ವೈದೇಹಿ ಅಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ

ವೈದೇಹಿ ಅಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ವೈಟ್‍ಫೀಲ್ಡ್ ಪ್ರದೇಶ ಹಾಗೂ ಬೆಂಗಳೂರು ನಗರದ ಪೂರ್ವ, ಈಶಾನ್ಯ ಭಾಗ ಮತ್ತು ಇತರ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ಜನರಿಗೆ ನೆರವಾಗುವ ಸದುದ್ದೇಶದಿಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ವಿಮ್ಸ್) ಆಡಳಿತ ಮಂಡಳಿ ಪ್ರತಿಷ್ಠಿತ ವೈದೇಹಿ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಿದೆ.

vydehi-burns-centre.ಬೆಂಕಿ ದುರಂತಗಳು ಮತ್ತು ಸುಟ್ಟ ಗಾಯಗಳು ಅನಾದಿ ಕಾಲದಿಂದಲೂ ಮನುಕುಲವನ್ನು ಕಾಡುತ್ತಿರುವ ಒಂದು ಗಂಭೀರ ಸಮಸ್ಯೆ. ಸುಟ್ಟ ಗಾಯಾಳುಗಳಿಗೆ ಪ್ಲಾಸ್ಟಿಕ್ ಸರ್ಜರಿಯ ಅತ್ಯಂತ ಸುಧಾರಿತ ಚಿಕಿತ್ಸೆ ನೀಡುವ ವಿಧಾನಗಳಲ್ಲಿ ಒಂದು. ವಿವಿಧ ಕಾರಣಗಳಿಂದ ಸುಟ್ಟಗಾಯಗಳಿಗೆ ಒಳಗಾಗುವವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಬೆಂಗಳೂರಿನ ಪ್ರತಿಷ್ಠಿತ ವೈದೇಹಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕವೊಂದನ್ನು ಆರಂಭಿಸಲಾಗಿದೆ. ಸೂಪರ್ ಸ್ಪೆಷಲ್ ವಾರ್ಡ್ ಸ್ಥಾಪನೆಗಾಗಿ ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಘಟಕವನ್ನು ಸುಟ್ಟ ಗಾಯಾಳುಗಳ ಅತ್ಯುತ್ತಮ ಚಿಕಿತ್ಸೆಗಾಗಿ ಸ್ಥಾಪಿಸಲಾಗಿದೆ.

ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ವಾರ್ಡ್‍ಗಳಲ್ಲಿ ಸಂಪೂರ್ಣ ಸೋಂಕು ರಹಿತ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತದೆ.ಅತ್ಯುತ್ತಮ ಚಿಕಿತ್ಸೆ ನೀಡುವ ಸಮರ್ಪಣಾ ಮನೋಭಾವದ ಶುಶ್ರೂಷೆ ನೀಡುವ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಟ್ಟ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಸಕಲ ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯಗಳ ವ್ಯವಸ್ಥೆಯನ್ನು ಇದು ಒಳಗೊಂಡಿದೆ.

ಗಂಭೀರ ಸ್ವರೂಪದ ಸುಟ್ಟ ಗಾಯಾಳುಗಳಲ್ಲಿ (ಟಿಬಿಎಸ್‍ಎ) ಸಾವಿಗೆ ಕಾರಣವಾಗುವ ತೀರಾ ಸಾಮಾನ್ಯ ಅಂಶವೇನೆಂದರೆ ಅವರಲ್ಲಿ ಉಸಿರಾಟ ವ್ಯವಸ್ಥೆಗೆ ಉಂಟಾಗಿರುವ ಗಾಯದ (ಇನ್‍ಹಲೇಷನ್ ಇಂಜುರಿ) ಸಮಸ್ಯೆಯೇ ಆಗಿದೆ. ಇಂಥ ಸುಟ್ಟಗಾಯಗಳಿಂದ ನರಳುತ್ತಿರುವವರಗೆ ಅತ್ಯಂತ ಸುಧಾರಿತ ಆರೈಕೆ ಸೌಲಭ್ಯ ಮತ್ತು ಕೃತಕ ಉಸಿರಾಟ ವ್ಯವಸ್ಥೆ ಆಧಾರದಿಂದ (ವೆಂಟಿಲೇಟರ್ ಸಪೋರ್ಟ್) ಚಿಕಿತ್ಸೆ ನೀಡಬೇಕಾಗುತ್ತದೆ.

ಸುಟ್ಟ ಗಾಯಾಗಳುಗಳಲ್ಲಿ ಸಾವಿಗೆ ಕಾರಣವಾಗುವ ಎರಡು ಪ್ರಮುಖ ಅಂಶಗಳೆಂದರೆ, ದೇಹದಲ್ಲಿನ ದ್ರವದ ಪ್ರಮಾಣದಲ್ಲಿ ಕುಸಿತ ಮತ್ತು ಉಷ್ಣಾಂಶ ನಷ್ಟ. ಇಂಥ ಪರಿಸ್ಥಿತಿಯಲ್ಲಿ ಸೂಕ್ತ ತಾಪಮಾನದಲ್ಲಿ ಐವಿ ಫ್ಲೂಯಿಡ್‍ಗಳನ್ನು ತಕ್ಷಣ ಬದಲಿಸಬೇಕು. ಆದಕಾರಣ ರಕ್ತ ಮತ್ತು ಇನ್‍ಫ್ಯೂಷನ್ ವಾರ್ಮರ್(ಉಷ್ಣಾಂಶ ಹೆಚ್ಚಿಸುವ ವಿಧಾನ) ಅಗತ್ಯವಾಗಿರುತ್ತದೆ. ಇದರಿಂದ ವಿಳಂಬವಿಲ್ಲದೇ ಸೂಕ್ತ ಉಷ್ಣಾಂಶದಲ್ಲಿ ಐವಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

Vydehi_Burn-center_2ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಗಾದ ರೋಗಿಗಳು ಈ ಕಾರಣಗಳಿಂದ ಮೊದಲ ಎರಡು ಅಥವಾ ಮೂರು ದಿನಗಳ ಒಳಗೆ ಸಾವಿಗೀಡಾಗುತ್ತಾರೆ. ದುರ್ಘಟನೆಗಳ ನಂತರ ಮೊದಲ ಕೆಲವು ದಿನಗಳು ಬದುಕುವ ಗಾಯಾಳುಗಳೂ ಕೂಡ ಸೋಂಕು ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾರಣಗಳಿಂದ ಸಾವಿಗೀಡಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಕಟ್ಟುನಿಟ್ಟಿನ ಸೋಂಕು ನಿಯಂತ್ರಣದ ಅಗತ್ಯವಿದೆ.

ಸುಟ್ಟ ಗಾಯಗಳಿಗೆ ಮುಖ್ಯ ಕಾರಣಗಳು :

  • ಶಾಖ ಸುಟ್ಟಗಾಯಗಳು
  • ವಿದ್ಯುತ್ ಸುಟ್ಟಗಾಯಗಳು
  • ರಾಸಾಯನಿಕ ಸುಟ್ಟುಗಾಯಗಳು
  • ವಿಕಿರಣ ಸುಟ್ಟಗಾಯಗಳು

ಸುಟ್ಟ ಗಾಯಾಳುಗಳಲ್ಲಿ ಶೇಕಡ 70ರಷ್ಟು ಗ್ರಾಮ ಮತ್ತು ತಾಲ್ಲೂಕು ಮಟ್ಟಗಳ ಸಂತ್ರಸ್ತರೇ ಆಗಿರುತ್ತಾರೆ. ಅಡುಗೆ ತಯಾರಿಸುವ ಅಸಮರ್ಪಕ ವಿಧಾನಗಳು ಮತ್ತು ಅನಕ್ಷರತೆಯಿಂದಾಗಿ ಇಂಥ ದುರ್ಘಟನೆಗಳು ಸಂಭವಿಸುತ್ತವೆ. ಸುಟ್ಟಗಾಯಾಳುಗಳಿಗೆ ಚಿಕಿತ್ಸೆ ನೀಡುವ ಘಟಕಗಳು ನಗರದಲ್ಲೇ ಮಾತ್ರ ಇರುವುದು ಗ್ರಾಮೀಣ ಜನರ ದುರದೃಷ್ಟ. ಸುಟ್ಟಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಕೇಂದ್ರಗಳು ಗಮನಾರ್ಹ ಸಂಖ್ಯೆಯ ಮಂದಿಗೆ ಲಭಿಸುತ್ತಿಲ್ಲ. ಹೀಗಾಗಿ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

ಇನ್ನು ನಗರ ಪ್ರದೇಶದ ಬಗ್ಗೆ ಹೇಳುವುದಾದರೆ, ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ವಿಕ್ಟೋರಿಯಾ ಅಸ್ಪತ್ರೆಯೊಂದನ್ನು ಹೊರತುಪಡಿಸಿದಂತೆ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡುವ ಯಾವುದೇ ಪ್ರಮುಖ ಕೇಂದ್ರಗಳಿಲ್ಲ. ಇದೇ ಕಾರಣಕ್ಕಾಗಿ ವೈಟ್‍ಫೀಲ್ಡ್ ಪ್ರದೇಶ ಹಾಗೂ ಬೆಂಗಳೂರು ನಗರದ ಪೂರ್ವ, ಈಶಾನ್ಯ ಭಾಗ ಮತ್ತು ಇತರ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ಜನರಿಗೆ ನೆರವಾಗುವ ಸದುದ್ದೇಶದಿಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ವಿಮ್ಸ್) ಆಡಳಿತ ಮಂಡಳಿ ಪ್ರತಿಷ್ಠಿತ ವೈದೇಹಿ ಆಸ್ಪತ್ರೆಯಲ್ಲಿ ಬನ್ರ್ಸ್ ಸೆಂಟರ್ ಆರಂಭಿಸಿದೆ.

B-G-Tilak-ವೈದೇಹಿ ಆಸ್ಪತ್ರೆಯಲ್ಲಿರುವ ಸುಟ್ಟಗಾಯಗಳ ವಿಶೇಷ ಚಿಕಿತ್ಸಾ ಕೇಂದ್ರವು ಸಕಲ ಆಧುನಿಕ ಸೌಲಭ್ಯಗಳನ್ನು ಹೊಂದಿವೆ ಹಾಗೂ ಪರಿಣಿತಿ ಪಡೆದ ವೈದ್ಯಕೀಯ ಸಿಬ್ಬಂದಿ, ತೀವ್ರ ನಿಗಾ ಘಟಕ (ಸಿಸಿಸಿ), ಪ್ರತ್ಯೇಕ ವಾರ್ಡ್‍ಗಳು ಮತ್ತು ಅತ್ಯಂತ ಸುಸಜ್ಜಿತ ಆಪರೇಷನ್ ಥಿಯೇಟರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒಳಗೊಂಡಿದೆ. ವೈಟ್‍ಫೀಲ್ಡ್ ಪ್ರದೇಶ ಮತ್ತು ಸುತ್ತಮುತ್ತಲ ಸ್ಥಳಗಳ ಜನರು ಸುಟ್ಟಗಾಯಗಳಿಗೆ ಅತ್ಯಂತ ಪರಿಣಾಮಕಾರಿ ಮತ್ತು ಅತ್ಯುತ್ತಮ ಚಿಕಿತ್ಸೆಗಾಗಿ ವೈದೇಹಿ ಬರ್ನ್ ಸೆಂಟ‌ರ್ ‌ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
# 82, ಇಪಿಐಪಿ ವೈಟ್ಫೀಲ್ಡ್, ಬೆಂಗಳೂರು -560066
ಫೋನ್ : +91-80-49069000 Extn: 1147/1366
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!