ಸುಸ್ತು ಮತ್ತು ದೌರ್ಬಲ್ಯಗಳ ಪರಿಹಾರವೇನು

ಸಾಮಾನ್ಯವಾಗಿ ಕಾಡುವ ಸುಸ್ತು, ನಿರುತ್ಸಾಹ, ದೌರ್ಬಲ್ಯಗಳ ಪರಿಹಾರವೇನು ಎಂದು ತಿಳಿದುಕೊಳ್ಳೋಣ.

ಇತ್ತೀಚೆಗೆ ಬಹಳಷ್ಟು ಜನರ ಸಮಸ್ಯೆಯೇನೆಂದರೆ ಜೀವನದಲ್ಲಿ ಬೇಕಾದುದೆಲ್ಲಾ ಇವೆ ಆದರೆ ಅನುಭವಿಸಲು ಶಕ್ತಿ ಇಲ್ಲ; ಮಧ್ಯವಯಸ್ಸಿನಲ್ಲಿಯೇ ಸುಸ್ತು, ನಿಶಕ್ತಿ ಕಾಡುತ್ತಿರುತ್ತವೆ. ಹಾಗಾಗಿ ಇಂದು ನಾವು ಸಾಮಾನ್ಯವಾಗಿ ಕಾಡುವ ಸುಸ್ತು, ದೌರ್ಬಲ್ಯ, ನಿರುತ್ಸಾಹಗಳ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.

Sustu mattu daurbalyagaḷa parihāravēnu

ಮೊದಲನೆಯದಾಗಿ, ಬಹಳಷ್ಟು ಜನರಿಗೆ ಹಲವು ರೀತಿಯ ಸೂಕ್ಷ್ಮ ಪೋಷಕಾಂಶಗಳ ಕೊರತೆ ಸುಸ್ತಿಗೆ ಕಾರಣವಾಗುತ್ತದೆ. ಹಾಗಾಗಿ ಸುಸ್ತು ಇದ್ದಾಗ ವಿಟಮಿನ್ ಡಿ, ಬಿ12, ಹಿಮೋಗ್ಲೋಬಿನ್ ಮುಂತಾದವುಗಳ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಅವುಗಳಲ್ಲಿ ಕೊರತೆ ಕಂಡರೆ ಪೂರಕ ಔಷಧಿಗಳನ್ನು ಸೇವಿಸಬೇಕು. ಅದಕ್ಕಿಂತ ಎಷ್ಟೋ ಉತ್ತಮವಾದ ವಿಧಾನವೆಂದರೆ ಅವುಗಳ ಕೊರತೆ ಆಗದಂತೆ ನಮ್ಮ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರುವಂತೆ ನೋಡಿಕೊಳ್ಳುವುದು. ಉದಾಹರಣೆಗೆ, ಹಸಿರು ಸೊಪ್ಪುಗಳು, ನಟ್ ಗಳು, ದಿನಕ್ಕೊಂದು ಹಣ್ಣು, ಬೇಳೆ ಕಾಳುಗಳು, ಹಾಲು, ಮೊಸರು, ತುಪ್ಪ ಇತ್ಯಾದಿ.

ಬೂದುಗುಂಬಳ, ಬ್ರಾಹ್ಮಿ, ಕೇಸರೀ, ಬಾದಾಮಿ, ಗೋಡಂಬಿ, ವಾಲ್ ನಟ್, ಒಣದ್ರಾಕ್ಷಿ, ಎಳ್ಳು, ಎಳನೀರು ಇವನ್ನೆಲ್ಲ ನಿಯಮಿತವಾಗಿ ಸೇವಿಸಿದರೆ ನಿಧಾನವಾಗಿ ಸುಸ್ತು ಕಡಿಮೆಯಾಗುತ್ತಾ ಹೋಗುತ್ತದೆ. ದೇಹಕ್ಕೆ ಮತ್ತು ಮನಸ್ಸಿಗೆ ಹೊಸ ಚೈತನ್ಯ ಬರುತ್ತದೆ.

ಅತಿ ತೂಕ, ಮಧುಮೇಹ, ಹೆಚ್ಚಾದ ಕೊಲೆಸ್ಟ್ರಾಲ್, ಹೈಪೋಥೈರಾಯ್ಡಿಸಂನಂತಹ ತೊಂದರೆಗಳ ಕಾರಣದಿಂದ ಸುಸ್ತನ್ನು ಅನುಭವಿಸುತ್ತಿರುವವರು ಅದಕ್ಕೆ ಬೇಕಾದ ಔಷಧಗಳನ್ನು ಸೇವಿಸುವುದರ ಜೊತೆಗೆ ಅರ್ಧದಿಂದ ಒಂದು ಚಮಚ ತ್ರಿಫಲಾಚೂರ್ಣವನ್ನು ದಿನಕ್ಕೊಮ್ಮೆ ಅರ್ಧ ಲೋಟ ಬೆಚ್ಚನೆಯ ನೀರಿಗೆ ಹಾಕಿ ಅದಕ್ಕೆ ನಿಂಬೆ ರಸವನ್ನು ಹಾಕಿ ಸೇವಿಸಬೇಕು. ಮಧುಮೇಹ ಇಲ್ಲದವರು ಜೊತೆಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಂಡರೆ ಇನ್ನೂ ಒಳ್ಳೆಯದು. ಕಡಿಮೆಯಾದ ತೂಕ, ಮಾನಸಿಕ ಖಿನ್ನತೆ, ನಿದ್ರಾಹೀನತೆ, ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವವರು ಅಶ್ವಗಂಧ, ಶತಾವರಿ ಮತ್ತು ಬ್ರಾಹ್ಮಿ ಚೂರ್ಣಗಳನ್ನು ತಲಾ ಅರ್ಧ ಚಮಚದಷ್ಟು ತೆಗೆದುಕೊಂಡು ಬೆಚ್ಚನೆಯ ಹಾಲಿಗೆ ಹಾಕಿ ದಿನಕ್ಕೊಮ್ಮೆ ಆಹಾರ ಸೇವಿಸುವ ಒಂದು ಗಂಟೆ ಮೊದಲು ಕುಡಿದರೆ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ನಾಲ್ಕು ಚಿಟಿಕೆ ಹಿಪ್ಪಲಿ ಪುಡಿಯನ್ನು ಸೇರಿಸಿಕೊಂಡರೆ ಸೇವಿಸಿದ ಆಹಾರವನ್ನು ದೇಹವು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ಹಸಿವಾದಾಗ ಮಾತ್ರ ಮುಕ್ಕಾಲು ಹೊಟ್ಟೆಯಷ್ಟು ಲಘು ಆಹಾರವನ್ನು ಸೇವಿಸಿದರೆ ಇಡೀ ದಿನ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಪದೇ ಪದೇ, ಅತಿಯಾದ ಪ್ರಮಾಣದಲ್ಲಿ ಮತ್ತು ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳ ಸೇವನೆ ಸುಸ್ತಿಗೆ ಕಾರಣವಾಗುತ್ತದೆ ಎಂಬುದು ಪ್ರತಿನಿತ್ಯ ನಾವು ರೋಗಿಗಳನ್ನು ಪರೀಕ್ಷಿಸುವಾಗ ತಿಳಿದು ಬರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಲಘು ಭೋಜನವನ್ನು ಹಸಿವಾದಾಗ ಮಾತ್ರ ಮಾಡಬೇಕು. ವಾರಕ್ಕೆ ಒಮ್ಮೆಯಾದರೂ ಉಪವಾಸ ಅಥವಾ ಕೇವಲ ಹಣ್ಣಿನ ರಸಗಳ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ನಮ್ಮ ದಿನಚರಿ ಹೇಗಿದೆ ಎಂಬುದು ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ನಿರ್ಧರಿಸುತ್ತದೆ; ಹಾಗಾಗಿ ಬೆಳಿಗ್ಗೆ ಕನಿಷ್ಠ ಆರು ಗಂಟೆಯ ಮೊದಲೇ ಎದ್ದು ನಿತ್ಯವೂ ಅಭ್ಯಂಗ, ಯೋಗಾಸನ, ಪ್ರಾಣಾಯಾಮ, ಧ್ಯಾನಗಳನ್ನು ಅಭ್ಯಾಸ ಮಾಡಿದರೆ ತುಂಬಾ ಅದ್ಭುತ ಫಲಿತಾಂಶ ಕೆಲವೇ ದಿನಗಳಲ್ಲಿ ಸಿಗುತ್ತದೆ. ಎಷ್ಟೇ ಸುಸ್ತಾಗಿದ್ದರೂ ಶಾಸ್ತ್ರೀಯವಾಗಿ 10 ನಿಮಿಷ ನಾಡಿಶೋಧನ ಪ್ರಾಣಾಯಾಮವನ್ನು ಮಾಡಿದರೆ ಹೊಸ ಚೈತನ್ಯ ಬಂದೇ ಬರುತ್ತದೆ. ದಿನದಲ್ಲಿ ಎರಡು ಬಾರಿ ಶ್ರದ್ಧೆ ಹಾಗೂ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿದರೆ ಆ ಪ್ರಾರ್ಥನೆ ನಿಧಾನವಾಗಿ ನಮ್ಮ ಮನಸ್ಸಿಗೆ ಹೊಸ ಶಕ್ತಿಯನ್ನು ತುಂಬಿ ತನ್ಮೂಲಕ ನಮ್ಮ ದೇಹದಲ್ಲಿರುವ ಋಣಾತ್ಮಕ ಅಂಶಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ.

ಇನ್ನೊಂದು ಅತ್ಯಂತ ಪ್ರಮುಖವಾದ ಅಂಶವೆಂದರೆ ನಾವು ಸದಾ ವರ್ತಮಾನದಲ್ಲಿ ಅಂದರೆ ನಾವು ಯಾವ ಕೆಲಸವನ್ನು ಮಾಡುತ್ತಿದ್ದೇವೆಯೋ ಅದೇ ಕೆಲಸದಲ್ಲಿಯೇ ನಮ್ಮ ಗಮನವನ್ನು ಇಡಬೇಕು. ಬದಲಿಗೆ ನಾವು ಭೂತ ಅಥವಾ ಭವಿಷ್ಯದಲ್ಲಿ ಮನಸ್ಸನ್ನು ಇಟ್ಟು ದೇಹ ಮಾತ್ರ ವರ್ತಮಾನದಲ್ಲಿ ಇದ್ದರೆ ಬಹಳ ಬೇಗ ಸುಸ್ತಾಗುತ್ತದೆ. ಮೊಬೈಲ್, ಟಿವಿ ಅಥವಾ ಕೆಲಸದ ಕಾರಣದಿಂದ ತಡರಾತ್ರಿವರೆಗೆ ಎಚ್ಚರವಾಗಿ ಇರುವುದು ಎಷ್ಟೋ ಜನರ ಸುಸ್ತಿಗೆ ಕಾರಣವಾಗುತ್ತದೆ. ಇಂಥ ಚಿಕ್ಕ ವಿಷಯಗಳು ಅವರ ಸುಸ್ತಿಗೆ ಕಾರಣವೆಂಬುದು ಅವರಿಗೆ ತಿಳಿದಿರುವುದೇ ಇಲ್ಲ. ರಾತ್ರಿ ಹತ್ತು ಗಂಟೆಯ ನಂತರ ಎಚ್ಚರವಾಗಿರುವುದು ನಮ್ಮ ದೈಹಿಕ-ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕನಿಷ್ಠ ಆರು ತಾಸು ನಿದ್ದೆ ಸಾಮಾನ್ಯವಾಗಿ ಎಲ್ಲರಿಗೂ ಬೇಕಾಗುತ್ತದೆ. ನಿಮ್ಮ ದೇಹ ಅದಕ್ಕಿಂತಲೂ ಸ್ವಲ್ಪ ಹೆಚ್ಚು ನಿದ್ದೆಯನ್ನು ಬಯಸುತ್ತಿದ್ದರೆ ಅದನ್ನು ದೇಹಕ್ಕೆ ಒದಗಿಸಲೇಬೇಕಾಗುತ್ತದೆ. ಅತಿಯಾದ ನಿದ್ರೆ ಮತ್ತು ಅವಶ್ಯಕತೆಗಿಂದ ಕಡಿಮೆ ನಿದೆ ಎರಡೂ ಸುಸ್ತು ಮತ್ತು ನಿರುತ್ಸಾಹಕ್ಕೆ ಕಾರಣವಾಗುತ್ತವೆ. ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ನಾವು ಸುಸ್ತಿನ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಇಂದು ತಿಳಿದುಕೊಂಡಿದ್ದೇವೆ.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!