ನಮಗೆ ವಿಟಮಿನ್ ಕೆ ಏಕೆ ಬೇಕು?

1928ರಲ್ಲಿ ಕಾರ್ಲ್ ಪೀಟರ್ ಡ್ಯಾಂ ಮತ್ತು ಎಡ್ವರ್ಡ್ ಆಡ್‍ಲ್‍ಬರ್ಟ ಡೊೈಸಿಯವರಲ್ಲಿ ಡಾಕ್ಟರ್‍ಗಳು ನವಜಾತ ಶಿಶುಗಳು ಮತ್ತು ಯಕೃತ್ತು ರೋಗದಿಂದ ಬಳಲುತ್ತಿರುವವರು, ಕಾಮಾಲೆ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತರು ಬಂದು ತಮ್ಮ ಜಾನುವಾರುಗಳು ಒಣ ಸುವಾಸಿತ ಹುಲ್ಲನ್ನು ತಿಂದು ರಕ್ತಸ್ರಾವದಿಂದ ನರಳಿ ಸಾಯುತ್ತಿವೆ ಎಂದು ತಿಳಿಸಿದರು. ಕಾರ್ಲ್ ಪೀಟರ್ ಈ ರಕ್ತಸ್ರಾವವು ವಿಟಮಿನ್ ಸಿ ಯ ಕೊರತೆಯಿಂದ ಬಂದ (scurvy) ಸ್ಕರ್‍ವಿ ಎಂದು ತಿಳಿಸಿ, ವಿಟಮಿನ್ ಸಿ ಕೊಟ್ಟು ಚಿಕಿತ್ಸೆ ಮಾಡಲು ತಿಳಿಸಿದರು. ವಿಟಮಿನ್ ಸಿ ತೆಗೆದುಕೊಂಡ    ಮೇಲೆ ನವಜಾತ ಶಿಶುಗಳಲ್ಲಿ, ಯಕೃತ್ತು ಕಾಯಿಲೆ ಇದ್ದವರಲ್ಲಿ ಮತ್ತು ಜಾನುವಾರುಗಳಲ್ಲಿ ರಕ್ತಸ್ರಾವವು ನಿಲ್ಲಲಿಲ್ಲ. ಆಗ ಕಾರ್ಲ್ ಪೀಟರ್ ಇದು ಸ್ಕರ್‍ವಿ ತರಹ ಕಾಣುವ ಹೊಸರೋಗ. ಇದರ ಬಗ್ಗೆ ಸಂಶೋಧನೆ ಅಗತ್ಯ ಎಂದು ತಿಳಿದು,  ಸಹಪಾಠಿಗಳ ಜೊತೆ ತಮ್ಮ ಪ್ರಯೋಗಶಾಲೆಯಲ್ಲಿ ಸಂಶೋಧನೆ ಪ್ರಾರಂಭಿಸಿದರು. ತಮ್ಮ ಸಂಶೋದನಾಲಯದಲ್ಲಿರುವ ಕೋಳಿಮರಿಗಳಿಗೆ ಸ್ವಚ್ಚಗೊಂಡ ಪೌಷ್ಠಿಕ ಆಹಾರ ಮತ್ತು ಮೇದಸ್ಸನ್ನು ಮಾತ್ರ ತಿನ್ನಲು ಕೊಟ್ಟರು. ಕೆಲವು ದಿವಸಗಳಲ್ಲಿ ಕೋಳಿಮರಿಗಳು ಕೂಡ ರಕ್ತಸ್ರಾವದಿಂದ ಬಳಲಿದವು. ಕೆಲವು ಕೋಳಿಮರಿಗಳಿಗೆ ಹಸಿಮಾಂಸ ಮತ್ತು ಹಸಿರು ಎಲೆಗಳನ್ನು ತಿನ್ನಲು ಕೊಟ್ಟರು. ಈ ಕೋಳಿಮರಿಗಳಲ್ಲಿ ರಕ್ತಸ್ರಾವವು ಕಡಿಮೆಯಾಗಿ ಚೇತರಿಸಿಕೊಂಡವು. ಕಾರ್ಲ್ ಪೀಟರ್ ಇವರು ಈ ರಕ್ತಸ್ರಾವಕೆ ವಿಟಮಿನ್ ಸಿ ಕೊರತೆ ಕಾರಣವಲ್ಲ. ಬೇರೆಯ ಒಂದು ರಾಸಾಯನಿಕವು ಹಸಿ ಮಾಂಸದಲ್ಲಿ ಮತ್ತು ಹಸಿರು ಎಲೆಗಳಲ್ಲಿ ಇದೆ ಎಂದು ತಿಳಿದುಕೊಂಡು ತಮ್ಮ ಸಂಶೋಧನೆಯನ್ನು ಮುಂದುವರಿಸಿದರು. ಜರ್ಮನ್ ಭಾಷೆಯಲ್ಲಿ ಈ ರಾಸಾಯನಿಕವನ್ನು KOAGULATION VITAMIN ಎಂದು ಕರೆದರು. ಇವತ್ತು ಇದನ್ನು ವಿಟಮಿನ್ ಕೆ ಎಂದು ಕರೆಯುತ್ತೇವೆ. 1943ರಲ್ಲಿ ಇವರ ಈ ಮಹಾಸಾಧನೆಗೆ ನೋಬಲ್ ಪಾರಿತೋಷಕ ಕೊಟ್ಟು ಸನ್ಮಾನಿಸಿದರು.
ಪ್ರತಿದಿವಸ ಮನೆಯಲ್ಲಿ ನಾವು ಕೆಲಸ ಮಾಡುವಾಗ, ಕಾಯಿಪಲ್ಲೆ ಕತ್ತರಿಸುವಾಗ, ಉಗುರು ಕತ್ತರಿಸುವಾಗ, ಸಣ್ಣಪುಟ್ಟ ಗಾಯಗಳು ಆಗುವುದು ಮತ್ತು ಗಾಯದಿಂದ ರಕ್ತಸ್ರಾವವಾಗುವುದು ಸಾಮಾನ್ಯ. ಈ ರಕ್ತಸ್ರಾವವು 3 ರಿಂದ 5 ನಿಮಿಷಗಳಲ್ಲಿ ತನ್ನಷ್ಠಕ್ಕೆ ತಾನೆ ನಿಂತು ಹೋಗುತ್ತದೆ. ರಕ್ತಸ್ರಾವ ನಿಲ್ಲುವುದು ಸ್ವಾಭಾವಿಕ. ರಕ್ತವು ಹೆಪ್ಪುಗಟ್ಟಿ, ಗಟ್ಟಿ ಪದಾರ್ಥವಾಗಿ, ರಕ್ತನಾಳದಲ್ಲಿಯ ರಂಧ್ರವನ್ನು ಮುಚ್ಚಿ ಮತ್ತೆ ರಕ್ತಸ್ರಾವವಾಗದಂತೆ ಮಾಡುತ್ತದೆ. ರಕ್ತ ಗಟ್ಟಿಯಾಗುವುದನ್ನು ವಿರಕ್ತ ಹೆಪ್ಪುಗಟ್ಟುವುದು ಎಂದು ಕರೆಯುತ್ತೇವೆ. ರಕ್ತನಾಳಗಳಿಗೆ ಗಾಯವಾದರೆ, ರಕ್ತನಾಳಗಳು ಸಂಕುಚಿತವಾಗಿ, ರಕ್ತ ಹರಿಯುವುದನ್ನು ಕಡಿಮೆ ಮಾಡುತ್ತವೆ.ನೀರಾಗಿ ಹರಿಯುವ ರಕ್ತವು, ವಿಶೇಷ ರಾಸಾಯನಿಕ ಕ್ರಿಯೆಗಳಿಂದ ಗಟ್ಟಿ ಪದಾರ್ಥವಾಗಿ, ರಕ್ತನಾಳದಲ್ಲಿಯ ರಂಧ್ರವನ್ನು ಮುಚ್ಚಿಬಿಡುತ್ತದೆ.  ರಕ್ತ ಹೆಪ್ಪುಗಟ್ಟುವ ಕ್ರಿಯೆಯಲ್ಲಿ ಕ್ಯಾಲ್ಸಿಯಂ ಕಣಗಳು ಪ್ರೋತ್ರೊಂಬಿನ್ ಮತ್ತು ವಿಟಮಿನ್ ಕೆ ಎಲ್ಲವು ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರಕ್ತ ಹೆಪ್ಪುಗಟ್ಟುತ್ತದೆ.ವಿಟಮಿನ್ ಕೆ ಕಡಿಮೆಯಾದರೆ, ಕ್ಯಾಲ್ಸಿಯಂ ಕಣಗಳು ರಕ್ತನಾಳಗಳ ಪದರುಗಳಲ್ಲಿ ಸೇರಿಕೊಂಡು ರಕ್ತನಾಳಗಳು ದಪ್ಪವಾಗುವಂತೆ ಮತ್ತು ಪೆಡಸು ಆಗುವಂತೆ ಮಾಡುವವು.

ಪ್ರತಿದಿವಸ ನಾವು ನಡೆದು ಹೋಗುತ್ತೇವೆ, ಓಡಿ ಹೋಗುತ್ತೇವೆ, ಭಾರವಾದ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತೇವೆ. ನಮ್ಮ ದೇಹದ ಭಾರವನ್ನು ನಮ್ಮ ಮೂಳೆಗಳು ಸಶಕ್ತವಾಗಿ ತಡೆದುಕೊಂಡು ಮುಂದೆ ಹೋಗುವಂತೆ ಮಾಡುತ್ತವೆ. ನಾವು ನಡೆದು ಹೋಗುವಾಗ ಬಿದ್ದರೆ, ಮೂಳೆಗಳು ಬಾಗುವುದಿಲ್ಲ ಮತ್ತು ಮುರಿಯುವುದಿಲ್ಲ. ಮೂಳೆಗಳಲ್ಲಿ ಶಕ್ತಿ ಬರಲು ಕಾರಣ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟಿನ್‍ಗಳು. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್‍ಗಳು ಮೂಳೆಗಳ ಕೋಶಗಳಲ್ಲಿ ಸೇರಿಕೊಳ್ಳಲು ವಿಟಮಿನ್ ಕೆ ಅತ್ಯಅವಶ್ಯಕ. ವಿಟಮಿನ್ ಕೆ ಕಡಿಮೆಯಾದರೆ, ಮೂಳೆಗಳ ಸಾಂದ್ರತೆ ಕಡಿಮೆಯಾಗಿ, ಮೂಳೆಗಳು ಬಾಗುವವು, ಇಲ್ಲವಾದರೆ ಮುರಿಯುವವು.
ವಿಟಮಿನ್ ಕೆ ರಾಸಾಯನಿಕ ಗುಣಗಳು :
ವಿಟಮಿನ್ ಕೆ ಮೂಲಧಾತು ಕಾರ್ಬನ್ ಪಾಶ್ರ್ವ ಸಂಕೋಲೆಯಾಗಿರುತ್ತದೆ. ನಿಸರ್ಗದತ್ತವಾಗಿ ಇವುಗಳಲ್ಲಿ ಎರಡು ವಿಧ.

1. ವಿಟಮಿನ್ ಕೆ1- ಇದರಲ್ಲಿ ಮೂಲಧಾತು ಕಾರ್ಬನ್ ಕಣಗಳು 20 ಇರುತ್ತವೆ. ಇದಕ್ಕೆ ಪೈಲೋಕಿನೋನ ಎನ್ನುತ್ತಾರೆ. ಇದು ಹಸಿರು ಎಲೆಗಳಲ್ಲಿ ಇರುತ್ತದೆ. ಹಸಿರು ಎಲೆಗಳಲ್ಲಿ ವಿಟಮಿನ್ ಕೆ ಸೂರ್ಯನ ಪ್ರಕಾಶವನ್ನು ಬಳಸಿಕೊಂಡು ಗಿಡಗಳಿಗೆ ಬೇಕಾಗುವ ಆಹಾರ ವಸ್ತುಗಳನ್ನು ತಯಾರಿಸುತ್ತದೆ. ಇದಕ್ಕೆ ದ್ಯೂತಿ ಸಂಶ್ಲೇಷಣೆ – PHOTOSYNTHESIS ಎನ್ನುತ್ತಾರೆ. ವಿಟಮಿನ್ ಕೆ1 ಮಾನವರ ದೇಹದಲ್ಲಿ ರಕ್ತ ಹೆಪ್ಪು ಗಟ್ಟುವುದನ್ನು, ಮೂಳೆಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟಿನ್‍ಗಳು ಮೂಳೆಕೋಶಗಳನ್ನು ಸೇರುವಂತೆ ಮಾಡುವುದು ಮತ್ತು ರಕ್ತನಾಳಗಳನ್ನು ಮೃದುವಾಗಿರುವಂತೆ ಮಾಡುತ್ತವೆ.ರಾಸಾಯನಿಕ ಸೂತ್ರ : C31 H46 O2
2. ವಿಟಮಿನ್ ಕೆ2- ಇದನ್ನು ಮಿನಾಕಿನೋನ ಎಂದು ಕರೆಯುತ್ತಾರೆ. ನಮ್ಮ ಕರುಳಿನಲ್ಲಿರುವ ಅಣುಜೀವಿಗಳು ವಿಟಮಿನ್ ಕೆ2 ತಯಾರಿಸುತ್ತವೆ. ಆರೋಗ್ಯವಂತರ ಕರುಳಿನಲ್ಲಿ ಪ್ರತಿದಿನ ಬೇಕಾಗುವಷ್ಠು ವಿಟಮಿನ್ ಕೆ2 ತಯಾರು ಆಗುತ್ತದೆ. BROAD SPECTRUM ANTIBIOTICS ಮತ್ತು ಕರುಳು ರೋಗ ಇರುವವರು, ಅಣುಜೀವಿಗಳ ಕೊರತೆಯಿಂದ ನಮಗೆ ಬೇಕಾಗುವಷ್ಠು ವಿಟಮಿನ್ ಕೆ ತಯಾರು ಆಗುವುದಿಲ್ಲ.ರಾಸಾಯನಿಕ ಸೂತ್ರ : C41, H56, O2
ವಿಟಮಿನ್ ಕೆ3-ಇದನ್ನು ಕೃತ್ರಿಮವಾಗಿ ಪ್ರಯೋಗಾಲಯಗಳಲ್ಲಿ ತಯಾರಿಸುತ್ತಾರೆ.ಇದನ್ನು ಜಾನುವಾರುಗಳ ಆಹಾರವಸ್ತುಗಳಲ್ಲಿ ಉಪಯೋಗಿಸುತ್ತಾರೆ.
ವಿಟಮಿನ್ ಕೆ ಕಾರ್ಯ:

1. ರಕ್ತ ಹೆಪ್ಪುಗಟ್ಟುವಿಕೆ.

2.ಮೂಳೆಗಳನ್ನು ಗಟ್ಟಿ ಮಾಡುವುದು.

3. ರಕ್ತನಾಳಗಳನ್ನು ಮೃದುವಾಗಿಡುವುದು.
ವಿಟಮಿನ್ ಕೆ ನಮ್ಮ ಶರೀರಕ್ಕೆ ದೊರಕುವುದು :
ನಾವು ಊಟಮಾಡುವ ಆಹಾರದಲ್ಲಿಯ ಹಸಿರು ತಾಜಾ ಎಲೆಗಳುಳ್ಳ ಪಲ್ಲೆಗಳಲ್ಲಿ ಇರುವ ವಿಟಮಿನ್ ಕೆ, ಯಕೃತ್ತುದ ರಸದ ಸಹಾಯದಿಂದ ಮತ್ತು ಕೊಲೆಸ್ಟ್ರಾಲದ ಸಹಾಯದಿಂದ ಕರಳುಕೋಶಗಳು ಹೀರಿಕೊಂಡು, ಯಕೃತ್ತುದಿಂದ ದೇಹದ ಎಲ್ಲ ಕೋಶಗಳಿಗೆ ರವಾನೆಯಾಗುತ್ತವೆ.
ಪ್ರತಿದಿವಸ ಆರೋಗ್ಯವಂತರಿಗೆ ವಿಟಮಿನ್ ಕೆ ಬೇಕಾಗುವ ಪ್ರಮಾಣ:
50-100 ಮಿ. ಗ್ರಾಂ/ ಪ್ರತಿ ದಿವಸ. ವಿಟಮಿನ್ ಕೆ ದೊರಕುವ ಆಹಾರಗಳು : ಪಾಲಕ, ಮೆಂತೆಪಲ್ಲೆ, ರಾಜಗಿರಿ ಪಲ್ಲೆ, ಪುಂಡಿಪಲ್ಲೆ, ಸಬ್ಬಸಕಿ ಸೊಪ್ಪು, ದಂಟಿನ ಸೊಪ್ಪು, ಕರಿಬೇವು, ಕೊತ್ತಂಬರಿ, ನುಗ್ಗಿಸೊಪ್ಪು, ಬಸಳೆಸೊಪ್ಪು ಮತ್ತು ಮಾಂಸ ಪದಾರ್ಥಗಳು. ಅಣುಜೀವಿಗಳು ನಮಗೆ ಬೇಕಾಗುವಷ್ಟು ನಮ್ಮ ಕರುಳಿನಲ್ಲಿ ತಯಾರಿಸುತ್ತವೆ.

ಡಾ. ಕೆ. ಹನುಮಂತಯ್ಯ
ಚರ್ಮರೋಗ ವಿಭಾಗ, ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್

82, ಇಪಿಐಪಿ ಏರಿಯಾ, ವೈಟ್‍ಫೀಲ್ಡ್, ಬೆಂಗಳೂರು-560066.
ಫೋನ್ : 080-28413381/2/3/4/5

Email: info@vims.ac.in    www.vims.ac.in

 

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!