ದಂತ ಸಂಬಂಧಿ ರೋಗಗಳು ಮಧುಮೇಹಿ ರೋಗಿಗಳಲ್ಲಿ ಹೆಚ್ಚು ಕಂಡು ಬರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ. ಸಕ್ಕರೆ ಖಾಯಿಲೆ ಅಥವಾ ಮಧುಮೇಹ ರೋಗ
ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು