ವಿಶ್ವ ವಿಪತ್ತು ಕಡಿತಗೊಳಿಸುವ ದಿನ – ಅಕ್ಟೋಬರ್ 13

ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಅಕ್ಟೋಬರ್ 13ರಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

disaster-day ವಿಶ್ವ ವಿಪತ್ತು ಕಡಿತಗೊಳಿಸುವ ದಿನ – ಅಕ್ಟೋಬರ್ 13ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್-13 ರಂದು ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜನ ಸಾಮಾನ್ಯರಲ್ಲಿ ರಾಷ್ಟ್ರೀಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ಬರುವಂತೆ ಮಾಡುವ ಸದುದ್ದೇಶ ಈ ಆಚರಣೆ ಹಿಂದೆ ಇದೆ. ಜನರಲ್ಲಿ ಕೈಗಾರಿಕೀಕರಣದಿಂದ ಉಂಟಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯ ಬಗ್ಗೆ ಜಾಗೃತಿ ಮೂಡಿಸಿ ಜನರ ಹೃದಯದಲ್ಲಿ ವೈಜ್ಞಾನಿಕ ಚಿಂತನೆ (ರೋಗ ತಡೆಗಟ್ಟುವ) ಮಾನಸಿಕ ಸ್ಥಿರತೆ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಮತ್ತು ಧನಾತ್ಮಕ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶವನ್ನು ಈ ಆಚರಣೆ ಹೊಂದಿದೆ.

ವಿಪತ್ತುಗಳನ್ನು ಹೆಚ್ಚಾಗಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ಎಂಬುದಾಗಿ ವಿಂಗಡಿಸಲಾಗುತ್ತದೆ. ನೈಸರ್ಗಿಕ ದುರಂತಗಳನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅದು ಸಂಭವಿಸುವ ಮೊದಲೇ ಎಲ್ಲಾ ಮಾಹಿತಿಗಳನ್ನು ಪಡೆದು ಆದಷ್ಟು ಪ್ರಾಣಹಾನಿ ಮತ್ತು ಜೀವಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಉದಾಹರಣೆ ವಿಪರೀತ ಮಳೆ, ನೆರೆ ಇತ್ಯಾದಿಗಳನ್ನು ಈ ಮೂಲಕ ಸಾಕಷ್ಟು ಸಿದ್ದತೆ ಮತ್ತು ಬದ್ದತೆಗಳಿಂದ ಉಂಟಾಗುವ ತೊಂದರೆಯ ಪ್ರಮಾಣವನ್ನು ತಡೆಯಬಹುದಾಗಿದೆ. ಇನ್ನು ಮಾನವ ನಿರ್ಮಿತ ಅವಘಡಗಳಾದ ಅನಿಲಸೋರಿಕೆ, ಗ್ಯಾಸ್ ದುರಂತ, ಬಾಂಬ್ ಸ್ಪೋಟ ಮುಂತಾದವುಗಳ ಬಗ್ಗೆ ಹೆಚ್ಚು ಮುಂಜಾಗರೂಕತೆ ವಹಿಸಿ, ದುರಂತ ಬಾರದಂತೆ ತಡೆಯಲು ಹೆಚ್ಚಿನ ಶ್ರಮ ವಹಿಸಲಾಗುತ್ತದೆ. ನೈಸರ್ಗಿಕ ದುರಂತವನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಮಾನವ ನಿರ್ಮಿತ ದುರಂತಗಳನ್ನು ತಡೆಗಟ್ಟಬಹುದು.

ಹೇಗೆ ಆಚರಿಸಲಾಗುತ್ತದೆ.? :

ಸಾಮಾನ್ಯವಾಗಿ ಕೈಗಾರಿಕೆಗಳ ಮತ್ತು ಕಾರ್ಖಾನೆಗಳ ಸಾಂದ್ರತೆ ಜಾಸ್ತಿ ಇರುವ ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಒಂದುಗೂಡಿ, ಇತರ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ಆಚರಣೆಯನ್ನು ಮಾಡುತ್ತಿದೆ. ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೈಗಾರಿಕ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಯಾವ ರೀತಿ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಕಡಮೆ ಮಾಡುವುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಚಾರ ವಿನಿಮಯ ನಡೆಸಲಾಗುತ್ತದೆ.

ಕೈಗಾರಿಕ ಸುರಕ್ಷತೆ ಬಗ್ಗೆ ವಿಚಾರ ಸಂಕೀರಣಗಳು, ವರ್ಕ್‍ಶಾಪ್‍ಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಂಡು, ಜನರಲ್ಲಿ ಹೆಚ್ಚಿನ ಕೈಗಾರಿಕ ದುರ್ಘಟನೆ ನಡೆದಾಗ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ ಕೈಗಾರಿಕ ಕಾರ್ಖಾನೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸುರಕ್ಷಿತ ಅವವ್ಯಯಗಳ ಪಟ್ಟಿ ಮಾಡುವುದು, ಕೈಗಾರಿಕೆಗಳಿಂದಾಗುವ ದುರ್ಘಟನೆಗಳ ಮಾಪನ, ಅಪಘಾತಗಳ ಸಮಯದಲ್ಲಿ ಉಂಟಾಗುವ ಅಪಾಯಗಳು, ಪ್ರಮಾಣೀಕರಣ ಮತ್ತು ಕಡಿತಗೊಳಿಸುವ ಪ್ರಕ್ರಿಯೆಗಳ ಬಗೆಗಿನ ವಿಚಾರ ವಿನಿಮಯ ನಡೆಸಲಾಗುತ್ತದೆ.

ದಕ್ಷಿಣ ಕನ್ನಡ  ಜಿಲ್ಲೆ – ಹೆಚ್ಚಿನ ಮುಂಜಾಗರೂಕತೆ ಅತೀ ಅಗತ್ಯ.

ದ.ಕ. ಜಿಲ್ಲೆ 4859 sq.km ವಿಸ್ತೀರ್ಣವಿದ್ದು, ಸುಮಾರು 21 ಲಕ್ಷ ಜನ ಸಂಖ್ಯೆ ಹೊಂದಿದೆ. ಶೇಕಡಾ 100ರಷ್ಟು ಸಾಕ್ಷರತೆ ಹೊಂದಿದ, 17ರಿಂದ 37 ಡಿಗ್ರಿ ಸೆಲ್ಲಿಯಸ್ ಉಷ್ಣತೆಯೊಳಗಿನ, ವರ್ಷಕ್ಕೆ 4000mm ಮಳೆಯನ್ನು ಪಡೆಯುತ್ತಿದ್ದು ಸುಮಾರು 40 km ಕರಾವಳಿ ತೀರವನ್ನು ಹೊಂದಿದೆ. ಸುಮಾರು 4.5 ಲಕ್ಷ ಕರಾವಳಿ ತೀರದ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 22 ಹಳ್ಳಿಗಳು ಈ ಕರಾವಳಿ ತೀರದಲ್ಲಿ ವಾಸಿಸುತ್ತಿದೆ. ರಾಷ್ಟೀಯ ಅವಘಡಗಳನ್ನು (1) ಬೌಗೋಳಿಕ (ನೆರೆಹಾವಳಿ, ಸೈಕ್ಲೋನ್, ಭೂಕಂಪ, ಭೂಕುಸಿತ) (2) ಕೈಗಾರಿಕಾ ಅವಘಡ (ವಿಷಾನಿಲ ದುರಂತ, ಬೆಂಕಿ ಅವಘಡ ಅಥವಾ ಸ್ಪೋಟ, ತೈಲ ಸೋರಿಕೆ) (3) ಜೈವಿಕ ಅವಘಡ (ಸಾಂಕ್ರಾಮಿಕ ರೋಗಗಳು, ಆಹಾರ ಕಲಬೆರಕೆ, ವಿಷಪೂರಿತ ಆಹಾರ ಸೇವನೆ) ಮತ್ತು (4) ಇತರ ಅವಘಡಗಳು (ರೈಲು, ಬಸ್ಸು, ವಿಮಾನ ದುರಂತ, ಕಟ್ಟಡ ಕುಸಿತ, ಕಾಲ್ ತುಳಿತ, ಬಾಂಬ್ ಅವಘಡ) ಎಂಬುದಾಗಿ 4 ರೀತಿಯಲ್ಲಿ ವಿಂಗಡಿಸಲಾಗಿದೆ.

ಯಾವುದೇ ರೀತಿಯ ಅವಘಡಗಳು ದೇಶದ ಯಾವುದೇ ರಾಜ್ಯದ, ಯಾವುದೇ ಭಾಗದಲ್ಲಿ, ಯಾವಾಗಲೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಸೂಕ್ತ ರೀತಿಯ ಪರಾಮರ್ಷೆ, ಪುನರ್‍ವಿಮರ್ಷೆ ಮತ್ತು ಕೂಲಂಕುಷ ಅಧ್ಯಯನ ಮಾಡಿ, ಸಾಕಷ್ಟು ಮುಂಜಾಗರೂಕತೆ ವಹಿಸಿದ್ದಲ್ಲಿ ಹೆಚ್ಚಿನ ಜೀವ ಹಾನಿ ಅಸ್ತಿಪಾಸ್ತಿ ಹಾನಿ ಮತ್ತು ರಾಷ್ಟ್ರೀಯ ಸಂಪನ್ಮೂಲದ ಹಾನಿಯನ್ನು ಕಡಿಮೆ ಮಾಡಬಹುದು. ದ.ಕ. ಜಿಲ್ಲೆಯಲ್ಲಿ ಕೈಗಾರಿಕ ಕಾರ್ಖಾನೆಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ಕೈಗಾರಿಕ ಮತ್ತು ರಾಸಾಯನಿಕ ಅವಘಡಗಳ ಪಟ್ಟಿಯಲ್ಲಿ 10MAH (Major Accident Hazard) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸುಮಾರು 11 ಮುಖ್ಯವಾದ ತೈಲ ಸಂಸ್ಕರಣಾ ಮತ್ತು ಸಂಗ್ರಹ ಘಟಕಗಳಿದ್ದು, ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ,  ಇಂಡಿಯನ್ ಆಯಿಲ್ , MRPL, ಟೋಟಲ್ ಆಯಿಲ್, ONGC, MCFL, JBFF, ಪುತ್ತೂರು ಪೆಟ್ರೋ ಪ್ರೋಡಕ್ಟ್ ಮುಂತಾದ ಬೃಹತ್ ಕಂಪೆನಿಗಳು ತಮ್ಮ ಘಟಕಗಳನ್ನು ಮಂಗಳೂರು ತಾಲೂಕಿನಲ್ಲಿ ಹೊಂದಿದೆ. ಈ ಕಾರಣದಿಂದಾಗಿ ಹೆಚ್ಚಿನ ಜಾಗ್ರತೆ, ಮುತುವರ್ಜಿ ಮತ್ತು ಮುಂಜಾಗರೂಕತೆ ಅತೀ ಅಗತ್ಯ.

ತೈಲ ಸೋರಿಕೆ, ವಿಷಾನಿಲ ಸೋರಿಕೆ ಮತ್ತು ಬೆಂಕಿ ಸ್ಪೋಟ ಮತ್ತು ಹೆಚ್ಚು ಬೇಗನೆ ಹೊತ್ತಿ ಉರಿಯುವ ತೈಲಗಳಿಂದಾಗಿ ಅವಘಡಗಳು ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಕ್ಲೋರಿನ್ ಮತ್ತು ಅಮೋನಿಯ ಸೋರಿಕೆ ಆಗುವ ಸಾಧ್ಯತೆಯೂ ಇದೆ. ಕ್ಲೋರಿನ್ ಅನಿಲವನ್ನು ಸಾಮಾನ್ಯವಾಗಿ ನೀರು ಶುದ್ಧೀಕರಿಸಲು ಮತ್ತು ಪರಿಷ್ಕರಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಅದೇ ರೀತಿ ಅಮೋನಿಯ ಅನಿಲವನ್ನು ಮಂಗಳೂರು ಬಂದರಿನಲ್ಲಿ ಮತ್ತು MCF ನಲ್ಲಿ ಹೆಚ್ಚಾಗಿ ಸಂಗ್ರಹಣೆ ಮತ್ತು ಸಾಗಣೆಗಾಗಿ ವ್ಯವಹರಿಸಲಾಗುತ್ತದೆ. ಹಾಗೆಯೇ LPG ಅಥವಾ ದ್ರವ ಪೆಟ್ರೋಲಿಯಂ ಅನಿಲ ಹಾಗೂ POL ಪೆಟ್ರೋಲಿಯಂ ಆಯಿಲ್ ಉತ್ಪನ್ನಗಳನ್ನು ಹೆಚ್ಚಿನ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ನ್ಯೂ ಮಂಗಳೂರು ಪೋರ್ಟ್‍ನಲ್ಲಿ (NMPT) ವ್ಯವಹರಿಸಲಾಗುತ್ತದೆ. ಅದೇ ರೀತಿ ಸಂಸ್ಕರಿಸುವ, ಪರಿಷ್ಕರಿಸಿ ಸಂಗ್ರಹಿಸುವ ವ್ಯವಸ್ಥೆಯೂ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ಮತ್ತು ವಿಪತ್ತು ನಿರ್ವಹಣೆ ಯೋಜನೆಯ ಅಗತ್ಯವಿರುತ್ತದೆ.

ಕೊನೆ ಮಾತು :

ವ್ಯೆಜ್ಞಾನಿಕತೆ, ತಂತ್ರಜ್ಞಾನ ಮತ್ತು ಅವಿಷ್ಕಾರಗಳು ಹುಟ್ಟಿಕೊಂಡಂತೆ, ಜೊತೆ ಜೊತೆಗೆ ಮನುಷ್ಯನ ಪ್ರಾಥಮಿಕ ಅವಶÀ್ಯಕತೆಗಳ ಹೊರತಾಗಿ, ಇನ್ನಿತರ ಭೋಗ ಭಾಗ್ಯಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾಗಿ  ಔದ್ಯೋಗಿಕರಣ, ಕೈಗಾರೀಕೀಕರಣ, ವ್ಯಾಪಾರೀಕರಣ ಎಲ್ಲವೂ ಜೊತೆ ಜೊತೆಯಾಗಿಯೇ ಧಾವಂತದಲ್ಲಿ ಮುನ್ನಗ್ಗುತ್ತಲಿದೆ. ಇದರ ಜೊತೆಗೆ ಹಲವಾರು ಅಡ್ಡ ಪರಿಣಾಮಗಳು, ತೊಂದರೆಗಳು ಮತ್ತು ಸಂಕಷ್ಟಗಳು ಬರತೊಡಗಿದೆ. ಆನರ ಆಸೆ ಅಕಾಂಕ್ಷೆಗಳಿಗೆ ಹೇಗೆ ಇತಿಮಿತಿ ಇಲ್ಲವೋ, ಹಾಗೆಯೇ ಕೈಗಾರಿಕರಣ ಮತ್ತು ಔದ್ಯೋಗಿಕ ಕ್ರಾಂತಿಯಿಂದ ಹಲವಾರು ಮನುಷ್ಯ ನಿರ್ಮಿತ ಅವಘಡಗಳ ಸಾಧ್ಯತೆಯನ್ನು, ಮನುಷ್ಯ ತನ್ನ ಸುತ್ತಲಿನ ವಾತಾರಣದಲ್ಲಿ ಬೆಳಸಿಕೊಂಡಿದ್ದಾನೆ. ಈ ಕಾಲಗಟ್ಟದಲ್ಲಿ ಅವಘಡಗಳು ಆಗುವುದು ಸಾಮಾನ್ಯ.

ಆದರೆ ಈ ಅವಘಡಗಳನ್ನು ಹೇಗೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಸುರಕ್ಷಿತವಾಗಿ ನಿಯಂತ್ರಿಸಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಚಿಂತಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದ್ದಲಿ,್ಲ ಈ ರೀತಿಯ ಮಾನವ ನಿರ್ಮಿತ ಅವಘಡಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗಬಹುದು. ಈ ಕಾರಣದಿಂದಲೇ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆಗೆ ಹೆಚ್ಚಿನ ಮಹತ್ವ ಬಂದಿದೆ ಎಂದರೂ ಅತಿಶಯೋಕ್ತಿಯಲ್ಲ. ಈ ಆಚರಣೆಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಮತ್ತು ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ಸಕಾಲದಲ್ಲಿ ನಿಭಾಯಿಸೋಣ. ಇದರಲ್ಲಿಯೇ ನಮ್ಮ ಸಮಾಜದ ಮತ್ತು ಮನುಕುಲದ ಉನ್ನತ್ತಿ ಮತ್ತು ಸಾಮರಸ್ಯ ಅಡಗಿದೆ.

Watch our video: October- 13 ಅಂತಾರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನ- ಡಾ. ಮುರಳೀಮೋಹನ ಚೂಂತಾರು

Murali-Mohan-Chuntar

ಡಾ| ಮುರಲೀ ಮೋಹನ್ ಚೂಂತಾರು
ಸಮಾದೇಷ್ಟರು, ಗೃಹರಕ್ಷಕದಳ ;ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!