ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಹೊಸ ಅವಿಷ್ಕಾರವೇನೂ ಅಲ್ಲ. ಇದು ಮೊದಲಿನಿಂದಲೂ ಪರೀಕ್ಷಿಸಿ, ಪ್ರಯೋಗಿಸಿ ಮತ್ತು ಸಾಬೀತುಪಡಿಸಿರುವಂತಹ ಸುರಕ್ಷಿತಾ ಚಿಕಿತ್ಸಾ ಪದ್ಧತಿ.

ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಹೊಸ ಅವಿಷ್ಕಾರವೇನೂ ಅಲ್ಲ. ಇದು ಮೊದಲಿನಿಂದಲೂ ಪರೀಕ್ಷಿಸಿ, ಪ್ರಯೋಗಿಸಿ ಮತ್ತು ಸಾಬೀತುಪಡಿಸಿರುವಂತಹ ಒಂದು ಚಿಕಿತ್ಸಾ ಪದ್ಧತಿ. ಇದರ ಪರಿಣಾಮಕಾರಿತ್ವವನ್ನು ಇಡೀ ದೇಶಾದ್ಯಂತ ಸ್ವೀಕರಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದರತ್ತ ಒಲವು ತೋರಿಸುತ್ತಿದ್ದಾರೆ. ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಆಹಾರ ಕಲಬೆರಕೆ, ಮಾಲಿನ್ಯ, ಪ್ರತಿಕೂಲ ಔಷಧ ಪ್ರತಿಕ್ರಿಯೆಗಳು, ಜೀವನದ ದಿನನಿತ್ಯ ಬದಲಾವಣೆಗಳಿಂದ ಬೇಸತ್ತಿರುವ ಜನರಿಗೆ ಒಂದು ಹೊಸ ಆರೋಗ್ಯದ ರೂಪವನ್ನು ಕೊಡುತ್ತಿರುವ ಹೋಮಿಯೋಪತಿ ಚಿಕಿತ್ಸೆ ಪದ್ಧತಿಯ ಬಗ್ಗೆ ನನಗೆ ಹೆಮ್ಮೆಯಿದೆ.
ʻʻಆರೋಗ್ಯವೇ ಸಿರಿʼʼ, ಆರೋಗ್ಯವಿದ್ದರೆ ನಮ್ಮ ಮುಂದೆ ಸಿರಿ ಸಂಪತ್ತು ಇದ್ದಂತೆ. ಆರೋಗ್ಯವಿದ್ದರೆ ನಾವು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ದಿನನಿತ್ಯದ ಚಟುವಟಿಕೆಗಳನ್ನು ನಾವು ಸಕ್ರಿಯವಾಗಿ ನಿರ್ವಹಿಸಬಹುದು. ಹೋಮಿಯೋಪತಿ ಅಂತಹದೊಂದು ಯಾವುದೇ ಅಡ್ಡಪರಿಣಾಮವಿಲ್ಲದೇ ಆರೋಗ್ಯವನ್ನು ಕೊಡುವಲ್ಲಿ ಯಶಸ್ವಿಯಾಗಿದೆ.
ಹೋಮಿಯೋಪತಿ ಚಿಕತ್ಸೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಅಥವಾ ಅವಳ ರೋಗ ಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡು ವೈಯುಕ್ತಿಕವಾಗಿ ಪರಿಗಣಿಸುತ್ತದೆ. ಅವರಿಗಾಗುತ್ತಿರುವ ರೋಗ ಲಕ್ಷಣಗಳು, ಭಯ, ಮಾನಸಿಕ ಪರಿಸ್ಥಿತಿ, ಅವರ ಸುತ್ತಲಿನ ಪರಿಸರ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಇನ್ನೂ ಹೆಚ್ಚಿನ ಹೊಸ ಆವಿಷ್ಕಾರಗಳನ್ನೂ ಈ ಪದ್ಧತಿಯಲ್ಲಿ ಮಾಡಲಾಗುತ್ತಿದೆ.
ಹೋಮಿಯೋ ಪದ್ಧತಿ
ಹೋಮಿಯೋಪತಿ ಚಿಕಿತ್ಸಾ ಪದ್ಧತಿಯು ಅದರದೇ ಆದಂತಹ ವಿಶೇಷತೆಯನ್ನು ಹೊಂದಿದೆ. ಹೋಮಿಯೋಪತಿಯನ್ನು ಪರ್ಯಾಯ ಚಿಕಿತ್ಸಾ ವಿಧಾನ ಎಂದು ಪರಿಗಣಿಸಿದ್ದರೂ ಸಹ ಹಲವರ ಬಾಳಲ್ಲಿ ಇದು ಇದರದ್ದೇ ಆದ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿದೆ. ಕಡಿಮೆ ವೆಚ್ಚದಲ್ಲಿ ಎಂತೆಂತಹ ರೋಗಗಳನ್ನು ನಿವಾರಿಸುವ ಸುರಕ್ಷಿತಾ ಚಿಕಿತ್ಸಾ ಪದ್ಧತಿಯೇ ನಮ್ಮ ʻʻಹೋಮಿಯೋಪತಿʼʼ.
ಹೋಮಿಯೋಪತಿ ಚಿಕಿತ್ಸೆ ರೋಗಗಳನ್ನು ನಿಧಾನವಾಗಿ ಗುಣಪಡಿಸುತ್ತದೆ ಎಂದು ಹಲವರ ಅಭಿಪ್ರಾಯ. ಆದರೆ, ನಾವು ಜೀವನ ಪರ್ಯಂತ ತೆಗೆದುಕೊಳ್ಳವ ಔಷಧಕ್ಕಿಂತ 3 ತಿಂಗಳು, 6 ತಿಂಗಳು ಅಥವಾ ವರ್ಷಗಳು ತೆಗೆದುಕೊಂಡು ಗುಣಪಡಿಸಿಕೊಳ್ಳಬಹುದಲ್ಲವೇ?
ಉದಾರಹಣೆ: ಥೈರಾಯಿಡ್, ಅಸ್ತಮಾ ಸಮಸ್ಯೆಗಳು, ಮುಟ್ಟಿನ ಸಮಸ್ಯೆ, ಮೂಲವ್ಯಾಧಿ ಇನ್ನಿತರ ಸಮಸ್ಯೆಗಳು ಅಂದುಕೊಂಡದಕ್ಕಿಂತ ಬೇಗನೆ ಪರಿಹಾರವಾಗುತ್ತದೆ ಹಾಗು ಯಾವುದೇ ಅಡ್ಡಪರಿಣಾಮವಿಲ್ಲದೆಯೇ………..
ಇದು ಯಾವುದೋ ಒಂದು ಕಾಲ್ಪನಿಕವಾಗಿ ಸೃಷ್ಟಿಯಾದಂತಹ ಔಷಧ ಪದ್ಧತಿಯಂತೂ ಅಲ್ಲ. ಇದು ಹೆಚ್ಚಿನ ಜನರ ಮೇಲೆ ಪರೀಕ್ಷಿಸಿ ಮತ್ತು ಇದರ ಹಿಂದೆ ತುಂಬಾ ಶ್ರಮವಹಿಸಿದಂತಹ ಅನೇಕ ವೈದ್ಯರಿದ್ದಾರೆ. ಎಷ್ಟೋ ಜನರಲ್ಲಿ ಶಸ್ತ್ರ ಚಿಕಿತ್ಸೆಯನ್ನು ತಪ್ಪಿಸಲು ಸಹ ಯಶಸ್ವಿಯಾಗಿದೆ.
ಉದಾಹರಣೆ: ಮೂಲವ್ಯಾಧಿ, ಮಕ್ಕಳಲ್ಲಿ ಗಲಗ್ರಂಥಿಯ ಉರಿಯೂತ (Tonsillitis), ಮೂತ್ರಪಿಂಡದಲ್ಲಿ ಕಲ್ಲು ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಜ್ವರ, ಕೆಮ್ಮು, ಶೀತ, ನೆಗಡಿ, ಅಸ್ತಮ, ಮೂಲವ್ಯಾದಿ, ಗಂಟಲು ನೋವು ಇನ್ನೂ ಹೆಚ್ಚಿನ ತೀವ್ರ ಹಾಗೂ ದೀರ್ಘಕಾಲದ ಅನಾರೋಗ್ಯಕ್ಕೆ ನಮ್ಮ ಹೋಮಿಯೋಪತಿ ಚಿಕಿತ್ಸೆ ತುಂಬಾ ಪರಿಣಾಮಕಾರಿಯಾಗಿದೆ. ಆದ್ದರಿಂದ ಜನರು ಒಳ್ಳೆಯ ನುರಿತ ಹೋಮಿಯೋಪತಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಆದಷ್ಟು ಮಟ್ಟಿಗೆ ಜನರ ರೋಗಗಳಿಂದ ಮತ್ತು ಔಷಧಗಳ ಅಡ್ಡಪರಿಣಾಮದಿಂದ ದೂರವಿರಿ.
ಡಾ|| ರಮ್ಯ ಪಿ.
ಹೋಮಿಯೋಪತಿ ವೈದ್ಯರು ಮತ್ತು ಸಲಹೆಗಾರರು ಸಿರಿ ಹೋಮಿಯೋ ಕೇರ್ ಕ್ಲಿನಿಕ್
ಡೈರಿ ಕ್ರಾಸ್, ಯಲಹಂಕ ಉಪನಗರ, ಬೆಂಗಳೂರು-64
Ph: 97409 64891
e-mail: sirihomoeocareclinic@gmail.com
ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಹೊಸ ಅವಿಷ್ಕಾರವೇನೂ ಅಲ್ಲ. ಇದು ಮೊದಲಿನಿಂದಲೂ ಪರೀಕ್ಷಿಸಿ, ಪ್ರಯೋಗಿಸಿ ಮತ್ತು ಸಾಬೀತುಪಡಿಸಿರುವಂತಹ ಸುರಕ್ಷಿತಾ ಚಿಕಿತ್ಸಾ ಪದ್ಧತಿ.