ವೀಟ್ ಗ್ರಾಸ್ – ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್ ವಂಡರ್

ವೀಟ್ ಗ್ರಾಸ್ ಅಥವಾ ಗೋದಿ ಹುಲ್ಲಿನ ರಸ ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್  ವಂಡರ್.ಗೋದಿ ಹುಲ್ಲಿನ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ತಕ್ಷಣ ತಯಾರಿಸಿದ ಗೋದಿ ಹುಲ್ಲಿನ ರಸವೇ ಅಧಿಕ ಪ್ರಯೋಜನಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

ವೀಟ್ ಗ್ರಾಸ್ - ರಕ್ತವನ್ನು ಪೋಷಿಸಿ ಆರೋಗ್ಯ ತರುವ ಹೆಲ್ತ್ ವಂಡರ್

ರಕ್ತದಲ್ಲಿ ಹೀಮೋಗ್ಲೋಬಿನ್ ಕಡಿಮೆಯಾಗಿ ಅಶಕ್ತತೆ ಹೊಂದಿ ಅದರಿಂದ ಹೊರಬಾರಲಾರದವರು ಒಂದುಕಡೆಯಾದರೆ ಅದೇ ರಕ್ತದಲ್ಲಿ ಜಾಸ್ತಿಯಾದ ಕೊಬ್ಬಿನ ಅಂಶವನ್ನು ಇಳಿಸಲಾರದೆ ಕಷ್ಟಪಡುವವರು ಇನ್ನು ಕೆಲವರು. ಇವರಿಗೆಲ್ಲಾ ಮನೆಯಲ್ಲೇ ಮಾಡಬಹುದಾದ ಮದ್ದು ಗೋದಿ ಹುಲ್ಲಿನ ರಸ ಅಥವಾ ವೀಟ್ ಗ್ರಾಸ್. ಆಯುರ್ವೇದದ ಔಷಧಗಳಲ್ಲಿ ಮೊದಲನೇ ಸ್ಥಾನ ಸ್ವರಸಗಳಿಗೆ. ಕಾರಣ ಅವುಗಳು ಅತಿ ಕಡಿಮೆ ಕಾಲದಲ್ಲಿ ಫಲವನ್ನು ಕೊಡುವಂಥವುಗಳು. ಈ ಸ್ವರಸಗಳಲ್ಲಿ ಗೋದಿ ಹುಲ್ಲಿನ ರಸವು ತುಂಬಾ ಮುಖ್ಯವಾಗಿರುವುದು. ನಮ್ಮ ಮನೆಗಳಲ್ಲಿ ಬಳಸುವಂಥಹಾ ಗೋದೀ ಕಾಳುಗಳನ್ನು ಮೊಳಕೆ ಇಟ್ಟರೆ ಗೋದಿ ಹುಲ್ಲು ಹುಟ್ಟಿ ಬರುತ್ತದೆ. ಅದರನ್ನು ಹತ್ತನೇ ದಿನ ಕತ್ತರಿಸಿ ಅದರಿಂದ ರಸವನ್ನು ತೆಗೆದು ಉಪಯೋಗಿಸಬೇಕು. ದಿನನಿತ್ಯ 30 ರಿಂದ 50 ಮಿ ಲಿ ಪ್ರಮಾಣದಲ್ಲಿ ಗೋದೀ ಹುಲ್ಲಿನ ರಸವನ್ನು ಸೇವಿಸಬಹುದು.

ತಕ್ಷಣ ತಯಾರಿಸಿದ ಗೋದಿ ಹುಲ್ಲಿನ ರಸವೇ ಅಧಿಕ ಪ್ರಯೋಜನಕಾರಿ:

ವೀಟ್ ಗ್ರಾಸ್ ಜ್ಯೂಸ್ ಎಂದೇ ಈ ರಸವು ಲೋಕ ಪ್ರಶಸ್ತವಾಗಿದೆ. ಗೋದಿ ಹುಲ್ಲಿನ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ತಕ್ಷಣ ತಯಾರಿಸಿದ ಗೋದಿ ಹುಲ್ಲಿನ ರಸವೇ ಅಧಿಕ ಪ್ರಯೋಜನಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಭಾವಪ್ರಕಾಶ ಎನ್ನುವ ಆಯುರ್ವೇದ ಪ್ರಮಾಣ ಗ್ರಂಥದಲ್ಲಿ ಗೋದಿಯ ಔಷಧ ಗುಣಗಳ ಬಗ್ಗೆ ಸಾಕಷ್ಟು ಮಾಹಿತಿಗಳಿವೆ.
“ಗೋಧೂಮೋ ಮಧುರ ಶೀತೋ ವಾತ ಪಿತ್ತಹರೋ ಗುರು:
ಕಫ ಶುಕ್ರಪ್ರದೋ ಬಲ್ಯ: ಸ್ನಿಗ್ಧ ಸಂಧಾನ ಕೃತ್ ಸರ:”

takshana-wheet-grass.

ಎಂದು ಭಾವಮಿಶ್ರಾಚಾರ್ಯರು ಹೇಳಿದ್ದಾರೆ ಇದರಲ್ಲಿ ಬಲ್ಯ ಮತ್ತು ಕಫ ಪ್ರದ ಎಂದರೆ ಶರೀರಕ್ಕೆ ತಾಕತ್ತನ್ನು ತರುವದು ಎಂದು ಅರ್ಥ. ಇದು ಗೋದೀ ಹುಲ್ಲಿನ ರಸಕ್ಕೆ ಸರಿಯಾಗಿ ಯೋಗ್ಯವಾದದ್ದು. ಯಾಕೆಂದರೆ ಶರೀರಕ್ಕೆ ಬಲ ಬರಬೇಕೆಂದರೆ ರಕ್ತದಲ್ಲಿ ಹೀಮೋಗ್ಲೋಬಿನ್ (Hb) ಸಾಮಾನ್ಯವಾಗಿ 12 ಕ್ಕಿಂತ ಜಾಸ್ತಿ ಇರಲೇ ಬೇಕು. ಅದೇ ರೀತಿ LDL ಅಥವಾ ಕೊಬ್ಬಿನ ಅಂಶ ಕಡಿಮೆ ಆಗಬೇಕು.

1. ಗೋದಿ ಹುಲ್ಲಿನಲ್ಲಿ ಫೈಬರ್ ಅಂಶ ಇರುವುದರಿಂದ ಆಹಾರವು ಸರಿಯಾಗಿ ಜೀರ್ಣವಾಗಿ ಮಲವಿಸರ್ಜನೆ ಕ್ರಮಬದ್ಧವಾಗಿ ಆಗುತ್ತದೆ. ಶರೀರದಲ್ಲಿ ದಿನನಿತ್ಯ ನಡೆಯ ಬೇಕಾದ ಶುದ್ಧೀಕರಣ ಕ್ರಿಯೆಗಳು ಸರಾಗವಾಗುತ್ತದೆ ಮತ್ತು ಸಪ್ತಧಾತುಗಳಲ್ಲಿ ರಕ್ತ,ಮಾಂಸ ಮತ್ತು ಮೇದೋಧಾತುಗಳು ಜೀರ್ಣತೆಯಿಂದ ಹೊರಬರುತ್ತದೆ. ಕೀಮೋ ಥೆರಪಿ ತಗೊಳ್ಳುವ ಅಥವಾ ತೆಗೆದು ಕೊಂಡ ಕಾನ್ಸರ್ ರೋಗಿಗಳಿಗೆ ಕೀಮೋ ಥೆರಪಿಯ ಪಾಶ್ರ್ವ ಫಲಗಳನ್ನು ಕಡಿಮೆ ಮಾಡುವುದರಲ್ಲಿ ಗೋದಿ ಹುಲ್ಲಿನ ರಸ ಅತ್ಯುತ್ತಮ.

2. ಗೋದಿ ಹುಲ್ಲಿನ ಚಿಗುರುಗಳಲ್ಲಿ ಬೆಳವಣಿಗೆಯ ಅಂಶ (Growth Factors) ಇದ್ದು ಇದನ್ನು ಸೇವಿಸುವವರ ಅಂಗಾಂಗಳನ್ನು ಜರಾ ನರೆಯಿಂದ ತಡೆಕಟ್ಟುವ ಸಾಮಥ್ರ್ಯವು ಹೊಂದಿದೆ. ತಕ್ಷಣ ಆಯುರ್ವೇದ ಸಂಸ್ಥೆಯಲ್ಲಿ ಬರುವ ಬಹಳಷ್ಚು ರೋಗಿಗಳಿಗೆ ತಮ್ಮ ಕಾಯಿಲೆಗಳಿಂದ ಶೀಘ್ರ ಗುಣಮುಖವಾಗಲು ಗೋದೀ ಹುಲ್ಲಿನ ರಸವು ಸಹಾಯಕವಾಗಿದೆ.

3. ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿ ಆಗಿ ಮಲಗಿದಲ್ಲೇ ಆಗಿರುವವರು, ಹೃದಯಾಘಾತದ ಅಪಾಯ ಇರುವವರು ಕೂಡಾ ಒಂದು ತಿಂಗಳ ಸಮಯ ಈ ರಸವನ್ನು ದಿನನಿತ್ಯಾ ಸೇವಿಸಿ ಆರೋಗ್ಯವಂಥರಾಗುತ್ತಾರೆ.

4. ಪ್ರಮೇಹ ರೋಗಿಗಳಲ್ಲಿ (Diabetes) ನಡೆದಂಥಾ ಪರೀಕ್ಷೆಗಳಲ್ಲಿ ಗೋದಿ ಹುಲ್ಲಿನ ರಸವನ್ನು ಸೇವಿಸುವದರಿಂದ ಪ್ರಮೇಹದಿಂದಲಾಗಿ ಉಂಟಾಗುವಂಥಹಾ ಹಲವಾರು ದುಷ್ಪರಿಣಾಮಗಳಿಂದ ಹೊರಬರಬಹುದು.

ಡಾ. ಮಾನಸ ಭಟ್ ಮುಖ್ಯ ವೈದ್ಯರು, ತಕ್ಷಣ ಆಯುರ್ವೇದ, #29/55, ಇಂಡಸ್ಟ್ರಿಯಲ್ ಸಬ್‍ಅರ್ಬ್, ರಾಜಾಜಿನಗರ ಎಕ್ಸ್‍ಟೆನ್ಷನ್, ಯಶವಂತಪುರ, ಬೆಂಗಳೂರು-22 ಮೊ.: 7026619822, 9480539053 Email: tatkshana@purnayu.com http://www.tatkshana.com

ಡಾ. ಮಾನಸ ಭಟ್
ಮುಖ್ಯ ವೈದ್ಯರು- ತಕ್ಷಣ ಆಯುರ್ವೇದ

#29/55, ಇಂಡಸ್ಟ್ರಿಯಲ್ ಸಬ್‍ಅರ್ಬ್,  ಯಶವಂತಪುರ, ಬೆಂಗಳೂರು-22
ಮೊ.: 7026619822, 9480539053

Email: tatkshana@purnayu.com

http://www.tatkshana.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!