ಥೈರಾಯ್ಡ್ ಸಮಸ್ಯೆಗೆ ಕಾರಣ ಥೈರಾಯ್ಡ್ ಗ್ಲಾಂಡ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುವುದು. ಇದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ.
ಥೈರಾಯ್ಡ್ (Thyroid) ಅಂದರೆ ಒಂದು ಸಣ್ಣ ಗ್ರಂಥಿ. ಇದು ನಮ್ಮ ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದಲ್ಲಿರುವ ಒಂದು ಸಣ್ಣದಾದ ಅಂಗ. ಈ ಥೈರಾಯ್ಡ್ ಗ್ಲಾಂಡ್ (Thyroid gland) ಸರಿಯಾದ ರೀತಿಯಲ್ಲಿ ಕಾರ್ಯವಹಿಸುತ್ತಿದ್ದರೆ ನಮ್ಮ ದೇಹ ಕೂಡ ಸಮತೋಲನವಾಗಿ ಇರುತ್ತದೆ. ಆದರೆ, ಇದರ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ಅದು ನಮಗೆ ಸಮಸ್ಯೆಯಾಗಿ ಪರಣಮಿಸುತ್ತದೆ.
ಥೈರಾಯ್ಡ್ ಸಮಸ್ಯೆಯಲ್ಲಿ ಎರಡು ವಿಧಗಳಿವೆ.
– ಹೈಪೋಥೈರಾಯ್ಡಿಸಮ್ (Hypothyroidism)
– ಹೈಪರ್ ಥೈರಾಯ್ಡಿಸಮ್ (Hyperthyroidsm)
ಹೈಪೋಥೈರಾಯ್ಡಿಸಮ್ ರೋಗ ಲಕ್ಷಣಗಳು:
– ತೂಕ ಹೆಚ್ಚುವಿಕೆ
– ಮಲಬದ್ಧತೆ
– ಮನಸ್ಥಿತಿಯಲ್ಲಿ ಏರುಪೇರು
– ಋತುಚಕ್ರದಲ್ಲಿ ಏರುಪೇರು
– ಮೂಳೆಗಳ ನೋವು
– ಮೂಳೆ ಸವೆತ
– ಚರ್ಮದ ಸಮಸ್ಯೆಗಳು
– ಕೂದಲು ಉದುರುವಿಕೆ
– ಅಜೀರ್ಣ
ಹೈಪರ್ ಥೈರಾಯ್ಡಿಸಮ್ ರೋಗ ಲಕ್ಷಣಗಳು
– ತೂಕ ಇಳಿಕೆ
– ಎದೆ ಬಡಿತ (Palpitation)
– ಆತಂಕ ಹೆಚ್ಚುವಿಕೆ
– ನಿದ್ರಾ ಹೀನತೆ
– ದೇಹ ಊದುವಿಕೆ
– ಬಲಹೀನತೆ, ಸುಸ್ತು
ಥೈರಾಯ್ಡ್ ಸಮಸ್ಯೆ ಕಾರಣಗಳು
– ಅನುವಂಶೀಯ
– ಅಯೋಡಿನ್ ಕೊರತೆ
– ಚಿಂತೆ
– ಮಾನಸಿಕ ಕುಗ್ಗುವಿಕೆ
ಸಂಪೂರ್ಣ ಪರಿಹಾರ
ಥೈರಾಯ್ಡ್ ಸಮಸ್ಯೆಗೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ. ನಿಮ್ಮ ದೈಹಿಕ ತೊಂದರೆಗಳ ಜೊತೆಯಲ್ಲಿ ಮಾನಸಿಕ ತೊಂದರೆಗಳನ್ನು ಸಹ ಸರಳ ರೀತಿಯಲ್ಲಿ ಬುಡಸಮೇತ ಕಿತ್ತೊಗೆಯಲು ಇದು ಉಪಯುಕ್ತ.
ತಡೆಗಟ್ಟುವಿಕೆ
-ವ್ಯಾಯಾಮ, ವಾಕಿಂಗ್, ಮೆಡಿಟೇಷನ್ ಮಾಡುವುದನ್ನು ದಿನ ನಿತ್ಯ ಅಳವಡಿಸಿಕೊಳ್ಳುವುದರಿಂದ ನಮ್ಮ ದೇಹವು ಮಾನಸಿಕ ಹಾಗೂ ದೈಹಿಕವಾಗಿ ಸುರಕ್ಷಿತವಾಗಿರುತ್ತದೆ. ಸಾತ್ವಿಕ ಆಹಾರ ಬಳಕೆಯಿಂದ ಮನುಷ್ಯನ ಕೋಪ, ಕ್ರೋಧ ಮತ್ತು ಮಾನಸಿಕವಾಗಿ ಆಗುವ ಗೊಂದಲಗಳನ್ನು ತಡೆಯಬಹುದು.
ಡಾ ಪ್ರೀತಿ ಕೆ ಎನ್
ಪ್ರಕೃತಿ ಹೋಮಿಯೋ ಕೇರ್
# 11, 1 ನೇ ಮಹಡಿ, ಶ್ರೀ ಮೂಕಾಂಬಿಕಾ ಕ್ಲಾಸಿಕ್ ಬಿಲ್ಡಿಂಗ್
ರಂಗಪ್ಪ ವೃತ್ತ ದೊಡ್ಡಬಳ್ಳಾಪುರ 561203
Email : prakrutihomoeocare@gmail.com
Ph: 74115 30825