ಪಿಸಿಓಡಿ ಅಥವಾ ಪಿಸಿಒಎಸ್ ಅಂದರೆ ಏನು? ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!

ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮಥ್ರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಂಜೆತನಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ. ಅಂಡಾಶಯದಲ್ಲಿ ನೀರ್ಗುಳ್ಳೆಗಳಂಥವು ನಿರ್ಮಾಣವಾಗಿ ಪುರುಷರಲ್ಲಿ ಕಾಣಿಸಿಕೊಳ್ಳುವ ಆಂಡ್ರೊಜೆನ್ ಹಾರ್ಮೋನು ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.

ಈ ಕಾರಣದಿಂದ ಪುರುಷರಲ್ಲಿ ಗೋಚರಿಸುವ ಕೆಲವು ಗುಣಲಕ್ಷಣಗಳು ಮಹಿಳೆಯರಲ್ಲಿ ಕಂಡುಬರುತ್ತವೆ. ಧ್ವನಿ ಗಡಸಾಗುವಿಕೆ, ಅನಿಯಮಿತ ಮುಟ್ಟು, ಮುಖದಲ್ಲಿ ಕೂದಲುಗಳು ಅತಿಯಾಗಿ ಗಡ್ಡ ? ಮೀಸೆಯಂತೆ ಬೆಳೆಯುತ್ತವೆ. ಪಿಸಿಒಎಸ್ ಇದ್ದಾಗ ದೇಹ ಇನ್ಸುಲಿನ್ ಗೆ ಸ್ಪಂದಿಸುವುದಿಲ್ಲ. ರಕ್ತದಲ್ಲಿ ಇನ್ಸುಲಿನ್ ಸೂಕ್ತ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ. ಅಧಿಕ ಇನ್ಸುಲಿನ್ ಟೆಸ್ಟೊಸ್ಟೆರಾನ್ ಅಧಿಕ ಉತ್ಪತ್ತಿಗೆ ದಾರಿ ಮಾಡಿಕೊಡುತ್ತದೆ. ಪಿಸಿಒಎಸ್ ತ್ವಚೆಯಲ್ಲಿ ಹಲವು ಬಗೆಯ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳನ್ನು ಸಕಾಲಕ್ಕೆ ಗಮನಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು.

ಆಕ್ನೆ ಅಥವಾ ಮೊಡವೆ ಸಮಸ್ಯೆ
ಪಿಸಿಒಎಸ್ ಇರುವ ಮಹಿಳೆಯರಲ್ಲಿ ಅತಿಯಾಗಿ ಉತ್ಪನ್ನವಾದ ಆಂಡ್ರೊಜೆನ್ ಹಾರ್ಮೋನಿನ ಪರಿಣಾಮದಿಂದಾಗಿ ಸಹಜವಾಗಿಯೇ ಚರ್ಮದಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಈ ತೊಂದರೆ ನಿವಾರಿಸಿಕೊಳ್ಳಲು ನೀವು ಸಾಲಿಸಿಲಿಕ್ ಆಸಿಡ್ ಅಥವಾ ಗ್ಲೈಕೊಲಿಕ್ ಆಸಿಡ್ ಇರುವ ಫೇಸ್ ವಾಷ್ ನ್ನು ಬಳಸಿ. ಇದರ ಬಳಕೆಯಿಂದ ತ್ವಚೆಯಲ್ಲಿ ಸೀಬಮ ಉತ್ಪಾದನೆ ನಿಯಂತ್ರಣಕ್ಕೆ ಬರುತ್ತದೆ. ಆಗ ಮೊಡವೆ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ.

ಮುಖದ ರೋಮದ ಸಮಸ್ಯೆ
ಪಿಸಿಓಡಿ ಸಮಸ್ಯೆ ಇದ್ದಾಗ ಕೇವಲ ಮೊಡವೆ ಸಮಸ್ಯೆಯೊಂದೇ ಕಾಡುವುದಿಲ್ಲ. ಮುಖದಲ್ಲಿ ಗಡ್ಡ ಮೀಸೆಯ ಹಾಗೆ ಕೂದಲು ಬೆಳೆದು ಬಹಳ ಕಿರಿಕಿರಿಯಾಗುತ್ತದೆ. ಲೇಸರ್ ಹೇರ್ ರಿಮೂವಲ್ ತಂತ್ರಜ್ಞಾನದ ಮೂಲಕ ಬೇಡದ ಕೂದಲು ನಿವಾರಣೆ ಮಾಡಿಕೊಳ್ಳಬಹುದು. ಈ ವಿಧಾನ ತುಂಬಾ ದುಬಾರಿ. ಆದರೆ ಅನಿವಾರ್ಯ. ಬೇರೆ ಕೆಲವು ವಿಧಾನಗಳ ಮೂಲಕ ಕೂದಲು ನಿವಾರಿಸಬಹುದು. ಆದರೆ ಕೂದಲು ಮತ್ತೆ ದಟ್ಟವಾಗಿ ಬೆಳೆಯುತ್ತವೆ.

Also Read: The struggle with Hirsutism and its’ Ayurvedic Management

ತೈಲ ತ್ವಚೆಯ ಸಮಸ್ಯೆ
ಪಿಸಿಒಎಸ್ ಸಮಸ್ಯೆ ಇರುವವರಲ್ಲಿ ತೈಲಯುಕ್ತ ಜಿಡ್ಡುಯುಕ್ತ ಚರ್ಮದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಸ್ಥಿತಿಯಲ್ಲಿ ಆಯಿಲ್ ಬ್ಲಾಟಿಂಗ್ ಪೇಪರ್ ಬಳಕೆ ಸೂಕ್ತ. ಟೀ ಟ್ರೀ ಆಯಿಲ್ ಹೊಂದಿದ ಉತ್ಪಾದನೆಗಳನ್ನು ಬಳಸುವುದು ಕೂಡ ಉಪಯುಕ್ತ ಎನಿಸುತ್ತದೆ. ಅದು ಆಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿದ್ದು, ತೈಲ ಗ್ರಂಥಿಗಳು ಹೆಚ್ಚು ಸಕ್ರಿಯವಾಗುವುದನ್ನು ತಡೆಯುತ್ತದೆ.

ಕಂದು/ಒರಟು ಚರ್ಮದ ಸಮಸ್ಯೆ
ಆಂಡ್ರೊಜೆನ್ ಪುರುಷ ಹಾರ್ಮೋನು ಅತಿಯಾಗಿ ಸ್ರಾವವಾಗುವುದರಿಂದ ಚರ್ಮ ಮತ್ತಷ್ಟು ಒರಟಾಗುತ್ತದೆ. ದೇಹದ ಹಲವೆಡೆ ಡಾರ್ಕ್ ಪ್ಯಾಚೆಸ್ ಅಂದರೆ ಕಂದು ವರ್ಣದ ಗುರುತುಗಳು ಕಂಡುಬರುತ್ತವೆ. ನಿಯಮಿತವಾಗಿ ಚರ್ಮದ ಎಕ್ಸಪಾಲಿಯೆಟ್’ನಿಂದ ಈ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಣಕ್ಕೆ ತರಬಹುದಾಗಿದೆ.

ಕಂಕುಳ ಕೆಳಗೆ ಕಂದು ಗುರುತುಗಳು
ಪಿಸಿಒಎಸ್ ಇದ್ದಾಗ ಕಂಕುಳ ಕೆಳಭಾಗದಲ್ಲಿ ಹಾಗೂ ಸ್ತನಗಳ ಕೆಳಭಾಗದಲ್ಲಿ ಕಂದು ವರ್ಣದ ಗುರುತುಗಳು ಕಂಡುಬರುತ್ತವೆ. ಈ ಸಮಸ್ಯೆ ನಿವಾರಣೆಗೆ ಬೇಕಿಂಗ್ ಸೋಡಾ ಹಾಗೂ ಲಿಂಬೆ ರಸದ ಮಿಶ್ರಣವನ್ನು ಲೇಪಿಸಿ. ಇವೆರಡು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಹೊಂದಿದ್ದು, ನೈಸರ್ಗಿಕ ಬ್ಲೀಚಿಂಗ್ ನ ಕೆಲಸ ಮಾಡುತ್ತವೆ.

ಕೂದಲು ಉದುರುವಿಕೆಯ ಸಮಸ್ಯೆ
ಹಾರ್ಮೋನು ಅಸಮತೋಲನದ ಪರಿಣಾಮ ಎಂಬಂತೆ ಮಹಿಳೆಯರಲ್ಲಿ ಕೂದಲು ಉದರುವಿಕೆಯ ಸಮಸ್ಯೆ ಗಂಭೀರ ರೂಪ ಪಡೆದುಕೊಳ್ಳುತ್ತದೆ. ಹೇರ್ ಫಾಲಿಕಲ್ಸ್ ಅಂದರೆ ಕೂದಲ ಬೇರುಗಳು ಮುರುಟುವುದರಿಂದ ಹೀಗಾಗುತ್ತದೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಸಾಕಷ್ಟು ಕಡಿವಾಣ ಹಾಕಬಹುದು. ವೈದ್ಯರು ಶಿಫಾರಸು ಮಾಡುವ ಆಹಾರ ಪದಾರ್ಥಗಳ ಸೇವನೆಯಿಂದ ಕೂದಲ ಉದರುವಿಕೆಯನ್ನು ತಡೆಗಟ್ಟಬಹುದು.

Also Read: ಕೂದಲು ಉದುರುವುದು – ಶ್ಯಾಂಪೂ ಮತ್ತು ಕಂಡೀಷನರ್ ಗಳ ಬಳಕೆ ಕಡಿಮೆ ಮಾಡಿ

Dr._B_Ramesh-Director-Altius_Hospital_Pvt._Ltd.

ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು-560098. Ph:o80-28606789/9663311128
ಶಾಖೆ: ರಾಜಾಜಿನಗರ:080-2315873/ 9900031842
E-mail : endoram2006@yahoo.co.in   /altiushospital@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!