸುಧಾರಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೂ ಸಹಕಾರಿ. ನೀರನ್ನು ಬೆಳ್ಳಿ ಪಾತ್ರೆಯಲ್ಲಿ ಶೇಖರಿಸಿಟ್ಟರೆ ಇದು ಕಣ್ಣುಗಳ ಆರೋಗ್ಯ, ದೃಷ್ಟಿ ವೃದ್ಧಿಗೆ ಸಹಾಯ ಮಾಡಿ ಪಿತ್ತವನ್ನು ನಿವಾರಿಸುತ್ತದೆ. ಆದರೆ ಇದು ವಾತಾ ಮತ್ತು ಕಫವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಕಡಿಮೆ ತಾಪಮಾನ ಮಂದಿಗೆ ಇದನ್ನು ಶಿಪಾರಸು ಮಾಡಲಾಗದು.

ತಾಮ್ರ ಪಾತ್ರೆಯಲ್ಲಿನ ನೀರು ಬುದ್ದಿಶಕ್ತಿ, ಹಸಿವನ್ನು ಹೆಚ್ಚಿಸಿ ಸ್ರಾವದ ಸಮಸ್ಯೆಯನ್ನು ತಡೆಗಟ್ಟುತ್ತದೆ. ಕಂಚಿನ ಪಾತ್ರೆಯಲ್ಲಿ ನೀರನ್ನು ಶೇಖರಿಸಿಟ್ಟರೆ ಅದು ಹುಳು ನಿವಾರಣೆಗೆ ನೆರವಾಗುತ್ತದೆ. ಕಬ್ಬಿಣ ಪಾತ್ರೆಯಲ್ಲಿನ ನೀರನ್ನು ಕುಡಿದರೆ ಎಡಿಮಾ (ದ್ರವಶೋಥ) ಸಮಸ್ಯೆಯಿಂದ ಉಪಶಮನ ದೊರೆತು, ಶಕ್ತಿ ಲಭಿಸುತ್ತದೆ. ಮರದ ಪಾತ್ರೆಯಲ್ಲಿನ ನೀರು ಸೇವನೆಯಿಂದ ಹಸಿವು ಹೆಚ್ಚಾಗುತ್ತದೆ. ಎಲೆಗಳು ತುಂಬಿದ ಪಾತ್ರೆಗಳ ನೀರು ಕುಡಿಯುವುದರಿಂದ ರುಚಿ ಹೆಚ್ಚುತ್ತದೆ, ಪಚನಕ್ರಿಯೆ ಸುಧಾರಿಸುತ್ತದೆ ಹಾಗೂ ವಿಷ ವಸ್ತುಗಳು ನಿರ್ಮೂಲನೆ ಯಾಗುತ್ತದೆ. ಜೇಡಿಮಣ್ಣಿನ ಪಾತ್ರೆಯಲ್ಲಿನ ತಣ್ಣನೆಯ ನೀರನ್ನು ಬಳಸುವುದರಿಂದ ಉರಿಗಳು ಗುಣಮುಖವಾಗುತ್ತದೆ. ತಾಮ್ರವು ಎಲ್ಲಕ್ಕಿಂತ ಉತ್ತಮ ಎಂದು ಶಿಫಾರಸ್ಸು ಮಾಡಬಹುದಾಗಿದೆ.

3. ಪ್ರತಿದಿನ ವ್ಯಾಯಾಮ ಮಾಡಿ

ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ವಯಸ್ಸಾಗುವಿಕೆಯನ್ನು ನಿಧಾನ ಮಾಡಬಹುದು. ಇದು ಕೇವಲ ತೂಕವನ್ನು ಕಡಿಮೆ ಮಾಡುವುದಲ್ಲದೇ ಶಕ್ತಿ ಸಂಚಯವಾಗಿ ವ್ಯಕ್ತಿ ಆರೋಗ್ಯವಾಗಿರಲು ಸಹಕಾರಿ. ಭಾರತದ ಸಂಪ್ರದಾಯಿಕ ಯೋಗ ತರಬೇತುದಾರರು ಮತ್ತು ಮಲ್ಲ ಯೋಧರು ತೈಲ ಮರ್ದನ ಮತ್ತು ವ್ಯಾಯಾಮ ವಿಧಾನವೊಂದನ್ನು ಅನುಸರಿಸುತ್ತಿದ್ದರು. ಇದು ವಾತಾ ಹೆಚ್ಚಾಗದಂತೆ ನೋಡಿಕೊಳ್ಳುತ್ತಿತ್ತು. ಆದರೆ ಇದು ವಿಕೃತ ಕಫವನ್ನು ದಹಿಸಿ ಅಗ್ನಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಪ್ರಕೃತಿಗೆ ಅನುಗುಣವಾಗಿ ವ್ಯಾಯಾಮದ ವಿಧಾನವೂ ವಿಭಿನ್ನವಾಗಿರುತ್ತದೆ. ಆದರೆ ಮೂಲತ: ಮುಖ್ಯವಾದುದು ಮತ್ತು ಉತ್ತಮ ವ್ಯಾಯಾಮ ಎಂದರೆ ವಾಯುವಿಹಾರ. ನಿಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಒಂದು ಗಂಟೆ ವಾಕಿಂದ ಮಾಡಬೇಕು. ಇದನ್ನು ನಂತರ ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ಸೂಕ್ತ ಯೋಗಾಸನಗಳೊಂದಿಗೆ ಸಂಯೋಜನೆ ಮಾಡಿಕೊಳ್ಳಬಹುದು.

4. ಮಸಾಜ್ ಮಾಡಿ:

ಉತ್ತಮ ದೇಹಾರೋಗ್ಯ ಮತ್ತು ಹೊಳೆಯವ ಚರ್ಮಕ್ಕಾಗಿ ಸ್ನಾನಕ್ಕೆ ಮುನ್ನ ಮಸಾಜ್ ಮಾಡಬೇಕು. ಇದನ್ನು ಚಳಿಗಾಲದ ದಿನಗಳಲ್ಲಿ ಹಾಗೂ ಮಾಲಿನ್ಯ ಪ್ರದೇಶಗಳಲ್ಲಿ ಸಂಚರಿಸಿದ ನಂತರ ಮಾಡುವುದು ಒಳ್ಳೆಯದು. ತೈಲದಿಂದ ಮರ್ದನ ಮಾಡುವುದರಿಂದ ಕೊಳೆ ನಿರ್ಮೂಲನೆಯಾಗಿ, ಚರ್ಮ ಜಲದಿಂದ ತುಂಬಿಕೊಂಡು ಮದೃವಾಗಿ ಮತ್ತು ಆರೋಗ್ಯಭರಿತವಾಗಿರುತ್ತದೆ. ಬೆಚ್ಚನೆಯ ಎಣ್ಣೆಯನ್ನು ಲೇಪಿಸಿ ಕೈಗಳಿಂದ ಮರ್ದನ ಮಾಡುವುದರಿಂದ ಅದು ದೈಹಿಕ ಮತ್ತು ಮಾನಸಿಕ ಮಟ್ಟಗಳಲ್ಲಿ ಚಿಕಿತ್ಸಕ ಪರಿಣಾಮ ಉಂಟು ಮಾಡುತ್ತದೆ. ಇದರಿಂದ ಮನಸ್ಸು ಪ್ರಶಾಂತವಾಗಿ, ನರ ವ್ಯವಸ್ಥೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ತುಂಬಾ ಸಮಯ ಬೇಕಾಗಿಲ್ಲ. ಒಂದು ದಿನದಲ್ಲಿ ಕೆಲವು ನಿಮಿಷಗಳನ್ನು ಇದಕ್ಕಾಗಿ ಮೀಸಲಿಟ್ಟರೆ ಸಾಕು. ಇದರ ಅನುಕೂಲಗಳು ಅದ್ಭುತ.

5. ಆರೋಗ್ಯಕರ ಆಹಾರ ಸೇವಿಸಿ:

ಹೊಟ್ಟೆ ತುಂಬಿಸುವ ಉಪಾಹಾರ ಸೇವಿಸಿ, ಭಾರೀ ಭೋಜನವನ್ನು ಕಡಿತಗೊಳಿಸಿ. ಆಯುರ್ವೇದದಲ್ಲಿ ಆಹಾರ ಮತ್ತು ಅದನ್ನು ಸೇವಿಸುವ ಅಭ್ಯಾಸಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ಅನಾರೋಗ್ಯಕರ ಆಹಾರ ಅಭ್ಯಾಸಗಳು ರೋಗಿಗಳಿಗೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿಯೊಬ್ಬ ಅನುಸರಿಸುವ ಆಹಾರವನ್ನು ವೀಕ್ಷಿಸುವ ಮೂಲಕವೇ ಮುಂದಿನ ದಿನಗಳಲ್ಲಿ ಆತ/ಆಕೆ ಯಾವ ರೀತಿಯ ರೋಗದಿಂದ ಬಳಲುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತದೆ. ಅದ್ದರಿಂದ, ಆರೋಗ್ಯದ ದೃಷ್ಟಿಯಿಂದ ಆಹಾರವು ತುಂಬಾ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಆಹಾರ ಮತ್ತು ಆಹಾರಾಭ್ಯಾಸಗಳ ತತ್ತ್ವಗಳ ಪ್ರಾಮುಖ್ಯತೆ ಬಗ್ಗೆ ತಿಳುವಳಿಕೆ ನೀಡುವುದು ಮುಖ್ಯ. ನಾವು ಏನನ್ನು ತಿನ್ನುತ್ತೇವೆಯೋ ಅದು ನಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ಅದು ನಮ್ಮ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗತಿಗಳನ್ನು ವ್ಯಾಖ್ಯಾನಿಸುತ್ತದೆ.

ಆರೋಗ್ಯಕರ ಸಾತ್ವಿಕ ಆಹಾರವು ನಮ್ಮ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಹಾಗೂ ದೈಹಿಕ ಮತ್ತು ಭಾವನಾತ್ಮಕವಾಗಿ ಅಸಮತೋಲನಕ್ಕೆ ಕಾರಣವಾದ ಭಾರೀ ಪ್ರಮಾಣದ ಊಟ ಅಥವಾ ಭರ್ಜರಿ ಭೋಜನಕ್ಕೆ ಬದಲಾಗಿ ಹೊಟ್ಟೆ ತುಂಬಿಸುವ ಆರೋಗ್ಯಕರ ಉಪಾಹಾರಕ್ಕೆ ಹೆಚ್ಚು ಒತ್ತು ನೀಡಿ. ರಾತ್ರಿ ಊಟದ ನಂತರ ಬೆಳಗಿನ ಉಪಾಹಾರದ ತನಕ ಮಧ್ಯದಲ್ಲಿ ಯಾವುದೇ ಆಹಾರ ಇಲ್ಲದ ಕಾರಣ ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸೂಕ್ತ ರೀತಿಯಲ್ಲಿ ಉಪಾಹಾರ ಸೇವಿಸುವುದರಿಂದ ಅದು ಹಸಿವನ್ನು ನಿವಾರಿಸಿ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಆಹಾರವನ್ನು ಸಮರ್ಪಕ ರೀತಿಯಲ್ಲಿ ಸೇವಿಸಿದರೆ ಆಗಾಗ ತಿನ್ನುವ ಅಭ್ಯಾಸ ಸಹಜವಾಗಿಯೇ ತಪ್ಪುತ್ತದೆ. ಆದರೆ, ದಿನದಲ್ಲಿ ಎರಡು ಬಾರಿ ಊಟದ ನಿಯಮವನ್ನು ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ಮಧ್ಯಾಹ್ನ ಮತ್ತು ರಾತ್ರಿ ಊಟಗಳ ನಡುವೆ ಸಣ್ಣ ಉಪಾಹಾರ ಸೇವಿಸುವ ಮೂಲಕ ಮೂರು ಬಾರಿ ಆಹಾರ ಸೇವನೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು.

6. ರಾತ್ರಿ ಬಿಸಿ ನೀರಿನ ಕಷಾಯ ಕುಡಿಯಿರಿ

ನಾಲ್ಕು ಲೋಟಗಳಷ್ಟು ನೀರನ್ನು ಒಂದು ಲೋಟ ಆಗುವ ತನಕ ಕುದಿಸಿ. ದೇಹದಿಂದ ಕಶ್ಮಲಗಳನ್ನು ಹೊರ ಹಾಕಲು ರಾತ್ರಿ ಮಲಗುವ ಸಮಯ ಈ ಬಿಸಿ ನೀರಿನ ಕಷಾಯವನ್ನು ಸೇವಿಸಬೇಕು. ಆಯುರ್ವೇದದ ಅನುಭವದ ಪ್ರಕಾರ, ಇದು ತೂಕ ಇಳಿಸಲು ಬಯಸುವವರಲ್ಲಿ ತುಂಬಾ ಬದಲಾವಣೆಗಳನ್ನು ತರುತ್ತದೆ. ಇದು ಶೀತ, ನೆಗಡಿ, ಕೆಮ್ಮನ್ನು ನಿವಾರಿಸಿ, ಬೆಳಗಿನ ಜಡತ್ವ, ಮೈಕೈ ನೋವು ಮತ್ತು ದಣಿವನ್ನು ನಿವಾರಿಸುತ್ತದೆ. ರಾತ್ರಿ ಊಟದ ನಂತರ ಮತ್ತು ಮಲಗುವುದಕ್ಕೆ ಮುನ್ನ ಒಂದು ಕಪ್ ಬಿಸಿ ನೀರಿನ ಕಷಾಯ ಕುಡಿಯಿರಿ. ಇದು ಹೊಟ್ಟೆಗೆ ವಿಶ್ರಾಂತಿ ನೀಡಿ, ರಾತ್ರಿ ಊಟ ಪಚನವಾಗಲು ನೆರವಾಗುತ್ತದೆ.

ಇಡೀ ದಿನದ ಕೆಲಸದ ನಂತರ ಇದು ದೇಹ ಆಂತರಿಕ ಭಾಗವನ್ನು ಸ್ವಚ್ಚಗೊಳಿಸುತ್ತದೆ. ಈ ನೀರಿಗೆ ಬೇರೆ ಏನನ್ನೂ ಸೇರಿಸುವ ಅಗತ್ಯವಿರುವುದಿಲ್ಲ. ನಾಲ್ಕು ಲೋಟಗಳಷ್ಟು ನೀರನ್ನು ಒಂದು ಲೋಟ ಆಗುವ ತನಕ ಕುದಿಸಿ. ದೇಹದಿಂದ ಕಶ್ಮಲಗಳನ್ನು ಹೊರ ಹಾಕಲು ರಾತ್ರಿ ಮಲಗುವ ವೇಲೆ ಈ ಬಿಸಿ ನೀರಿನ ಕಷಾಯವನ್ನು ಕಾಫಿ ಸೇವಿಸಿದಂತೆ ಸೇವಿಸಬೇಕು. ಇದನ್ನು ದಿನನಿತ್ಯ ಪಾಲಿಸಿದಲ್ಲಿ, ಬೆಳಿಗ್ಗೆ ಬೇಗನೇ ಏಳಲು ಅಲರಾಂ ಬೇಕಾಗುವುದಿಲ್ಲ. ಬೆಳಗಿನ ಕ್ರಿಯೆಗಳು ಸಹಜವಾಗಿ ನಡೆಯುತ್ತದೆ.

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ, #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್, ಸ್ಟಾರ್ ಬಜಾರ್ ಹತ್ತಿರ,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614 Email : dhanvantari.ayurveda@gmail.com,
Web: www. dhanvantarihospital.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!