ವಿದೇಶ ಪ್ರಯಾಣಕ್ಕೆ ವಿಮೆಯೊಂದೇ ಸಾಕಾ?

ಇತ್ತೀಚಿನ ದಿನಗಳಲ್ಲಿ ಹೊರದೇಶ ಪ್ರಯಾಣ ತುಂಬ ಹೆಚ್ಚಾಗಿದೆ. ಕೆಲವರು ಕೆಲಸಕ್ಕೆ ದೂರದ ದೇಶಕ್ಕೆ ಹೋದರೆ ಕೆಲವರು, ಪ್ರವಾಸಕ್ಕೆ, ಮೋಜು ಮಸ್ತಿ ಮಾಡಲು ಸೀಮೋಲ್ಲಂಘನ ಮಾಡುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರು ಇರುತ್ತಾರೆ ಮಕ್ಕಳಿಂದ ವೃದ್ದರ ವರೆಗೂ. ದೂರದ ಅಪರಿಚಿತ ದೇಶದಲ್ಲಿ ಕಾಯಿಲೆ, ಕಸಾಲೆ, ಅಪಘಾತಗಳುಂಟಾದರೆ ಹೇಗೆ?

ಗೊತ್ತಿರದ ನಾಡಿನಲ್ಲಿ ಆಸ್ಪತ್ರೆ ಹುಡುಕುವುದ ಹೇಗೆ?

ಊಟ ತಿಂಡಿಗಳು, ಬೇಕು ಬೇಡಗಳನ್ನು ಹೇಳಬಹುದು. ವಿದೇಶಿ ಭಾಷೆಯಲ್ಲಿ ನಮ್ಮ ದೈಹಿಕ ತೊಂದರೆ ನೋವು ಕಾಯಿಲೆಯ ಬಗ್ಗೆ ಹೇಗೆ ಹೇಳುವುದು?. ಅಪಘಾತದಂತಹ ಸನ್ನಿವೇಶಗಳಲ್ಲಿ ಗಾಬರಿಯಾಗಿದ್ದಾಗ ಹೊರದೇಶದ ವೈದ್ಯರಿಗೆ ನಮ್ಮ ತೊಂದರೆಗಳನ್ನು ಹೇಗೆ ಹೇಳುವುದು. ?ಉದಾ ದಕ್ಷಿಣ ಅಮೇರಿಕದಲ್ಲಿ ಕೇವಲ ಕನ್ನಡ ಮಾತನಾಡುವ ಮಧುಮೇಹಿಗೆ ವೀಪರಿತ ಜ್ವರ ಬಂದರೆ ಹೇಗೆ ?. ದೂರದ ಕೋರಿಯಾದಲ್ಲಿ ಕೇವಲ ಮರಾಠಿ ಬಲ್ಲವನಿಗೆ ಅಪಘಾತವಾದರೆ ಹೇಗೆ?. ಇದಕ್ಕಿಂತ ವಿಪರೀತ ಸಂಧರ್ಭವೆಂದರೆ ಸಾಹಸಿ ಅಥವಾ ಚಾರಣಿಯೋಬ್ಬ ಫ್ರೆಂಚ್ ಆಲ್ಫ್ಸ ಪರ್ವತಗಳಲ್ಲಿ ದುರದುಷ್ಟವಶಾತ್ ಅಪಘಾತಕ್ಕೀಡಾಗಿ ಸಾವೀಗೀಡಾದರೆ ಹೇಗೆ?

ಈ ಮೇಲಿನ ಪ್ರಶ್ನೆಗಳಿಗೆಲ್ಲ ಪ್ರವಾಸ ಅರೋಗ್ಯ ವಿಮೆ ಒಂದೆ ಉತ್ತರ (ಟ್ರಾವೆಲ್ ಹೆಲ್ತ ಇನ್ಶೂರೆನ್ಸ). ನೂರಾರು ವಿಮಾ ಕಂಪನಿಗಳು ವಿವಿಧ ತರಹದ ವಿಮೆಗಳ ಸೇವೆಗಳನ್ನು ಒದಗಿಸುತ್ತವೆ. ಇಂತಹುದರಲ್ಲಿ ವಿಮೆ ಕೊಳ್ಳುವ ಮೊದಲು ಕೆಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಪ್ರವಾಸದಲ್ಲಿ ಕಷ್ಟವಾದರೂ ಪ್ರಯಾಸವಾಗುವದಿಲ್ಲ. ವಿಮೆಯ ಜೊತೆ, ಅದರಷ್ಟೆ ಮುಖ್ಯವಾದ ಇನ್ನೊಂದು ವಿಷಯವು ನಮ್ಮನ್ನು ಕಷ್ಟಕಾಲದಲ್ಲಿ ಆಪದ್ಭಾಂಧವರಂತೆ ಕಾಪಾಡಬಹುದು.

ಯಾವುದು ಆ ಸೇವೆ? ಅಥವಾ ಸೌಲಭ್ಯ?

ವಿಮೆಯು ನಮಗೆ ಹೊರದೇಶದಲ್ಲಿ ಆರೋಗ್ಯದ ಖರ್ಚುಗಳನ್ನು ನಿಭಾಯಿಸಿಕೊಡುತ್ತದೆ. ಆದರೆ ಹೊರದೇಶದಲ್ಲಿನ ಆಸ್ಪತ್ರೆ, ಪರಿಣಿತ ವೈದ್ಯರ ವಿವರಗಳು ನಮಗೆ ಗೊತ್ತಿರುವುದಿಲ್ಲ. ಕೆಲ ವಿಮಾ ಕಂಪನಿಗಳು ಕೆಲ ದೇಶಗಳು ಅಥವಾ ಕೆಲ ಖಂಡಗಳಲ್ಲಿ ಮಾತ್ರ ಚೆನ್ನಾಗಿ ಕರ್ತವ್ಯನಿರ್ವಹಿಸುತ್ತವೆ. ಹಾಗಾಗಿ ಹಿಂದೆ ಮುಂದೆ ನೋಡದೆ ವಿಮೆ ಕೊಳ್ಳವುದು ಕೆಲ ಸಾರಿ ಅಪಾಯಕಾರಿಯಾಗಬಹುದು.

ಪ್ರತಿ ವಿಮೆಯ ಜೊತೆಗೆ ವಿದೇಶದಲ್ಲಿ ನಮಗೆ ಸಹಾಯ ಮಾಡಲು ವೈದ್ಯಕೀಯ ಸಹಾಯ ಸಂಸ್ಥೆ (Medical assistance company)ಯನ್ನೂ ಆಯ್ದುಕೊಳ್ಳಬೇಕು.ಈ ತರಹದ ವೈದ್ಯಕೀಯ ಸಹಾಯ ಕಂಪನಿಗಳು ಜಗತ್ತಿನ ಯಾವ ಮೂಲೆಯಲ್ಲಾದರೂ ವೈದ್ಯಕೀಯ ಸೇವೆಯನ್ನು ದೊರೆಯುವಂತೆ ಮಾಡುತ್ತವೆ. ಈ ಸಂಸ್ಥೆಗಳು ಎಲ್ಲ ಕಡೆ ತಮ್ಮ ಆಸ್ಪತ್ರೆ ವೈದ್ಯರನ್ನು ಹೊಂದಿರುವದಿಲ್ಲ. ಆದರೆ ಪ್ರತಿ ದೇಶದಲ್ಲಿನ ಪ್ರತಿ ವೈದ್ಯ, ವೈದ್ಯಕೀಯ ಸೌಲಭ್ಯಗಳ ವಿವರ ಹೊಂದಿರುತ್ತವೆ. ಹಾಗೂ ಆ ಆಸ್ಪತ್ರೆಗಳ ಜೊತೆ ಹಣಕಾಸಿನ ವ್ಯವಹಾರವನ್ನೂ ಹೊಂದಿರುತ್ತವೆ. ತಕ್ಷಣದ ಖರ್ಚನ್ನು ಈ ವೈದ್ಯಕೀಯ ಸಹಾಯ ಕಂಪನಿಯೇ ಭರಿಸಿ, ನಂತರ ತಮ್ಮ ಶುಲ್ಕದ ಜೊತೆ ಆಸ್ಪತ್ರೆಯ ಖರ್ಚನ್ನು ಪ್ರವಾಸಿಗರ ವಿಮಾ ಕಂಪನಿಯಿಂದ ವಸೂಲಿ ಮಾಡಿಕೊಳ್ಳುತ್ತವೆ.

ಉದಾಹರಣೆಗೆ ಯುರೋಪಿನ ಯಾವುದೋ ಹಳ್ಳಿಯಲ್ಲಿ ಅಪಘಾತವಾಗಿ ಹಣ ಲಗೇಜುಗಳನ್ನು ಕಳೆದುಕೊಂಡರೂ, ಬರೀ ಒಂದು ದೂರವಾಣಿ ಕರೆ ಎಲ್ಲ ಸಮಸ್ಯಗಳಿಗೆ ಪರಿಹಾರವಾಗಬಹುದು. ಪ್ರತಿ ವೈದ್ಯಕೀಯ ಸಹಾಯ ಕಂಪನಿಯವರು ಪ್ರವಾಸಿಗರು ಹೋಗುವ ಪ್ರದೇಶಗಳಲ್ಲಿರುವ ತಮ್ಮ ಕಚೇರಿಯ ಕಾಲ್ ಸೆಂಟರಿನ ಹಾಟ್ ಲೈನ್ ಸಂಪರ್ಕ ಸಂಖ್ಯೆ ಹಾಗೂ ಸದಸ್ಯತ್ವ ಸಂಖ್ಯೆ ಕೊಟ್ಟಿರುತ್ತಾರೆ. ಹಾಗಾಗಿ ಅಪಘಾತ ತೊಂದರೆಗಳಲ್ಲಿ ಕರೆ ಮಾಡಿ ನಮ್ಮ ಸದಸ್ಯತ್ವ ಸಂಖ್ಯೆ ಮತ್ತು ಅಪಘಾತದ ವಿಳಾಸ ಹೇಳಿದರೆ ಸಾಕು, ಕೆಲವೆ ಗಂಟೆ ಅಥವಾ ನಿಮಿಷಗಳಲ್ಲಿ ಸುರಕ್ಷಿತ ತಾಣಕ್ಕೆ ಒಯ್ದು ಉಪಚಾರ ಸಿಗುವಂತೆ ಮಾಡುತ್ತಾರೆ. ಕೆಲ ಕಂಪನಿಗಳು ವಿಶೇಷ ವಿಮಾನದಲ್ಲಿ ಒಳ್ಳೆಯ ಆಸ್ಪತ್ರೆಗಳಿಗೆ ಒಯ್ಯುತ್ತವೆ. ಕೆಲವರು ದುರ್ಗಮ ಕಣಿವೆ-ಬೆಟ್ಟಗಳಿಂದ ವಿಶೇಷ ಹೆಲಿಕಾಪ್ಟರುಗಳಲ್ಲಿ ಸುರಕ್ಷಿತ ಸ್ಥಾನಗಳಿಗೂ ಕರೆದೊಯ್ಯುತ್ತಾರೆ. ಹಾಗಾಗಿ ಈ ತರಹದ ಕಂಪನಿಗಳು ವಿವಿಧ ಸೇವೆಗಳನ್ನು ಒದಗಿಸುತ್ತವೆ.

ಅದರಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಸೇವೆಯೆಂದರೆ ಮೃತ ದೇಹ ರವಾನೆ (RMR Repatriation of Mortal Remains). ದುರದುಷ್ಟವಶಾತ್ ಯಾರಾದರೂ ಹೊರದೇಶದಲ್ಲಿ ಮೃತಪಟ್ಟರೆ ಈ ಕಂಪನಿಗಳು ಮೃತದೇಹ ಮರಳಿ ಸ್ವದೇಶಕ್ಕೆ ತರಲು ಸಲ್ಲಿಸಬೇಕಾದ ಎಲ್ಲ ಕಾಗದ ಪತ್ರಗಳನ್ನು ಸರಿಯಾದ ಜಾಗಕ್ಕೆ ಸಲ್ಲಿಸಿ. ಮೃತದೇಹವನ್ನು ಮರಳಿ ಸಂಬಂಧಿಕರಿಗೆ ಸೇರುವಂತೆ ಮಾಡುತ್ತಾರೆ. ಮೃತ ದೇಹ ಪ್ರಯಾಣಿಕನಾಗಿ ಬರುವದಿಲ್ಲ ಶವಪೆಟ್ಟಿಗೆಯಲ್ಲಿ ಸರಕಾಗಿ ಬರುತ್ತದೆ.
ಕೆಲ ವಿಶೇಷ ಸಂಧರ್ಬಗಳಲ್ಲಿ ಅಂದರೆ ವಿಪರೀತ ವಿಕಾರವಾದ ಮೃತದೇಹ, ಸುಟ್ಟುಕರಕಲಾದ ದೇಹಗಳನ್ನು ಕುಟುಂಬಸ್ಥರ ಅನುಮತಿಯ ಮೇರೆಗೆ ಸಾವಿಗೀಡಾದ ಸ್ಥಳದಲ್ಲೆ ಬೇಕಾದ ರೀತಿಯಲ್ಲಿ (ಹೂಳುವುದು ಹಾಗೂ ಅಗ್ನಿಸ್ಪರ್ಶ) ಅಂತಿಮ ಸಂಸ್ಕಾರವನ್ನೂ ನೆರವೇರಿಸುತ್ತಾರೆ. ಹಾಗಾಗಿ ಪ್ರವಾಸಕ್ಕೆ ಮುಂಚೆ ವಿಮೆ ಕೊಳ್ಳುವ ಮೊದಲು ಕೆಳಕಂಡ ವಿಷಯಗಳ ಬಗ್ಗೆ ಗಮನವಿರಲಿ.

1. ಆಯ್ದ ವಿಮಾ ಕಂಪನಿಯು ನಾವು ಹೋಗುವ ಖಂಡ ಅಥವಾ ದೇಶದಲ್ಲಿ ಸಕ್ರಿಯವಾಗಿದೆಯೆ? ಸೇಲ್ಸ್‍ಮೆನ್‍ಗಳು ಮೋಸದಿಂದ ವಿಮೆ ಮಾರಿಬಿಡಬಹುದು.

2. ಕೆಲ ಸಾರಿ ಆ ದೇಶ ಅಥವಾ ಆ ಖಂಡದ ಪ್ರತಿಷ್ಠಿತ ವಿಮಾ ಕಂಪನಿಯ ವಿಮೆಯನ್ನೆ ಕೊಂಡುಬಿಡುವುದು ಉತ್ತಮ. ಉದಾ ಯುರೋಪ್ಗೆ, ಬುಪಾ, ಏಟ್ನಾ. ಸಿಗ್ನಾ.

3. ವೈದ್ಯಕೀಯ ಸಹಾಯ ಕಂಪನಿಗಳ ಸಹಭಾಗಿತ್ವ. ವಿಮಾ ಕಂಪನಿಯು ಯಾವ ವೈದ್ಯಕೀಯ ಸಹಾಯ ಕಂಪನಿಯ ಜೊತೆ ಸಹಭಾಗಿತ್ವ ಹೊಂದಿದೆ? ಸಹಾಯ ಕಂಪನಿಯ ಶಾಖೆಗಳು ಪ್ರವಾಸ ಮಾಡಲಿಚ್ಛಿಸುವ ದೇಶಗಳಲ್ಲಿವೆಯಾ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಂತರ್ಜಾಲದಲ್ಲಿ ಒಂದು ದಿನ ಜಾಲಾಡಿದರೆ ಎಲ್ಲ ವಿವರಗಳು ಸಿಗುತ್ತವೆ. ಕೆಲ ಕಂಪನಿಗಳು ಟೋಲ್ ಫ್ರೀ ನಂಬರ್‍ಗಳನ್ನು ಹೊಂದಿವೆ. ಶುಲ್ಕವಿಲ್ಲದೆ ಈ ನಂಬರ್‍ಗಳಿಗೆ ಕರೆಮಾಡಿ ನಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು. ನಮಗಿರುವ ಸದ್ಯದ ಕಾಯಿಲೆಯ ವಿವರ, ಹಾಗೂ ಅರೋಗ್ಯ ವಿವರ ಸರಿಯಾಗಿ ಕೊಡಬೇಕು. ಮುಚ್ಚು ಮರೆ ಮಾಡಿ ಸಿಕ್ಕಿಹಾಕಿಕೊಂಡರೆ ಸಂಕಟದ ಸಮಯದಲ್ಲಿ ಅಕ್ಷರಶಃ ನಿರ್ಗತಿಕರಾಗುತ್ತೆವೆ.

ಜಗತ್ತಿನ ಪ್ರತಿಷ್ಠಿತ ಆರೋಗ್ಯ ಸಹಾಯ ಕಂಪನಿಗಳು:

1. ಇಂಟನ್ರ್ಯಾಷನಲ್ ಎಸಓಎಸ್ (International sos)
2. ಫಾಲ್ಕ ಅಸಿಸ್ಟನ್ಸ (Falck)
3. ಬುಪಾ ಅಸಿಸ್ಟನ್ಸ (BUPA)
4. ಯುರೋ ಅಸಿಸ್ಟನ್ಸ (Euro)ಇತ್ಯಾದಿ.

4. ನಮಗೆ ಬೇಕಾದಂತೆ ವಿಮಾನ ಅಂಬುಲೆನ್ಸ್ ಸೇವೆ, ಹೆಲಿಕಾಪ್ಟರ್ ಅಂಬುಲೆನ್ಸ್ ಹಾಗೂ ಕೆಲಸಾರಿ ವೈದ್ಯರು ನಮ್ಮ ಮನೆಯವರೆಗೂ ಬಂದು ಬಿಟ್ಟು ಹೋಗುವಂತಹ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

5. ಕೆಲ ಸಹಾಯ ಕಂಪನಿಗಳು ಸುರಕ್ಷತಾ ಸಲಹೆಗಳನ್ನು ನೀಡುತ್ತವೆ. ಉದಾ: ಭಯೋತ್ಪಾದಕ ಪೀಡಿತ ರಾಷ್ಟ್ರಗಳ ಪ್ರವಾಸ ಮಾಡುವಾಗ ಬೇಕಾದ ಭದ್ರತಾ ಸಲಹೆ, ಹಾಗೂ ಕಾಲಕಾಲಕ್ಕೆ ಉಂಟಾಗುವ ಗಲಭೆ, ಗಲಾಟೆ, ಯುದ್ಧ ಅಥವಾ ಸಾಂಕ್ರಾಮಿಕ ರೋಗ (ಎಬೋಲಾ, ಹಂದಿಜ್ವರ, ಹಕ್ಕಿಜ್ವರ)ಗಳ ಮಾಹಿತಿ ನೀಡುತ್ತ ನಮ್ಮ ಪ್ರಯಾಣದಲ್ಲಿ ಅನುಸರಿಸಬೇಕಾದ ಮುಂಜಾಗ್ರತೆಗಳೂ, ಆಯಾ ರಾಷ್ಟ್ರದ ಸರಕಾರದ ನಿರ್ದೇಶನಗಳನ್ನು ನಮಗೆ ಈ ಮೇಲ್ ಮುಖಾಂತರ ನಿರಂತರವಾಗಿ ಕಳಿಸುತ್ತವೆ. ಆದರೆ ಪ್ರತಿ ಸೇವೆಗೆ ನಿರ್ದಿಷ್ಟ ಶುಲ್ಕವಿರುತ್ತದೆ. ಹಾಗೆ ನೋಡಿದರೆ ಈ ಶುಲ್ಕಗಳು ತುಂಬಾ ತುಟ್ಟಿ.

6. ಇನ್ನು ಕೆಲ ಕಂಪನಿಗಳು ವಿಮಾನ ತಡವಾದರೆ ಅಥವ ರದ್ದಾದರೆ ಅದಕ್ಕೆ ತಕ್ಕ ಪರಿಹಾರಕೊಡುತ್ತವೆ. ನಮ್ಮ ಸಾಮಾನುಗಳು ಸಿಗದೆ ಇದ್ದು, ಕಳ್ಳತನವಾದರೂ ವಿಮಾಕಂಪನಿಗಳು ನಮ್ಮ ಸಹಾಯಕ್ಕೆ ಬರುತ್ತವೆ.
ಮೇಲಿನ ವಿಷಯಗಳನ್ನು ಗಮನದಲಿಟ್ಟುಕೊಂಡು, ನಾವು ಅಥವಾ ನಮ್ಮ ಪ್ರೀತಿ ಪಾತ್ರರನ್ನು ಕರೆದುಕೊಂಡು ನಿರಾತಂಕವಾಗಿ ವಿದೇಶ ಪ್ರವಾಸ ಮಾಡಬಹುದು.

ಅಬುಯಾಹ್ಯಾ


ಡಾ. ಸಲೀಮ ನದಾಫ
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!