ಟೀನೇಜ್ ರೆಸ್ಪಾನ್ಸಿಬಿಲಿಟಿ ಗೊತ್ತಿರಲಿ.ಹರೆಯವನ್ನು ಕತ್ತು ಹಿಸುಕುವಂತ ಪ್ರವೃತ್ತಿಗಳು ನಮ್ಮಲ್ಲಿ ಮನೆಮಾಡಬಾರದು. ಕೆಲವು ಮಾಡಲೇಬೇಕಾದ ಹಾಗೂ ಮತ್ತೆ ಕೆಲವು ಮಾಡಲೇಬಾರದಂತಹ ವಿಷಯಗಳು ಇಲ್ಲಿರುತ್ತವೆ. ಹಾಗಾಗಿ ಸಾಧಕ- ಬಾಧಕ ಅರಿವು ಅಗತ್ಯ.
ಬಾಲ್ಯ ಮುಗಿದು ಹರೆಯಕ್ಕೆ ಕಾಲಿಟ್ಟರೆ ಅದು ಜೀವನದ ಒಂದು ಮಹತ್ವದ ಮೈಲಿಗಲ್ಲು. ಜೊತೆಗೆ ವಯಸ್ಕರಾಗಿದ್ದಕ್ಕೆ ಅಧಿಕೃತ ಮತ್ತು ಕಾನೂನು ಬದ್ಧ ಅಧಿಕಾರಸ್ಥರು. 18 ಕ್ಕೆ ಮೊದಲು ಕೆಲವೊಂದು ವಿಷಯಗಳಿಗೆ ನಿರ್ಬಂಧವಿರುತ್ತದೆ. ಆದರೆ 18 ತುಂಬಿದ ಕೂಡಲೇ ವಯಸ್ಕರು. ನಿಮ್ಮ ಟೀನೇಜ್ ದಿನಗಳು ಅಂತ್ಯಗೊಂಡು ನೀವೊಬ್ಬ ಪ್ರೌಢ ವ್ಯಕ್ತಿ ಎನಿಸುತ್ತೀರಿ. 20 ಹರೆಯ ಪ್ರತಿಯೊಬ್ಬರನ್ನು ಕಠಿಣವಾಗಿ ಕಾಡುವ ಅವಧಿ. ಹಾಗಾಗಿ ಇದರಲ್ಲಿ ಮಾಡಬೇಕಾದ ಕೆಲವು ಪ್ರಮುಖ ಸಂಗತಿಗಳ ಬಗ್ಗೆ ಗೊತ್ತರಲಿ.
18ಕ್ಕೆ ಕಾಲಿಡುತ್ತಿದ್ದಂತೆ ನಮಗೆ ಕೆಲವು ಸ್ವತಂತ್ರ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೊಣೆಗಾರಿಕೆ ಬರುತ್ತದೆ. ಕಾನೂನು ಬದ್ದ ನಿರ್ವಹಣೆಗೂ ನಾವು ಬಾಧ್ಯಸ್ಥರಾಗುತ್ತೇವೆ. ನಮ್ಮ ವರ್ತನೆಯೂ ಸಮಾಜದ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಲಾರಂಬಿಸುತ್ತದೆ. ಅಂದರೆ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವುದು ಸ್ಪಷ್ಟ, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಂತ ಹರೆಯವನ್ನು ಕತ್ತು ಹಿಸುಕುವಂತ ಪ್ರವೃತ್ತಿಗಳು ನಮ್ಮಲ್ಲಿ ಮನೆಮಾಡಬಾರದು. ಕೆಲವು ಮಾಡಲೇಬೇಕಾದ ಹಾಗೂ ಮತ್ತೆ ಕೆಲವು ಮಾಡಲೇಬಾರದಂತಹ ವಿಷಯಗಳು ಇಲ್ಲಿರುತ್ತವೆ. ಹಾಗಾಗಿ ಸಾಧಕ- ಬಾಧಕ ಅರಿವು ಅಗತ್ಯ.
1. 18 ರ ಹರೆಯಕ್ಕೆ ಕಾಲಿಟ್ಟ ಬಳಿಕ ಜವಾಬ್ದಾರಿ ಮತ್ತು ರಾಷ್ಟ್ರದ ಉತ್ತಮ ಪ್ರಜೆಯಾಗಿ ಮಾಡಬೇಕಾದ ಮೊದಲ ಕೆಲಸ ಎಂದರೆ ಮತದಾನದ ಹಕ್ಕು ಚಲಾಯಿಸುವುದು. ಕಾನೂನು ಬದ್ದವಾಗಿ ವಯಸ್ಕರಾದ ಕಾರಣ ಸಹಜವಾಗಿಯೇ ಇದು ನಮಗೆ ಒದಗುವ ಸಂವಿಧಾನಾತ್ಮಕ ಹಕ್ಕು. ಹಾಗಾಗಿ ಸದೃಢ ದೇಶ ನಿರ್ಮಾಣದಲ್ಲಿ ಮತದಾನದ ಮೂಲಕ ಪಾಲ್ಗೊಳ್ಳಲು ಅವಕಾಶ ಪ್ರಾಪ್ತಿ. ಯುವಕರು ಇದರಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಇದರಿಂದ ಯುವಶಕ್ತಿ ದೇಶಕಟ್ಟುವ ಕೆಲಸದಲ್ಲಿ ತೊಡಗಿಕೊಂಡಂತೆ.
2. ವಾಹನ ಚಾಲಿಸಿವುದು ಇತ್ತೀಚೆಗೆ ಫ್ಯಾಷನ್ ಜೊತೆಗೆ ಅನಿವಾರ್ಯ ಎನಿಸಿದೆ. ಹಲವರಿಗೆ ಇದು ಬದುಕು ಕಟ್ಟಿಕೊಡುವ ಕಾಯಕವೂ ಹೌದು. ಇದಕ್ಕೆ ಬೇಕಿರುವ ಲೈಸನ್ಸ್ ಪಡೆಯಲು 18 ವರ್ಷ ತುಂಬಿರಲೇಬೇಕು. ಹಾಗಾಗಿ ಹರೆಯ ಎನ್ನುವುದು ಚಾಲನಾ ಪರವಾನಗಿಯನ್ನು ಒದಗಿಸಿಕೊಡುತ್ತದೆ. ಲೈಸನ್ಸ್ ಇಲ್ಲದೆ ವಾಹನ ಚಾಲಿಸುವುದು ಅಪರಾಧ. ಹಾಗಾಗಿ ಯುವಕರು ತಮ್ಮ ಲೈಫ್‍ಸ್ಟೈಲ್ ಜೊತೆ ಬವಾಬ್ದಾರಿಯನ್ನು ನಿಭಾಯಿಸಿದತರೆ ಉತ್ತಮ ಪ್ರಜೆಯಾಗಲು ಸಾಧ್ಯವಿದೆ.
3. ಯುವ ಸಮುದಾಯದ ಇತ್ತೀಚಿನ ಪ್ರಮುಖ ಆಕರ್ಷಣೆಗಳೆಂದರೆ ನೈಟ್‍ಕ್ಲಬ್ ಅಥವಾ ಲಾಂಚ್‍ಗಳು. ಸಂಗೀತ, ನೃತ್ಯ, ಸೆಕ್ಸಿ ಮಹಿಳೆಯರು ಮತ್ತು ಸಂಪೂರ್ಣ ಸ್ವಾತಂತ್ರ್ಯ ಇಂದಿನ ಯುವ ಜನರು ಸಹಜವಾಗಿಯೇ ಬಯಸುವುದು ಮತ್ತು ಒಮ್ಮೆಯಾದರು ಅನುಭವಿಸಬೇಕೆಂಬ ಹಪಾಹಪಿಗೆ ಬಿದ್ದಿರುತ್ತಾರೆ. ಇಂತಹ ಕ್ಲಬ್‍ಗಳಿಗೆ ವಯಸ್ಕರಲ್ಲದವರಿಗೆ ಪ್ರವೇಶ ನಿಷಿದ್ದ. 18 ತಲಪುತ್ತಿದ್ದಂತೆ ಕಟ್ಟಿಹಾಕಿದ್ದ ಕುದುರೆ ಬಯಲಿಗೆ ಬಿಟ್ಟಂತೆ ಸ್ವೇಚ್ಚಾಚಾರದ ಬದುಕಿಗೆ ಬೀಳುವುದಿದೆ. ಇದರಲ್ಲಿ ಉತ್ತಮ ಆಯ್ಕೆ ಭವಿಷ್ಯಕ್ಕೆ ಮಾದರಿ. ಜೀವನದ ರಾತ್ರಿಗಳನ್ನು ಉತ್ತಮ ಹವ್ಯಾಸಗಳೊಂದಿಗೆ ಕಳೆಯಲು ರೂಢಿಸಿಕೊಂಡರೆ ಬಾಳು ಬಂಗಾರವಾದೀತು.
4. ಪ್ರತಿಯೊಬ್ಬ ಆರೋಗ್ಯವಂತ ಪ್ರಜೆ ಪ್ರತೀ ಮೂರು ತಿಂಗಳಿಗೊಮ್ಮೆ ಅವಶ್ಯವಾಗಿ ರಕ್ತದಾನ ಮಾಡಬಹುದು. 18 ರ ಬಳಿಕವಷ್ಟೆ ಸಿಗುವ ಮತ್ತೊಂದು ಅಮೂಲ್ಯ ಅವಕಾಶವಿದು.ರಕ್ತದಾನಿಗಳ ಪಟ್ಟಿಗೆ ನಿಮ್ಮ ಹೆಸರು ಸೇರಿಸುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಕಾಯಕದಲ್ಲಿ ಭಾಗಿಯಾಗಬಹುದು. ರೋಗಿಗಳ ಬಗ್ಗೆ ಕಾಳಜಿ ಜೊತೆಗೆ ಮಾನವೀಯ ನೆಲೆಗಟ್ಟಿನ ಬದುಕು ರೂಪಿಸಿಕೊಳ್ಳಲು ಈ ರಕ್ತದಾನ ಸಹಕಾರಿ. ಸಮಾಜಸೇವೆಗೂ ಇದು ಉತ್ತಮ ಮಾರ್ಗ. ಇದು ಯುವಕರ ಉತ್ತಮ ಚಿಂತನೆ ಮತ್ತು ಆಲೋಚನೆಗಳಿಗೂ ಒಳ್ಳೆಯದು. ಕೆಲವು ಯುವಕರು ಒಟ್ಟಾಗಿ ಸಂಘ ಸಂಸ್ಥೆ ಸ್ತಾಪಿಸಿಕೊಳ್ಳುವ ಮೂಲಕವೇ ಸಾಮೂಹಿಕವಾಗಿ ಸಮಾಜ ಜಾಗೃತಿಯಂತ ಚಟುವಟಿಕೆಗಳಲ್ಲಿ ತೊಡಗಬಹುದು.
5. ಇತ್ತೀಚೆಗೆ ಆಧುನಿಕ ಜೀವನ ಶೈಲಿಗೆ ಯುವಕರು ಆಕರ್ಷಣೆಯಾಗುವುದು ಸಹಜ ಎನಿಸಿದರೂ ಯಾವುದೋ ಪ್ರಲೋಭನೆಗೆ ಒಳಗಾಗಿ ನಿರ್ಧರಿಸುವ ಸಂಗತಿಗಳೇ ಹೆಚ್ಚು. ಕ್ಷಣಿಕ ಸುಖ ಅಥವಾ ಭೋಗ ಜೀವನ ನಡೆಸುವ ಆಸೆಗೆ ಬಿದ್ದು ಜೀವನದ ದಾರಿ ತಪ್ಪುವ ಸಾದ್ಯತೆಗಳೇ ಹೆಚ್ಚು, ಇದು ಯುವಕರನ್ನು ಅಪರಾಧ ಜಗತ್ತಿನತ್ತ ತಮಗರಿವಿಲ್ಲದಂತೆ ಆಹ್ವಾನ ನೀಡುತ್ತದೆ. ಇದು ಭವಿಷ್ಯವನ್ನು ಕೊಲ್ಲುವ ಅಥವಾ ಪಶ್ಚಾತ್ತಾಪಕ್ಕೂ ಕಾರಣವಾಗುತ್ತದೆ. ಹಾಗಾಗಿ ಪೋಷಕರ ಹದ್ದುಬಸ್ತಿನಲ್ಲಿ ಬದುಕುವ ಮತ್ತು ಚಿಕ್ಕಂದಿನಿಂದಲೇ ಒಳ್ಳೇ ಹವ್ಯಾಸಗಳತ್ತ ಹೊರಳಿದಲ್ಲಿ ಉತ್ತಮ ನಾಗರಿಕ ಬದುಕು ನಮ್ಮದಾಗುತ್ತದೆ.
6. ಯುವಕರಲ್ಲಿ ಓದು ಮತ್ತು ವೃತ್ತಿ ಆಯ್ಕೆಯೂ ಗಣನೀಯ ಪಾತ್ರ ವಹಿಸುತ್ತದೆ. ಓದಿನಲ್ಲಿ ಪೋಷಕರು ಮತ್ತು ಒಳ್ಳೇ ಸ್ನೇಹಿತರು ಮತ್ತು ಗುರುಗಳ ಸಲಹೆ ಪಡೆದು ಮುನ್ನಡೆಯಬಹುದು. ಅದರಲ್ಲಿಯೂ ಒಂದು ಉತ್ತಮ ಒದಿನ ಆಯ್ಕೆ ಕೂಡಾ ಯುವಕರ ಬದುಕನ್ನು ಸುಂದರವಾಗಿ ರುಪಿಸಬಲ್ಲದು. ಬಳಿಕ ತಮ್ಮ ಆಯ್ಕೆಯ ಕ್ಷೇತ್ರಗಳತ್ತ ತೆರಳಲು ಅಗತ್ಯವಿರುವ ಓದಿನ ಆಯ್ಕೆ ಅನಿವಾರ್ಯ. ಈ ಹಂತದಲ್ಲಿ ಎಚ್ಚರ ತಪ್ಪಿದಲ್ಲಿ ಮತ್ತೆ ಕೊರಗಬೇಕಾಗುತ್ತದೆ. ಹಾಗಾಗಿ ಪೋಷಕರು ಕೂಡಾ ತಮ್ಮ ಮಕ್ಕಳಲ್ಲಿನ ಆಸಕ್ತಿ ಕ್ಷೇತ್ರ ಮತ್ತು ವಿಷಯಗಳತ್ತ ಪರಾಮರ್ಶಿಸಿ ಆಯ್ಕೆ ಸೂಚಿಸುವುದು ಉತ್ತಮ. ಇದೇ ಭವಿಷ್ಯದ ಅಡಿಪಾಯ ಎನ್ನುವ ಅರಿವು ಯುವಕರಿಗೂ ಇಂದಿನ ಅಗತ್ಯ ಮತ್ತು ಅನಿವಾರ್ಯ.
ಲತಾಪರಮೇಶ್
ಸ್ನೇಹ ಬ್ಯೂಟಿಪಾರ್ಲರ್, ನಂ. 656, 8ನೇ ಅಡ್ಡರಸ್ತೆ,
1ನೇ ಮುಖ್ಯರಸ್ತೆ, ಭುವನೇಶ್ವರಿ ನಗರ,
ಆರ್.ಟಿ. ನಗರ, ಬೆಂಗಳೂರು-32
ಮೊಬೈಲ್ : 9164089890