ಬಿರುಕು ಗೆರೆಗಳ ಬಗ್ಗೆ ಬೇಸರವೇ?

 ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು ಬಂದಾಗ ಎಂತಹ ಮುಜುಗರವಾಗುತ್ತೆ ಅಲ್ಲವೆ? ಸ್ತ್ರೀಯರಿಗೆ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ. ಅದರಲ್ಲೂ ಯೌವ್ವನಕ್ಕೆ ಕಾಲಿಡುವ ಸಂದರ್ಭದಲ್ಲಿ ಚರ್ಮದ ಮೇಲೆ ಸಣ್ಣ ಕಲೆಯಾದರೂ ತುಂಬಾ ಯೋಚನೆಗೊಳಗಾಗುತ್ತಾಳೆ. ಕಲೆಗಳು ಯಾವುದೇ ಆಗಿರಬಹುದು. ಉದಾ: ಮೊಡವೆಯ ಕಲೆಗಳೂ, ಬಿಸಿಲಿನಿಂದ ಆಗುವ ಕಪ್ಪು ಕಲೆಗಳು, ಬಿರುಕು ಗೆರೆಗಳು ಇತ್ಯಾದಿ.
ಚರ್ಮದ ರಚನೆ:
ಚರ್ಮದಲ್ಲಿ ಮೂರು ಭಾಗಗಳಿರುತ್ತವೆ
1. ಹೊರಚರ್ಮ (Epidermis)
2. ಮಧ್ಯಚರ್ಮ (Dermis)
3. ಒಳಚರ್ಮ (Subcuttaneous Stratum).
ಬಿರುಕು ಗೆರೆಗಳು (Stretch Marks)
ದೇಹದ ಬೆಳವಣಿಗೆಯಿಂದಾಗಿ ಚರ್ಮವು ಅಗಲವಾಗುತ್ತದೆ. ಆ ಸಂದರ್ಭದಲ್ಲಿ ಚರ್ಮದ ಮೇಲೆ ತಿಳಿ ಬಣ್ಣದ ಗೆರೆಗಳು ಮೂಡುತ್ತವೆ. ಇವನ್ನು ಬಿರುಕುಗೆರೆಗಳೆಂದು ಕರೆಯುತ್ತಾರೆ.
ಬಿರುಕು ಗೆರೆಗಳು ಮಧ್ಯ ಭಾಗದ ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ. ಮಧ್ಯಭಾಗದ ಚರ್ಮವು ಚಿಕ್ಕದಾಗುವ ಅಥವಾ ದೊಡ್ಡದಾಗುವ ಗುಣವನ್ನು ಹೊಂದಿರುತ್ತದೆ (ಚಿತ್ರ 1). ಇದು ಚರ್ಮಕ್ಕೆ ಆಕಾರವನ್ನು ನೀಡುತ್ತದೆ. ವಯಸ್ಸಾಗುತ್ತಿದ್ದಂತೆ ಚರ್ಮವು ಬೆಳವಣಿಗೆಯಾಗುತ್ತದೆ. ಈ ಕ್ರಿಯೆ ನಡೆಯುವಾಗ ಚರ್ಮದಲ್ಲಿ ಬಿರುಕು ಮೂಡುತ್ತದೆ. ಈ ಬಿರುಕುಗಳು ಪ್ರಾರಂಭದಲ್ಲಿ ತಿಳಿಗುಲಾಬಿ ಬಣ್ಣದಲ್ಲಿದ್ದು ನಂತರ ಗಾಢ ಕೆಂಪುಬಣ್ಣಕ್ಕೆ ತಿರುಗಿ ಕೊನೆಗೆ ನೇರಳೆ ಬಣ್ಣವನ್ನು ಹೊಂದುತ್ತದೆ. ಇದು ವಯಸ್ಸು ಹೆಚ್ಚಾದಂತೆ ಬಿರುಕುಗಳ ಬಣ್ಣ ತಿಳಿಯಾಗಿ ಮೊದಲಿನ ಸ್ಥಿತಿಗೆ ಬರುತ್ತದೆ. ಹಾಗೆಯೇ ಹೋಗಲೂಬಹುದು.
ಬಿರುಕು ಗೆರೆಗಳು ಯಾರಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಈ ಬಿರುಕು ಗೆರೆಗಳು ಹೆಚ್ಚಾಗಿ ಸ್ತ್ರೀಯರಲ್ಲಿ ಅದರಲ್ಲೂ ಗರ್ಭಿಣಿ ಸ್ತ್ರೀಯರಲ್ಲಿ ಮತ್ತು ಪ್ರೌಢಾವಸ್ಥೆಗೆ ಬಂದ ಹುಡುಗಿಯರಲ್ಲಿ ಈ ಗೆರೆಗಳು ಮೂಡಬಹುದು. ಅಲ್ಲದೆ ಇದ್ದಕ್ಕಿದ್ದ ಹಾಗೆ ತೂಕ ಹೆಚ್ಚಾದವರಲ್ಲಿ ಮತ್ತು ತೂಕ ಇಳಿಸಿಕೊಂಡವರಲ್ಲಿ ಈ ಗೆರೆಗಳು ಕಂಡುಬರುತ್ತವೆ. ಹುಡುಗರಲ್ಲಿಯೂ ಕೆಲವು ಸಾರಿ ಕಂಡುಬರುತ್ತದೆ. ಕೆಲವು ಸ್ತ್ರೀಯರಲ್ಲಿ ವಂಶಪಾರಂಪಾರ್ಯದಿಂದಾಗಿ ಬರಬಹುದು. ಮತ್ತು ಸ್ಥಿರಾಯ್ಡ್ ಮುಲಾಮುಗಳನ್ನು ಬಳಸುವವರಲ್ಲಿ ಈ ಗೆರೆಗಳು ಮೂಡಬಹುದು. ಗರ್ಭಧರಿಸಿದಾಗ ಗರ್ಭಕೋಶ ಅಗಾಧವಾಗಿ ಬೆಳೆದು ಹೊಟ್ಟೆಯ ಮೇಲಿನ ಚರ್ಮ ಅತಿಯಾಗಿ ಹಿಗ್ಗಿ ಬಿರುಕು ಗೆರೆಗಳು ಹೇರಳವಾಗಿ ಕಂಡುಬರುತ್ತವೆ (ಚಿತ್ರ 2). ಒಂದಕ್ಕಿಂತ ಹೆಚ್ಚು ಬಾರಿ ಗರ್ಭಧರಿಸಿದವರಲ್ಲಿ ಇನ್ನೂ ಹೆಚ್ಚಿನ ಗೆರೆಗಳು ಕಂಡು ಬರುತ್ತದೆ. ಕೆಲವು ಮಹಿಳೆಯರಲ್ಲಿ ಹೊಟ್ಟೆಯ ಮಧ್ಯಭಾಗದಲ್ಲಿ ಕಪ್ಪು ಗೆರೆಯೂ ಕಂಡು ಬರುತ್ತದೆ.
ಬಿರುಕು ಗೆರೆಗಳು ದೇಹದ ಯಾವ ಭಾಗದಲ್ಲಾದರೂ ಕಂಡುಬರಬಹುದು. ಅದರಲ್ಲೂ ಹೆಚ್ಚಾಗಿ ಹೊಟ್ಟೆ ಮತ್ತು ಕೆಳಹೊಟ್ಟೆಯ ಭಾಗದಲ್ಲಿ, ತೊಡೆ, ಸೊಂಟ, ನಿತಂಬಗಳಲ್ಲಿ, ತೋಳುಗಳಲ್ಲಿ ಮತ್ತು ಸ್ತನಗಳ ಮೇಲೆ ಕಂಡುಬರುತ್ತದೆ. ಆದರೆ ಆರೋಗ್ಯ ದೃಷ್ಟಿಯಿಂದ ಯಾವ ತೊಂದರೆಯೂ ಇರುವುದಿಲ್ಲ.
ಮುಂಜಾಗ್ರತಾ ಕ್ರಮಗಳು ಯಾವುವು?
ಮಹಿಳೆಯರು, ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರ ಮುಖಾಂತರ ಬಿರುಕುಗೆರೆಗಳು ಹೆಚ್ಚಾಗಿ ಬರುವುದನ್ನು ತಡೆಗಟ್ಟಬಹುದು.
ಆಹಾರ: ಸತ್ವ ಭರಿತವಾದ ವಿಟಮಿನ್ ಮತ್ತು ಖನಿಜಗಳು ಹೇರಳವಾಗಿರುವ ಆಹಾರಗಳು ಹಣ್ಣು, ತರಕಾರಿ ಮತ್ತು ಸೊಪ್ಪುಗಳನ್ನು ಅಧಿಕವಾಗಿ ಸೇವಿಸಬೇಕು.
ನೀರು: ಅಧಿಕ ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. ಏಕೆಂದರೆ ಚರ್ಮವು ಯಾವಾಗಲೂ ತೇವಾಂಶದಿಂದ ಕೂಡಿರಬೇಕು.
ತೂಕ: ಬಹುಬೇಗ ತೂಕ ಇಳಿಸಿಕೊಂಡಾಗ ಚರ್ಮವು ಸುಕ್ಕುಸುಕ್ಕಾಗುತ್ತದೆ. ಹಾಗೆಯೇ ತೂಕ ಹೆಚ್ಚಿಸಿಕೊಂಡರೆ ಚರ್ಮವು ಹಿಗ್ಗಿ ಬಿರುಕುಗಳುಂಟಾಗುತ್ತವೆ. ಆದುದರಿಂದ ಒಂದೇ ಸಾರಿ ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದಕ್ಕೆ ಬದಲು ನಿಲ್ಲಿಸಿ ನಿಧಾನವಾಗಿ ಹಂತ ಹಂತವಾಗಿ ತೂಕವನ್ನು ಇಳಿಸಿಕೊಳ್ಳಬೇಕು ಅಥವಾ ಹೆಚ್ಚಿಸಿಕೊಳ್ಳಬೇಕು. ಇದರಿಂದ ಬಿರುಕು ಗೆರೆಗಳು ಮೂಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳವುದು ಅತ್ಯಗತ್ಯ.
ಚಿಕಿತ್ಸೆಗಳು
ಔಷಧಿ ಚಿಕಿತ್ಸೆ:
1) ಬ್ರಷ್ ಮಾಡುವುದರಿಂದ: ಬಿರುಕು ಗೆರೆಗಳನ್ನು ಬ್ರಷ್‍ನಿಂದ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಹೆಚ್ಚಾಗಿ ಚೆನ್ನಾಗಿ ಗೆರೆಗಳು ನಿಧಾನವಾಗಿ ಮಾಯವಾಗುತ್ತವೆ.
2) ಹರಳೆಣ್ಣೆಯ ಮಸಾಜ್ (ಮರ್ದನ): ಹರಳೆಣ್ಣೆಯನ್ನು ಬಿರುಕು ಗೆರೆಗಳಿರುವ ಭಾಗದಲ್ಲಿ ಹೆಚ್ಚಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಬಿರುಕು ಗೆರೆಗಳು ನಿಧಾನವಾಗಿ ಹೋಗುತ್ತವೆ.
ಬಿರುಕು ಗೆರೆಗಳನ್ನು ಹೋಗಲಾಡಿಸಲು ಕೆಲವೊಂದು ವೈದ್ಯಕೀಯ ಮುಲಾಮುಗಳನ್ನು ಹಚ್ಚುವುದರಿಂದ ಸ್ವಲ್ಪ ಮಟ್ಟಿಗೆ ಗೆರೆಗಳು ಹೋಗಬಹುದು. ಇಂತಹ ಮುಲಾಮುಗಳು ಸ್ವಲ್ಪ ದುಬಾರಿಯದ್ದಾಗಿರುತ್ತವೆ. ರೋಜ್‍ಜಿಪ್ ಆಯಿಲ್ (Rosezip oil) ಮತ್ತು ಎಲಿಸಿನಾ ಮುಲಾಮು(Elisina Cream), ಪ್ರೆಗ್ನಾ ಮುಲಾಮು (Pregna Cream) ಬಳಸುವುದರಿಂದ ಬಿರುಕು ಗೆರೆಗಳನ್ನು ಹೋಗಲಾಡಿಸಬಹುದು. ಇದರಲ್ಲಿ ಲೋಳೆಸರ (Aloevera), ಆ ಸತು (Zinc), ವಿಟಮಿನ್ ಇ ಮತ್ತು ಎ, ಲವಣಗಳು ಮೆಗ್ನೀಷಿಯಂ ಮತ್ತು ಸೋಡಿಯಂ ಅಂಶಗಳಿರುತ್ತದೆ.
ಆಯುರ್ವೇದ ಔಷಧಿಗಳಲ್ಲೂ ಈ ಗೆರೆಗಳನ್ನು ನಿವಾರಿಸುವ ಮುಲಾಮುಗಳಿವೆ. ಉದಾ: Streach nil ಈ ಮುಲಾಮಿನಲ್ಲಿ ಮಂಜಿಷ್ಯಾ, ಬೇವು, ತುಳಸಿ, ದಾರುಹರಿದ್ರಾ, ಯಷ್ಠಿಮಧು ಮುಂತಾದ ಮೂಲಿಕೆಗಳಿವೆ.
ಶಸ್ತ್ರಚಿಕಿತ್ಸೆ: ಬಿರುಕು ಗೆರೆಗಳನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕೆಂದರೆ ಪ್ಲಾಸ್ಟಿಕ್ ಸರ್ಜರಿ ತಜ್ಞರನ್ನು ಕಂಡು ಚಿಕಿತ್ಸೆ ಪಡೆಯಬಹುದು. ಮುಖ್ಯವಾಗಿ ಶಸ್ತ್ರಕ್ರಿಯೆ, ಲೇಸರ್ ವಿಕಿರಣ (Laser Treatment) ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದು. ಈ ಚಿಕಿತ್ಸೆಗಳೆಲ್ಲಾ ಅತಿ ದುಬಾರಿಯಾಗಿರುತ್ತದೆ.
“ಚಿಕಿತ್ಸೆಯ ಜೊತೆಗೆ ಮಾನಸಿಕ ಸಮತೋಲನ ಅತ್ಯಗತ್ಯ”

ಡಾ|| ಸಿ. ಶರತ್ ಕುಮಾರ್
ನಿರ್ದೇಶಕರು ಮತ್ತು ಖ್ಯಾತ ಗರ್ಭಧಾರಣಾ ತಜ್ಞವೈದ್ಯರು, ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ,
ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ ರಾವ್ ರಸ್ತೆ, ಮೈಸೂರು-570 001
ದೂ. 0821-2444441, 4255019 www.mediwave.net

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!