ಮುಚ್ಚಿಕೊಂಡ ನಾಳಗಳಿಂದಾಗಿ ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ನಾಳಗಳನ್ನು ಹೊರಹಾಕುವ ಪರಿಣಿತ ಚಿಕಿತ್ಸೆಯೊಂದಿಗೆ ತಾಯ್ತನದ ಆನಂದದ ಅನುಭವ ಹೊಂದುವ ಉತ್ತಮ ಅವಕಾಶವಿದೆ
ಬಂಜೆತನಕ್ಕೆ ಅನೇಕ ಕಾರಣಗಳಲ್ಲಿ ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ಸಂಗತಿ ಸಹ ಒಂದು. ಆರೋಗ್ಯಕರ ಸಂತಾನೋತ್ಪತ್ತಿ ಅಂಗಗಳನ್ನು ಮಹಿಳೆಯರು ಹೊಂದಿದ್ದರೂ, ಮುಚ್ಚಲ್ಪಟ್ಟ ಅಥವಾ ಹಾನಿಗೀಡಾದ ನಾಳಗಳಿಂದ (ಟ್ಯೂಬ್‍ಗಳು) ಎಲ್ಲ ಮಹಿಳಾ ಬಂಜೆತನ ಅಂಶದ ಶೇ.25ರಿಂದ ಶೇ.35ರಷ್ಟು ಕಾರಣವಾಗುತ್ತದೆ.
ಫಾಲೋಪಿಯನ್ ಟ್ಯೂಬ್‍ಗಳೆಂದರೇನು?
ಫಾಲೋಪಿಯನ್ ಟ್ಯೂಬ್‍ಗಳೆಂದರೆ ಗರ್ಭಕೋಶದ ಪಕ್ಕಗಳೊಂದಿಗೆ ಸಂಪರ್ಕ ಹೊಂದಿರುವ ಟೊಳ್ಳಿನ ವಿನ್ಯಾಸಗಳಂಥ ನಾಳಗಳು. ಇವು ಪ್ರತಿ ಅಂಡಾಶಯದ ಮೇಲ್ಮೈಗೆ ವಿಸ್ತರಿಸಿರುತ್ತವೆ. ಅಂಡಾಶಯವಿಗೆ ಹೊಂದಿಕೊಂಡ ಪ್ರತಿ ನಾಳದ ತುದಿ ಕವಾಟದ ರೀತಿಯಲ್ಲಿ ತೆರೆದುಕೊಂಡಿದ್ದು ಅನೇಕ ಕಿವಿರುಗಳಂಥ ಸೂಕ್ಷ್ಮ ಬೆರಳಿನ ವಿನ್ಯಾಸಗಳನ್ನು ಹೊಂದಿರುತ್ತವೆ. ಇದನ್ನು ಫಿಮ್ ಬ್ರೀಯಿ ಎಂದು ಕರೆಯಲಾಗುತ್ತದೆ. ಅಂಡಾಶಯ ಅಂಡಾಣುಗಳನ್ನು ಬಿಡುಗಡೆ ಮಾಡಿದಾಗ ಇಂಥ ಬೆರಳಿನಂತ ವಿನ್ಯಾಸಗಳು ಅಂಡಾಣುಗಳನ್ನು ಎತ್ತಿಕೊಳ್ಳುತ್ತವೆ ಹಾಗೂ ನಾಳದ ಮೂಲಕ ಗರ್ಭಕೋಶಕ್ಕೆ ಹೋಗುವಂತೆ ಮಾಡುತ್ತವೆ. ಟ್ಯೂಬ್‍ನ ಹೊದಿಕೆಯು ತುಂಬಾ ಅನುಕೂಲಕರವಾಗಿದ್ದು ಅಂಡಾಣುವನ್ನು ಅಭಿವೃದ್ದಿಗೊಳಿಸಲು ವೀರ್ಯ ತನ್ನ ಪಯಣವನ್ನು ಸುಗಮವಾಗಿ ಮುಂದುವರೆಸಲು
ಪೂರಕ ವಾತಾವರಣ ಕಲ್ಪಿಸುತ್ತದೆ.
ಫಲವತ್ತತೆಗಾಗಿ ನಾಳದ ಆಂತರಿಕ ಗೋಡೆ ಅಥವಾ ಲೈನಿಂಗ್ ಕೂಡ ಮುಖ್ಯ. ಇದು ಸಾಮಾನ್ಯವಾಗಿ ಗರ್ಭಕೋಶದಿಂದ ಸ್ವಲ್ಪ ದೂರದ ಭಾಗದಲ್ಲಿ ಇದು ಇರುತ್ತದೆ. ಇದನ್ನು ನಾಳದ ಅಸ್ಪಷ್ಟ ಭಾಗವೆಂದು ಕರೆಯಲಾಗುತ್ತೆ. ಫಲವತ್ತತೆ ಹೊಂದುತ್ತಿರುವ ಅಂಡಾಣುವಿನ ಉಳಿವಿಗೆ ಈ ನಾಳ ತುಂಬಾ ಮುಖ್ಯ. ತತ್ತಿಗಳು ಗರ್ಭಕೋಶಕ್ಕೆ ಹಾದು ಹೋಗಿ ಗರ್ಭಕೋಶ ಟೊಳ್ಳಾದ ಭಾಗದ ಗೋಡೆಗಳಲ್ಲಿ ಜೋಡಣೆಯಾಗುವುದಕ್ಕೂ ಮುನ್ನ 5 ದಿನಗಳ ತನಕ ಫಾಲೋಪಿಯನ್ ಟ್ಯೂಬ್ ಮೂಲಕ ಸಾಗುತ್ತದೆ.
ನಾಳಗಳ ಅಗತ್ಯ ಕಾರ್ಯಗಳೇನು ?
- ತತ್ತಿಯನ್ನು ಎತ್ತಿಕೊಳ್ಳುವಿಕೆ
- ತತ್ತಿಯ ಸಾಗಣೆ
- ಫಲವತ್ತತೆ
- ನಾಳಗಳಿಂದ ಗರ್ಭಕೋಶಕ್ಕೆ ಅಂಡಾಣು ಸಾಗಣೆ
ನಾಳಗಳು ಕಾರ್ಯನಿರ್ವಹಿಸದಿದ್ದರೆ ಏನಾಗುತ್ತದೆ. ?
ಫಾಲೋಪಿಯನ್ ನಾಳಗಳು ಯಾಂತ್ರಿಕ ಸಾಗಣೆ ಮತ್ತು ಆರಂಭದ ಗರ್ಭಧಾರಣೆಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಫಿಮ್‍ಬ್ರೀಯಿಗೆ ಹಾನಿಯಾದರೆ ತತ್ತಿಯನ್ನು ಎತ್ತಿಕೊಳ್ಳುವ ಮತ್ತು ಟ್ಯೂಬ್‍ಗೆ ಅದನ್ನು ನಿರ್ದೇಶಿಸುವ ಸಾಮಥ್ರ್ಯ ಕಡಿಮೆಯಾಗಬಹುದು.
ಕೋಶಗಳ ಹೊದಿಕೆಗೆ ಹಾನಿಯಾದರೆ, ಫಲವತ್ತಾದ ತತ್ತಿ ಗರ್ಭಕೋಶಕ್ಕೆ ಚಲಿಸುವುದನ್ನು ತಡೆಗಟ್ಟುತ್ತದೆ ಹಾಗೂ ಅಪಸ್ಥಾನೀಯ (ಸಾಮಾನ್ಯ ಜಾಗದಲ್ಲಿ ಇರದ) ಗರ್ಭಧಾರಣೆ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಟ್ಯೂಬಲ್ ಫ್ಯಾಕ್ಟರ್ ಅಥವಾ ನಾಳದ ದೋಷಪೂರಿತ ಸಂಗತಿ ಶರೀರದ ಅಸಾಮಾನ್ಯತೆಯಾಗಿದ್ದು, ಫಲವತ್ತತೆ ಸಾಮಾನ್ಯವಾಗಿ ನಡೆಯುವ ಫಾಲೋಪಿಯನ್ ಟ್ಯೂಬ್‍ನ ಭಾಗಕ್ಕೆ ವೀರ್ಯ ಮತ್ತು ತತ್ತಿಯ ಸಂಘಟನೆ ತಲುಪುವುದನ್ನು ತಡೆಗಟ್ಟುತ್ತದೆ. ಡಿಸ್ಟಲ್ ಟ್ಯೂಬ್ ಡಿಸೀಸ್ ಅಥವಾ ನಾಳದ ರೋಗವು ಲಘು ಫಿಮ್‍ಬ್ರಿಯಲ್ ಅಂಟಿಕೊಳ್ಳುವ ಸಮಸ್ಯೆಯಿಂದ ತೀವ್ರ ಸಂಪೂರ್ಣ ರಹಸ್ಯ ರೋಗವಾಗಿ ಕಾಡುತ್ತದೆ. ನಾಳದ ಒಂದು ಭಾಗದಲ್ಲಿ ಮಾತ್ರ ಅಡೆತಡೆಗಳು ಆಗಿದ್ದರೆ ಫಾಲೋಪಿಯನ್ ಟ್ಯೂಬ್‍ನ ಸ್ರವಿಸುವಿಕೆ ನಾಳದ ಹೊರಗೆ ಹರಿದು ಹೋಗಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ನಾಳದಲ್ಲಿ ದ್ರವ ಸೇರಿಕೊಂಡು ಫಲವತ್ತತೆ ಮೇಲೆ ದುಷ್ಟರಿಣಾಮ ಬೀರುತ್ತದೆ. ನಾಳದ ರೋಗವಿರುವ ಮಹಿಳೆಯರಲ್ಲಿ ಶೇ. 10-20ರಷ್ಟು ಮಂದಿಯಲ್ಲಿ ಪ್ರಾತಿನಿಧಿಕ ಅಡೆತಡೆ, ಗರ್ಭನಾಳ ಕಟ್ಟಿಕೊಳ್ಳುವಿಕೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮಾಸ್ಕುಲರ್ ಸ್ಪಾಸಮ್, ಸ್ಟ್ರೋಮಲ್ ಓಡೆಮಾ, ಅಮೊರ್‍ಫೌಸ್ ಡರ್ಬಿಸ್, ಮಾಸ್ಕೋಸಾಲ್ ಅಗ್ಲುಟಿನೇಷನ್, ವಿಸ್ಕೋಸ್ ಸ್ರವಿಸುವಿಕೆ, ಇತರ ಸಮಸ್ಯೆಗಳಾದ ಕಾರ್ನಿಯಲ್ ಪಾಲಿಪ್ಸ್, ಕ್ರಾನಿಕ್ ಸಲ್‍ಪಿನ್‍ಗಿಟಿಸ್, ಎಂಡೋಮೆಟ್ರಿಯೋಸಿಸ್, ಇಂಟ್ರಾ ಯುಟ್ರೀನ್ ಸಿನೆಚಿಯಾ, ಪರಾವಲಂಬಿ ಸೋಂಕು ಮೊದಲಾದ ತೊಂದರೆಗಳು ಕಾರಣವಾಗುತ್ತದೆ.
ಟ್ಯೂಬ್‍ಗಳು ಹೇಗೆ ಕಟ್ಟಿಕೊಳ್ಳುತ್ತವೆ ?
ನಾಳಗಳ ನಿಷ್ಕ್ರಿಯತೆ-ಕಾರ್ಯನಿರ್ವಹಣಾ ಸಮಸ್ಯೆಯಿಂದ ತಮ್ಮ ಕೆಲಸ ಮಾಡಲು ಅಸಮರ್ಥವಾದಾಗ ಟ್ಯೂಬ್‍ಗಳು ಬಂದ್ ಆಗುತ್ತವೆ ಅಥವಾ ಕಟ್ಟಿಕೊಳ್ಳುತ್ತದೆ. ಪಿತ್ತಾಶಯ (ಪೆಲ್ವಿಕ್) ಉರಿ ದೋಷಗಳು ಉದಾಹರಣೆಗೆ ಗೊನೋರೀಯಾ, ಕ್ಲಾಮಿಡಿಯಾದಂಥ ಪೆಲ್ವಿಕ್ ಸೋಂಕು ಉರಿಗೆ ಕಾರಣವಾಗುತ್ತದೆ ಮತ್ತು ನಾಳದಲ್ಲಿ ಸೋಂಕು ಉಂಟು ಮಾಡುತ್ತವೆ. ಇಂಥ ಸೋಂಕುಗಳು ತತ್ತಿಯನ್ನು ಸಾಗಿಸಲು ಕಾರಣವಾಗುವ ಫಾಲೋಪಿಯನ್ ಟ್ಯೂಬ್‍ನ ಪುಟ್ಟ ಕೂದಲುಗಳ ಹೊದಿಕೆಯಾದ ಸಿಲಿಯಾಗೆ ಹಾನಿ ಉಂಟು ಮಾಡಬಹುದು.
ಸಿಲಿಯಾ ತನ್ನ ಕ್ರಿಯೆಯನ್ನು ನಡೆಸಲು ವಿಫಲವಾದರೆ ವೀರ್ಯ ಮತ್ತು ಅಂಡಾಣು ಒಂದೆಡೆ ಸೇರಲು ಅಥವಾ ಒಂದು ವೇಳೆ ತತ್ತಿ ಫಲವತ್ತತೆಯಾಗದ್ದರೆ ಅದು ಅಭಿವೃದ್ದಿಯಾಗುವುದನ್ನು ಒಮ್ಮೊಮ್ಮೆ ತಡೆಯುತ್ತದೆ (ವೀರ್ಯ ಮತ್ತು ಅಂಡಾಣು ಒಂದೆಡೆ ಸೇರಿದರೆ ಗರ್ಭಧಾರಣೆಯಾಗುತ್ತದೆ). ಗರ್ಭಕೋಶದೊಳಗೆ ಹೋಗಲು ಅಸಾಧ್ಯವಾಗುವುದರಿಂದ ಫಲವತ್ತಾದ ತತ್ತಿ ಫಾಲೋಪಿಯನ್ ಟ್ಯೂಬ್‍ನ ಗೋಡೆಯಲ್ಲಿ ಬೆಳೆಯಲು ಆರಂಭಿಸುತ್ತದೆ. ನಾಳದಲ್ಲಿನ ಜಾಗವು ಮಗುವಿಗೆ ಸಾಕಷ್ಟು ಸ್ಥಳವಕಾಶ ನೀಡುವುದಿಲ್ಲ. ಹರಿದುಹೋಗುವಿಕೆ, ಆಂತರಿಕ ಸೋಂಕು ಮತ್ತು ನಾಳಕ್ಕೆ ಇನ್ನಷ್ಟು ಹಾನಿಯಾಗುತ್ತದೆ.
ಹುಣ್ಣು ಅಥವಾ ಅಂಟಿಕೊಳ್ಳುವಂಥ ರಚನೆ ಹಾನಿ ಸಹ ನಾಳಗಳು ಬಂದ್ ಆಗಲು ಕಾರಣವಾಗುತ್ತದೆ. ಎಂಡೋಮೆಟ್ರಿಯೋಸಿಸ್, ಉದರ ಅಥವಾ ಸ್ತ್ರೀಗೆ ಸಂಬಂಧಿತ ಶಸ್ತ್ರಚಿಕಿತೆ ಉದಾಹರಣೆ ಬೋವಲ್ ಸರ್ಜರಿ, ಸಿ ಸೆಕ್ಷನ್, ಹರಿದ ಅಪೆಂಡಿಕ್ಸ್ ಇತ್ಯಾದಿಯಂಥ ವೈದ್ಯಕೀಯ ಸ್ಥಿತಿಗಳಿಂದ ಸೃಷ್ಟಿಯಾಗುವುದೇ ಹುಣ್ಣಿನ ಜೀವಕೋಶಗಳು. ಇಂಥ ಹುಣ್ಣಿನ ಅಂಗಾಂಶವನ್ನು ಅಂಟುವಿಕೆ ಎಂದು ಕರೆಯುತ್ತಾರೆ. ಇದು ನೈಲಾನ್ ಹಗ್ಗದಂಥ ಬೆಸುಗೆ ಹಾಕಿ ಗಾಯಗೊಂಡ ಜೀವಕೋಶ ಗುಣಮುಖವಾಗಲು ನೆರವಾಗುತ್ತದೆ. ಒಮ್ಮೆ ಗುಣಮುಖವಾದರೆ ದೇಹದಲ್ಲಿ ಅಂಟು ಹಾಗೇ ಉಳಿಯುತ್ತದೆ. ಈ ಹಿಂದೆ ನೈಸರ್ಗಿಕವಾಗಿ ಮುಕ್ತ ರೀತಿಯಲ್ಲಿ ಚಲಿಸುತ್ತಿದ್ದ ಜೀವಕೋಶÀÀಗಳನ್ನು ಬೆಸೆಯುತ್ತದೆ. ಇದರ ಪರಿಣಾಮವಾಗಿ ನೋವು ಹಾಗೂ ನಿಷ್ಕ್ರಿಯತೆ ಕಾಣಿಸಿಕೊಳ್ಳುತ್ತದೆ.
ಟ್ಯೂಬಲ್ ಲಿಗೇಷನ್ (ನಾಳದ ರಕ್ತ ವಾಹಿನಿಯನ್ನು ತಡೆಹಿಡಿಯುವುದು) ಒಳಪಡುವುದರಿಂದ ಗರ್ಭನಿರೋಧಕ ವಿಧಾನವಾಗಿ ಮಹಿಳೆ ತನ್ನ ಫಾಲೋಪಿಯನ್ ಟ್ಯೂಬ್‍ಗಳನ್ನು ಬಂದ್ ಮಾಡಿಸಿಕೊಳ್ಳಬಹುದು. ಅಂದರೆ, ಅವರ ನಾಳಗಳು ಕಟ್ಟಲ್ಪಟ್ಟಿರುತ್ತದೆ. ಆದರೆ ನಂತರ ಆರೋಗ್ಯಕರವಾಗಿದ್ದು ಮತ್ತು ಚಿಕಿತ್ಸಾ ವಿಧಾನದ ಬಳಿಕ ಒಂದು ಹಂತದಲ್ಲಿ ಮಗುವನ್ನು ಹೊಂದಲು ಬಯಸಿದಾಗ ನಾಳದ ರಕ್ತ ವಾಹಿನಿಯನ್ನು ತಡೆಹಿಡಿದಿರುವುದರಿಂದ ಕಾರ್ಯನಿರ್ವಹಿಸುವ ನಾಳಗಳು ಗರ್ಭಧರಿಸಲು ಅವಕಾಶ ನೀಡುವುದಿಲ್ಲ.
ಚಿಕಿತ್ಸಾ ಯೋಜನೆ :
ನಾಳದ ರೋಗವು ನಾಳದ ಅಡೆತಡೆ, ಕಿರಿದಾಗುವಿಕೆ, ವಿಸ್ತರಿಸುವಿಕೆ, ಹಾಗೆಯೇ ನಾಳದ ಶ್ಲೇಷ್ಮ ಹೊದಿಕೆ, ಮಸ್ಕುಲೇಚರ್ ಗೋಡೆ ಅಥವಾ ನಾಳದ ಹೊರಗೆ ಯಾವುದೇ ಸಮಸ್ಯೆ ಇರುವಂಥ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ನಾಳಗಳು ಅದರ ಹತ್ತಿರದ, ಮಧ್ಯ ಭಾಗದ ಅಥವಾ ಸ್ವಲ್ಪ ದೂರದ ಭಾಗದಲ್ಲಿ ಹಾನಿಗೆ ಒಳಗಾಗಬಹುದು. ನಾಳದ ಸಮಸ್ಯೆ ಇದ್ದಾಗ ಆಯುರ್ವೇದ ವೈದ್ಯರು ರೋಗ ಅಥವಾ ಗಾಯದಿಂದ ನಾಶವಾದ ಅಥವಾ ಹಾನಿಗೀಡಾದ ದೇಹ ಭಾಗಗಳು ಮತ್ತೆ ಎಂದಿನಂತೆ ಗೋಚರಿಸುವ ಮತ್ತು ಕಾರ್ಯನಿರ್ವಹಿಸುವಂತೆ ಮಾಡಿ ಅದನ್ನು ಸಕ್ರಿಯಗೊಳಿಸುತ್ತಾರೆ.
ಆಯುರ್ವೇದವು ನಾಳಗಳ ಕಾರ್ಯವನ್ನು ಕ್ರಮಬದ್ದಗೊಳಿಸಲು ಮತ್ತು ಸುಧಾರಿಸಲು ವ್ಯವಸ್ಥಿತ ಚಿಕಿತ್ಸಾ ಯೋಜನೆಯನ್ನು ಹೊಂದಿದೆ.
ವಾಮನಾಡಿ ಪಂಚಕರ್ಮ : ಎಲ್ಲ ರೀತಿಯ ತಡೆಗಟ್ಟುವ ಹಾಗೂ ವಾಸಿ ಮಾಡುವ ಚಿಕಿತ್ಸಾ ವಿಧಾನಗಳ ಮುಖ್ಯ ಉದ್ದೇಶವು ದೇಹದ ವ್ಯವಸ್ಥಿತ ಶುದ್ದೀಕರಣವಾಗಿದೆ. ಇದು ಆರೋಗ್ಯದ ಮೂಲ ಆಧಾರವಾದ ಸಹಜಸ್ಥಿತಿ ಮತ್ತು ಸಾಮ್ಯಾವಸ್ಥೆಯ ಸ್ಥಿತಿಯನ್ನು ವಿನ್ಯಾಸಗೊಳಿಸುವುದಾಗಿದೆ. ಉಪಶಮನದ ತೀವ್ರತೆಯನ್ನು ಕಡಿಮೆಗೊಳಿಸುವ ಚಿಕಿತ್ಸೆಯು ಪಥ್ಯಾಹಾರವನ್ನು ಒಳಗೊಂಡಿದೆ. ರಕ್ತ ಸಂಚಾರದ ವಾಹಿನಿಗಳನ್ನು ಚೆನ್ನಾಗಿ ಶುದ್ದೀಕರಣಗೊಳಿಸದ ಹೊರತು ಔಷಧಿ ಪರಿಣಾಮ ಬೀರದೇ ಇರಬಹುದು ಹಾಗೂ ದೇಹದಲ್ಲಿ ಸಂಗ್ರಹಗೊಂಡ ವಿಷಯುಕ್ತ ವಸ್ತುಗಳು ಹೊರಕ್ಕೆ ಎಸೆಯಲ್ಪಡದೇ ಇರಬಹುದು. ದೇಹ ಶುದ್ದೀಕರಣದ ಹಿನ್ನೆಲೆಯಲ್ಲಿ ಕವರ್i ಎಂಬ ಪದವು ದೇಹದಿಂದ ಕಷ್ಮಲಗಳನ್ನು ತೆಗೆದುಹಾಕುವ ವ್ಯಾಪಕ ಮತ್ತು ಶಕ್ತಿಯುತ ಕ್ರಿಯೆ ಎಂಬ ಅರ್ಥವನ್ನು ನೀಡುತ್ತದೆ. ಆಯುರ್ವೇದದಲ್ಲಿನ ಈ ಪರಿಕಲ್ಪನೆಯು ವಿಭಿನ್ನವಾಗಿದ್ದು, ತಕ್ಷಣದ ಪ್ರಯೋಜನಗಳನ್ನು ನೀಡುವುದಕ್ಕೆ ಪ್ರಸಿದ್ದಿ ಪಡೆದಿದೆ. ಹದಗೆಟ್ಟ ಜೈವಿಕಶಕ್ತಿಗಳನ್ನು ನಿರ್ಮೂಲನೆ ಮಾಡಲು ವಿನ್ಯಾಸಗೊಳಿಸಲಾದ ಐದು ರೀತಿಯ ಶುದ್ದೀಕರಣ ವಿಧಾನವೇ ಪಂಚಕರ್ಮ. ಅವುಗಳೆಂದರೆ : ವಾಮನ-ವಾಂತಿ ಚಿಕಿತ್ಸೆ, ವಿರೇಚನ-ಶುದ್ದಿಗೊಳಿಸುವ ಚಿಕಿತ್ಸೆ, ಅನುವಾಸನ-ಪುಷ್ಟಿಕರ ಬಸ್ತಿ, ಅಷ್ಟಪಾನ-ಶುದ್ದೀಕರಣ ಬಸ್ತಿ ಹಾಗೂ ಶಿರೋ ವಿರೇಚನ-ನಾಶೀಪುಡಿ ಈ ಚಿಕಿತ್ಸಾ ವಿಧಾನಗಳ ಬಳಿಕ ಚಿಕಿತ್ಸಾ ನಂತರದ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇದರಲ್ಲಿ ಆರೋಗ್ಯದ ಸಹಜ ಸ್ಥಿತಿ ತಲುಪಲು ವ್ಯಕ್ತಿಯ ಪಚನ ಮತ್ತು ಹೀರಿಕೊಳ್ಳುವ ಸಾಮಥ್ರ್ಯ ಮರುಕಳಿಸುವಂತೆ ಮಾಡಲು ವಿಶೇಷ ಆಹಾರ ಪಥ್ಯ ಒಳಗೊಂಡಿರುತ್ತದೆ.
ಅಭ್ಯಂಗ :
ಸಂತಾನೋತ್ಪತ್ತಿ ಅಂಗದ ಅಂಗಮರ್ದನ, ಘರ್ಷಣೆ ಹಾಗೋ ಆಳ ಒತ್ತಡವು ನಾಳಗಳು ತೆರೆದುಕೊಳ್ಳಲು ಉತ್ತೇಜನ ನೀಡುತ್ತದೆ. ದೇಹಕ್ಕೆ ನಿರ್ದಿಷ್ಟ ಜಾಗದಲ್ಲಿ ಮಸಾಜ್ ಅಥವಾ ಅಂಗ ಮರ್ದನ ಮಾಡುವುದರಿಂದ ಜೀವಕೋಶಗಳು ಮೃದುವಾಗುತ್ತವೆ. ಕಾಲಕಾಲಕ್ಕೆ ಸೂಕ್ತ ಸ್ಥಳದಲ್ಲಿ ಒತ್ತಡವನ್ನು ಮುಂದುವರಿಸುವುದರಿಂದ ಅಂಟುಗಳು ಕರಗಿತ್ತದೆ ಮತ್ತು ಬಿಟ್ಟುಕೊಳ್ಳುತ್ತವೆ. ಇದರಿಂದ ಮಹಿಳೆ ಗರ್ಭಿಣಿಯಾಗುವ ಅವಕಾಶಗಳನ್ನು ಸುಧಾರಿಸುತ್ತದೆ. ಅಭ್ಯಂಗ ಚಿಕಿತ್ಸೆಯ ಪ್ರಾಥಮಿಕ ಗುರಿ ಎಂದರೆ ಅಂಟುಗಳು ರೂಪುಗೊಳ್ಳುವುದಕ್ಕೆ ಅಧಿಕ ಅಡ್ಡ ಸಂಪರ್ಕವನ್ನು ತೊಡೆದು ಹಾಕುವ ವಿಶೇಷ ಕೌಶಲ್ಯಗಳನ್ನು ಬಳಸುವ ಮೂಲಕ ಚಲನೆಯನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುವುದಾಗಿದೆ. ಚಿಕಿತ್ಸೆ ನೀಡುವವರು ದೋಷಗಳ ಸಮತೋಲನ ಮತ್ತು ಪ್ರಮಾಣಬದ್ದತೆಯ ಮರುಸ್ಥಾಪನೆಗಾಗಿ ಮೃದು ಹೊಂದಾಣಿಕೆ ಅನ್ವಯ ಎಳೆಯುವಿಕೆ, ಚಲನೆ ಮತ್ತು ಉದ್ದೀಪನಗೊಳಿಸಲು ಕೈಗಳನ್ನು ಬಳಸುತ್ತಾರೆ. ಈ ವಿಧಾನವು ನೋವು, ಕಠಿಣತೆ, ಗಟ್ಟಿತನ, ಸ್ಥಾನಪಲ್ಲಟ, ಜನನಾಂಗಗಳ ಅರವಳಿಕೆಗೆ ವಿಶೇಷ ಪರಿಣಾಮ ಉಂಟು ಮಾಡುತ್ತದೆ.
ಸಂಘಟಿತ ಅಪನ ವಾಯು ಜೈವಿಕಶಕ್ತಿ ನಿರ್ವಹಣೆಗಾಗಿ ಉತ್ತರ ಬಸ್ತಿ ಮತ್ತು ಇತರ ಸ್ಥಳೀಯ ಚಿಕಿತ್ಸೆಗಳು :
ಉತ್ತರ ಬಸ್ತಿ, ಪರಿಸೆಕ, ಪ್ರಲೇಪ, ಪಿಚ್ಚು ಪ್ರಯೋಗ ಇತ್ಯಾದಿಯಂಥ ಸ್ಥಳೀಯ ಚಿಕಿತ್ಸೆಗಳಿಗೆ ಪ್ರಸಿದ್ದಿಯಾಗಿದ್ದು, ಜನನಾಂಗ ವ್ಯವಸ್ಥೆಯ ರೋಗಗಳ ಉಪಶಮನಕ್ಕೂ ಪ್ರಯೋಜನಕಾರಿ. ಯೋನಿಯ ಗೋಡೆ ಮತ್ತು ಅದರ ಸುತ್ತಮುತ್ತ ಇರುವ ಅಂಗಾಂಶಗಳು ತೀವ್ರ ನಾಳಗಳನ್ನು ಹೊಂದಿದ್ದು (ನಾಳಗಳನ್ನು ಹೊಂದಿದ್ದು, ದ್ರವಗಳ ಪರಿಚಲನೆಗೆ ಸಹಕಾರಿ) ಯೋನಿ ಮೂಲಕ ಔಷಧಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.
ಕೆಲವೊಮ್ಮೆ ಇಂಥ ಪ್ರೋಬಯೋಟಿಕ್ ವಸ್ತುಗಳು ಯೋನಿಯ ಶ್ಲೇಷ್ಮದ ಸಾಮಾನ್ಯ ಸಮತೋಲನ ಯಥಾಸ್ಥಿತಿಗೆ ಸಹಾಯ ಮಾಡುತ್ತದೆ. ಇದರಿಂದ ಅಹಿತಕರ ಜೀವಧಾರಕ ರಚನೆಗಳು ಯೋನಿಯ ಮಾರ್ಗದ ಮೂಲಕ ಪ್ರವೇಶಿಸಲು ಕಷ್ಟವಾಗುತ್ತದೆ.
ಉತ್ತರ ಬಸ್ತಿ ನೀಡುವ ಮೂಲಕ ಗರ್ಭಕೋಶದಲ್ಲಿನ ಅಪನ ಎಂದು ಕರೆಯಲ್ಪಡುವ ವಾಯು ಜೈವಿಕ ಶಕ್ತಿ ಸರಿಯಾಗುತ್ತದೆ. ಮಾಸಿಕ ಋತುಚಕ್ರದ ವೇಳೆ ಅಥವಾ ಋತುಚಕ್ರದ ಅವಧಿ ಮುಗಿದ ತಕ್ಷಣ ಅಷ್ಟಪಾನ ಮತ್ತು ಅನುವಾಸನ ರೀತಿಯ ಬಸ್ತಿಗಳು-ಎನಿಮಾಗಳನ್ನು ಬಳಸಿ ಮಹಿಳೆಯ ದೇಹವನ್ನು ಶುದ್ದೀಕರಣ ಮಾಡಿದ ಬಳಿಕ ಇದನ್ನು ನೀಡಲಾಗುತ್ತದೆ. ಈ ಅವಧಿಯಲ್ಲೇ ಇದನ್ನು ಮಾಡಲಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ಗರ್ಭಕೋಶದ ಒಳ ಹೊದಿಕೆಯ ಉದುರುವಿಕೆ ಕ್ರಿಯೆ ನಡೆಯುತ್ತದೆ. ರಕ್ತ ನಾಳದ ಕೊರಡುಗಳು ಮುರಿದು ಹೋಗಿ ಹೊಸ ಶುದ್ದ ರಕ್ತವಾಹಿನಿಗಳು ಹಳೇ ಕೊರಡುಗಳಿಂದ ಬೆಳೆಯುತ್ತವೆ. ಗ್ರಂಥಿಗಳು ಸಹ ಒದ್ದೆಯಿಂದ ಮೆತ್ತಗಾಗಿ ಒಡೆದು ಹೋಗುತ್ತದೆ. ಇದರಿಂದ ಅವುಗಳ ಮೂಲಕ ಸೇರಿಸಲಾದ ಔಷಧಿ ಸುಲಭವಾಗಿ ಹೀರಿಕೊಳ್ಳುತ್ತದೆ. ಸಣ್ಣ ರಕ್ತ ನಾಳಗಳಲ್ಲಿ ಸ್ಥಳೀಯ ಕ್ರಿಯೆ, ಹಿಮೋಸ್ಟಾಟಿಕ್ ಸರಿಪಡಿಸುವಿಕೆ, ಹೆಪ್ಪುಗಟ್ಟುವಿಕೆ ಕ್ರಿಯೆ ಹಾಗೂ ಗರ್ಭಾಶಯ ಉದ್ದೀಪನ ಕ್ರಿಯೆ ನಡೆಯುತ್ತದೆ.
ಫಾಲೋಪಿಯನ್ ಟ್ಯೂಬ್‍ನಂಥ ಟೊಳ್ಳು ಆಂತರಿಕ ವಿನ್ಯಾಸಗಳಲ್ಲಿ ಇರುವ ಮೃದು ಸ್ನಾಯುಗಳು ರಚನೆಯನ್ನು ವೃತ್ತ ಹಾಕುತ್ತದೆ. ಅವರು ಟೊಳ್ಳು ವಿನ್ಯಾಸದ ಜೊತೆ ಸಂಪರ್ಕಕ್ಕೆ ಬಂದಾಗ ಅವು ಹಿಸುಕಲ್ಪಡುತ್ತದೆ. ಮಾಂಸಖಂಡವನ್ನು ಅಧಿಕವಾಗಿ ಬಳಸಿದಾಗ, ಅಧಿಕವಾಗಿ ಹಿಗ್ಗಿದಾಗ ಅಥವಾ ದೀರ್ಘ ಕಾಲದ ಅವಧಿಗೆ ಅದನ್ನು ಒಂದೇ ಸ್ಥಳದಲ್ಲಿ ಹಿಡಿದಿಟ್ಟಾಗ ಸೆಳೆತಗಳು ಉಂಟಾಗುತ್ತವೆ. ಇದರಿಂದಾಗಿ ಮಾಂಸಖಂಡದ ಕೋಶಗಳು ಶಕ್ತಿ ಮತ್ತು ದ್ರವವನ್ನು ಕಳೆದುಕೊಂಡು ತೀವ್ರ ಉದ್ವೇಗಕ್ಕೆ ಗುರಿಯಾಗಿ ಬಲವಂತದ ಹಿಗ್ಗುವಿಕೆ ಎಡೆ ಮಾಡಿಕೊಡುತ್ತದೆ. ಈ ಸೆಳೆತವು ಮಾಂಸಖಂಡದ ಒಂದು ಭಾಗದಲ್ಲಿ, ಇಡೀ ಮಾಂಸಖಂಡದಲ್ಲಿ ಅಥವಾ ಹೊಂದಿಕೊಂಡ ಮಾಂಸಖಂಡದಲ್ಲೂ ಸಂಭವಿಸಬಹುದು. ಅತಿಸಾರ ಮತ್ತು ಎಲೆಕ್ಟ್ರೋಲೈಟ್‍ಗಳ ಕೊರತೆಯಿಂದ ಮಾಂಸ ಖಂಡದ ಸೆಳೆತ ಮತ್ತು ಚಳಕು ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಮಾಂಸಖಂಡದ ಒಳಗೆ ಇರುವ ಪ್ರೊಟೀನುಗಳು ಒಂದೆಡೆ ಸೇರಿ ಸಂಘಟಿತ ಹಿಗ್ಗುವಿಕೆಗೆ ಅವಕಾಶ ನೀಡಲು ಅವುಗಳಿಗೆ ಸಾಕಷ್ಟು ನೀರು, ಗ್ಲುಕೋಸ್, ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ ಮತ್ತು ಮಾಗ್ನೆಸಿಯಂ ಬೇಕಾಗುತ್ತದೆ. ಈ ವಸ್ತುಗಳ ಅಸಾಧಾರಣ ಪೂರೈಕೆಯಿಂದ ಮಾಂಸಖಂಡಕ್ಕೆ ಕಿರಿಕಿರಿ ಉಂಟಾಗಿ ಸೆಳೆತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಫಾಲೋಪಿಯನ್ ಟ್ಯೂಬ್‍ಗಳಲ್ಲಿನ ಪ್ರಾಥಮಿಕ ಸೆಳೆತಗಳನ್ನು ಮೇಲೆ ಮತ್ತು ನಂತರ ತಿಳಿಸಿದ ಸ್ಥಳೀಯ ಚಿಕಿತ್ಸೆಗಳ ಮೂಲಕ ಸರಿಪಡಿಸಬಹುದು.
ಈ ಆರಂಭಿಕ ಚಿಕಿತ್ಸೆಗಳ ನಂತರ ಅಂತಿಮವಾಗಿ ಔಷಧಿಗಳನ್ನು ನೀಡಬಹುದು:
ಫಾಲೋಪಿಯನ್ ಟ್ಯೂಬ್ ಮತ್ತು ಪೆಲ್ವಿಕ್ ಅಂಗಗಳಲ್ಲಿ ಉರಿಯನ್ನು ಕಡಿಮೆ ಮಾಡಲು
ಸೋಂಕನ್ನು ಕಡಿಮೆ ಮಾಡಲು ಮತ್ತು ನಾಳಗಳನ್ನು ಸ್ವಚ್ಚಗೊಳಿಸಲು
ಭಲ್ಲತಕ ವತಿಯಂಥ ಗಿಡಮೂಲಿಕೆ ಸಂಯೋಜನೆಗಳಲ್ಲಿ ಕಂಡುಬರುವ ಜೈವಿಕ ವಸ್ತುಗಳು ಹುಣ್ಣು ಗಾಯಗಳಾದ ಜೀವಕೋಶ ಹಾಗೂ ಅಂಟುಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಹಾಗೆಯೇ ರೋಗವನ್ನು ಉಪಶಮನಗೊಳಿಸಿ ಫಾಲೋಪಿಯನ್ ನಾಳಗಳ ಒಳಗೆ ಸೇರಿಕೊಂಡಿರುವ ಶ್ಲೇಷ್ಮವನ್ನು ಕರಗಿಸುತ್ತದೆ.
ಫಾಲೋಪಿಯನ್ ಟ್ಯೂಬ್‍ಗಳು ಶ್ಲೇಷ್ಮದ ಸಾಮಾನ್ಯತೆಯೊಂದಿಗೆ ಅಗತ್ಯವಾಗಿ ಸಮನಾಗಿರುವುದಿಲ್ಲ. ಫಾಲೋಪಿಯನ್ ಟ್ಯೂಬ್‍ಗಳ ಬಲಹೀನ ಶ್ಲೇಷ್ಮ ಪೊರೆಗಳನ್ನು ಸರಿಪಡಿಸಲು ಪೌಷ್ಟಿಕಾಂಶ ವಸ್ತುಗಳು ಮತ್ತು ಪಥ್ಯಾಹಾರ ಚಿಕಿತ್ಡೆ ನೆರವಾಗುತ್ತದೆ ಹಾಗೂ ಹಾನಿಗೀಡಾದ ಅಂಗಾಂಶಗಳ ಉಪಶಮನ ಮತ್ತು ದುರಸ್ಥಿಗೆ ಉತ್ತಮ ರೀತಿಯ ಪರಿಸರ ಸೃಷ್ಟಿಸುತ್ತದೆ.
ಶ್ರೋತೊ ಶೋಧಕ ಔಷಧಗಳು/ಗರ್ಭಾಶಯ ಶೋಧಕ ಔಷಧಿಗಳು-ಕುಷ್ಟಯಾದಿ ಕಷಾಯ, ಮಸ್ತದಿ ಕಷಾಯ, ಕಾತುಕ್ಯಾದಿ ಮಾತ್ರೆಗಳು, ಪಾಷಾಣ ಭೇಡದಿ ಗುಳಿಗೆಳು, ಪಂಚಕೊಳದಿ ಕಷಾಯ, ಗೃಹತಮ್ ಇತ್ಯಾದಿಯಂಥ ಗರ್ಭಾಶಯ ಶುದ್ದೀಕರಣ ಔóಷಧಿಗಳು ಅಂತಿಮವಾಗಿ ನಾಳಗಳನ್ನು ಸ್ವಚ್ಚಗೊಳಿಸಲು ಸಹಾಯ ಮಾಡುತ್ತವೆ.
ಫಾಲೋಪಿಯನ್ ಟ್ಯೂಬ್‍ಗಳನ್ನು ಶುದ್ದೀಕರಣಗೊಳಿಸುವ ಆಯುರ್ವೇದ ಚಿಕಿತ್ಸೆಯಿಂದ ಬಂದ್ ಆದ ನಾಳಗಳ ಕಾರಣಕ್ಕಾಗಿ ಗರ್ಭಧರಿಸಲು ಸಾಧ್ಯವಾಗದ ಮಹಿಳೆಗೆ ಅನಗತ್ಯ ಶಸ್ತ್ರಚಿಕಿತ್ಸೆಗೆ ದೇಹ ಒಳಗಾಗುವುದನ್ನು ತಪ್ಪಿಸುತ್ತದೆ.
ಡಾ. ಶುಭಂಕರಿ ಪಿ.ರಾವ್
ಆಯುರ್ವೇದ ತಜ್ಞರು
ಶುಭ ಆಯುರ್ವೇದಿಕ್ ಸೆಂಟರ್
30/3, ಪಟ್ಟಮ್ಮಾಳ್ ಟೆಂಪಲ್ ಸ್ಟ್ರೀಟ್, ಬಸವನಗುಡಿ,
ಬೆಂಗಳೂರು-560004. ದೂರವಾಣಿ-080 26578620